ರಿಯಲ್​ಮಿ ಫೆಸ್ಟೀವ್​ ಡೇಸ್​ ಸೇಲ್​ ಆರಂಭ; ಸ್ಮಾರ್ಟ್​ಫೋನ್​ ಮೇಲೆ ಆಕರ್ಷಕ ಡಿಸ್ಕೌಂಟ್​

Realme Festive Days sale: ರಿಯಲ್​ಮಿ ಫೆಸ್ಟೀವ್​ ಡೇಸ್​ ಸೇಲ್​ ಮೂಲಕ ಗ್ರಾಹಕರಿಗೆ ಭರ್ಜರಿ ಆಫರ್​ ನೀಡುತ್ತಿದೆ. ರಿಯಲ್​ಮಿ ಸಿ11, ಸಿ12, ಸಿ15, ರಿಯಲ್​ಮಿ 6, ಎಕ್ಸ್​3, ಎಕ್ಸ್​​3 ಸೂಪರ್​ಜೂಮ್​ ಸ್ಮಾರ್ಟ್​ಫೋನನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

news18-kannada
Updated:October 16, 2020, 2:12 PM IST
ರಿಯಲ್​ಮಿ ಫೆಸ್ಟೀವ್​ ಡೇಸ್​ ಸೇಲ್​ ಆರಂಭ; ಸ್ಮಾರ್ಟ್​ಫೋನ್​ ಮೇಲೆ ಆಕರ್ಷಕ ಡಿಸ್ಕೌಂಟ್​
ರಿಯಲ್​ಮಿ ಫೆಸ್ಟೀವ್​​ ಡೇಸ್
  • Share this:
ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ ಇಂದಿನಿಂದ ಬಿಗ್​ ಬಿಲಯನ್​ ಡೇಸ್ ಸೇಲ್​ ಪ್ರಾರಂಭಿಸಿದೆ. ಹಬ್ಬದ ಪ್ರಯುಕ್ತ ಹಲವಾರು ವಸ್ತುಗಳ ಮೇಲೆ ಭರ್ಜರಿ ಸೇಲ್​ ನಡೆಸುತ್ತಿದೆ. ಇದೀಗ ಅದರ ಜೊತೆಗೆ ಸ್ಮಾರ್ಟ್​ಫೋನ್​ ಉತ್ಪಾದಕ ಸಂಸ್ಥೆಯಾದ ರಿಯಲ್​ಮಿ ಕೂಡ ಇಂದಿನಿಂದ ಫೆಸ್ಟೀವ್​​ ಡೇಸ್​​ ನಡೆಸುತ್ತಿದ್ದು, ಗ್ರಾಹಕರಿಗೆ ಆಕರ್ಷಕ ಡಿಸ್ಕೌಂಟ್​ ನೀಡಿದೆ.

ರಿಯಲ್​ಮಿ ಫೆಸ್ಟೀವ್​ ಡೇಸ್​ ಸೇಲ್​ ಮೂಲಕ ಗ್ರಾಹಕರಿಗೆ ಭರ್ಜರಿ ಆಫರ್​ ನೀಡುತ್ತಿದೆ. ರಿಯಲ್​ಮಿ ಸಿ11, ಸಿ12, ಸಿ15, ರಿಯಲ್​ಮಿ 6, ಎಕ್ಸ್​3, ಎಕ್ಸ್​​3 ಸೂಪರ್​ಜೂಮ್​ ಸ್ಮಾರ್ಟ್​ಫೋನನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

ಅದರ ಜೊತೆಗೆ ಆಡಿಯೋ ಅಸೆಸ್ಸರಿಸ್​, ಸ್ಮಾರ್ಟ್​ಟಿವಿ ಕೂಡ ಆಫರ್​ ಬೆಲೆಗೆ ಮಾರಾಟ ಮಾಡುತ್ತಿದೆ. ರಿಯಲ್​ಮಿ.ಕಾಮ್​, ಫ್ಲಿಪ್​ಕಾರ್ಟ್​ ಮತ್ತು ಅಮೆಜಾನ್​ನಲ್ಲಿ ಈ ಆಫರ್​ ಗ್ರಾಹಕರಿಗೆ ಸಿಗಲಿದೆ.

ರಿಯಲ್​ಮಿ ಸಿ11 ಖರೀದಿಸಿದರೆ 500 ರೂ ಡಿಸ್ಕೌಂಟ್​ ನೀಡುತ್ತಿದೆ. ರಿಯಲ್​ಮಿ ಸಿ15 ಮೇಲೆ 1 ಸಾವಿರ ಡಿಸ್ಕೌಂಟ್​ ನೀಡುತ್ತಿದೆ. ರಿಯಲ್​ಮಿ ಎಕ್ಸ್​3 ಸೂಪರ್​ಜೂಮ್​ ಮೇಲೆ 3 ಸಾವಿರ, ಎಕ್ಸ್​50 ಪ್ರೊ ಸ್ಮಾರ್ಟ್​ಫೋನ್​ ಮೇಲೆ 5 ಸಾವಿರ ಡಿಸ್ಕೌಂಟ್​ ನೀಡುತ್ತಿದೆ.

ಇನ್ನು ಇಯರ್​ ಬಡ್ಸ್​​, ಪವರ್​ ಬ್ಯಾಂಕ್​, ಸ್ಮಾರ್ಟ್​ಟಿವಿ ಸೇರಿದಂತೆ ಹಲವು ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದೆ. ಅದಕ್ಕಾಗಿ ರಿಯಲ್​ಮಿ ಫೆಸ್ಟಿವಲ್​ ಸೇಲ್​ ಮೂಲಕ ಎಲೆಕ್ಟ್ರಾನಿಕ್ಸ್​ ಉತ್ಪನ್ನಗಳನ್ನು ಹಾಗೂ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡುತ್ತಿದೆ.

ಗ್ರಾಹಕರು ಎಸ್​ಬಿಐ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್​ ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ ಬಳಸಿ ರಿಯಲ್​ಮಿ ಫೆಸ್ಟಿವಲ್​ ಸೇಲ್​ನಲ್ಲಿ ವಸ್ತುಗಳನ್ನು ಕೊಂಡುಕೊಂದರೆ ಶೇ 10ರಷ್ಟು ಡಿಸ್ಕೌಂಟ್​ ನೀಡುತ್ತಿದೆ.  ಅಮೆಜಾನ್​ ಮತ್ತು ಫ್ಲಿಪ್​ಕಾರ್ಟ್​ ಮೂಲಕ ರಿಯಲ್​ಮಿ ವಸ್ತುಗಳನ್ನು ಕೊಂಡರೆ ಈ ಡಿಸ್ಕೌಂಟ್​ ಸಿಗಲಿದೆ.
Published by: Harshith AS
First published: October 16, 2020, 2:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading