HOME » NEWS » Tech » REALME FESTIVE DAYS SALE TO BEGIN ON OCTOBER 16 IN INDIA OFFER DISCOUNTS UP TO RS 5000 HG

Realme: ರಿಯಲ್​​​ಮಿ ಫೆಸ್ಟೀವ್ ಡೇಸ್​ಗೆ 8 ದಿನಗಳು ಬಾಕಿ; ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್!

Realme Festive Days sale 2020: ರಿಯಲ್​ಮಿ ಅ.16ರಂದು ಫೆಸ್ಟೀವ್​​ ಡೇಸ್​ ನಡೆಸಲು ಮುಂದಾಗಿದೆ. ಈ ಸೇಲ್​ ಮೂಲಕ ಗ್ರಾಹಕರಿಗೆ ಭರ್ಜರಿ ಆಫರ್​ ನೀಡುತ್ತಿದೆ. ರಿಯಲ್​ಮಿ ಸಿ11, ಸಿ12, ಸಿ15, ರಿಯಲ್​ಮಿ 6, ಎಕ್ಸ್​3, ಎಕ್ಸ್​​3 ಸೂಪರ್​ಝೂಮ್​ ಸ್ಮಾರ್ಟ್​ಫೋನನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದೆ

news18-kannada
Updated:October 8, 2020, 2:49 PM IST
Realme: ರಿಯಲ್​​​ಮಿ ಫೆಸ್ಟೀವ್ ಡೇಸ್​ಗೆ 8 ದಿನಗಳು ಬಾಕಿ; ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್!
ರಿಯಲ್​ಮಿ ಫೆಸ್ಟೀವ್​​ ಡೇಸ್
  • Share this:
ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​, ಫ್ಲಿಪ್​ಕಾರ್ಟ್​ ಇದೇ ತಿಂಗಳಿನಲ್ಲಿ ಭರ್ಜರಿ ಸೇಲ್​ ನಡೆಸಲು ಯೋಜನೆ ಹಾಕಿಕೊಂಡಿದೆ. ಗ್ರಾಹಕರಿಗೆ ಕಡಿಮೆ ಮತ್ತು ಆಫರ್​ ಬೆಲೆಗೆ ಉತ್ಪನ್ನಗಳನ್ನು ಮಾರಾಟ ನಡೆಸಲು ಚಿಂತಿಸಿದೆ. ಹಾಗಾಗಿ ದಿನಾಂಕವನ್ನು ಪ್ರಕಟಿಸಿದೆ. ಇದೇ ಅಕ್ಟೋಬರ್​ 16ರಿಂದ ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಡೇಸ್​​ ಹಮ್ಮಿಕೊಂಡಿದ್ದರೆ, ಅ. 17ರಿಂದ ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್​ ನಡೆಸುತ್ತಿದೆ. ಇದೀಗ ಅದರ ಜೊತೆಗೆ ಸ್ಮಾರ್ಟ್​ಫೋನ್​ ಉತ್ಪಾದಕ ಸಂಸ್ಥೆಯಾದ ರಿಯಲ್​ಮಿ ಕೂಡ ಫೆಸ್ಟೀವ್​​ ಡೇಸ್​​ ನಡೆಸಲು ಯೋಜನೆ ಹಾಕಿಕೊಂಡಿದೆ.

ರಿಯಲ್​ಮಿ ಅ.16ರಂದು ಫೆಸ್ಟೀವ್​​ ಡೇಸ್​ ನಡೆಸಲು ಮುಂದಾಗಿದೆ. ಈ ಸೇಲ್​ ಮೂಲಕ ಗ್ರಾಹಕರಿಗೆ ಭರ್ಜರಿ ಆಫರ್​ ನೀಡುತ್ತಿದೆ. ರಿಯಲ್​ಮಿ ಸಿ11, ಸಿ12, ಸಿ15, ರಿಯಲ್​ಮಿ 6, ಎಕ್ಸ್​3, ಎಕ್ಸ್​​3 ಸೂಪರ್​ಝೂಮ್​ ಸ್ಮಾರ್ಟ್​ಫೋನನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದೆ.

ಅದರ ಜೊತೆಗೆ ಆಡಿಯೋ ಅಸೆಸ್ಸರಿಸ್​, ಸ್ಮಾರ್ಟ್​ಟಿವಿ ಕೂಡ ಆಫರ್​ ಬೆಲೆಗೆ ಮಾರಾಟ ಮಾಡುತ್ತಿದೆ. ರಿಯಲ್​ಮಿ.ಕಾಮ್​, ಫ್ಲಿಪ್​ಕಾರ್ಟ್​ ಮತ್ತು ಅಮೆಜಾನ್​ನಲ್ಲಿ ಈ ಆಫರ್​ ಗ್ರಾಹಕರಿಗೆ ಸಿಗಲಿದೆ.

ರಿಯಲ್​ಮಿ ಸಿ11 ಖರೀದಿಸಿದರೆ 500 ರೂ ಡಿಸ್ಕೌಂಟ್​ ನೀಡುತ್ತಿದೆ. ರಿಯಲ್​ಮಿ ಸಿ15 ಮೇಲೆ 1 ಸಾವಿರ ಡಿಸ್ಕೌಂಟ್​ ನೀಡುತ್ತಿದೆ. ರಿಯಲ್​ಮಿ ಎಕ್ಸ್​3 ಸೂಪರ್​ಜೂಮ್​ ಮೇಲೆ 3 ಸಾವಿರ, ಎಕ್ಸ್​50 ಪ್ರೊ ಸ್ಮಾರ್ಟ್​ಫೋನ್​ ಮೇಲೆ 5 ಸಾವಿರ ಡಿಸ್ಕೌಂಟ್​ ನೀಡುತ್ತಿದೆ.

ಇನ್ನು ಇಯರ್​ ಬಡ್ಸ್​​, ಪವರ್​ ಬ್ಯಾಂಕ್​, ಸ್ಮಾರ್ಟ್​ಟಿವಿ ಸೇರಿದಂತೆ ಹಲವು ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದೆ. ಅದಕ್ಕಾಗಿ ರಿಯಲ್​ಮಿ ಫೆಸ್ಟಿವಲ್​ ಸೇಲ್​ ಮೂಲಕ ಎಲೆಕ್ಟ್ರಾನಿಕ್ಸ್​ ಉತ್ಪನ್ನಗಳನ್ನು ಹಾಗೂ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡುತ್ತಿದೆ.
Youtube Video

ಗ್ರಾಹಕರು ಎಸ್​ಬಿಐ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್​ ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ ಬಳಸಿ ರಿಯಲ್​ಮಿ ಫೆಸ್ಟಿವಲ್​ ಸೇಲ್​ನಲ್ಲಿ ವಸ್ತುಗಳನ್ನು ಕೊಂಡುಕೊಂದರೆ ಶೇ 10ರಷ್ಟು ಡಿಸ್ಕೌಂಟ್​ ನೀಡುತ್ತಿದೆ.  ಅಮೆಜಾನ್​ ಮತ್ತು ಫ್ಲಿಪ್​ಕಾರ್ಟ್​ ಮೂಲಕ ರಿಯಲ್​ಮಿ ವಸ್ತುಗಳನ್ನು ಕೊಂಡರೆ ಈ ಡಿಸ್ಕೌಂಟ್​ ಸಿಗಲಿದೆ.
Published by: Harshith AS
First published: October 8, 2020, 2:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories