ಚೀನಾ ಮೂಲದ ರಿಯಲ್ಮಿ (Realme) ಸಾಕಷ್ಟು ಸ್ಮಾರ್ಟ್ಫೋನ್ಗಳನ್ನು (Smart Phones) ಭಾರತದಲ್ಲಿ (India) ಪರಿಚಯಿಸುತ್ತಾ ಬಂದಿದೆ. ಹೊಸ ವಿಶೇಷತೆಯನ್ನು ಅಳವಡಿಸಿಕೊಳ್ಳುವ ಮೂಲಕ ಭಾರತದ ಮಾರುಕಟ್ಟೆಯನ್ನು (Market) ಪ್ರವೇಶಿಸುತ್ತಿರುತ್ತದೆ. ಅದರಂತೆಯೇ ಇದೀಗ ರಿಯಲ್ಮಿ ಹೊಸ ಸ್ಮಾರ್ಟ್ಫೋನ್ವೊಂದನ್ನು ಅಭಿವೃದ್ಧಿ ಪಡಿಸಿದೆ. ನೂತನ ಸ್ಮಾರ್ಟ್ಫೋನ್ ದೇಶೀಯ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ.
ಅಂದಹಾಗೆಯೇ, ರಿಯಲ್ಮಿ ಭಾರತೀಯರಿಗಾಗಿ Realme 9i 5G ಸ್ಮಾರ್ಟ್ಫೋನನ್ನು ಪರಿಚಯಿಸಲು ಮುಂದಾಗಿದೆ. ನೂತನ ಸ್ಮಾರ್ಟ್ಫೋನ್ ಆಗಸ್ಟ್ 18ರಂದು ಬಿಡುಗೆಯಾಗಲಿದೆ ಎಂದು ಹೇಳಲಾಗುತ್ತಿದೆ. ಬಿಡುಗಡೆಗೆ ಇನ್ನೇನು 2 ದಿನ ಬಾಕಿ ಇರುವಾಗಲೇ ನೂತನ ಸ್ಮಾರ್ಟ್ಫೋನಿನ ಮೇಲಿರುವ ಕುತೂಹಲ ಹೆಚ್ಚಾಗಿದೆ. ಹೊಸ ಫೋನ್‌ನ ಕೆಲವು ವಿಶೇಷತೆಗಳು ಮತ್ತು ವಿನ್ಯಾಸದ ವಿವರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.
ಸೋರಿಕೆಯಾದ ಮಾಹಿತಿ ಪ್ರಕಾರ, ನೂತನ ಸ್ಮಾರ್ಟ್ಫೋನ್ ಹೇಗಿರಲಿದೆ, ಅದರಲ್ಲಿರುವ ವಿಶೇಷತೆ ಬಗ್ಗೆ ತಿಳಿಸಲಾಗಿದೆ. ಸದ್ಯ ಹರಿದಾಡುತ್ತಿರುವ ಮಾಹಿತಿಯಂತೆ "ಲೇಸರ್ ಲೈಟ್" ವಿನ್ಯಾಸ ಮತ್ತು ಹಿಂಭಾಗದ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ರಿಯಲ್ಮಿ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ಬಣ್ಣಗಳಲ್ಲಿ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಾ ಬಂದಿದೆ. ಅದರಂತೆಯೇ Realme 9i 5G ಸ್ಮಾರ್ಟ್ಫೋನ್ ಎರಡು ಬಣ್ಣಗಳಲ್ಲಿ ಬರಲಿದೆ. ಗ್ರಾಹಕರಿಗಾಗಿ ಕಪ್ಪು ಮತ್ತು ಗೋಲ್ಡ್ ಬಣ್ಣದಲ್ಲಿ ಖರೀದಿಗೆ ಸಿಗಲಿದೆ.
ಇದನ್ನೂ ಓದಿ: Google ಪರಿಚಯಿಸಿದೆ ಆಂಡ್ರಾಯ್ಡ್ 13 ಮೊಬೈಲ್ ಓಎಸ್; ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿ ಇಲ್ಲಿದೆ
ಬಿಡುಗಡೆಗೊಂಡ ಬಳಿ ಅಧಿಕೃತ ರಿಯಲ್ಮಿ ಮಾರಾಟ ಮಳಿಗೆಯಲ್ಲಿ ಖರೀದಿಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಮಾತ್ರವಲ್ಲದೆ, ಜನಪ್ರಿಯ ಆನ್ಲೈನ್ ಮಾರಾಟ ಮಳಿಗೆಯಾದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದು ಎಂದು ಹೇಳಲಾಗುತ್ತಿದೆ.
Realme 9i 5G: ವೈಶಿಷ್ಟ್ಯಗಳು
ಸೋರಿಕೆಯಾದ ಮಾಹಿತಿಯಂತೆಯೇ, Realme 9i 5G ಸ್ಮಾರ್ಟ್ಫೋನಿನ ವಿನ್ಯಾಸ, ವಿಶೇಷತೆಯಲ್ಲಿ ಹಲವು ಬದಲಾವಣೆ ಮಾಡಿದೆ. ಇದು ಗ್ರಾಹಕರನ್ನು ಬೇಗನೆ ಸೆಳೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ
-ನೂತನ Realme 9i 5G ಸ್ಮಾರ್ಟ್ಫೋನ್ MediaTek ಡೈಮೆನ್ಸಿಟಿ 810 SoC ನಿಂದ ಕಾರ್ಯನಿರ್ವಹಿಸುತ್ತದೆ.
-8GB RAM ಮತ್ತು 128GB ಆಂತರಿಕ ಸಂಗ್ರಹಣೆ ಬರಲಿದೆ ಎಂದು ಹೇಳಲಾಗುತ್ತಿದೆ.
-18W ವೇಗದ ಚಾರ್ಜಿಂಗ್ ಜೊತೆಗೆ 5,000mAh ಬ್ಯಾಟರಿ ಆಯ್ಕೆಯಲ್ಲಿ ಸಿಗಲಿದೆ.
-ಇದು ಆಳ ಮತ್ತು ಮ್ಯಾಕ್ರೋ ಫೋಟೋಗಳಿಗಾಗಿ 50MP ಪ್ರೈಮರಿ ಸೆನ್ಸಾರ್ ಮತ್ತು ಎರಡು 2MP ಸಹಾಯಕ ಸೆನ್ಸಾರ್ಗಳನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.
-ಇನ್ನು ಸೆಲ್ಫಿಗಳಿಗಾಗಿ 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿರಬಹುದು.
-Realme 9i 5G ಸ್ಮಾರ್ಟ್ಫೋನ್ 6.6-ಇಂಚಿನ ಪೂರ್ಣ HD+ LCD ಪ್ಯಾನೆಲ್ ಹೊಂದಿದೆ.
-ಬಾಕ್ಸ್ ಹೊರಗೆ Realme UI 2.0 ನೊಂದಿಗೆ Android 11 ನಲ್ಲಿ ಫೋನ್ ರನ್ ಆಗುವ ನಿರೀಕ್ಷೆಯಿದೆ
ಇದನ್ನೂ ಓದಿ: WhatsAppನಲ್ಲಿ ಬರಲಿದೆ ಅವತಾರ್ ಫೀಚರ್! ನಿಮ್ಮ ಪ್ರೊಫೈಲ್ ಫೋಟೋದ ಅವತಾರವೇ ಬದಲಾಗಲಿದೆ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ನೂತನ ಸ್ಮಾರ್ಟ್ಫೋನ್ Realme 9i 5G ಕುರಿತಾದ ಮಾಹಿತಿ ಸೋರಿಕೆಯಾಗಿದೆ. ಟಿಪ್‌ಸ್ಟರ್ ಸುಧಾಂಶು ಅಂಬೋರ್ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳುವಂತೆ Realme 9i 5G ಸ್ಮಾರ್ಟ್ಫೋನ್ ಗ್ರಾಹಕರಿಗೆ ಕಪ್ಪು ಮತ್ತು ಚಿನ್ನದ ಬಣ್ಣದಲ್ಲಿ ಸಿಗಲಿದೆ. ನೂತನ ಸ್ಮಾರ್ಟ್ಫೋನ್ ಒಂದೆರಡು ವಾರಗಳ ಹಿಂದೆ ಬಿಡುಗಡೆಯಾದ Realme 9i 4G ಮಾದರಿಯಂತೆಯೇ ಇರಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಆದರೆ Realme 9i 5G ಸ್ಮಾರ್ಟ್ಫೋನ್ ಬಿಡುಗಡೆಗೆ 2 ದಿನ ಬಾಕಿ ಇದೆ. ಈಗಾಗಲೇ ನೂತನ ಸ್ಮಾರ್ಟ್ಫೋನಿನ ವಿಶೇಷತೆ ಹೊರಬಿದ್ದಿದೆ. ಆದರೆ Realme 9i 5G ಸ್ಮಾರ್ಟ್ಫೋನಿನ ಬೆಲೆ ಮತ್ತು ಇನ್ನಿತರ ಫೀಚರ್ಸ್ಗಳ ಬಗ್ಗೆ ಬಿಡುಗಡೆಗೊಂಡ ಬಳಿಕವೇ ತಿಳಿದು ಬರಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ