news18-kannada Updated:August 18, 2020, 2:22 PM IST
Realme C15
Realme C15, Realme C12 Launching in India | ಕಳೆದ ತಿಂಗಳು ರಿಯಲ್ಮಿ ಸಿ11 ಸ್ಮಾರ್ಟ್ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಇದೀಗ ಸಿ12 ಮತ್ತು ಸಿ15 ಸ್ಮಾರ್ಟ್ಫೋನ್ ಅನ್ನು ಇಂದು ಬಿಡುಗಡೆ ಮಾಡಿದೆ. ರಿಯಲ್ಮಿ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಯ ಸ್ಮಾರ್ಟ್ಫೋನ್ ಆಗಿ ಗುರುತಿಸಿಕೊಂಡಿದೆ. ಹಾಗಾಗಿ ಇದನ್ನು ಅರಿತುಕೊಂಡು ಸಂಸ್ಥೆ ನೂತನ ಸಿ11 ಮತ್ತು ಸಿ15 ಸ್ಮಾರ್ಟ್ಫೋನ್ ಅನ್ನು ಇಂದು 12.30ಕ್ಕೆ ಭಾರತೀಯರಿಗೆ ಪರಿಚಯಿಸಿದೆ. ಯ್ಯೂಟೂಬ್ನಲ್ಲಿ ಲೈವ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ರಿಯಲ್ಮಿ ಸಿ12 ಮತ್ತು 15 ಸ್ಮಾರ್ಟ್ಫೋನ್ ದೇಶಿಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ರಿಯಲ್ಮಿ ಸಿ15 ವಿಶೇಷತೆ:ನೂತನ ಸ್ಮಾರ್ಟ್ಫೋನ್ 6.5 ಇಂಚಿನ ಹೆಚ್ಡಿ+ಡಿಸ್ಪ್ಲೇ ಜೊತೆಗೆ ಮೀಡಿಯಾಟೆಕ್ ಹೆಲಿಯೋ ಜಿ35 ಪ್ರೊಸೆಸರ್ ಹೊಂದಿದೆ. ಆ್ಯಂಡ್ರಾಯ್ಡ್ 10 ನಿಂದ ಕಾರ್ಯನಿರ್ವಹಿಸುತ್ತದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್ಫೋನ್ 4G RAM ಮತ್ತು 128GB ಸ್ಟೊರೇಜ್ ಆಯ್ಕೆಯಲ್ಲಿ ಸಿಗಲಿದೆ.
ಇನ್ನು ಸಿ15 ಸ್ಮಾರ್ಟ್ಫೋನ್ನಲ್ಲಿ 13 ಮೆಗಾಫಿಕ್ಸೆಲ್ ಕ್ಯಾಮೆರಾ, 8 ಮೆಗಾಫಿಕ್ಸೆಲ್ ಸೆಕಂಡರಿ ಕ್ಯಾಮೆರಾ ಜೊತೆಗೆ ಅಲ್ಟ್ರಾವೈಡ್ ಲೆನ್ಸ್, 2 ಮೆಗಾಫಿಕ್ಸೆಲ್ ಮೊನೊಕ್ರೋಮ್ ಕ್ಯಾಮೆರಾ, ಜೊತೆಗೆ 2 ಮೆಗಾಫಿಕ್ಸೆಲ್ ಬ್ಯಾಕ್ ಆ್ಯಂಡ್ ವೈಟ್ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.ಇನ್ನು 6000mAh ಬ್ಯಾಟರಿ ಹೊಂದಿದೆ.
ಬೆಲೆ: ರಿಯಲ್ಮಿ 15 ಸ್ಮಾರ್ಟ್ಫೋನ್ ಬೆಲೆ 10,100 ರೂ ಎಂದು ಅಂದಾಜಿಸಲಾಗಿದೆ.
ರಿಯಲ್ಮಿ 12 ವಿಶೇಷತೆ:
ರಿಯಲ್ಮಿ 12 ಸ್ಮಾರ್ಟ್ಫೋನ್ 6.5 ಇಂಚಿನ ಹೆಚ್ಡಿ+ಡಿಸ್ಪ್ಲೇ ಜೊತೆಗೆ ಮೀಡಿಯಾಟೆಕ್ ಹೆಲಿಯೋ ಜಿ35 ಪ್ರೊಸೆಸರ್ ಹೊಂದಿದೆ. ಆ್ಯಂಡ್ರಾಯ್ಡ್ 10 ನಿಂದ ಕಾರ್ಯನಿರ್ವಹಿಸುತ್ತದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್ಫೋನ್ 3G RAM ಮತ್ತು 128GB ಸ್ಟೊರೇಜ್ ಆಯ್ಕೆಯಲ್ಲಿ ಸಿಗಲಿದೆ.
ಇನ್ನು ಸಿ12 ಸ್ಮಾರ್ಟ್ಫೋನ್ನಲ್ಲಿ 13 ಮೆಗಾಫಿಕ್ಸೆಲ್ ಕ್ಯಾಮೆರಾ, 2 ಮೆಗಾಫಿಕ್ಸೆಲ್ ಮೊನೊಕ್ರೋಮ್ ಸೆನ್ಸಾರ್, 2ಮೆಗಾಫಿಕ್ಸೆಲ್ ಮ್ಯಾಕ್ರೋ ಲೆನ್ಸ್, ಸೆಲ್ಫಿಗಾಗಿ 5 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.ಇನ್ನು 6000mAh ಬ್ಯಾಟರಿ ಹೊಂದಿದೆ
ಬೆಲೆ: ರಿಯಲ್ಮಿ 12 ಸ್ಮಾರ್ಟ್ಫೋನ್ ಬೆಲೆ 9,600 ರೂ ಎಂದು ಅಂದಾಜಿಸಲಾಗಿದೆ.
ಇದರ ಜೊತೆಗೆ ರಿಯಲ್ಮಿ ಕ್ಲಾಸಿಕ್ ಬಡ್ಸ್ ಇಯರ್ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ರಾಹಕರಿಗಾಗಿ ಇದನ್ನು 500 ರೂಪಾಯಿಗಿಂತ ಕಡಿಮೆ ಬೆಲೆ ಮಾರಾಟ ಮಾಡಲಿದೆ.
Published by:
Harshith AS
First published:
August 18, 2020, 1:58 PM IST