Realme C1: ಸಿಂಗಲ್​ ಕ್ಯಾಮೆರಾ, 5 ಸಾವಿರ mAh ಬ್ಯಾಟರಿ; 7 ಸಾವಿರಕ್ಕೆ ಸಿಗುತ್ತೆ ಈ ಸ್ಮಾರ್ಟ್​ಫೋನ್

ನೂತನ ಫೋನ್​ ಡುಯೆಲ್​ ಸಿಮ್​ ಹೊಂದಿದ್ದು, 6.5 ಇಂಚಿನ HD ಡಿಸ್​ಪ್ಲೇ ಹೊಂದಿದೆ. ಆ್ಯಂಡ್ರಾಯ್ಡ್​​ 11 ಮತ್ತು ರಿಯಲ್​ಮಿ UI 2.0 ಆಯ್ಕೆಯಲ್ಲಿದೆ. ಒಕ್ಟಾ ಕೋರ್​ ಎಸ್​ಒಸಿ, 2GB RAM​ ಆಯ್ಕೆಯಲ್ಲಿದ್ದು, ಫೋಟೋ ಮತ್ತು ವಿಡಿಯೋ ಚಿತ್ರೀಕರಿಸಬಹುದಾಗಿದೆ.

Realme C11

Realme C11

 • Share this:
  ರಿಯಲ್​ಮಿ C11 ಸ್ಮಾರ್ಟ್​ಫೋನ್​ ಭಾರತದಲ್ಲಿ ಬಿಡುಗಡೆಯಾಗಿದೆ. ನೂತನ ಫೋನ್ ಹಲವು ವಿಶೇಷತೆಗಳನ್ನು ಒಳಗೊಂದಿದ್ದು,  ಹಿಂಭಾಗದಲ್ಲಿ ಸಿಂಗಲ್​ ರಿಯಲ್​ ಕ್ಯಾಮೆರಾ, 20:9 ಡಿಸ್​ಪ್ಲೇ ಮತ್ತು 5 ಸಾವಿರ mAh​ ಬ್ಯಾಟರಿಯನ್ನು ಹೊಂದಿದೆ. 2GB RAM​​ ಮತ್ತು ಒಕ್ಟಾ ಕೋರ್​ ಎಸ್​ಒಸಿ ಆಯ್ಕೆಯಲ್ಲಿದೆ. ಅಷ್ಟು ಮಾತ್ರವಲ್ಲದೆ, 256GB ವರೆಗೆ ವಿಸ್ತರಿಸಬಹುದಾದ ಸಂಗ್ರಗವನ್ನು ಹೊಂದಿದೆ.

  Realme C11 ವಿಶೇಷತೆ:

  ನೂತನ ಫೋನ್​ ಡುಯೆಲ್​ ಸಿಮ್​ ಹೊಂದಿದ್ದು, 6.5 ಇಂಚಿನ HD ಡಿಸ್​ಪ್ಲೇ ಹೊಂದಿದೆ. ಆ್ಯಂಡ್ರಾಯ್ಡ್​​ 11 ಮತ್ತು ರಿಯಲ್​ಮಿ UI 2.0 ಆಯ್ಕೆಯಲ್ಲಿದೆ. ಒಕ್ಟಾ ಕೋರ್​ ಎಸ್​ಒಸಿ, 2GB RAM​ ಆಯ್ಕೆಯಲ್ಲಿದ್ದು, ಫೋಟೋ ಮತ್ತು ವಿಡಿಯೋ ಚಿತ್ರೀಕರಿಸಬಹುದಾಗಿದೆ.

  ಸ್ಮಾರ್ಟ್​ಫೋನ್ ಸಿಂಗಲ್​​ ಕ್ಯಾಮೆರಾ ಹೊಂದಿದ್ದು,​ ಹಿಂಭಾಗದಲ್ಲಿ 8 ಮೆಗಾಫಿಕ್ಸೆಲ್​ ಪ್ರೈಮರಿ ಕ್ಯಾಮೆರಾ ಸೆನ್ಸಾರ್ ಜತೆಗೆ ಎಲ್​ಇಡಿ ಫ್ಲಾಶ್​ ಹೊಂದಿದೆ. ಸೆಲ್ಫಿಗಾಗಿ 5 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಲಾಗಿದೆ.

  ಗ್ರಾಹಕರಿಗಾಗಿ 32GB ಸ್ಟೊರೇಜ್​ ಆಯ್ಕೆಯಲ್ಲಿ ಸಿಗಲಿದೆ. 256GB ತನಕ ಸ್ಟೊರೇಜ್​ ವೃದ್ಧಿಸಬಹುದಾಗಿದೆ. ಎಲ್​ಟಿಇ, ವೈ-ಫೈ, ಬ್ಲೂಟೂತ್, ಜಿಪಿಎಸ್​, ಮೈಕ್ರೊ-ಯುಎಸ್​ಬಿ, 3.5 mm ​ ಜಾಕ್​ ನೀಡಲಾಗಿದೆ. ದೀರ್ಘ ಕಾಲದ ಬಾಳಿಕೆಗಾಗಿ 5 ಸಾವಿರ mAh ಬ್ಯಾಟರಿ ಅಳವಡಿಸಲಾಗಿದೆ.

  Realme C11 ಸ್ಮಾರ್ಟ್​ಫೋನ್​ 2GB RAM​+32GB ಸ್ಟೊರೇಜ್​ ಆಯ್ಕೆಯಲ್ಲಿ ಸಿಗಲಿದ್ದು, 6,999 ರೂ ಹೊಂದಿದೆ. ಕೂಲ್​ ಬ್ಲೂ ಮತ್ತು ಕೂಲ್​ ಗ್ರೇ ಬಣ್ಣದಲ್ಲಿ ಸಿಗಲಿದೆ.
  Published by:Harshith AS
  First published: