ಫೋನ್ ಬ್ಯಾಟರಿ ಶೇ.33ರಷ್ಟು ಚಾರ್ಜ್ ಆಗಲು ಕೇವಲ 3 ನಿಮಿಷ ಸಾಕು! Realme ಅಲ್ಟ್ರಾಡಾರ್ಟ್ ಚಾರ್ಜಿಂಗ್​ ಬಗ್ಗೆ ನಿಮಗೆಷ್ಟು ಗೊತ್ತು?

Realme UltraDART Tech: ರಿಯಲ್​​ಮಿ ಅಲ್ಟ್ರಾಡಾರ್ಟ್​ ಫ್ಲಾಶ್​ ಚಾಜಿಂಗ್​ ಕೇವಲ 4 ಸಾವಿರ ಎಮ್​ಎಹೆಚ್​ ಬ್ಯಾಟರಿಯ ಸ್ಮಾರ್ಟ್​ಫೋನನ್ನು ಶೇ.33 ರಷ್ಟು ಕೇವಲ 3 ನಿಮಿಷದಲ್ಲಿ  ಚಾರ್ಜ್​ ಮಾಡಬಹುದಾಗಿದೆ. ಜೊತೆಗೆ ಡಿಸ್​ಪ್ಲೇ ಆನ್​ ಮತ್ತು ಗೇಮ್​ ಆಡುವಾಗಲು ಚಾರ್ಜ್​ ಆಗಲಿದೆ ಎಂದು ಬಹಿರಂಗಪಡಿಸಿದೆ.

Photo: Google

Photo: Google

 • Share this:
  ಜನಪ್ರಿಯ ರಿಯಲ್​ಮಿ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನ ಗಿಟ್ಟಿಸಿಕೊಂಡಿದೆ. ಸ್ಮಾರ್ಟ್​ಪ್ರಿಯರಿಗೆ ಬೇಡಿಕೆ ತಕ್ಕಂತೆ ಮತ್ತು ಹೊಸ ವಿನ್ಯಾಸ, ಆಕರ್ಷಕ ಫೀಚರ್ಸ್​ ಮತ್ತು ವಿವಿಧ ರೂಪದಲ್ಲಿ ಸ್ಮಾರ್ಟ್​ಫೋನ್​ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿದೆ. ಇತ್ತೀಚೆಗೆ ರಿಯಲ್​​ಮಿ  ತನ್ನ 125ವ್ಯಾಟ್​ ಅಲ್ಟ್ರಾಡಾರ್ಟ್​​ ಫ್ಲಾಶ್​ ಚಾರ್ಜಿಂಗ್​​ ತಂತ್ರಜ್ನಾನವನ್ನು ಅನಾವರಣಗೊಳಿಸಿತ್ತು. ಇದು ಕೇವಲ 3 ನಿಮಿಷದಲ್ಲಿ 4 ಸಾವಿರ ಎಮ್​ಎಹೆಚ್​ ಬ್ಯಾಟರಿಯನ್ನು ಶೇ.33ರಷ್ಟು ಚಾರ್ಜ್​ ಮಾಡುತ್ತದೆ ಎಂಬ ಭರವಸೆ ನೀಡಿತ್ತು. ಇದೀಗ ಸ್ಮಾರ್ಟ್​ಫೊನ್​ ಚಾರ್ಜಿಂಗ್ ವಿಚಾರದಲ್ಲಿ ಚಿಂತಿಸುತ್ತಿದ್ದ ರಿಯಲ್​​ಮಿ ಸ್ಮಾರ್ಟ್​ಫೋನ್​ನೊಂದಿಗೆ 125 ವ್ಯಾಟ್​ಗೆ ಅನುಗುಣವಾದ ಮತ್ತೊಂದು ಚಾರ್ಜರ್​ ಪರಿಚಯಿಸುವ ಸಿದ್ಧತೆ ಮಾಡಿದೆ ಎಂದು ಹೇಳಲಾಗುತ್ತಿದೆ.

  ಡಿಜಿಟಲ್​​ ಚಾಟ್​ ಸ್ಟೇಷನ್​​ ಪ್ರಕಾರ, ರಿಯಲ್​​ಮಿ ತನ್ನ ಮುಂದಿನ ವರ್ಷ 2ಕೆ ಡಿಸ್​ಪ್ಲೇಯ ಸ್ಮಾರ್ಟ್​ಫೋನ್​ ಪರಿಚಯಿಸುವ ನಿರೀಕ್ಷೆಯಿದೆ. ನೂತನ ಫೋನ್​ 100+ ವ್ಯಾಟ್​ ವೇಗದ ಚಾರ್ಜಿಂಗ್​ ಸೌಲಭ್ಯದೊಂದಿಗೆ ಬರಲಿದೆ. ಒಪ್ಪೊ ಈಗಾಗಲೇ 125 ವ್ಯಾಟ್​ ಪರಿಚಯಿಸಿರುವುದರಿಂದ ರಿಯಲ್​​ಮಿ ಕೂಡ ಚಾರ್ಜಿಂಗ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದೆ. ಹಾಗಾಗಿ 125 ವ್ಯಾಟ್​ ಅಲ್ಟ್ರಾಡಾರ್ಟ್​ ಪರಿಚಯಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

  ರಿಯಲ್​​ಮಿ ಬಜೆಟ್​ ಬೆಲೆಯಲ್ಲಿ ಮತ್ತು ಮಧ್ಯಮ ಶ್ರೇಣಿಯ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿದೆ. ಒಪ್ಪೊ ಮತ್ತು  ಒನ್​ಪ್ಲಸ್​ಗೆನಂತೆಯೇ ಈ ಸ್ಮಾರ್ಟ್​ಫೋನ್​ ಮಾರುಕಟ್ಟೆಯನ್ನು ಇನ್ನಷ್ಟು ವೃದ್ಧಿಸುವ ಸಲುವಾಯಿ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಇನ್ನಷ್ಟು ಪುಷ್ಠಿ ಎಂಬಂತೆ ಅಲ್ಟ್ರಾಡಾರ್ಟ್​ ಫ್ಲಾಶ್​ ಚಾಜಿಂಗ್​ ಪರಿಚಯಿಸುವ ಸಿದ್ಧತೆ ಮಾಡಿಕೊಂಡಿದೆ.

  Read Also- China: ಮಕ್ಕಳು ‘ಸೂಪರ್ ಕಿಡ್’ಗಳಾಗಲಿ ಎಂದು ಕೋಳಿ ರಕ್ತದ ಇಂಜೆಕ್ಷನ್ ನೀಡುತ್ತಿದ್ದಾರೆ ಚೀನೀ ಪೋಷಕರು!

  ರಿಯಲ್​​ಮಿ ಅಲ್ಟ್ರಾಡಾರ್ಟ್​ ಫ್ಲಾಶ್​ ಚಾಜಿಂಗ್​ ಕೇವಲ 4 ಸಾವಿರ ಎಮ್​ಎಹೆಚ್​ ಬ್ಯಾಟರಿಯ ಸ್ಮಾರ್ಟ್​ಫೋನನ್ನು ಶೇ.33 ರಷ್ಟು ಕೇವಲ 3 ನಿಮಿಷದಲ್ಲಿ  ಚಾರ್ಜ್​ ಮಾಡಬಹುದಾಗಿದೆ. ಜೊತೆಗೆ ಡಿಸ್​ಪ್ಲೇ ಆನ್​ ಮತ್ತು ಗೇಮ್​ ಆಡುವಾಗಲು ಚಾರ್ಜ್​ ಆಗಲಿದೆ ಎಂದು ಬಹಿರಂಗಪಡಿಸಿದೆ.

  2022ರ ವೇಳೆಗೆ ಹೊಸ ಫೋನನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ. ಹಾಗಾಘಿ ಒಪ್ಪೊ ಮುಂದಿನ ಪೀಳಿಗೆ ಒಪ್ಪೊ ಫೈಂಡ್​ ಎಕ್ಸ್​ ಮತ್ತು  ಒನ್​ಪ್ಲಸ್ ನಂಬರ್​ ಸರಣಿಯೊಂದಿಗೆ ಸ್ಪರ್ಧೆಗಿಳಿಯಲಿದೆ ಎಂದು ಹೇಳಲಾಗುತ್ತಿದೆ.

  Read Also- Jinal Joshi: ಪ್ಯಾಂಟ್ ಜಿಪ್ ಹಾಕೋದೆ ಮರೆತರಾ ಈ ನಟಿ? ವೈರಲ್ ಆಯ್ತು ಫೋಟೋ

  ಸದ್ಯ ರಿಯಲ್​ಮಿ ಬಗ್ಗೆ ಹೀಗೊಂದು ವದಂತಿ ಹರಿದಾಡುತ್ತಿದೆ. ಆದರೆ ಕಂಪನಿ ಮಾತ್ರ ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಹಾಗಾಗಿ ಸ್ಮಾರ್ಟ್​ಫೋನ್​ ಪ್ರಿಯರು ಮುಂದಿನ ವರ್ಷದವರೆಗೆ ಕಾಯಬೇಕಿದೆ.

  ಇತ್ತೀಚೆಗೆ Realme ಚೀನಾದಲ್ಲಿ Realme GT Neo 2 ಬಿಡುಗಡೆ ಮಾಡುವುದನ್ನು ದೃಢಪಡಿಸಿದೆ. ಆದರೆ ಬಿಡುಗಡೆ ದಿನಾಂಕ ಅಸ್ಪಷ್ಟವಾಗಿದ್ದರೂ, ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸುವ ನಿರೀಕ್ಷೆಯಿದೆ. ಡಿಜಿಟ್ ಸಹಯೋಗದೊಂದಿಗೆ, ಒನ್‌ಲೀಕ್ಸ್‌ ಸ್ಮಾರ್ಟ್​ರ್ಫೋನ್​ ಕೆಲವು ಫೋಟೋಗಳನ್ನು ಹಂಚಿಕೊಂಡಿದೆ. ತ್ರಿವಳಿ ರಿಯರ್ ಕ್ಯಾಮೆರಾಗಳು ಮತ್ತು ಹೋಲ್-ಪಂಚ್ ಡಿಸ್‌ಪ್ಲೇಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್​ ಇದಾಗಿದೆ. ಇದು ಎರಡು ದೊಡ್ಡ ಸೆನ್ಸಾರ್‌ಗಳು ಮತ್ತು ಸಣ್ಣ ಸೆನ್ಸಾರ್‌ನೊಂದಿಗೆ ಬರುತ್ತಿರುವಂತೆ ತೋರುತ್ತದೆ, ಮ್ಯಾಕ್ರೋ ಫೋಟೋಗ್ರಫಿ ಆಯ್ಕೆ ಇದರಲ್ಲಿ ಇರುವಂತೆ ಕಾಣುತ್ತಿದೆ. ಅಂತೂ ಹೊಸ ಫೀಚರ್ಸ್​ ಮತ್ತು ಗ್ರಾಹಕರಿಗೆ ತಕ್ಕಂತೆ ರಿಯಲ್​ಮಿ ಹೋರಾಡುತ್ತಿದೆ.
  Published by:Harshith AS
  First published: