Realme C20A: ಸಿಂಗಲ್​ ಕ್ಯಾಮೆರಾ, ​5 ಸಾವಿರ mAh ಬ್ಯಾಟರಿ; ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್​ ಪರಿಚಯಿಸಿದ ರಿಯಲ್​ಮಿ

ರಿಯಲ್​​​ಮಿ ಸಿ20ಎ ಸ್ಮಾರ್ಟ್​ಫೋನ್​ 6.5 ಇಂಚಿನ ಹೆಚ್​ಡಿ+ಐಪಿಎಸ್​ ಡಿಸ್​​ಪ್ಲೇ ಹೊಂದಿದ್ದು, 20;9 ರೇಶಿಯೊದಲ್ಲಿದೆ. ಮುಂಭಾಗದಲ್ಲಿ ವಾಟರ್​​ಡ್ರಾಪ್​-ಸ್ಟೈಲ್​​ ನಾಚ್​ ಜೊತೆಗೆ ಸಿಂಗಲ್​ ಕ್ಯಾಮೆರಾ ಅಳವಡಿಸಿದೆ. ಮೀಡಿಯಾಟೆಕ್​ ಹೆಲಿಯೊ ಪ್ರೊಸೆಸರ್​ನಿಂದ ಈ ರಿಯಲ್​​​ಮಿ ಸಿ20ಎ ಕಾರ್ಯನಿರ್ವಹಿಸುತ್ತಿದೆ.

realme-c20a

realme-c20a

 • Share this:
  ರಿಯಲ್​​​ಮಿ C20A ಹೆಸರಿನ ಸ್ಮಾರ್ಟ್​ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಸ್ಮಾರ್ಟ್​ಫೋನ್​ ಬಜೆಟ್​ ಬೆಲೆಯದ್ದಾಗಿದ್ದು, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್​ ಹುಡುಕುವವರಿಗೆ ಈ ಸ್ಮಾರ್ಟ್​ಫೋನ್​ ಹೇಳಿ ಮಾಡಿಸಿದಂತಿದೆ.

  ರಿಯಲ್​​​ಮಿ ಸಿ20ಎ ಸ್ಮಾರ್ಟ್​ಫೋನ್​ 6.5 ಇಂಚಿನ ಹೆಚ್​ಡಿ+ಐಪಿಎಸ್​ ಡಿಸ್​​ಪ್ಲೇ ಹೊಂದಿದ್ದು, 20;9 ರೇಶಿಯೊದಲ್ಲಿದೆ. ಮುಂಭಾಗದಲ್ಲಿ ವಾಟರ್​​ಡ್ರಾಪ್​-ಸ್ಟೈಲ್​​ ನಾಚ್​ ಜೊತೆಗೆ ಸಿಂಗಲ್​ ಕ್ಯಾಮೆರಾ ಅಳವಡಿಸಿದೆ. ಮೀಡಿಯಾಟೆಕ್​ ಹೆಲಿಯೊ ಪ್ರೊಸೆಸರ್​ನಿಂದ ಈ ರಿಯಲ್​​​ಮಿ ಸಿ20ಎ ಕಾರ್ಯನಿರ್ವಹಿಸುತ್ತಿದೆ.

  ಗ್ರಾಹಕರಿಗಾಗಿ 2GB RAM ಮತ್ತು 32GB ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸಿದೆ. ಅದರ ಜೊತೆಗೆ 256GB ತನಕ ಸ್ಟೊರೇಜ್​ ಅನ್ನು ವೃದ್ಧಿಸುವ ಆಯ್ಕೆಯನ್ನು ನೀಡಿದೆ.

  ಕ್ಯಾಮೆರಾ:

  ರಿಯಲ್​​​ಮಿ ಸಿ20ಎ ಸ್ಮಾರ್ಟ್​ಫೋನ್​ ಸಿಂಗಲ್​ ಕ್ಯಾಮೆರಾವನ್ನು ಹೊಂದಿದೆ.  8 ಮೆಗಾಫಿಕ್ಸೆಲ್​​  ಕ್ಯಾಮೆರಾ ಎಫ್​/ 2.0 ಅಪಾರ್ಚರ್​​ ಜೊತೆಗೆ ಎಲ್​ಇಡಿ ​ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ  5 ಮೆಗಾಫಿಕ್ಸೆಲ್​​ ಶೂಟರ್​ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ, ಪೊಟ್ರೇಟ್​ ಮೋಡ್​​, ಟೈಮ್​ಲಾಪ್ಸ್​, ಪನೊರಮಿಕ್​ ವ್ಯೂವ್​, ಬ್ಯೂಟಿ ಮೋಡ್​, ಹೆಚ್​ಡಿಆರ್​, ಫೇಸ್​ ರೆಕಾಗ್ನಿಷಿಯನ್​ ಆಯ್ಕೆ ನೀಡಲಾಗಿದೆ. ಪ್ರೈಮರಿ ರಿಯರ್​ ಕ್ಯಾಮೆರಾ ಹೆಚ್​ಡಿಆರ್​, ಅಲ್ಟ್ರಾ-ಮ್ಯಾಕ್ರೊ, ಎಐ ಬ್ಯೂಟಿ, ಫಿಲ್ಟರ್​, ಕ್ರೊಮಾ ಬೂಸ್ಟ್​ ಆಯ್ಕೆ ಅಳವಡಿಸಿಕೊಂಡಿದೆ.

  ಅಂದಹಾಗೆಯೇ ರಿಯಲ್​​​ಮಿ ಸಿ20ಎ ಸ್ಮಾರ್ಟ್​ಫೋನ್​ ದೀರ್ಘ ಕಾಲದ ಬಾಳಿಕೆಗಾಗಿ 5 ಸಾವಿರ ಎಮ್​ಎಹೆಚ್​ ಬ್ಯಾಟರಿ ಅಳವಡಿಸಿಕೊಂಡಿದೆ.

  ಇನ್ನು ರಿಯಲ್​​​ಮಿ ಸಿ20ಎ ಸ್ಮಾರ್ಟ್​ಫೋನ್​4ಜಿ ಲೈಟ್​, ವೈ-ಫೈ 802.11 ಬಿ/ಜಿ/ಎನ್​, ಬ್ಲೂಟೂತ್​ ವಿ5, ಜಿಪಿಎಸ್​/ಎ-ಜಿಪಿಎಸ್​, 3.5ಎಮ್​​ಎಮ್​ ಹೆಡ್​ಜಾಕ್​ ಅಳವಡಿಸಿದೆ. ಕೂಲ್​ ಬ್ಲೂ ಮತ್ತು ಕೂಲ್​ ಗ್ರೇ ಬಣ್ಣದಲ್ಲಿ ಖರೀದಿಸುವ ಆಯ್ಕೆ ನೀಡಿದೆ.

  ಬೆಲೆ:

  ರಿಯಲ್​​​ಮಿ C20A ಸ್ಮಾರ್ಟ್​ಫೋನ್​ ಬಜೆಟ್​ ಬೆಲೆಗೆ ಗ್ರಾಹಕರಿಗೆ ನೀಡುತ್ತಿದೆ. 2GB+32GB ಸ್ಟೊರೇಜ್​ ಆಯ್ಕೆ ಸ್ಮಾರ್ಟ್​ಫೋನ್​ 7,800 ರೂ.ಗೆ ಮಾರಾಟ ಮಾಡುತ್ತಿದೆ.
  Published by:Harshith AS
  First published: