ರಿಯಲ್ಮಿ ಸಂಸ್ಥೆ ಹಲವಾರು ಸ್ಮಾರ್ಟ್ಫೋನ್ಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಇದೀಗ ನಾರ್ಜೋ 20 ಸಿರೀಸ್ ಸ್ಮಾರ್ಟ್ಫೋನ್ಗಳನ್ನ ಪರಿಚಯಿಸಲು ಸಿದ್ಧತೆ ಮಾಡಿದೆ. ಸೆಪ್ಟೆಂಬರ್ 21 ರಂದು, ಮಧ್ಯಾಹ್ನ 12:30 ಕ್ಕೆ ನೂತನ ಸ್ಮಾರ್ಟ್ಫೋನ್ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಅಂದಹಾಗೆ ರಿಯಲ್ಮಿ 3 ಸ್ಮಾರ್ಟ್ಫೋನ್ಗಳನ್ನ ಪರಿಚಯಿಸುತ್ತಿದೆ. ರಿಯಲ್ಮಿ ನಾರ್ಜೋ 20, ನಾಜೋ 20 ಪ್ರೊ, ನಾರ್ಜೋ 20ಎ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಧಾವಿಸುತ್ತಿದೆ. ನೂತನ ಫೋನ್ಗಳು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಬೆಲೆಗೆ ತಕ್ಕಂತೆ ಕೆಲವು ಫೀಚರ್ಸ್ಗಳನ್ನು ಅಳವಡಿಸಿಕೊಂಡಿದೆ. ರಿಯಲ್ಮಿ ಪರಿಚಯಿಸುತ್ತಿರುವ ನಾರ್ಜೋ 20 ಸಿರೀಸ್ ಸ್ಮಾರ್ಟ್ಫೋನ್ಗಳ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ.
ರಿಯಲ್ಮಿ ನಾರ್ಜೋ 20 ಸಿರೀಸ್ ಸ್ಮಾರ್ಟ್ಫೋನ್ಗಳ ವಿಶೇಷತೆ:
ರಿಯಲ್ಮಿ 20 ಸಿರೀಸ್ ಸ್ಮಾರ್ಟ್ಫೋನ್ಗಳು ಮೀಡಿಯಾ ಟೆಕ್ ಹೆಲಿಯೋ G85 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ತ್ರಿವಳಿ ಕ್ಯಾಮೆರಾ ಮತ್ತು 48 ಮೆಗಾಫಿಕ್ಸೆಲ್ ಪ್ರೈಮರಿ ಇಮೇಜ್ ಸೆನ್ಸಾರ್ ನೀಡಲಾಗಿದೆ. ಜೊತೆಗೆ 6 ಸಾವಿರ mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, 8 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.
ರಿಲಲ್ಮಿ ನಾರ್ಜೋ 20 ಸಿರೀಸ್ ಸ್ಮಾರ್ಟ್ಫೋನ್ಗಳು 8GB RAM ಮತ್ತು ನಾಲ್ಕು ಬಣ್ಣದಲ್ಲಿ ಬಿಡುಗಡೆ ಮಾಡುತ್ತಿದೆ. 128 ಸ್ಟೊರೇಜ್ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ.
ಇನ್ನು ನಾರ್ಜೋ 20A ಮತ್ತು ನಾರ್ಜೋ 20 ಪ್ರೊ ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 662. ಸ್ನಾಪ್ಡ್ರಾಗನ್ 665 soc ಮತ್ತು ಮೀಡಿಯಾ ಟೆಕ್ ಹೆಲಿಯೋ G95 ಎಸ್ಒಸಿ ಪ್ರೊಸೆಸರ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಅದರ ಜೊತೆಗೆ ನಾರ್ಜೋ 20ಎ ಸ್ಮಾರ್ಟ್ಫೋನ್ 3GB+32GB ಸ್ಟೊರೇಜ್ ಆಯ್ಕೆಯಲ್ಲಿ ಮತ್ತು 4GB+64GB ಆಯ್ಕೆಯಲ್ಲಿ ಸಿಗಲಿದೆ.
ನಾರ್ಜೋ 20 ಪ್ರೊ ಸ್ಮಾರ್ಟ್ಫೋನ್ 6ಜಿಬಿ + 64ಜಿಬಿ ಸ್ಟೊರೇಜ್ ಮತ್ತು 8ಜಿಬಿ+128 ಸ್ಟೊರೇಜ್ ಆಯ್ಕೆಯಲ್ಲಿ ಸಿಗಲಿದೆ. ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಸಿಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ