• Home
 • »
 • News
 • »
 • tech
 • »
 • Realme GT Neo 5 Smartphone: ರಿಯಲ್​ಮಿ ಕಂಪೆನಿಯ 240W ಚಾರ್ಜಿಂಗ್ ವೇಗದ ಸ್ಮಾರ್ಟ್​ಫೋನ್​ ಲಾಂಚ್​! ಯಾವಾಗ ರಿಲೀಸ್ ಗೊತ್ತಾ?

Realme GT Neo 5 Smartphone: ರಿಯಲ್​ಮಿ ಕಂಪೆನಿಯ 240W ಚಾರ್ಜಿಂಗ್ ವೇಗದ ಸ್ಮಾರ್ಟ್​ಫೋನ್​ ಲಾಂಚ್​! ಯಾವಾಗ ರಿಲೀಸ್ ಗೊತ್ತಾ?

ರಿಯಲ್​ಮಿ ಜಿಟಿ ನಿಯೋ 5 ಸ್ಮಾರ್ಟ್​ಫೋನ್​

ರಿಯಲ್​ಮಿ ಜಿಟಿ ನಿಯೋ 5 ಸ್ಮಾರ್ಟ್​ಫೋನ್​

ರಿಯಲ್​ಮಿ ಕಂಪೆನಿಯಿಂದ ರಿಯಲ್​ಮಿ ಜಿಟಿ ನಿಯೋ 5 ಎಂಬ ಸ್ಮಾರ್ಟ್​ಫೋನ್ ಬಿಡುಗಡೆಯಾಗುತ್ತಿದೆ. ಇದು 240 ವ್ಯಾಟ್​ ವೇಗದಲ್ಲಿ ಚಾರ್ಜಿಂಗ್​ ಅನ್ನು ಬೆಂಬಲಿಸುತ್ತದೆ. ಇದೀಗ ಈ ಸ್ಮಾರ್ಟ್​​ಫೋನ್​​ನ ಲಾಂಚ್​​ ದಿನಾಂಕ ಪ್ರಕಟವಾಗಿದೆ. 

 • Share this:

  ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹಲವಾರು ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾಗುತ್ತಿದೆ. ಆದರೆ ಈ ಎಲ್ಲಾ ಸ್ಮಾರ್ಟ್​ಫೋನ್​ಗಳನ್ನು (Smartphones) ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಮೂಡಿದೆ. ಅದ್ರಲ್ಲೂ 2022ರಲ್ಲಿ ಬಿಡುಗಡೆಯಾದಂತಹ ಮೊಬೈಲ್​ಗಳಿಗೆ ಈಗಲೂ ಎಲ್ಲಿಲ್ಲದ ಬೇಡಿಕೆ. ಹಿಂದಿನ ವರ್ಷವನ್ನೊಮ್ಮೆ ಮೆಲುಕು ಹಾಕುವುದಾದರೆ. ಆ ವರ್ಷದಲ್ಲಿ ತಿಂಗಳಿಗೆ ಎರಡರಂತೆ ಸ್ಮಾರ್ಟ್​​ಫೋನ್​ಗಳು ಬಿಡುಗಡೆಯಾಗುತ್ತಿತ್ತು. ಜನಪ್ರಿಯ ಸ್ಮಾರ್ಟ್​ಫೋನ್​ ಕಂಪೆನಿಗಳಲ್ಲಿ ರಿಯಲ್​ಮಿ ಕೂಡ ಒಂದು. ರಿಯಲ್​ಮಿ ಕಂಪೆನಿ (Realme Company) ತನ್ನ ಕಂಪೆನಿಯ ಅಡಿಯಲ್ಲಿ ಸಾಕಷ್ಟು ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್​​ಫೋನ್​ಗಳು ತನ್ನದೇ ಆದ ಮಾರಾಟವನ್ನು ಮಾರುಕಟ್ಟೆಯಲ್ಲಿ ಸೃಷ್ಟಿಸಿಕೊಂಡಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಭಾರೀ ಸುದ್ದಿಯಲ್ಲಿದ 240 ವ್ಯಾಟ್​ ಚಾರ್ಜಿಂಗ್ (240W Charging)​ ಸಾಮರ್ಥ್ಯ ಹೊಂದಿದ ಸ್ಮಾರ್ಟ್​ಫೋನ್​ ನ ಲಾಂಚ್​ ದಿನಾಂಕ ಪ್ರಕಟವಾಗಿದೆ.


  ರಿಯಲ್​ಮಿ ಕಂಪೆನಿಯಿಂದ ರಿಯಲ್​ಮಿ ಜಿಟಿ ನಿಯೋ 5 ಎಂಬ ಸ್ಮಾರ್ಟ್​ಫೋನ್ ಬಿಡುಗಡೆಯಾಗುತ್ತಿದೆ. ಇದು 240 ವ್ಯಾಟ್​ ವೇಗದಲ್ಲಿ ಚಾರ್ಜಿಂಗ್​ ಅನ್ನು ಬೆಂಬಲಿಸುತ್ತದೆ. ಇದೀಗ ಈ ಸ್ಮಾರ್ಟ್​​ಫೋನ್​​ನ ಲಾಂಚ್​​ ದಿನಾಂಕ ಪ್ರಕಟವಾಗಿದೆ.


  ಯಾವಾಗ ಲಾಂಚ್​?


  ರಿಯಲ್​​ಮಿ ಕಂಪೆನಿಯ 240 ವ್ಯಾಟ್​​ ಚಾರ್ಜಿಂಗ್​ ಸ್ಪೀಡ್​ ಹೊಂದಿದ ರಿಯಲ್​ಮಿ ಜಿಟಿ ನಿಯೋ 5 ಸ್ಮಾರ್ಟ್​​ಫೋನ್​ ಬಿಡುಗಡೆಯ ದಿನಾಂಕವನ್ನು ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2023 ರಲ್ಲಿ ಘೋಷಿಸಲಾಗುತ್ತಿದ್ದು, ಫೆಬ್ರವರಿ 27 ಅಥವಾ ಮಾರ್ಚ್ 2 ರ ನಡುವೆ ಬಾರ್ಸಿಲೋನಾದಲ್ಲಿ ಇದು ಅನಾವರಣ ಆಗಲಿದೆ ಎಂದು ವರದಿಯಾಗಿದೆ.


  ಇದನ್ನೂ ಓದಿ: ಸ್ಯಾಮ್​ಸಂಗ್​ ಕಂಪೆನಿಯಿಂದ ಧೂಳೆಬ್ಬಿಸುವ ಸ್ಮಾರ್ಟ್​​ಫೋನ್​ ಬಿಡುಗಡೆ! ಹೇಗಿದೆ ಗೊತ್ತಾ ಫೀಚರ್ಸ್


  ರಿಯಲ್​ಮಿ ಜಿಟಿ ನಿಯೋ ಸ್ಮಾರ್ಟ್​​ಫೋನ್ ಫೀಚರ್ಸ್​


  ರಿಯಲ್​ಮಿ ಕಂಪೆನಿಯಿಂದ ಬಿಡುಗಡೆಯಾಗುತ್ತಿರುವ ರಿಯಲ್​ಮಿ ನಿಯೋ ಜಿಟಿ 5 ಸ್ಮಾರ್ಟ್​​ಫೋನ್​ನ ಡಿಸ್​ಪ್ಲೇ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು 6.7 ಇಂಚಿನ 1.5K ಓಎಲ್​ಇಡಿ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಇದು 144Hz ರಿಫ್ರೆಶ್ ರೇಟ್‌ ನೀಡಲಿದೆ ಎನ್ನಲಾಗಿದೆ. ಆದರೆ, ಈ ಫೋನ್‌ನ ನಿಟ್ಸ್‌ ರೇಟ್‌ ಹಾಗೂ ಪಿಕ್ಸೆಲ್‌ ರೆಸಲ್ಯೂಶನ್‌, ಸೆಲ್ಫಿ ಕ್ಯಾಮೆರಾವನ್ನು ಯಾವ ರೀತಿ ಅಳವಡಿಸಲಾಗುತ್ತದೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ಬಹಿರಂಗವಾಗಿಲ್ಲ.


  ರಿಯಲ್​ಮಿ ಜಿಟಿ ನಿಯೋ 5 ಸ್ಮಾರ್ಟ್​ಫೋನ್​


  ಕ್ಯಾಮೆರಾ ಫೀಚರ್ಸ್


  ರಿಯಲ್​ಮಿ ಜಿಟಿ ನಿಯೋ 5 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್​ ಅನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಇನ್ನು ಈ ಸ್ಮಾರ್ಟ್​​ಫೋನ್​ನಲ್ಲಿ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಆ್ಯಂಗಲ್​ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್‌ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎಂದು ಅಳವಡಿಸಲಾಗಿದೆ.


  ಪ್ರೊಸೆಸರ್ ಸಾಮರ್ಥ್ಯ


  ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್‌ 1 ಎಸ್​​ಓಸಿ ನಿಂದ ಕಾರ್ಯನಿರ್ವಹಿಸುತ್ತದೆ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಈ ಫೋನ್‌ 16ಜಿಬಿ ರ್‍ಯಾಮ್ ಮತ್ತು 512ಜಿಬಿವರೆಗಿನ ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಇದು ಪಡೆದುಕೊಂಡಿರಲಿದೆ ಎನ್ನುವ ಮಾಹಿತಿ ದೃಢವಾಗಿದೆ. ಇದಿಷ್ಟೇ ಅಲ್ಲದೆ ಈ ಫೋನ್‌ ಆಂಡ್ರಾಯ್ಡ್‌ 13 ಆಧಾರಿತ ರಿಯಲ್‌ಮಿಯುಐ 4.0 ಮೂಲಕ ಕಾರ್ಯನಿರ್ವಹಿಸುತ್ತದೆ.


  ಬ್ಯಾಟರಿ ಫೀಚರ್ಸ್​


  ವಿಶೇಷವಾಗಿ ಈ ರಿಯಲ್​ಮಿ ಕಂಪೆನಿಯ ಈ ಸ್ಮಾರ್ಟ್​​ಫೋನ್ ಬಹಳ ದಿನಗಳಿಂದ ಇದರ ಬ್ಯಾಟರಿ ಫೀಚರ್ಸ್​​ನಿಂದಲೇ ಭಾರೀ ಸುದ್ದಿಯಾಗಿದೆ. ಈ ಸ್ಮಾರ್ಟ್​​ಫೋನ್​ ಎರಡು ವೇರಿಯಂಟ್‌ನಲ್ಲಿ ಬ್ಯಾಟರಿಯನ್ನು ಪ್ಯಾಕ್​ ಮಾಡಲಾಗಿದೆ ಎನ್ನಲಾಗಿದೆ. ಅದರಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿಯ ವೇರಿಯಂಟ್‌ 150W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಿದರೆ ಮತ್ತೊಂದು ಫೋನ್‌ 4,600mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಹೊಸ 240W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ ಎಂದು ನಿಖರವಾಗಿ ತಿಳಿಸಿದ್ದಾರೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು