ಸ್ಮಾರ್ಟ್‌ಫೋನ್ (Smartphone) ತಯಾರಿಕಾ ಕಂಪೆನಿಗಳಲ್ಲಿ ಬೇಡಿಕೆಯ ಸಂಸ್ಥೆಯೆಂದರೆ ಅದು ರಿಯಲ್‌ಮಿ (Realme). ಈ ಕಂಪೆನಿ ತನ್ನ ಬ್ರಾಂಡ್ನ ಅಡಿಯಲ್ಲಿ ವಿಭಿನ್ನ ರೀತಿಯ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನದೇ ಆದ ಗ್ರಾಹಕರನ್ನು ಮಾರುಕಟ್ಟೆಯಲ್ಲಿ ಪಡೆದುಕೊಂಡಿದೆ. ರಿಯಲ್‌ಮಿ ಕಂಪೆನಿ ಸ್ಮಾರ್ಟ್ಫೋನ್ಗಳು ಹೆಚ್ಚಾಗಿ ಕ್ಯಾಮೆರಾ ಫೀಚರ್ಗಳಿಗೆ ಮತ್ತು ಬ್ಯಾಟರಿ ಫೀಚರ್ಸ್ಗೆ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಸದ್ಯ ಇದೀಗ ರಿಯಲ್‌ಮಿ ಜಿಟಿ ನಿಯೋ 5 ಸ್ಮಾರ್ಟ್‌ಫೋನ್ (Realme GT Neo 5 Smartphone) ಬಿಡುಗಡೆ ಮಾಡಿದೆ. ಇದು ವಿಶ್ವದಲ್ಲೇ ಮೊದಲ 240W ವೇಗದ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್‌ಫೋನ್ ಎನಿಸಿಕೊಂಡಿದೆ. ಇಷ್ಟು ವೇಗದ ಬ್ಯಾಟರಿ ಫೀಚರ್ (240W Battery Features) ಅನ್ನು ಹೊಂದಿರುವ ಸ್ಮಾರ್ಟ್‌ಫೋನ್ ಇದೇ ಮೊದಲು ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.
ರಿಯಲ್‌ಮಿ ಕಂಪೆನಿ ವಿಶ್ವದಲ್ಲೇ ಮೊದಲು 240W ವೇಗದ ಚಾರ್ಜಿಂಗ್ ಬ್ಯಾಟರಿಯನ್ನು ಹೊಂದಿರುವ ರಿಯಲ್‌ಮಿ ಜಿಟಿ ನಿಯೋ 5 ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ರೆಡಿಯಾಗಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇನ್ನೂ ಹಲವಾರು ಫೀಚರ್ಸ್ ಅನ್ನು ಒಳಗೊಂಡಿದೆ.
ರಿಯಲ್‌ಮಿ ಜಿಟಿ ನಿಯೋ 5 ಡಿಸ್‌ಪ್ಲೇ ವಿನ್ಯಾಸ
ರಿಯಲ್‌ಮಿ ಜಿಟಿ ನಿಯೋ 5 ಸ್ಮಾರ್ಟ್‌ಫೋನ್ 6.7 ಇಂಚಿನ ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 144Hz ಅಡಾಪ್ಟಿವ್ ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ 1.5K ರೆಸಲ್ಯೂಶನ್, 1400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸಲಿದೆ. ಜೊತೆಗೆ ಈ ಡಿಸ್‌ಪ್ಲೇ 2160Hz UHF PWM ಡಿಮ್ಮಿಂಗ್ ಅನ್ನು ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ 5000000:1 ಡೈನಾಮಿಕ್ ಕಾಂಟ್ರಾಸ್ಟ್ ಅನುಪಾತವನ್ನು ಸಹ ಹೊಂದಿದೆ.
ಇದನ್ನೂ ಓದಿ: ವಾಟ್ಸಾಪ್ನಲ್ಲಿ ಇನ್ಮುಂದೆ ಕರೆಯನ್ನು ಶೆಡ್ಯೂಲ್ ಮಾಡ್ಬಹುದು! ಯಾರಿಗೆಲ್ಲಾ ಈ ಫೀಚರ್ ಲಭ್ಯ?
ಕ್ಯಾಮೆರಾ ಸೆಟಪ್ ಹೇಗಿದೆ?
ರಿಯಲ್‌ಮಿ ಜಿಟಿ ನಿಯೋ 5 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಹೊಂದಿದೆ. ಇನ್ನು 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಇದರಲ್ಲಿ ಅಳವಡಿಸಲಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ರಿಯಲ್‌ಮಿ ಜಿಟಿ ನಿಯೋ 5 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್ 1 ಎಸ್ಓಸಿ ಪ್ರೊಸೆಸರ್ ವೇಗವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 16ಜಿಬಿ ರ್‍ಯಾಮ್ ಮತ್ತು 1ಟಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್ಫೋನ್ನ ಸ್ಟೋರೇಜ್ ಅನ್ನು ಮೆಮೊರಿ ಕಾರ್ಡ್ ಮೂಲಕ ಬೆಂಬಲಿಸುವುದರ ಬಗ್ಗೆ ಯಾವುದೇ ರೀತಿಯಲ್ಲಿ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಬ್ಯಾಟರಿ ಸಾಮರ್ಥ್ಯ
ರಿಯಲ್‌ಮಿ ಜಿಟಿ ನಿಯೋ 5 ಸ್ಮಾರ್ಟ್‌ಫೋನ್ ಎರಡು ವಿಭಿನ್ನ ಆಯ್ಕೆಯ ಬ್ಯಾಟರಿ ಬ್ಯಾಕಪ್ ಆಯ್ಕೆಯೊಂದಿಗೆ ಬರಲಿದೆ. ಇದರಲ್ಲಿ ವಿಶ್ವದ ಮೊದಲ 240W ವೇಗದ ಚಾರ್ಜಿಂಗ್ ಟೆಕ್ನಾಲಜಿ ಬೆಂಬಲಿಸುವ ಸ್ಮಾರ್ಟ್‌ಫೋನ್ 4600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡ ಸ್ಮಾರ್ಟ್‌ಫೋನ್ 150W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ.
ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ ಜಿಟಿ ನಿಯೋ 5 ಸ್ಮಾರ್ಟ್ಫೋನ್ನಲ್ಲಿ 150W ಚಾರ್ಜಿಂಗ್ ಬೆಂಬಲಿಸುವ 8 ಜಿಬಿ ರ್‍ಯಾಮ್ ಮತ್ತು 256ಜಿ ಸ್ಟೋರೇಜ್ ಹೊಂದಿದ ಆಯ್ಕೆಗೆ CNY 2,499 ಅಂದರೆ ಭಾರತದಲ್ಲಿ ಅಂದಾಜು 30,500 ರೂಪಾಯಿ ಬೆಲೆಯನ್ನು ನಿಗದಿ ಮಾಡಲಾಗಿದೆ. ಆದರೆ 240W ವೇಗದ ಚಾರ್ಜಿಂಗ್ ಆಯ್ಕೆಯ ಸ್ಮಾರ್ಟ್‌ಫೋನ್ 16ಜಿಬಿ ರ್‍ಯಾಮ್ ಮತ್ತು 256ಜಿಬಿ ರೂಪಾಂತರದ ಆಯ್ಕೆಗೆ CNY 3,199 ಅಂದರೆ ಭಾರತದಲ್ಲಿ ಅಂದಾಜು 39,000 ರೂಪಾಯಿ ಬೆಲೆಯನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ