ರಿಯಲ್ಮಿ (Realme) ಶೀಘ್ರದಲ್ಲೇ ರಿಯಲ್ಮಿ ಜಿಟಿ 2 ಸರಣಿಯನ್ನು(Realme GT 2 series) ಪರಿಚಯಿಸಿದೆ. ಮಾಹಿತಿ ಪ್ರಕಾರ ಹೊಸ ವರ್ಷದಂದೇ ನೂತನ ರಿಯಲ್ಮಿ ಜಿಟಿ 2 ಸರಣಿಯು ಪರಿಚಯಿಸಲಿದೆ ಎನ್ನಲಾಗುತ್ತಿದೆ. ಜನವರಿ 4 ರಂದು ಚೀನಾದಲ್ಲಿ ಈ ಸ್ಮಾರ್ಟ್ಫೋನ್ ಸರಣಿ ಬಿಡುಗಡೆಯಾಗಲಿದೆ. ಹಾಗಾಗಿ ನೂತನ ರಿಯಲ್ಮಿ ಜಿಟಿ 2 ಪ್ರೊನ ಮೊದಲ ನೋಟ ಹೊರಬಿದ್ದಿದೆ. VOGUE ಇಟಲಿ ಮುಂಬರುವ Realme GT 2 Pro ಅನ್ನು ಪ್ರದರ್ಶಿಸಿದೆ, ಲೈವ್ ಚಿತ್ರಗಳ ಮೂಲಕ ಸಾಧನದ ವಿನ್ಯಾಸದ ಪ್ರೊಫೈಲ್ ಅನ್ನು ಬಹಿರಂಗಪಡಿಸಿದೆ. ಜಪಾನಿನ ಹೆಸರಾಂತ ಕೈಗಾರಿಕಾ ವಿನ್ಯಾಸಕ ನೌಟೊ ಫುಕಾಸಾವಾ ಅವರ ಸಹಯೋಗದೊಂದಿಗೆ ರಚಿಸಲಾದ ವಿನ್ಯಾಸವನ್ನು ಪ್ರದರ್ಶಿಸಿದೆ.
Realme GT 2 ವಿನ್ಯಾಸ
ನೂತನ ಸ್ಮಾರ್ಟ್ಫೋನ್ನಲ್ಲಿ ಕಾಣಿಸಿಕೊಂಡಿರುವ ವಿನ್ಯಾಸವನ್ನು ಪೇಪರ್ ಟೆಕ್ ಮಾಸ್ಟರ್ ಡಿಸೈನ್ ಎಂದು ಕರೆಯಲಾಗುತ್ತದೆ. ಇದು ಪೇಪರ್ನಿಂದ ಪ್ರೇರಿತವಾಗಿದೆ ಮತ್ತು ಪ್ರೀಮಿಯಂ ಆಕರ್ಷಕ ನೋಟವನ್ನು ನೀಡುತ್ತದೆ. ವಿನ್ಯಾಸದ ಹೊರತಾಗಿ, GT 2 Pro ವಿಶ್ವದ ಮೊದಲ ಜೈವಿಕ ಆಧಾರಿತ ಸ್ಮಾರ್ಟ್ಫೋನ್ ವಿನ್ಯಾಸವನ್ನು ಹೊಂದಿದೆ. ಫೋನ್ನ ಹಿಂದಿನ ಕವರ್ನಲ್ಲಿ ಜೈವಿಕ-ಪಾಲಿಮರ್ ವಸ್ತುಗಳನ್ನು ಬಳಸಲಾಗಿದೆ ಎಂದು ರಿಯಲ್ಮೆ ಹೇಳಿದೆ, ಇದು ಪಳೆಯುಳಿಕೆ ಕಚ್ಚಾ ವಸ್ತುಗಳಿಗೆ ಪರಿಸರ ಸ್ನೇಹಿ ಪರ್ಯಾಯವಾಗಿದೆ.
Realme GT 2 ಕ್ಯಾಮೆರಾ
50MP ಪ್ರಾಥಮಿಕ ಕ್ಯಾಮೆರಾಗಳನ್ನು ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ಮಾಡ್ಯೂಲ್, ವಿಶ್ವದ ಮೊದಲ 150-ಡಿಗ್ರಿ 50MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು ಟೆಲಿಫೋಟೋ ಲೆನ್ಸ್ ಅನ್ನು ಖಚಿತಪಡಿಸುತ್ತದೆ. ಕ್ಯಾಮೆರಾ ಬಂಪ್ನಲ್ಲಿ ಡ್ಯುಯಲ್-ಎಲ್ಇಡಿ ಫ್ಲ್ಯಾಷ್ ಕೂಡ ಇದೆ.
ಇದನ್ನು ಓದಿ: WhatsApp ಪರಿಚಯಿಸಲಿದೆ ಈ ಐದು ಫೀಚರ್ಸ್! ಇದು ಹೊಸ ವರ್ಷದ ಉಡುಗೊರೆ
Realme GT 2 ವಿಶೇಷಣಗಳು
ಹೆಚ್ಚುವರಿಯಾಗಿ, ಮುಂಬರುವ Realme GT 2 Pro ಅನ್ನು ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಗುರುತಿಸಲಾಗಿದೆ ಎಂದು ITHome ವರದಿ ಮಾಡಿದೆ, ಇದು ಸಾಧನದ ಪ್ರಮುಖ ಸ್ಪೆಕ್ಸ್ ಅನ್ನು ಬಹಿರಂಗಪಡಿಸುತ್ತದೆ. ಇವುಗಳಲ್ಲಿ Snapdragon 8 Gen 1 SoC, 6.51-ಇಂಚಿನ FHD+ ಸೂಪರ್ OLED ಸ್ಕ್ರೀನ್, ಹೆಚ್ಚಿನ ರಿಫ್ರೆಶ್ ದರ, ಅಂಡರ್-ಸ್ಕ್ರೀನ್ ಫಿಂಗರ್ಪ್ರಿಂಟ್ ಗುರುತಿಸುವಿಕೆ, 5000mAh ಬ್ಯಾಟರಿ ಮತ್ತು Realme UI 3.0 ಸೇರಿವೆ.
ಇದನ್ನು ಓದಿ: ಖೈದಿಗಳಿಗಾಗಿ ಜೈಲನ್ನು ಬಾಡಿಗೆಗೆ ಪಡೆಯಲಾಗಿದೆ, ಇದಕ್ಕಾಗಿ ಖರ್ಚು ಮಾಡ್ತಿರೋದು ಎಷ್ಟು ಗೊತ್ತಾ? ಎಂಥಾ ಕಾಲ ಬಂತಪ್ಪಾ!
ಫೋನ್ ಹೊಸ ಆಂಟೆನಾ ಅರೇ ಮ್ಯಾಟ್ರಿಕ್ಸ್ ಸಿಸ್ಟಮ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಅಂದಹಾಗೆಯೇ GT2 Pro ನ ಸಂಪರ್ಕ ವೈಶಿಷ್ಟ್ಯಗಳನ್ನು ಪವರ್ ಮಾಡುತ್ತದೆ. ಸಾಧನವನ್ನು ರಿಯಲ್ಮಿ ನೂತನ ಸರಣಿ ಸ್ಮಾರ್ಟ್ಫೋನ್ಗಳನ್ನು ಚೀನೀ ಮಾರುಕಟ್ಟೆಯಲ್ಲಿ ಜನವರಿ 4, 2022 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ