• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • Realme Smartphone: ದೇಶದಲ್ಲಿ ಇಂದಿನಿಂದ ರಿಯಲ್​ಮಿಯ ಹೊಸ ಸ್ಮಾರ್ಟ್​ಫೋನ್​​ ಲಭ್ಯ; ಇದರ ಫುಲ್​ ಡೀಟೇಲ್ಸ್​ ಇಲ್ಲಿದೆ

Realme Smartphone: ದೇಶದಲ್ಲಿ ಇಂದಿನಿಂದ ರಿಯಲ್​ಮಿಯ ಹೊಸ ಸ್ಮಾರ್ಟ್​ಫೋನ್​​ ಲಭ್ಯ; ಇದರ ಫುಲ್​ ಡೀಟೇಲ್ಸ್​ ಇಲ್ಲಿದೆ

ರಿಯಲ್​ಮಿ ಸ್ಮಾರ್ಟ್​ಫೋನ್ಸ್

ರಿಯಲ್​ಮಿ ಸ್ಮಾರ್ಟ್​ಫೋನ್ಸ್

ರಿಯಲ್​ಮಿ ತನ್ನ ಬ್ರಾಂಡ್​ನಲ್ಲಿ ಎರಡು ಸ್ಮಾರ್ಟ್​ಫೋನ್​ಗಲನ್ನು ಭಾರತದಲ್ಲಿ ಪರಿಚಯಿಸಿತ್ತು ಅದ್ರಲ್ಲಿ ಒಂದು ರಿಯಲ್​ಮಿ 10 ಪ್ರೋ 5ಜಿ ಮತ್ತು ಇನ್ನೊಂದು ರಿಯಲ್​ಮಿ 10 ಪ್ರೋ ಪ್ಲಸ್​ 5ಜಿ ಸ್ಮಾರ್ಟ್​​ಫೋನ್​ಗಳು. ಇವೆರಡೂ ಬೇರೆ ಬೇರೆ ಫೀಚರ್ಸ್​ ಅನ್ನು ಹೊಂದಿದ್ದು ಇವುಗಳಲ್ಲಿ ರಿಯಲ್​ಮಿ 10 ಪ್ರೋ ಪ್ಲಸ್​ ಸ್ಮಾರ್ಟ್​ಫೋನ್ ಅನ್ನು ಇಂದಿನಿಂದ ಖರೀದ ಮಾಡಬಹುದಾಗಿದೆ.

ಮುಂದೆ ಓದಿ ...
 • Share this:

  ದೇಶದಲ್ಲಿ ಇತ್ತಿಚೆಗೆ ದಿನಕ್ಕೆ ಒಂದಾದರು ಸ್ಮಾರ್ಟ್​ಫೋನ್​ (Smartphone) ಬಿಡುಗಡೆಯಾಗುತ್ತಲೇ ಇದೆ. ಸ್ಮಾರ್ಟ್​ಫೋನ್​ಗಳ ವ್ಯಾಪಕವಾದ ಬಳಕೆಯಿಂದಾಗಿ ಕಂಪನಿಗಳು ಕೂಡ ಹೊಸ ಹೊಸ ರೀತಿಯ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ. ರಿಯಲ್​ಮಿ​ ಕಂಪನಿ (Realme) ತನ್ನ ಬ್ರಾಂಡ್​ನ ಅಡಿಯಲ್ಲಿ  ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವುದನ್ನು ತುಂಬಾ ಕಡಿಮೆ ಮಾಡಿತ್ತು. ಆದರೆ ಇದೀಗ ರಿಯಲ್​ಮಿ ಸ್ಮಾರ್ಟ್​ಫೊನ್​ ಪ್ರಿಯರಿಗೆ ಕಂಪನಿ ಗುಡ್​ನ್ಯೂಸ್​ ನೀಡಿದೆ. ಅದೇನೆಂದರೆ ರಿಯಲ್​ಮಿ 10 ಪ್ರೋ+ (Realme 10 Pro+) ಸ್ಮಾರ್ಟ್​ಫೋನ್​ ದೇಶದ ಮೊಬೈಲ್​ ಮಾರುಕಟ್ಟೆಗೆ ಕಾಲಿಡುತ್ತಿದೆ. ಇದು ಬಹಳಷ್ಟು ಫೀಚರ್ಸ್​ಗಳನ್ನು ಹೊಂದಿದ್ದು ಇದೀಗ ರಿಯಲ್​ಮಿ ಕಂಪನಿಯ ಅಧಿಕೃತ ವೆಬ್​ಸೈಟ್​ ಹಾಗೂ ಪ್ರಸಿದ್ಧ ಇಕಾಮರ್ಸ್​ ವೆಬ್​ಸೈಟ್​​ಗಳಲ್ಲಿ (E-Commerse Website) ಖರೀದಿ ಮಾಡಬಹುದಾಗಿದೆ.


  ರಿಯಲ್​ಮಿ ತನ್ನ ಬ್ರಾಂಡ್​ನಲ್ಲಿ ಎರಡು ಸ್ಮಾರ್ಟ್​ಫೋನ್​ಗಲನ್ನು ಭಾರತದಲ್ಲಿ ಪರಿಚಯಿಸಿತ್ತು ಅದ್ರಲ್ಲಿ ಒಂದು ರಿಯಲ್​ಮಿ 10 ಪ್ರೋ 5ಜಿ ಮತ್ತು ಇನ್ನೊಂದು ರಿಯಲ್​ಮಿ 10 ಪ್ರೋ ಪ್ಲಸ್​ 5ಜಿ ಸ್ಮಾರ್ಟ್​​ಫೋನ್​ಗಳು. ಇವೆರಡೂ ಬೇರೆ ಬೇರೆ ಫೀಚರ್ಸ್​ ಅನ್ನು ಹೊಂದಿದ್ದು ಇವುಗಳಲ್ಲಿ ರಿಯಲ್​ಮಿ 10 ಪ್ರೋ ಪ್ಲಸ್​ ಸ್ಮಾರ್ಟ್​ಫೋನ್ ಅನ್ನು ಇಂದಿನಿಂದ ಖರೀದ ಮಾಡಬಹುದಾಗಿದೆ.


  ರಿಯಲ್​ಮಿ ಕಂಪನಿಯಿಂದ ಎರಡು ಸ್ಮಾರ್ಟ್​ಫೋನ್ ಬಿಡುಗಡೆ


  ರಿಯಲ್​​ಮಿ ತನ್ನ ಬ್ರಾಂಡ್​ಗಳ ಸೀರಿಸ್​ನಲ್ಲಿ ಕಳೆದವಾರ ರಿಯಲ್​ಮಿ 10 ಪ್ರೋ 5ಜಿ ಮತ್ತು ರಿಯಲ್​ಮಿ 10 ಪ್ರೋ ಪ್ಲಸ್ 5ಜಿ ಎಂಬ ಎರಡು ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದೆ. ಈ ಎರಡೂ ಸ್ಮಾರ್ಟ್​​ಫೋನ್​ಗಳು ಕೆಲವೊಂದು ಫೀಚರ್ಸ್​ಗಳು ಒಂದೇ ರೀತಿಯಿದ್ದು ಇದರ ವಿನ್ಯಾಸ ಮಾತ್ರ ವಿಶಿಷ್ಟತೆಯಿಂದ ಕೂಡಿದೆ.


  ರಿಯಲ್​ಮಿ 10 ಪ್ರೋ + 5ಜಿ ಸ್ಮಾರ್ಟ್​​ಫೋನ್​ನ ಫೀಚರ್ಸ್​


  • ರಿಯಲ್​ಮಿ 10 ಪ್ರೋ + 5ಜಿ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.7-ಇಂಚಿನ ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ.

  • ಈ ಡಿಸ್‌ಪ್ಲೇಯು 2,160Hz PWM ಡಿಮ್ಮಿಂಗ್, HDR10+ ಬೆಂಬಲ, 93.65 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ, 950 nits ಗರಿಷ್ಠ ಹೊಳಪನ್ನು ಹೊಂದಿದೆ.


  ಇದನ್ನೂ ಓದಿ: ಇನ್​​ಸ್ಟಾಗ್ರಾಂನ ಈ ಹೊಸ ಫೀಚರ್​ ನೋಡಿದ್ರೆ ಶಾಕ್ ಆಗ್ತೀರಾ! ಇನ್ಮುಂದೆ ಮೆಸೇಜ್​ ಮಾಡ್ಬೇಕಂತನೇ ಇಲ್ಲ

  • ಹುಡ್ ಅಡಿಯಲ್ಲಿ, 8GB ವರೆಗಿನ LPDDR4X RAM ಮತ್ತು ಆಕ್ಟಾ-ಕೋರ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 1080 5G ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸಲಿದೆ.

  • ರಿಯಲ್​ಮಿ 10 ಪ್ರೋ + 5ಜಿ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್​ 13 ಆಧಾರಿತ realme UI 4.0 ನಲ್ಲಿ ಕಾರ್ಯನಿರ್ವಹಿಸಲಿದೆ.


  ರಿಯಲ್​ಮಿ ಸ್ಮಾರ್ಟ್​ಫೋನ್ಸ್


  ಈ ಸ್ಮಾರ್ಟ್​ಫೋನ್​ನ ಕ್ಯಾಮೆರಾ ಫೀಚರ್ಸ್​


  ರಿಯಲ್​ಮಿ 10 ಪ್ರೋ + 5ಜಿ ಸ್ಮಾರ್ಟ್‌ಫೋನ್​ನ ಕ್ಯಾಮೆರಾ ಫೀಚರ್ಸ್​ ಬಗ್ಗೆ ಹೇಳುವುದಾದರೆ ಇದರಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಇದು 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ HM6 ಮುಖ್ಯ ಕ್ಯಾಮೆರಾ ಇದೆ, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು 4cm ಮ್ಯಾಕ್ರೋ ಸೆನ್ಸಾರ್​ಗಳೊಂದಿಗೆ ಕ್ಯಾಮೆರಾಗಳನ್ನು ಒಳಗೊಂಡಿದೆ.ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್​ಗಳಿಗಾಗಿ, ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಹೊಂದಿದ ಕ್ಯಾಮೆರಾವನ್ನು ನೀಡಿದ್ದಾರೆ.


  ಬ್ಯಾಟರಿ ಸಾಮರ್ಥ್ಯ


  ಇನ್ನು ಈ ಸ್ಮಾರ್ಟ್​ಫೋನ್​ನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ರಿಯಲ್​ಮಿ 10 ಪ್ರೋ + 5ಜಿ ಸ್ಮಾರ್ಟ್‌ಫೋನ್​ನಲ್ಲಿ 67W SuperVOOC ಚಾರ್ಜಿಂಗ್ ಬೆಂಬಲದ 5,000mAh ಬ್ಯಾಟರಿ ನೀಡಲಾಗಿದೆ. ಈ ಸ್ಮಾರ್ಟ್​ಫೋನ್ ಅನ್ನು ಕೇವಲ 47 ನಿಮಿಷಗಳಲ್ಲಿ 100 ಪ್ರತಿಶತದಷ್ಟು ಫುಲ್​ ಚಾರ್ಜ್​ ಮಾಡಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನುಳಿದಂತೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ Wi-Fi ಬೆಂಬಲ, 256GB ಸ್ಟೋರೇಜ್​, ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ ಮತ್ತು ಟ್ಯಾಕ್ಟೈಲ್ ಎಂಜಿನ್ 2.0 ಫೀಚರ್ಸ್​ಗಳನ್ನು ನೀಡಿದ್ದಾರೆ.


  ರಿಯಲ್​ಮಿ ಸ್ಮಾರ್ಟ್​ಫೋನ್ಸ್


  ರಿಯಲ್​​ಮಿ 10 ಪ್ರೋ 5ಜಿ ಸ್ಮಾರ್ಟ್​​ಫೋನ್​ ಫೀಚರ್ಸ್​


  • ರಿಯಲ್​​ಮಿ 10 ಪ್ರೋ 5ಜಿ ಸ್ಮಾರ್ಟ್‌ಫೋನ್ ರಿಯಲ್​​ಮಿ 10 ಪ್ರೋ+ 5ಜಿ ಸ್ಮಾರ್ಟ್‌ಫೋನ್​ನಂತೆಯೇ ಸಾಫ್ಟ್‌ವೇರ್ ಫೀಚರ್ಸ್​ಗಳನ್ನು ಹೊಂದಿದೆ.

  • ವಿಶೇಷವಾಗಿ ರಿಯಲ್​​ಮಿ 10 ಪ್ರೋ 5ಜಿ ಸ್ಮಾರ್ಟ್‌ಫೋನ್ 6.72-ಇಂಚಿನ ಫುಲ್‌ HD+ 1,080x 2,400 ಪಿಕ್ಸೆಲ್‌ಗಳ ಜೊತೆಗೆ LCD ಡಿಸ್‌ಪ್ಲೇ ಹೊಂದಿದೆ.

  • ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ನೀಡುತ್ತದೆ.

  • ಇಷ್ಟೇ ಅಲ್ಲದೇ, ಈ ಡಿಸ್‌ಪ್ಲೇ 1mm ಸೈಡ್ ಬೆಜೆಲ್‌ಗಳನ್ನು ಹೊಂದಿದ್ದು,TUV ರೈನ್‌ಲ್ಯಾಂಡ್ ಅನ್ನು ಹೊಂದಿದೆ.

  • ಹುಡ್ ಅಡಿಯಲ್ಲಿ 6nm ಸ್ನಾಪ್‌ಡ್ರಾಗನ್ 695 ಪ್ರೊಸೆಸರ್​ನೊಂದಿಗೆ ಕಾರ್ಯನಿರ್ವಹಿಸುತ್ತದೆ.


  ರಿಯಲ್​​ಮಿ 10 ಪ್ರೋ 5ಜಿ ಕ್ಯಾಮೆರಾ ಫೀಚರ್ಸ್​


  ರಿಯಲ್​​ಮಿ 10 ಪ್ರೋ 5ಜಿ ಸ್ಮಾರ್ಟ್‌ಫೋನ್ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ HM6 ಮುಖ್ಯ ಕ್ಯಾಮೆರಾ ಸೆನ್ಸಾರ್​ ಮತ್ತು 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಸೆಳ್ಫಿಗಾಗಿ ಇದು 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.


  ಬ್ಯಾಟರಿ ಸಾಮರ್ಥ್ಯ


  ಬ್ಯಾಟರಿ ಬಗ್ಗೆ ಹೇಳುವುದಾದರೆ ರಿಯಲ್​​ಮಿ 10 ಪ್ರೋ 5ಜಿ ಸ್ಮಾರ್ಟ್‌ಫೋನ್ 33W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿದೆ. ಈ ಸ್ಮಾರ್ಟ್​​ಫೋನ್ 20 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ತಿಳಿಸಿದೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು