Realme Narzo 20: ನಾರ್ಜೋ 20 ಸಿರೀಸ್ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ; 6 ಸಾವಿರ mAh ಬ್ಯಾಟರಿ ಸೇರಿ ಇನ್ನೇನಿದೆ ವಿಶೇಷತೆ?

Realme Narzo 20 Series: ನೂತನ ಫೋನ್​ಗಳು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಬೆಲೆಗೆ ತಕ್ಕಂತೆ ಕೆಲವು ಫೀಚರ್ಸ್​ಗಳನ್ನು ಅಳವಡಿಸಿಕೊಂಡಿದೆ. ರಿಯಲ್​ಮಿ ಪರಿಚಯಿಸುತ್ತಿರುವ ನಾರ್ಜೋ 20 ಸಿರೀಸ್ ಸ್ಮಾರ್ಟ್​ಫೋನ್​ಗಳ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ.

news18-kannada
Updated:September 21, 2020, 10:10 PM IST
Realme Narzo 20: ನಾರ್ಜೋ 20 ಸಿರೀಸ್ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ; 6 ಸಾವಿರ mAh ಬ್ಯಾಟರಿ ಸೇರಿ ಇನ್ನೇನಿದೆ ವಿಶೇಷತೆ?
ರಿಯಲ್​ಮಿ ನಾರ್ಜೋ 20 ಸಿರೀಸ್
  • Share this:
ರಿಯಲ್​ಮಿ ಸಂಸ್ಥೆ ಹಲವಾರು ಸ್ಮಾರ್ಟ್​ಫೋನ್​​ಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದ್ದು, ಇಂದು ನಾರ್ಜೋ 20 ಸಿರೀಸ್ ಸ್ಮಾರ್ಟ್​ಫೋನ್​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಅಂದಹಾಗೆ ರಿಯಲ್​ಮಿ  ಮೂರು ಸ್ಮಾರ್ಟ್​ಫೋನ್​ಗಳನ್ನ ಪರಿಚಯಿಸಿದೆ. ರಿಯಲ್​ಮಿ ನಾರ್ಜೋ 20, ನಾಜೋ 20 ಪ್ರೊ, ನಾರ್ಜೋ 20ಎ ಸ್ಮಾರ್ಟ್​ಫೋನ್​ಗಳು ಇಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ನೂತನ ಫೋನ್​ಗಳು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಬೆಲೆಗೆ ತಕ್ಕಂತೆ ಕೆಲವು ಫೀಚರ್ಸ್​ಗಳನ್ನು ಅಳವಡಿಸಿಕೊಂಡಿದೆ. ರಿಯಲ್​ಮಿ ಪರಿಚಯಿಸುತ್ತಿರುವ ನಾರ್ಜೋ 20 ಸಿರೀಸ್ ಸ್ಮಾರ್ಟ್​ಫೋನ್​ಗಳ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ.

ರಿಯಲ್​ಮಿ ನಾರ್ಜೋ 20 ಸಿರೀಸ್​​ ಸ್ಮಾರ್ಟ್​ಫೋನ್​ಗಳ ವಿಶೇಷತೆ:

 ರಿಯಲ್​ಮಿ ನಾರ್ಜೋ 20 ಪ್ರೊ 6.5 ಇಂಚಿನ ಫುಲ್​ ಹೆಚ್​​​ಡಿ ಡಿಸ್​ಪ್ಲೇ ಹೊಂದಿದ್ದು, ಮೀಡಿಯಾ ಟೆಕ್​ ಹೆಲಿಯೋ ಜಿ95 ಎಸ್​ಒಸಿ ಇಂದ ಕಾರ್ಯನಿರ್ವಹಿಸುತ್ತಿದೆ. 6GB RAM​ ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸಿದೆ.




ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್​​ ಸೆನ್ಸಾರ್​, 8 ಮೆಗಾಫಿಕ್ಸೆಲ್​, 2 ಮೆಗಾಫಿಕ್ಸೆಲ್​ ಮ್ಯಾಕ್ರೊ ಕ್ಯಾಮೆರಾ,  2 ಮೆಗಾಫಿಕ್ಸೆಲ್​​ ಬ್ಲಾಕ್​​ ಅಂಡ್​ ವೈಟ್​​ ಪೊಟ್ರೇಟ್​ ಶೂಟರ್​​​ ನೀಡಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್ ಕ್ಯಾಮೆರಾ ಇದರಲ್ಲಿದೆ.

ಬ್ಯಾಟರಿ; ಧೀರ್ಘಕಾಲದ ಬಾಳಿಕೆಗಾಗಿ 4,500 mAh​ ಬ್ಯಾಟರಿ ಅಳವಡಿಸಲಾಗಿದೆ. ಅದರ ಜೊತೆಗೆ ಫಿಂಗರ್​ ಪ್ರಿಂಟ್​ ಸ್ಕ್ಯಾನರ್​ ನೀಡಲಾಗಿದೆ. ಈ ಸ್ಮಾರ್ಟ್​ಫೋನ್​ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಖರೀದಿಗೆ ಸಿಗಲಿದೆ.ರಿಯಲ್ಮಿ ನಾರ್ಜೋ 20A ವಿಶೇಷತೆ:

6.5 ಇಂಚಿನ ಡಿಸ್​ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್​​ ಪ್ರೊಟೆಕ್ಷನ್​​ ನೀಡಲಾಗಿದೆ. ಕ್ವಾಲ್​ಕ್ಯಾಂ ಸ್ನಾಪ್​ಡ್ರಾಗನ್​​ 665 ಎಸ್​​ಒಸಿ ಪ್ರೊಸೆಸರ್​ ಅಳವಡಿಸಲಾಗಿದ್ದು, ಗ್ರಾಹಕರಿಗಾಗು 3GB +4GB RAM ಆಯ್ಕೆಯಲ್ಲಿ ಪರಿಚಯಿಸಿದೆ. 32+64GB ಸ್ಟೊರೇಜ್​ ಆಯ್ಕೆಯಲ್ಲೂ ಕೊಂಡುಕೊಳ್ಳಬಹುದಾಗಿದೆ.

ಸ್ಮಾರ್ಟ್​ಫೋನ್​ನ ಹಿಂಭಾಗದಲ್ಲಿ 12 ಮೆಗಾಫಿಕ್ಸೆಲ್​​ ಪ್ರೈಮರಿ ಸೆನ್ಸಾರ್​​, 2 ಮೆಗಾಫಿಕ್ಸೆಲ್​​ ಬ್ಲಾಕ್ ಅಂಡ್​ ವೈಟ್​, 2 ಮೆಗಾಫಿಕ್ಸೆಲ್​ ರೆಟ್ರೊ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್​​​​ ಸ್ನಾಪರ್​ ನೀಡಲಾಗಿದೆ.

ಇನ್ನು 5 ಸಾವಿರ mAh​ ಬ್ಯಾಟರಿಯನ್ನು ಹೊಂದಿರುವ ಈ ಫೋನ್​​ ಸಿಲ್ವರ್​ ಮತ್ತು ನೀಲಿ ಬಣ್ಣದಲ್ಲಿ ಖರೀದಿಗೆ ಸಿಗಲಿದೆ

ರಿಯಲ್​ಮಿ ನಾರ್ಜೋ 20

ನಾರ್ಜೊ 20 ಸ್ಮಾರ್ಟ್​ಫೋನ್​ 6.5 ಇಂಚಿನ ಡಿಸ್​​ಪ್ಲೇ ಜೊತೆಗೆ ಮೀಡಿಯಾಟೆಕ್​​ ಹೆಲಿಯೋ G85 ಎಸ್​ಒಸಿ ಪ್ರೊಸೆಸರ್​ ಹೊಂದಿದೆ. 4GB RAM​ ಆಯ್ಕೆಯಲ್ಲಿ ದೊರಕುವ ಈ ಸ್ಮಾರ್ಟ್​ಫೋನ್​ 64+128 GB ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ.

ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್​​ ಪ್ರೈಮರಿ ಸೆನ್ಸಾರ್​ ಕ್ಯಾಮೆರಾ, 8 ಮೆಗಾಫಿಕ್ಸೆಲ್​​ ಅಲ್ಟ್ರಾ ವೈಡ್​ ಕ್ಯಾಮೆರಾ, 2 ಮೆಗಾಫಿಕ್ಸೆಲ್​ ಮ್ಯಾಕ್ರೊ ಶೂಟರ್​ ಹೊಂದಿದೆ.



ಇನ್ನು ದೀರ್ಘ ಕಾಲದ ಬಾಳಿಕೆಗಾಗಿ 6 ಸಾವಿರ mah ಬ್ಯಾಟರಿ ನೀಡಲಾಗಿದೆ. ಗ್ರಾಹಕರಿಗೆ ಸಿಲ್ವರ್​ ಮತ್ತು ನೀಲಿ ಬಣ್ಣದಲ್ಲಿ ಖರೀದಿಗೆ ಸಿಗಲಿದೆ

Published by: Harshith AS
First published: September 21, 2020, 2:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading