Realme Narzo series: ರಿಯಲ್​ಮಿ ನಾರ್ಜೊ ಸಿರೀಸ್​ ಸ್ಮಾರ್ಟ್​ಫೋನ್​ ಬಿಡುಗಡೆ; ಫೀಚರ್​, ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ

Realme Narzo 10: ನಾರ್ಜೊ10 ಸ್ಮಾರ್ಟ್​ಫೋನ್​​ 6.5 ಇಂಚಿನ ಹೆಚ್​ಡಿ+ ಮಿನಿ ಡ್ರಾಪ್​ ಡಿಸ್​ಪ್ಲೇ ಹೊಂದಿದ್ದು, 2.5 ಕಾರ್ನಿಂಗ್​​ ಗೊರಿಲ್ಲಾ ಗ್ಲಾಸ್​ ಅಳವಡಿಸಿದೆ. ಮೀಡಿಯಾಟೆಕ್​​ ಹೆಲಿಯೋ G80 SoC ಪ್ರೊಸೆಸರ್​​ನಿಂದ ಕಾರ್ಯ ನಿರ್ವಹಿಸುವ ನಾರ್ಜೊ10 ಆ್ಯಂಡ್ರಾಯ್ಡ್​​​ 10 ಬೆಂಬಲವನ್ನು ಪಡೆದಿದೆ. 4GB RAM​​ ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ.

 • Share this:
  ಜನಪ್ರಿಯ ಸ್ಮಾರ್ಟ್​ಫೋನ್​ ಉತ್ಪಾದನ ಸಂಸ್ಥೆಯಾದ ರಿಯಲ್​ಮಿ ನೂತನ ನಾರ್ಜೊ 10 ಮತ್ತು ನಾರ್ಜೊ 10A ಫೋನ್​ ಅನ್ನು ಭಾರತದಲ್ಲಿಂದು ಬಿಡುಗಡೆ ಮಾಡಿದೆ. ಕಳೆದ ಮಾರ್ಚ್​ 26 ರಂದು ರಿಯಲ್​ಮಿ ನಾರ್ಜೊ ಸಿರೀಸ್​​ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಅನಂತರ ಕೊರೋನಾ ಲಾಕ್​ಡೌನ್​ನಿಂದಾಗಿ ಭಾರತದಲ್ಲಿ ಬಿಡುಗಡೆ ಮಾಡಲು ಆಗಿರಲಿಲ್ಲ. ಇದೀಗ ನೂತನ ನಾರ್ಜೊ ಸಿರೀಸ್​ ಸ್ಮಾರ್ಟ್​ಫೋನ್​ ಭಾರತದಲ್ಲಿ ಬಿಡುಗಡೆಯಾಗಿವೆ.

  ರಿಯಮ್​ಮಿ ನಾರ್ಜೊ10 ಸ್ಮಾರ್ಟ್​ಫೋನ್ ವೈಶಿಷ್ಟ್ಯತೆ:

  ನಾರ್ಜೊ10 ಸ್ಮಾರ್ಟ್​ಫೋನ್​​ 6.5 ಇಂಚಿನ ಹೆಚ್​ಡಿ+ ಮಿನಿ ಡ್ರಾಪ್​ ಡಿಸ್​ಪ್ಲೇ ಹೊಂದಿದ್ದು, 2.5 ಕಾರ್ನಿಂಗ್​​ ಗೊರಿಲ್ಲಾ ಗ್ಲಾಸ್​ ಅಳವಡಿಸಿದೆ. ಮೀಡಿಯಾಟೆಕ್​​ ಹೆಲಿಯೋ G80 SoC ಪ್ರೊಸೆಸರ್​​ನಿಂದ ಕಾರ್ಯ ನಿರ್ವಹಿಸುವ ನಾರ್ಜೊ10 ಆ್ಯಂಡ್ರಾಯ್ಡ್​​​ 10 ಬೆಂಬಲವನ್ನು ಪಡೆದಿದೆ. 4GB RAM​​ ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ.

  ನೂತನ ಫೋನಿನ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್​ ಕ್ಯಾಮೆರಾ, 8 ಮೆಗಾಫಿಕ್ಸೆಲ್​​​​​ ಸೆಕೆಂಡರಿ ಕ್ಯಾಮೆರಾದ ಜೊತೆಗೆ 3 ಮೆಗಾಫಿಕ್ಸೆಲ್​​​​​​ ಮೊನೊಕ್ರೋಮ್​​​​ ಪೊಟ್ರೇಟ್​​​​ ಸೆನ್ಸಾರ್​​​ ಮತ್ತು 2 ಮೆಗಾಫಿಕ್ಸೆಲ್​​​​​ ಮ್ಯಾಕ್ರೊ ಶೂಟರ್​ ಅಳವಡಿಸಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​​​ ಕ್ಯಾಮೆರಾವನ್ನು ನೀಡಿದೆ. ಇನ್ನು ಸೆಲ್ಫಿ ಕ್ಯಾಮೆರಾದಲ್ಲಿ ಹೆಚ್​​​ಡಿ ವಿಡಿಯೋ ರೆಕಾರ್ಡಿಂಗ್​​​​​ ಮಾಡುವ ಆಯ್ಕೆಯನ್ನು ನೀಡಲಾಗಿದೆ.  5,000mAh​ ಬ್ಯಾಟರಿಯನ್ನು ನಾರ್ಜೊ 10 ಸ್ಮಾರ್ಟ್​ಫೋನಿನಲ್ಲಿ ಅಳವಡಿಸಲಾಗಿದೆ. ಇದರ ಜೊತೆಗೆ ಡುಯೆಲ್​ ಸಿಮ್​​ ಆಯ್ಕೆ, 4G ಲೈಟ್​​, ವೈ-ಫೈ 802, ಬ್ಲೂಟೂತ್​​​ V5.0, GPS​/A-GPS​ ಮತ್ತು USB ಟೈಪ್​-C ಪೋರ್ಟ್​ ಹೊಂದಿದೆ

  ಬೆಲೆ: 11,999 ರೂಪಾಯಿ

  ನಾರ್ಜೊ10A ಸ್ಮಾರ್ಟ್​ಫೋನ್​ ವೈಶಿಷ್ಟ್ಯತೆ:

  ನಾರ್ಜೊ10A ಸ್ಮಾರ್ಟ್​ಫೋನ್​​ 6.5 ಇಂಚಿನ ಹೆಚ್​ಡಿ+ಮಿನಿ ಡ್ರಾಪ್​ ಡಿಸ್​ಪ್ಲೇ ಹೊಂದಿದ್ದು, 2.5 ಕಾರ್ನಿಂಗ್​​ ಗೊರಿಲ್ಲಾ ಗ್ಲಾಸ್​ ಅಳವಡಿಸಿದೆ. ಮೀಡಿಯಾಟೆಕ್​​ ಹೆಲಿಯೋ G70 Soc ಪ್ರೊಸೆಸರ್​​ನಿಂದ ಕಾರ್ಯ ನಿರ್ವಹಿಸುವ ನಾರ್ಜೊ10A ಆ್ಯಂಡ್ರಾಯ್ಡ್​​​ 10 ಬೆಂಬಲವನ್ನು ಪಡೆದಿದೆ. 3GB RAM​​ ಮತ್ತು 32GB ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ.

  ನಾರ್ಜೊ10A ಸ್ಮಾರ್ಟ್​ಫೋನ್​

  ಸ್ಮಾರ್ಟ್​ಫೋನಿನ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. 12 ಮೆಗಾಫಿಕ್ಸೆಲ್ ಪ್ರೈಮರಿ ಸೆನ್ಸಾರ್​​ ಕ್ಯಾಮೆರಾ, 8 ಮೆಗಾಫಿಕ್ಸೆಲ್​​​​​ ಸೆಕೆಂಡರಿ ಕ್ಯಾಮೆರಾದ ಜೊತೆಗೆ 2 ಮೆಗಾಫಿಕ್ಸೆಲ್​​​​​​ ಪೋಟ್ರೇಟ್​ ಶೂಟರ್​​​​​ ಮತ್ತು 2 ಮೆಗಾಫಿಕ್ಸೆಲ್​​​​​ ಮ್ಯಾಕ್ರೊ ಶೂಟರ್​ ಅಳವಡಿಸಲಾಗಿದೆ. ಸೆಲ್ಫಿಗಾಗಿ 5 ಮೆಗಾಫಿಕ್ಸೆಲ್​​​ ಕ್ಯಾಮೆರಾವನ್ನು ನೀಡಿದೆ. ಇದರ ಜೊತೆಗೆ ಬ್ಯೂಟಿಫಿಕೇಶನ್​​, ಹೆಚ್​ಡಿಆರ್​​, ಪನೋರಮ ಮತ್ತು ಟೈಮ್​ಸ್ಲಾಪ್​ ಫೀಚರ್​ ನೀಡಲಾಗಿದೆ. ಮಾತ್ರವಲ್ಲದೆ ಫುಲ್​ ಹೆಚ್​ಡಿ ವಿಡಿಯೋ ರೆಕಾರ್ಡಿಂಗ್​ಗೆ ಸಪೋರ್ಟ್​ ನೀಡುತ್ತದೆ.

  5,000mAh​ ಬ್ಯಾಟರಿಯನ್ನು ನಾರ್ಜೊ 10A ಸ್ಮಾರ್ಟ್​ಫೋನಿನಲ್ಲಿ ಅಳವಡಿಸಲಾಗಿದೆ. ಇದರ ಜೊತೆಗೆ ಡುಯೆಲ್​ ಸಿಮ್​​ ಆಯ್ಕೆ, 4G ಲೈಟ್​​, ವೈ-ಫೈ 802, ಬ್ಲೂಟೂತ್​​​ V5.0, ಜಿಪಿಎಸ್​/ಎ-ಜಿಪಿಎಸ್​ ಮತ್ತು ಯುಎಸ್​ಬಿ ಟೈಪ್​-ಸಿ ಪೋರ್ಟ್​ ಹೊಂದಿದೆ

  ಬೆಲೆ: 8,499 ರೂಪಾಯಿ

  iPhone SE: ಅತಿ ಕಡಿಮೆ ಬೆಲೆಗೆ ಸಿಗಲಿಗೆ ಐಫೋನ್​ ಎಸ್​ಇ; ಹೇಗೆ ಖರೀದಿಸಬಹುದು ಗೊತ್ತಾ?

  First published: