ರಿಯಲ್ಮಿ ಕಂಪನಿ ತನ್ನ ಗ್ರಾಹಕರಿಗಾಗಿ ರಿಯಲ್ಮಿ ಡೇಸ್ ಸೇಲ್ ಆಯೋಜಿಸಿದೆ. ಆನ್ಲೈನ್ ಇ-ಕಾಮರ್ಸ್ ಮಳಿಗೆಯಾದ ಫ್ಲಿಪ್ಕಾರ್ಟ್ ಕೂಡ ಕಾರ್ನಿವಲ್ ಸೇಲ್ ನಡೆಸುತ್ತಿದೆ. ಹಾಗಾಗಿ ಸ್ಮಾರ್ಟ್ಫೋನ್, ಟಿವಿ, ಆಡಿಯೋ ಪ್ರಾಡೆಕ್ಟ್, ಅಸೆಸ್ಸರೀಸ್ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಜೊತೆಗೆ ಕೆಲವು ಪ್ರಾಡೆಕ್ಟ್ ಮೇಲೆ ಡಿಸ್ಕೌಂಟ್ ನೀಡಿದೆ. ಇದೀಗ ರಿಯಲ್ಮಿ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಹೊಂದಿರುವ ರಿಯಲ್ಮಿ ನಾರ್ಜೊ 20 ಪ್ರೊ ಸ್ಮಾರ್ಟ್ಫೋನನ್ನು ಮತ್ತಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಆ ಮೂಲಕ ಗ್ರಾಹಕರಿಗೆ ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.
ರಿಯಲ್ಮಿ ನಾರ್ಜೊ 20 ಪ್ರೊ:
ಕಳೆದ ವರ್ಷ ರಿಯಲ್ ಮಿ ನಾರ್ಜೊ 20 ಪ್ರೊ ಸ್ಮಾರ್ಟ್ಫೋನನ್ನು ಮಾರುಕಟ್ಟೆಗೆ ಪರಿಚಯಿಸಿತು. ಇದು 60 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದ್ದು, 14,999 ರೂ ಮುಖಬೆಲೆಯನ್ನು ಹೊಂದಿದೆ. ಆದರೀಗ ರಿಯಲ್ಮಿ ಆನ್ಲೈನ್ ಸ್ಟೋರ್ ಮತ್ತು ಫ್ಲಿಪ್ಕಾರ್ಟ್ ಮೂಲಕ 13,999 ರೂ. ಗೆ ಮಾರಾಟ ಮಾಡುತ್ತಿದೆ. ಜೊತೆಗೆ 1 ಸಾವಿರದಷ್ಟು ಆಫರ್ ನೀಡಿದೆ.
ಇನ್ನು ಆ್ಯಕ್ಸೀಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಟ್ ಮೂಲಕ ಶೇ 10 ರಷ್ಟು, ಅಂದರೆ ರೂ 750ರಷ್ಟು ಡಿಸ್ಕೌಂಟ್ ನೀಡಿದೆ. ಹಾಗಾಗಿ 13,249 ರೂ.ಗೆ ಮಾರಾಟ ಮಾಡುತ್ತಿದೆ.
ಅಷ್ಟು ಮಾತ್ರವಲ್ಲದೆ, ಫ್ಲಿಪ್ಕಾರ್ಟ್ನಲ್ಲಿ ಎಕ್ಸ್ಚೇಂಜ್ ಆಫರ್ ನೀಡಿದೆ. ರಿಯಲ್ಮಿ ವೆಬ್ಸೈಟ್ನಲ್ಲಿ ತಿಳಿಸಿರುವಂತೆ ಪೇಟಿಯಂ ಮೂಲಕ ಪೇಮೆಂಟ್ ಮಾಡಿ ನಾರ್ಜೊ ಪ್ರೊ ಖರೀದಿಸಿದರೆ 500 ರೂ ಕ್ಯಾಶ್ಬ್ಯಾಕ್ ಸಿಗಲಿದೆ. ಅಂತೆಯೇ ಮೊಬಿಕ್ವಿಕ್ ಮೂಲಕ 200 ರೂ ಕ್ಯಾಶ್ಬ್ಯಾಕ್ ನೀಡುತ್ತಿದೆ.
ರಿಯಲ್ಮಿ ನಾರ್ಜೊ 20 ಪ್ರೊ ವಿಶೇಷತೆ:
ಡಿಸ್ಪ್ಲೇ: 6.5 ಇಂಚಿನ 1080ಪಿ ಡಿಸ್ಪ್ಲೇ ಜೊತೆಗೆ 90ಹೆಚ್ಝೆಡ್ ರಿಫ್ರೆಶ್ ರೇಟ್ ಹೊಂದಿದೆ.
ಪ್ರೊಸೆಸರ್: ಒಕ್ಟಾ-ಕೋರ್2.05ಜಿಹೆಚ್ಝೆಡ್ ಮೀಡಿಯಾಟೆಕ್ ಹೆಲಿಯೊ ಜಿ95 ಪ್ರೊಸೆಸರ್ ಜೊತೆಗೆ 8ಜಿಬಿ ರ್ಯಾಮ್ ಅಳವಡಿಸಲಾಗಿದೆ.
RAM: ಅಂದಹಾಗೆಯೇ 8GB ಮತ್ತು 6GB ವೇರಿಯಂಟ್ನಲ್ಲಿ ರ್ಯಾಮ್ ಆಯ್ಕೆಯಲ್ಲಿ ಸ್ಮಾರ್ಟ್ಫೋನ್ ಸಿಗುತ್ತದೆ.
ಸ್ಟೊರೇಜ್: 64GB ಮತ್ತು 128GB ಸ್ಟೊರೇಜ್ ಆಯ್ಕೆಯಲ್ಲಿದೆ.
ಕ್ಯಾಮೆರಾ: ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿರಿವ ರಿಯಲ್ಮಿ ನಾರ್ಜೊ 20 ಪ್ರೊ 48 ಮೆಗಾಫಿಕ್ಸೆಲ್ ಪ್ರೈಮರಿ ಸೆನ್ಸಾರ್ ಜೊತೆಗೆ 8 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಆ್ಯಂಗಲ್ ಲೆನ್ಸ್, 2 ಮೆಗಾಫಿಕ್ಸೆಲ್ ಬ್ಲಾಕ್-ಆ್ಯಂಡ್ ವೈಟ್ ಸೆನ್ಸಾರ್ ಮತ್ತು 2 ಮೆಗಾಫಿಕ್ಸೆಲ್ ಮ್ಯಾಕ್ರೊ ಕ್ಯಾಮೆರಾ ನೀಡಲಾಗಿದೆ.
ಮುಂಭಾಗದ ಕ್ಯಾಮೆರಾ: 16 ಮೆಗಾಫಿಕ್ಸೆಲ್
ಆಪರೇಟಿಂಗ್ ಸಿಸ್ಟಂ: ಆ್ಯಂಡ್ರಾಯ್ಡ್ 10 ಬೇಸ್ಡ್ ರಿಯಲ್ಮಿ ಯುಐ ಆಗಿದ್ದು, ಸದ್ಯ ರಿಯಲ್ಮಿ ಯುಐ 2.0ಗೆ ಅಪ್ಡೇಟ್ ಮಾಡುವ ಆಯ್ಕೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ