Realme GT Neo 2 Review: ಹೇಗಿದೆ Realme GT Neo 2 ಸ್ಮಾರ್ಟ್‌ಫೋನ್‌..? ಪಕ್ಕಾ ವಿಮರ್ಶೆ ಇಲ್ಲಿದೆ

Realme GT Neo 2 Review: Realme GT Neo 2 ಭಾರತದಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪನಿಯ ಇತ್ತೀಚಿನ ಪ್ರೀಮಿಯಂ ಕೊಡುಗೆಯಾಗಿದೆ. ಈ ಮೊದಲು ಚೀನಾದಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್‌ OnePlus 9R, Vivo X60 Pro, Mi 11X, ಮತ್ತು ಹೆಚ್ಚಿನವುಗಳೊಂದಿಗೆ ಸ್ಪರ್ಧಿಸುತ್ತದೆ.

Realme GT Neo 2

Realme GT Neo 2

  • Share this:
Realme GT Neo 2 Review: ಭಾರತದಲ್ಲಿ ಸ್ಮಾರ್ಟ್‌ಫೋನ್ (Smartphone)‌ ಪ್ರಿಯರಿಗೇನೂ ಕಡಿಮೆ ಇಲ್ಲ. ಈ ಹಿನ್ನೆಲೆ ದೇಶೀಯ ಅಲ್ಲದೆ ವಿದೇಶಿ ಸ್ಮಾರ್ಟ್‌ಫೋನ್‌ಗಳಿಗೂ ನಮ್ಮಲ್ಲಿ ಡಿಮ್ಯಾಂಡ್‌ ಇದೆ. ಒಂದೇ ರೇಂಜ್‌ನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದರೂ ಅದರಲ್ಲಿ ಉತ್ತಮ ಯಾವ್ದು ಅಂತ ಫೋನ್‌ ಕೊಳ್ಳುವ ಮುನ್ನ ಹಲವರು ಹುಡುಕುತ್ತಾ ಇರುತ್ತಾರೆ. ಇದೇ ರೀತಿ, ಈ ಲೇಖನದಲ್ಲಿ ನಾವು Realme GT Neo 2 ಫೋನ್‌ ಅನ್ನು ನೀವು ಕೊಂಡುಕೊಳ್ಳಬೇಕಾ..? ಆ ಫೋನ್‌ನ ವೈಶಿಷ್ಟ್ಯತೆಗಳೇನು..? ಪ್ಲಸ್‌ ಪಾಯಿಂಟ್ ಹಾಗೂ ಮೈನಸ್‌ ಪಾಯಿಂಟ್ ಏನು ಎಂಬುದನ್ನು ವಿವರವಾಗಿ ನೀಡಲಾಗಿದೆ..

Realme GT Neo 2 ಭಾರತದಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪನಿಯ ಇತ್ತೀಚಿನ ಪ್ರೀಮಿಯಂ ಕೊಡುಗೆಯಾಗಿದೆ. ಈ ಮೊದಲು ಚೀನಾದಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್‌ OnePlus 9R, Vivo X60 Pro, Mi 11X, ಮತ್ತು ಹೆಚ್ಚಿನವುಗಳೊಂದಿಗೆ ಸ್ಪರ್ಧಿಸುತ್ತದೆ.

Realme GT Neo 2 120Hz AMOLED ಡಿಸ್‌ಪ್ಲೇ, ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್‌ 870 ಚಿಪ್‌ಸೆಟ್, 12GB RAMವರೆಗೆ, ಸ್ಟೇನ್‌ಲೆಸ್‌ ಸ್ಟೀಲ್ ವೇಪರ್‌ ಕೂಲಿಂಗ್, ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ನ್ಯೂಸ್‌18 ತಂಡದ ವರದಿಗಾರರೊಬ್ಬರು ಕಳೆದ ಕೆಲವು ದಿನಗಳಿಂದ Realme GT Neo 2 ಅನ್ನು ಪ್ರಾಥಮಿಕ ಸಾಧನವಾಗಿ ಬಳಸುತ್ತಿದ್ದು ಮತ್ತು ಉತ್ಪನ್ನದ ಪ್ರಾರಂಭ ಗುರುತಿಸಲು, Realme GT Neo 2 ಮೌಲ್ಯದ್ದಾಗಿದೆಯೇ ಎಂದು ನಿರ್ಧರಿಸಲು ನಿಮಗೆ ಸಹಾಯ ಮಾಡಲು ಸ್ಮಾರ್ಟ್‌ಫೋನ್‌ನ ತನ್ನ ಆರಂಭಿಕ ಅನಿಸಿಕೆಗಳನ್ನು ಅವರು ಹೇಳಿದ್ದಾರೆ. ಈ ಮೂಲಕ ನೀವು 31,999 ರೂ. ನೀಡಿ ಈ ಫೋನ್‌ ಖರೀದಿಸಬಹುದೇ ಎಂಬುದನ್ನು ತಿಳಿಸಿಕೊಡುತ್ತಾರೆ.

ಸ್ಮಾರ್ಟ್‌ಫೋನ್‌ ತುಂಬಾ ಆಕರ್ಷಕವಾದ ಪ್ಯಾಕೇಜಿಂಗ್‌ನೊಂದಿಗೆ ಬರುತ್ತದೆ ಮತ್ತು ಕೇವಲ ಈ ಬಾಕ್ಸ್ ಮೂಲಕವೇ ನಿಮಗೆ ಸ್ಮಾರ್ಟ್‌ಫೋನ್‌ ಎಂದರೆ ಗಂಭೀರ ವ್ಯವಹಾರ ಎಂದು ಹೇಳುತ್ತದೆ. ಈ ಬಾಕ್ಸ್‌ನಲ್ಲಿ Realme GT Neo 2 ಸ್ಮಾರ್ಟ್‌ಫೋನ್‌ ಜತೆಗೆ 65W ಚಾರ್ಜಿಂಗ್ ಬ್ರಿಕ್‌ ಹಾಗೂUSB A to type-C cable ದೊರೆಯುತ್ತದೆ. ಹಾಗೂ ಫೋನ್‌ ಜತೆಗೆ ಸಿಲಿಕೋನ್‌ ಕವರ್‌ ಅನ್ನೂ ಪಡೆಯುತ್ತೀರಿ.

ಸ್ಮಾರ್ಟ್‌ಫೋನ್‌ ಕಾರ್ಬನ್ ಫೈಬರ್ ತರಹದ ಪ್ಯಾಟರ್ನ್ ಮತ್ತು ಅದರ Realme ಫ್ಲ್ಯಾಗ್ ಶಿಪ್ ಹೇಳಲು ಹಳದಿ ಬಣ್ಣದ ವಿವರಗಳನ್ನು ಹೊಂದಿರುವ ಉತ್ತಮ ಕಪ್ಪು ಬಾಕ್ಸ್‌ನಲ್ಲಿ ಬರುತ್ತದೆ. ಮೊದಲ ಬಾರಿಗೆ Realme GT Neo 2 ಅನ್ನು ಹಿಡಿದುಕೊಂಡರೆ ನೀವು ಚೆನ್ನಾಗಿ ನಿರ್ಮಿಸಿದ, ಗಟ್ಟಿಮುಟ್ಟಾದ ಗಾಜಿನ ಸ್ಯಾಂಡ್‌ವಿಚ್ ಹಿಡಿದಿರುವಂತೆ ಭಾಸವಾಗುತ್ತದೆ. ಅಲ್ಲದೆ, ಅದು ಮೊದಲ ನೋಟದಲ್ಲಿ ಕಾಣುವುದಕ್ಕಿಂತ ಹಗುರವಾಗಿರುತ್ತದೆ.

ವಿನ್ಯಾಸ

Realme GT Neo 2 6.62-ಇಂಚಿನ ಫ್ಲಾಟ್ ಹೋಲ್-ಪಂಚ್ ಡಿಸ್ಪ್ಲೇ ಹೊಂದಿದೆ. ಫ್ಲಾಟ್ ಡಿಸ್‌ಪ್ಲೇ ಆಕಸ್ಮಿಕ ಸ್ಪರ್ಶಕ್ಕೆ ಕಡಿಮೆ ಒಳಗಾಗುತ್ತದೆ. ಈ ಹಿನ್ನೆಲೆ ಇದು ಒಳ್ಳೆಯದು. Realme GT Neo 2 ಬ್ಯಾಕ್‌ ಪ್ಯಾನಲ್ ಆಸಕ್ತಿದಾಯಕ ಫಿನಿಶ್ ಹೊಂದಿದೆ. ನಮ್ಮ ವಿಮರ್ಶೆಗಾಗಿ ನಾವು ಕಪ್ಪು ಬಣ್ಣವನ್ನು ಪಡೆದುಕೊಂಡಿದ್ದು, ಅದು ಬೆಳಕು ಇಲ್ಲದಿದ್ದಾಗ ಮ್ಯಾಟ್ ಫಿನಿಶ್ ಹೊಂದಿರುವಂತೆ ತೋರುತ್ತದೆ. ಆದರೆ ಬೆಳಕಿಗೆ ಒಡ್ಡಿಕೊಂಡಾಗ ಹೊಳೆಯುತ್ತದೆ. ಮ್ಯಾಟ್ ಇಷ್ಟಪಡುವವರು ಮತ್ತು ಗ್ರೇಡಿಯಂಟ್ ತರಹದ ಫಿನಿಶ್ ಇಷ್ಟಪಡುವವರು - ಹೀಗೆ ಎರಡೂ ರೀತಿಯ ಬಳಕೆದಾರರನ್ನು ಮೆಚ್ಚಿಸುವ ಉತ್ತಮ ಫಿನಿಶ್ ಹೊಂದಿದೆ.

ಕ್ಯಾಮೆರಾ ಮಾಡ್ಯೂಲ್ ಚಂಕಿ ರೆಕ್ಟ್ಯಾಂಗಲ್‌ ಆಗಿದ್ದು, ಅದು ಫೋನ್ ಅನ್ನು ಸಮತಟ್ಟಾದ ಮೇಲ್ಮೈಯಲ್ಲಿ ನಡುಗುವಂತೆ ಮಾಡುತ್ತದೆ. ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಎರಡು ದೊಡ್ಡ ಲೆನ್ಸ್‌ಗಳನ್ನು ಲಂಬವಾಗಿ ಇರಿಸಲಾಗಿದೆ, ಮತ್ತು ಮೂರನೆಯ, ಸಣ್ಣ ಲೆನ್ಸ್ ಅನ್ನು ಎರಡು ದೊಡ್ಡ ಲೆನ್ಸ್‌ಗಳ ಬಲಭಾಗದಲ್ಲಿ ಇರಿಸಲಾಗಿದೆ. Realme ಬ್ರ್ಯಾಂಡಿಂಗ್ ಸೂಕ್ಷ್ಮವಾಗಿದ್ದು, ಬ್ಯಾಕ್‌ ಪ್ಯಾನೆಲ್‌ನ ಕೆಳಗಿನ ಎಡ ಮೂಲೆಯಲ್ಲಿ ಸಣ್ಣ "Realme" ಟ್ಯಾಗ್ ಇದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಕೆಳಭಾಗದಲ್ಲಿದ್ದು, ಸ್ಪೀಕರ್ ಗ್ರಿಲ್ ಜೊತೆಗೆ ಇದೆ. ಪವರ್ ಬಟನ್ ಅನ್ನು ಬಲ ಭಾಗದಲ್ಲಿರಿಸಲಾಗಿದ್ದು, ಮತ್ತು Realme GT Neo 2ನ ಎಡಭಾಗದಲ್ಲಿ ವಾಲ್ಯೂಮ್ ರಾಕರ್ ಹೊಂದಿದೆ.

ಡಿಸ್​ಪ್ಲೇ 

Realme GT Neo 2 ಡಿಸ್​ಪ್ಲೇ  ಚೆನ್ನಾಗಿದೆ. 120Hz ರಿಫ್ರೆಶ್ ದರವು 600Hz ಸ್ಪರ್ಶ ಪ್ರತಿಕ್ರಿಯೆ ದರದೊಂದಿಗೆ ಅನುಭವವನ್ನು ಸುಗಮವಾಗಿಸುತ್ತದೆ. ಅಡಾಪ್ಟಿವ್ ರಿಫ್ರೆಶ್ ರೇಟ್‌ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ತೋರುತ್ತದೆ, ಮತ್ತು Realme GT Neo 2ನಲ್ಲಿ ಸ್ಕ್ರೋಲ್ ಮಾಡುವುದು ತುಂಬಾ ನುಣುಪಾಗಿದೆ. ರೆಸಲ್ಯೂಶನ್ ಮತ್ತು ಹೊಳಪಿನ ದೃಷ್ಟಿಯಿಂದಲೂ ಇದರ ಡಿಸ್‌ಪ್ಲೇ ಅದ್ಭುತವಾಗಿದೆ. ಇದು 4K ರೆಸಲ್ಯೂಶನ್‌ವರೆಗೂ ಯೂಟ್ಯೂಬ್ ವಿಡಿಯೋಗಳನ್ನು ರನ್ ಮಾಡುತ್ತದೆ ಮತ್ತು 1,300 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ. ಇತ್ತೀಚಿನ Realme ಫ್ಲ್ಯಾಗ್‌ಶಿಪ್‌ನಲ್ಲಿ ವಿಡಿಯೋಗಳನ್ನು ನೋಡುವುದು ಮತ್ತು ಗೇಮ್ಸ್‌ ಆಡುವುದು ಆಹ್ಲಾದಕರ ಅನುಭವವಾಗಿದೆ.

ಆದರೆ, ಬಣ್ಣದ ನಿಖರತೆಯಲ್ಲಿ ಡಿಸ್‌ಪ್ಲೇ ಹಿಂದುಳಿದಿದೆ. ಇದು ಸೂಪರ್ ಬ್ರೈಟ್ ಮತ್ತು ಸೂಪರ್ ಸ್ಮೂತ್ ಡಿಸ್‌ಪ್ಲೇ ಆಗಿದ್ದರೂ, ವಿವರ ಮತ್ತು ಬಣ್ಣದ ನಿಖರತೆ ಉತ್ತಮವಾಗಿಲ್ಲ. ಒಟ್ಟಾರೆಯಾಗಿ, ಇದು ಉತ್ತಮ ಡಿಸ್‌ಪ್ಲೇ ಮತ್ತು ಸ್ಪರ್ಧೆಗೆ ಸಮನಾಗಿರುತ್ತದೆ.

ಕಾರ್ಯಕ್ಷಮತೆ ಮತ್ತು ಬ್ಯಾಟರಿ

Realme GT Neo 2ಕ್ವಾಲ್ಕಾಮ್‌ ಸ್ನ್ಯಾಪ್‌ಡ್ರ್ಯಾಗನ್‌870 ಚಿಪ್‌ಸೆಟ್‌ನ ಪವರ್‌ ಹೊಂದಿದ್ದು, 12GB RAMನೊಂದಿಗೆ ಪೇರ್‌ ಆಗಿದೆ.Realme's RAM ವಿಸ್ತರಣಾ ತಂತ್ರಜ್ಞಾನದ ಮೂಲಕ ಬಳಕೆದಾರರಿಗೆ 7GB ಉಚಿತ ಸಂಗ್ರಹಣೆ ತೆಗೆದುಕೊಂಡು ಅದನ್ನು ವಿಸ್ತರಿಸಿದ RAM ಆಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ.

ಡಿಸ್‌ಪ್ಲೇಯಂತೆಯೇ,Realme GT Neo 2ನ ಕಾರ್ಯಕ್ಷಮತೆ ಕೂಡ ಸುಗಮವಾಗಿದೆ. ಸ್ಮಾರ್ಟ್‌ಫೋನ್‌ ನಮ್ಮ ಪರೀಕ್ಷೆಯ ಉದ್ದಕ್ಕೂ ಸ್ಲೋ ಆಗುವ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ.Battlegrounds Mobile India, Asphalt 9,ಮತ್ತು ಇನ್ನೂ ಹೆಚ್ಚಿನ ಗೇಮ್‌ಗಳನ್ನು ಆಡಿದ್ದರೂ ಸ್ಮಾರ್ಟ್‌ಫೋನ್ ಯಾವುದೇ ಸಮಸ್ಯೆಗಳನ್ನು ನೀಡಿಲ್ಲ.Realme GT Neo 2ನ ಬೆಂಚ್‌ಮಾರ್ಕ್ ಪರೀಕ್ಷೆಗಳಲ್ಲಿ 1,014 ಸಿಂಗಲ್-ಕೋರ್ ಸ್ಕೋರ್ ಮತ್ತು ಮಲ್ಟಿ-ಕೋರ್ ಸ್ಕೋರ್ 3,085 ಅನ್ನು ತೋರಿಸುತ್ತದೆ.

Realme GT Neo 28 ಲೇಯರ್ ಕೂಲಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ, ಇದರಲ್ಲಿ ಡೈಮಂಡ್ ಥರ್ಮಲ್ ಜೆಲ್ ಮತ್ತು ಸ್ಟೇನ್ಲೆಸ್ ಸ್ಟೀಲ್ ವೇಪರ್‌ ಕೂಲಿಂಗ್ ತಂತ್ರಜ್ಞಾನವಿದೆ. ನಮ್ಮ ಗೇಮಿಂಗ್ ಸೆಷನ್‌ಗಳಲ್ಲಿ, ಸ್ಮಾರ್ಟ್‌ಫೋನ್ ಬಿಸಿಯಾಗುವ ಲಕ್ಷಣಗಳನ್ನು ತೋರಿಸಿತಾದರೂ, ಗಣನೀಯವಾಗಿ ಇರಲಿಲ್ಲ. ಹೀಗಾಗಿ ಉತ್ತಮ ಉಷ್ಣ ನಿಯಂತ್ರಣ ಹೊಂದಿದೆ.

ಸಾಧನದ ವೇಗದಲ್ಲಿ ನಾನು ಯಾವುದೇ ಸಮಸ್ಯೆಗಳನ್ನು ಎದುರಿಸದಿದ್ದರೂ, ಬಳಕೆದಾರರ ಅನುಭವವು ಉತ್ತಮವಾಗಿಲ್ಲ.RealmeUIಆ್ಯಂಡ್ರಾಯ್ಡ್ ಅನುಭವವನ್ನು ಸುಲಭ ಅಥವಾ ಸುಗಮಗೊಳಿಸುವುದಿಲ್ಲ. ಸ್ಟಾಕ್ ಆಂಡ್ರಾಯ್ಡ್ ಅಥವಾ ಆಕ್ಸಿಜನ್ ಓಎಸ್‌ನಂತಹ ಕೆಲವು ಉತ್ತಮ ಲಾಂಚರ್‌ಗಳಷ್ಟು ಇದು ಉತ್ತಮವಾಗಿಲ್ಲ. ಬ್ಲೋಟ್ವೇರ್ ಅಸ್ತಿತ್ವದಲ್ಲಿದ್ದು, ಮತ್ತು ಕೆಲವು ಪ್ರದೇಶಗಳಲ್ಲಿ ನಿಯಂತ್ರಣಗಳು ಸುಗಮವಾಗಿರುವುದಿಲ್ಲ.

Realme GT Neo 2ಬ್ಯಾಟರಿಯೂ ಉತ್ತಮವಾಗಿದೆ. ನಮ್ಮ ಬಳಕೆಯ ಸಮಯದಲ್ಲಿ, ನಾವು ಶನಿವಾರ ಫೋನ್ ಅನ್ನು 100 ಪ್ರತಿಶತದಷ್ಟು ಚಾರ್ಜ್ ಮಾಡಿದ್ದು, ಮತ್ತು ಅದನ್ನು 120Hz ರಿಫ್ರೆಶ್ ದರದಲ್ಲಿ ಪೂರ್ತಿ ಹೊಳಪಿನಲ್ಲಿ ಬಳಸಿದ್ದೇವೆ, ಜೊತೆಗೆ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾದಂತಹ ಗೇಮ್‌ಗಳನ್ನು ಆಡಿದರೂ, ಒಟ್ಟಾರೆ ಸುಮಾರು 48 ಗಂಟೆ ಫೋನ್‌ ಬಳಸಿದರೂ, ಇನ್ನೂ ಸುಮಾರು ಒಂದೆರಡು ಗಂಟೆಗಳ ಕಾಲ ಫೋನ್‌ ಬಳಸುವಷ್ಟು ಬ್ಯಾಟರಿ ಉಳಿದಿದೆ. ಹೀಗಾಗಿ ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದೆ.

Read Also: Facebook: ಹೊಸ ಹೆಸರಿನೊಂದಿಗೆ ಬರಲಿದೆ ಫೇಸ್​ಬುಕ್​! ಇಷ್ಟೆಲ್ಲಾ ಚಿಂತನೆ ಯಾಕಾಗಿ?

Realme GT Neo 2ಚಾರ್ಜಿಂಗ್ ವೇಗವು ಹೆಚ್ಚಿದೆ. ಈ ಸ್ಮಾರ್ಟ್‌ಫೋನ್Realme65W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದು 7 ಪರ್ಸೆಂಟ್‌ ಚಾರ್ಜ್‌ನಿಂದ 100 ಪ್ರತಿಶತದಷ್ಟು ಚಾರ್ಜ್ ಆಗಲು 40 ನಿಮಿಷಗಳಿಗಿಂತಲೂ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

ಕ್ಯಾಮೆರಾ

Realme GT Neo 2ನಲ್ಲಿನ ಕ್ಯಾಮರಾ ಕೇವಲ ಸರಾಸರಿಯಾಗಿದೆ.. 64 ಮೆಗಾಪಿಕ್ಸೆಲ್ ಪ್ರಾಥಮಿಕ ಶೂಟರ್, ವೈಡ್-ಆ್ಯಂಗಲ್ ಲೆನ್ಸ್ ಮತ್ತು ಮ್ಯಾಕ್ರೋ ಶೂಟರ್ ಒಳಗೊಂಡಿರುವ ಸ್ಮಾರ್ಟ್ ಫೋನಿನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಇದೆ. ಕ್ಯಾಮರಾ ತನ್ನ ಪ್ರಾಥಮಿಕ ಲೆನ್ಸ್ ಮೂಲಕ ಚೆನ್ನಾಗಿ ಬೆಳಗುವ ಪರಿಸರದಲ್ಲಿ ಉತ್ತಮವಾದ, ಕ್ರಿಸ್ಪ್‌ ಚಿತ್ರಗಳನ್ನು ತೆಗೆಯುತ್ತದೆ.

ಆದರೂ, ವೈಡ್-ಆ್ಯಂಗಲ್ ಶೂಟರ್ ಮತ್ತು ಮ್ಯಾಕ್ರೋ ಶೂಟರ್ ನಿರಾಶಾದಾಯಕವಾಗಿದೆ.. ಮ್ಯಾಕ್ರೋ ಮೋಡ್‌ನಲ್ಲಿ,Realme GT Neo 2ವಿಷಯದ ಬಗ್ಗೆ ಉತ್ತಮ ವಿವರಗಳನ್ನು ನೀಡುತ್ತದೆ, ಆದರೂ, ಮ್ಯಾಕ್ರೋ ಮೋಡ್ ಮೂಲಕ ನಾವು ಕ್ಲಿಕ್ ಮಾಡಿದ ಫೋಟೋಗಳ ಅಂಚುಗಳಲ್ಲಿ ಸ್ವಲ್ಪ ಮಸುಕುಗಳು ಇದ್ದವು.

Realme GT Neo 2 ನಲ್ಲಿನ ಪೋರ್ಟ್‌ರೇಟ್‌ ಮೋಡ್ ಉತ್ತಮವಾಗಿದೆ ಮತ್ತು ಅಂಚುಗಳನ್ನು ಉತ್ತಮ ನಿಖರತೆಯೊಂದಿಗೆ ಕಟ್‌ ಮಾಡುತ್ತದೆ, ಆದರೂ ನಾವು ಈ ವಿಭಾಗದಲ್ಲಿ ನೋಡಿದ ಅತ್ಯುತ್ತಮ ಫೋನ್‌ ಅಲ್ಲ.

Read Also: Log-in to God: ಆ್ಯಪ್​ ಬಳಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ!, ‘‘ಕ್ಲಿಕ್ ಟು ಪ್ರೇ‘‘ಮತ್ತೆ ಆರಂಭಿಸಿದ ಪೋಪ್​ ಫ್ರಾನ್ಸಿಸ್​

ಈ ಹಿನ್ನೆಲೆ ಉತ್ತಮ ಕ್ಯಾಮೆರಾ ಬೇಕೆಂದು ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಇದು ಅತ್ಯುತ್ತಮ ಆಯ್ಕೆ ಅಲ್ಲ. ಹೆಚ್ಚಿನ Realme ಸ್ಮಾರ್ಟ್‌ಫೋನ್ ಕ್ಯಾಮೆರಾಗಳ ಬಗ್ಗೆ ಕಿರಿಕಿರಿಯುಂಟುಮಾಡುವ ಒಂದು ವಿಷಯವೆಂದರೆ ಅನಗತ್ಯAIಅಧಿಕ ಸಂಸ್ಕರಣೆ. ಮತ್ತು Realme GT Neo 2 ಸಹ ಅವುಗಳಿಗಿಂತ ಭಿನ್ನವಾಗಿಲ್ಲ.

ಫಲಿತಾಂಶ

ಸ್ಮಾರ್ಟ್‌ಫೋನ್‌ನ ಮೊದಲ ಅನಿಸಿಕೆಗಳು ಇಲ್ಲಿಯವರೆಗೆ ಉತ್ತಮ ಎನಿಸಿದರೂ, ಮುಂದಿನ ಕೆಲವು ವಾರಗಳಲ್ಲಿ ಸ್ಮಾರ್ಟ್‌ಫೋನ್ ಅನ್ನು ಹೆಚ್ಚು ವ್ಯಾಪಕವಾದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇಲ್ಲಿಯವರೆಗೆ, Realme GT Neo 2 ನಮಗೆ ಸರಿಯಾದ ಫ್ಲ್ಯಾಗ್‌ಶಿಪ್ ಅನುಭವವನ್ನು ನೀಡಿದೆ (ಕ್ಯಾಮೆರಾ ಗುಣಮಟ್ಟವನ್ನು ಹೊರತುಪಡಿಸಿ).

ಇದು ನಿಮ್ಮ ಹಣಕ್ಕೆ ಯೋಗ್ಯವಾಗಿದೆಯೇ? ಖಡಾ ಖಂಡಿತವಾಗಿ. ಇದು OnePlus 9R ನೀಡುವ ಎಲ್ಲವನ್ನೂ ಕಡಿಮೆ ಬೆಲೆಯಲ್ಲಿ ಒದಗಿಸುತ್ತದೆ. ಆದರೆ, ನಿಮ್ಮ ಆದ್ಯತೆಯು ಉತ್ತಮವಾದ ಸ್ಮಾರ್ಟ್‌ಫೋನ್ ಕ್ಯಾಮೆರಾ ಆಗಿದ್ದರೆ, Realme GT Neo 2 ನಿಮಗಾಗಿ ಅಲ್ಲ.
First published: