Realme: ಶೀಘ್ರದಲ್ಲೇ ಜಾಗತಿಕವಾಗಿ ಲಾಂಚ್ ಆಗಲಿರುವ Realme GT 2: ಕಂಪನಿಯ ಮುಂದಿನ ಯೋಜನೆಗಳೇನು?

Realme GT 2 series: ರಿಯಲ್‌ ಮಿ ಇಂಡಿಯಾ ಹಾಗೂ ಯುರೋಪ್ ಸಿಇಒ ಮಾಧವ್ ಶೇತ್ 2022ರ ಕಂಪನಿಯ ಯೋಜನೆಗಳನ್ನು ಮತ್ತು ಇತರ ಕೆಲವು ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಆ್ಯಂಡ್ರಾಯ್ಡ್ ಅಥಾರಿಟಿಯೊಂದಿಗಿನ ಸಂಭಾಷಣೆಯಲ್ಲಿ ಮಾಧವ್, ರಿಯಲ್‌ ಮಿ ಜಿಟಿ 2 ಸೀರೀಸ್ ಜಾಗತಿಕವಾಗಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂಬುದಾಗಿ ಬಹಿರಂಗಪಡಿಸಿದ್ದು ಸ್ಮಾರ್ಟ್‌ಫೋನ್‌ಗಳು ಯುರೋಪಿಯನ್ ಮಾರುಕಟ್ಟೆಗಳಿಗೂ ಬರಲಿವೆ.

Realme GT 2 / ರಿಯಲ್‌ ಮಿ ಜಿಟಿ 2

Realme GT 2 / ರಿಯಲ್‌ ಮಿ ಜಿಟಿ 2

  • Share this:
    ರಿಯಲ್‌ ಮಿ (Realme) ಇತ್ತೀಚೆಗೆ ತಾನೇ ತನ್ನ ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ರಿಯಲ್‌ ಮಿ ಜಿಟಿ 2 ಸೀರೀಸ್ (Realme GT 2 series) ಅನ್ನು ಲಾಂಚ್ ಮಾಡಿದ್ದು ಪ್ರಸ್ತುತ ಲಾಂಚ್ ಚೀನಾಕ್ಕೆ ಮಾತ್ರವೇ ಸೀಮಿತವಾಗಿದೆ. ಸ್ನ್ಯಾಪ್‌ಡ್ರ್ಯಾಗನ್ 8 ಜನರೇಶನ್ 1-ಚಾಲಿತ ರಿಯಲ್‌ ಮಿ ಜಿಟಿ 2 ಪ್ರೊ (Realme GT 2 Pro) ಅನ್ನು ಒಳಗೊಂಡಿದೆ. ರಿಯಲ್‌ ಮಿ ಜಿಟಿ 2 ಪ್ರೋ ಬ್ರ್ಯಾಂಡ್‌ನ ದುಬಾರಿ ಸ್ಮಾರ್ಟ್‌ಫೋನ್ ಎಂದೆನಿಸಿದ್ದು, 8 ಜೆನ್ 1 ಚಿಪ್‌ಸೆಟ್ ಇದರಲ್ಲಿದೆ ಎಂಬುದು ಸ್ಮಾರ್ಟ್‌ಫೋನ್ ವಿಶೇಷತೆಯಾಗಿದೆ. Realme GT 2 ಸೀರಿಸ್ (Realme GT 2 series) ಜಾಗತಿಕವಾಗಿ ಯಾವಾಗ ಲಭ್ಯವಾಗಲಿದೆ ಇದರ ವಿಶೇಷತೆಗಳೇನು ಎಂಬುದರ ಕುರಿತು ಸಂಸ್ಥೆ ಇನ್ನೂ ಮಾಹಿತಿ ನೀಡಿಲ್ಲ.

    ಕಂಪನಿಯ ಯೋಜನೆ ಹಾಗೂ ವಿವರಗಳೇನು?

    ರಿಯಲ್‌ ಮಿ ಇಂಡಿಯಾ ಹಾಗೂ ಯುರೋಪ್ ಸಿಇಒ ಮಾಧವ್ ಶೇತ್ 2022ರ ಕಂಪನಿಯ ಯೋಜನೆಗಳನ್ನು ಮತ್ತು ಇತರ ಕೆಲವು ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಆ್ಯಂಡ್ರಾಯ್ಡ್ ಅಥಾರಿಟಿಯೊಂದಿಗಿನ ಸಂಭಾಷಣೆಯಲ್ಲಿ ಮಾಧವ್, ರಿಯಲ್‌ ಮಿ ಜಿಟಿ 2 ಸೀರೀಸ್ ಜಾಗತಿಕವಾಗಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂಬುದಾಗಿ ಬಹಿರಂಗಪಡಿಸಿದ್ದು ಸ್ಮಾರ್ಟ್‌ಫೋನ್‌ಗಳು ಯುರೋಪಿಯನ್ ಮಾರುಕಟ್ಟೆಗಳಿಗೂ ಬರಲಿವೆ. ವ್ಯಾಪಕ ಬಿಡುಗಡೆಯು ಭಾರತವನ್ನು ಒಳಗೊಂಡಿದೆ ಎಂದು ಅವರು ಖಚಿತಪಡಿಸಿದ್ದಾರೆ.

    ಕಂಪನಿಯು ತನ್ನ ಟ್ಯಾಬ್ಲೆಟ್ ಪೋರ್ಟ್‌ಫೋಲಿಯೋವನ್ನು ಬೇರೆ ಬೇರೆ ಬೆಲೆಯ ವಿಭಾಗಗಳಲ್ಲಿ ವಿಸ್ತರಿಸುವ ಯೋಜನೆಯನ್ನು ಸಹ ಘೋಷಿಸಿದೆ. ಕಳೆದ ವರ್ಷ, ರಿಯಲ್‌ ಮಿಯ ಮೊದಲ ಟ್ಯಾಬ್ಲೆಟ್, ರಿಯಲ್‌ ಮಿ ಪ್ಯಾಡ್, ಸುಮಾರು 15,000 ರೂ.ಗಳ ಆರಂಭ ಬೆಲೆಗೆ ಲಾಂಚ್ ಆಗಿದೆ. ಈ ವರ್ಷ ಕೆಲವು ಹೊಸ ರಿಯಲ್‌ ಮಿ ಲ್ಯಾಪ್‌ಟಾಪ್‌ಗಳನ್ನು ಸಹ ನೋಡಬಹುದಾಗಿದೆ ಎಂಬುದಾಗಿ ಕಂಪನಿಯ ಸುದ್ದಿಮೂಲಗಳು ತಿಳಿಸಿವೆ.

    ಕಂಪನಿ ಇತ್ತೀಚೆಗೆ ತನ್ನ ಎರಡನೇ ಲ್ಯಾಪ್‌ಟಾಪ್, Realme Book Enhanced ಅನ್ನು ಬಿಡುಗಡೆ ಮಾಡಿದೆ ಮತ್ತು ಕಂಪನಿಯು 12ನೇ-ಜೆನ್ ಇಂಟೆಲ್ ಸಿಪಿಯು-ಚಾಲಿತ ಸಾಧನ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಹೊಸ ಲ್ಯಾಪ್‌ಟಾಪ್ ಮೂಲ ರಿಯಲ್‌ ಮಿ ಬುಕ್‌ನ ರಿಫ್ರೆಶ್ ಆವೃತ್ತಿಯೇ ಅಥವಾ ಹೊಸ ಸಾಧನವೇ ಎಂಬುದು ಸ್ಪಷ್ಟವಾಗಿಲ್ಲ.

    ಇದನ್ನು ಓದಿ: WhatsApp: ನಿಮ್ಮ ಕುರಿತು ಏನು ಮಾತಾಡಿಕೊಳ್ಳುತ್ತಾರೆ ಎಂಬ ಕೌತುಕವೇ? ವಾಟ್ಸ್‌ಆ್ಯಪ್‌ ಪ್ರೊಫೈಲ್ ನೀಡುತ್ತೆ ಆ ಮಾಹಿತಿ..!

    ರಿಯಲ್‌ ಮಿ ಒದಗಿಸುವ ಓಎಸ್ ಸಮಯ ಕಡಿಮೆ:

    ರಿಯಲ್‌ ಮಿ ತನ್ನ ಸ್ಮಾರ್ಟ್‌ಫೋನ್‌ಗಳಿಗಾಗಿ 2 ವರ್ಷಗಳ ಓಎಸ್ ನವೀಕರಣಗಳನ್ನು ಕೆಲವು ಕಾಲದಿಂದ ಭರವಸೆ ನೀಡುತ್ತಿದೆ. ಇದು ಆ್ಯಪಲ್, ವಿವೋ, ಎಚ್‌ಎಮ್‌ಡಿ ಗ್ಲೋಬಲ್-ಬೆಂಬಲಿತ ನೋಕಿಯಾ ಮೊಬೈಲ್‌ಗಳಂತಹ ಬ್ರ್ಯಾಂಡ್‌ಗಳಿಗಿಂತ ಕಡಿಮೆಯಾಗಿವೆ. ಏಕೆಂದರೆ ಈ ಬ್ರ್ಯಾಂಡ್‌ಗಳು ಓಎಸ್ ಅಪ್‌ಡೇಟ್ ನೀಡುವ ಸಮಯ ಹೆಚ್ಚಾಗಿದೆ. ಅದಾಗ್ಯೂ ಇದನ್ನು ಬದಲಾಯಿಸಲು ಕಂಪನಿಯು ಯಾವುದೇ ಯೋಜನೆ ಹೊಂದಿಲ್ಲ ಮತ್ತು ರಿಯಲ್‌ ಮಿ ಫೋನ್‌ಗಳು ಮೂರು ವರ್ಷಗಳ ಭದ್ರತಾ ವೈಶಿಷ್ಟ್ಯಗಳನ್ನು ಪಡೆಯುವುದನ್ನು ಮುಂದುವರಿಸುತ್ತದೆ ಎಂದು ಮಾಧವ್ ಶೇತ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

    ರಿಯಲ್‌ ಮಿ ಲಾಂಚ್ ಮಾಡಲಿರುವ ಇನ್ನಷ್ಟು ಉತ್ಪನ್ನಗಳಾವುವು?

    ಮಾಧವ್ ಶೇತ್ ಯುಎಸ್ ಮಾರುಕಟ್ಟೆಯ ಯೋಜನೆಗಳನ್ನು ದೃಢಪಡಿಸಿದ್ದು ಹೆಚ್ಚಿನ ಚೀನಾದ ಬ್ರ್ಯಾಂಡ್‌ಗಳು ಪ್ರಭಾವ ಬೀರಲು ಹೇಗೆ ಕಷ್ಟಪಟ್ಟಿವೆ ಎಂಬುದನ್ನು ವಿವರಿಸಿದ್ದಾರೆ. ಇದಕ್ಕೆ ಹಲವಾರು ಕಾರಣಗಳಿವೆ ಎಂಬುದನ್ನು ತಿಳಿಸಿರುವ ಶೇತ್, ನಿಧಾನವಾಗಿ ಒನ್‌ಪ್ಲಸ್ ಹಾಗೂ ಟಿಸಿಎಲ್ ನಿಧಾನವಾಗಿ ಪ್ರಭಾವ ಬೀರುತ್ತಿವೆ ಎಂದು ತಿಳಿಸಿದ್ದಾರೆ.

    ಇದನ್ನು ಓದಿ: Safety Apps: ಉದ್ಯೋಗಸ್ಥ ಮಹಿಳೆಯ ಮೊಬೈಲ್‌ನಲ್ಲಿ ಈ 5 ಆ್ಯಪ್‌‌ಗಳು ಇರಲೇಬೇಕು..!

    ರಿಯಲ್‌ ಮಿ ಇಂಡಿಯಾ ಹಾಗೂ ಯುರೋಪ್ ಮುಖ್ಯಸ್ಥರು ಅಮೆರಿಕದ ಮಾರುಕಟ್ಟೆಯನ್ನು ಕಂಪನಿ ಪ್ರವೇಶಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ. ಅದಾಗ್ಯೂ ಇದು ಇನ್ನೂ ಫೋನ್‌ಗಳನ್ನು ಮಾರಾಟ ಮಾಡುವ ಬಗ್ಗೆ ದೃಢೀಕರಣಗಳನ್ನು ನೀಡಿಲ್ಲ. ಟಿವಿ, ವಾಚ್‌ಗಳು, ಇಯರ್‌ಬಡ್‌ಗಳು, ವ್ಯಾಕ್ಯೂಮ್ ರೋಬೋಟ್‌ಗಳಂತಹ ಸಾಕಷ್ಟು ಉತ್ಪನ್ನಗಳನ್ನು ಪರಿಚಯಿಸುವುದಾಗಿ ಕಂಪನಿ ಹೇಳಿಕೊಂಡಿದೆ.
    Published by:Harshith AS
    First published: