HOME » NEWS » Tech » REALME C11 SALE TODAY IN INDIA VIA FLIPKART PRICE FEATURES AND MORE HG

Realme C11: ಫ್ಲಿಪ್​ಕಾರ್ಟ್​ನಲ್ಲಿ ಮಾರಾಟ ಆರಂಭಿಸಿದ ರಿಯಲ್​ಮಿ ಸಿ11​; ಕಡಿಮೆ ಬೆಲೆಗೆ ಬೆಸ್ಟ್​​ ಸ್ಮಾರ್ಟ್​ಫೋನ್​!

Realme C11 Smartphone​: ಫ್ಲಿಪ್​ಕಾರ್ಟ್​ ರಿಯಲ್​ಮಿ C11 ಸ್ಮಾರ್ಟ್​ಫೋನ್​ ಖರೀದಿಸುವವರಿಗೆ ಆಫರ್​ ಒದಗಿಸಿದೆ. ಆಕ್ಸಿಸ್​​ ಬ್ಯಾಂಕ್​ ಕಾರ್ಡ್​ ಬಳಸಿ ಸ್ಮಾರ್ಟ್​ಫೋನ್​ ಖರೀದಿಸಿದರೆ ಶೇ.5ರಷ್ಟು ಡಿಸ್ಕೌಂಟ್​ ಸಿಗಲಿದೆ. ಇನ್ನು ರಿಯಲ್​ಮಿ.ಕಾಮ್​ ಮೂಲಕ ಖರೀದಿಸಿದರೆ 500 ರೂ. ಮೊಬಿಕ್ವಿಕ್​ ಕ್ಯಾಶ್​ ಬ್ಯಾಕ್​ ನೀಡುತ್ತಿದೆ.

news18-kannada
Updated:September 16, 2020, 2:18 PM IST
Realme C11: ಫ್ಲಿಪ್​ಕಾರ್ಟ್​ನಲ್ಲಿ ಮಾರಾಟ ಆರಂಭಿಸಿದ ರಿಯಲ್​ಮಿ ಸಿ11​; ಕಡಿಮೆ ಬೆಲೆಗೆ ಬೆಸ್ಟ್​​ ಸ್ಮಾರ್ಟ್​ಫೋನ್​!
ರಿಯಲ್​ಮಿ ಸಿ11
  • Share this:
ರಿಯಲ್​​ಮಿ ಕಳೆದ ಜೂನ್​ ತಿಂಗಳಿನಲ್ಲಿ c11 ಸ್ಮಾರ್ಟ್​ಫೋನನ್ನು​ ಮಾರುಕಟ್ಟೆಗೆ ಪರಿಚಯಿಸಿದ್ದು, ಇಂದಿನಿಂದ ಮಾರಾಟವನ್ನು ಆರಂಭಿಸಿದೆ. ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಕ್​ಕಾರ್ಟ್​ ಮತ್ತು ರಿಯಲ್​​ಮಿ.ಕಾಮ್​ ವೆಬ್​ಸೈಟ್​ನಲ್ಲಿ ಮಾರಾಟ ಮಾಡುತ್ತಿದೆ. ನೂತನ ಸ್ಮಾರ್ಟ್​ಫೋನ್​ ಗ್ರಾಹಕರಿಗಾಗಿ ಬಜೆಟ್​ ಬೆಲೆಗೆ ದೊರಕುತ್ತಿದ್ದು, ಹಲವು ವಿಶೇಷತೆಯನ್ನು ಒಳಗೊಂಡಿದೆ.

ರಿಯಲ್​ಮಿ c11 ವಿಶೇಷತೆ:

ರಿಯಲ್​ಮಿ ಸಿ11 ಸ್ಮಾರ್ಟ್​ಫೋನ್​  6.5 HD+ LCD ಡಿಸ್​ಪ್ಲೇ ಜೊತೆಗೆ 720x​1,600 ಪಿಕ್ಸೆಲ್ ರೆಸಲ್ಯೂಶನ್​ ಹೊಂದಿದೆ. ಜೊತೆಗೆ ವಾಟರ್​​ಡ್ರಾಪ್​​ ಸ್ಟೈಲ್​  ನಾಚ್​  ಡಿಸ್​ಪ್ಲೇ ಇದಾಗಿದೆ.  ಒಕ್ಟಾ ಕೋರ್​ ಮೀಡಿಯಾಟೆಕ್​​ ಹೆಲಿಯೋ G35 ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತಿರುವ ಈ ಸ್ಮಾರ್ಟ್​ಫೋನ್​ ಬಳಕೆಗೆ ಯೋಗ್ಯವಾಗಿದೆ.

ಇನ್ನು 2ಜಿGB RAM ಮತ್ತು 32GB ಸ್ಟೊರೇಜ್ ಆಯ್ಕೆಯಲ್ಲಿ ಈ ಸ್ಮಾರ್ಟ್​ಫೋನನ್ನು ಪರಿಚಯಿಸಲಾಗಿದೆ. UI ಬೇಸ್ಡ್​ ಆ್ಯಂಡ್ರಾಯ್ಡ್​​ 10 ಬೆಂಬಲವನ್ನು ಪಡೆದಿದೆ.

ಕ್ಯಾಮೆರಾ:

-13 ಮೆಗಾಫಿಕ್ಸೆಲ್​​ ಪ್ರೈಮರಿ ಕ್ಯಾಮೆರಾ ಜೊತೆಗೆ f/2.2 ಲೆನ್ಸ್​​

-2 ಮೆಗಾಫಿಕ್ಸೆಲ್​​​ ಸೆಕಂಡರಿ ಕ್ಯಾಮೆರಾ f​/2.4 ಲೆನ್ಸ್​​-ಸೆಲ್ಫಿಗಾಗಿ 5 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ.

ಇದರ ಜೊತೆಗೆ ರಿಯಲ್​ಮಿ ಸಿ11  ಸ್ಮಾರ್ಟ್​ಫೋನ್​ 4G ನೆಟ್​ವರ್ಕ್​ನಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ವೈ-ಫೈ ಸೇವೆ, ಬ್ಲೂಟೂತ್​, ಜಿಪಿಎಸ್​​, ಮೈಕ್ರೋ ಯುಎಸ್​ಬಿ ನೀಡಲಾಗಿದೆ. ದೀರ್ಘಕಾಲದ ಬಾಳಿಕೆಗಾಗಿ 5 ಸಾವಿರ ಎಮ್​ಎಎಚ್​ ಬ್ಯಾಟರಿ ಅಳವಡಿಸಲಾಗಿದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ ಹಸಿರು ಮತ್ತು ಗ್ರೇ ಬಣ್ಣದಲ್ಲಿ ಖರೀದಿಗೆ ಸಿಗಲಿದೆ.

ಬೆಲೆ: 2GB ಮತ್ತು 32GB ಸ್ಟೊರೇಜ್​ ಆಯ್ಕೆ ಸ್ಮಾರ್ಟ್​ಫೋನ್​  7,499 ರೂಗೆ ಸಿಗಲಿದೆ.

ಆಫರ್​: ಫ್ಲಿಪ್​ಕಾರ್ಟ್​ ರಿಯಲ್​ಮಿ C11 ಸ್ಮಾರ್ಟ್​ಫೋನ್​ ಖರೀದಿಸುವವರಿಗೆ ಆಫರ್​ ಒದಗಿಸಿದೆ. ಆಕ್ಸಿಸ್​​ ಬ್ಯಾಂಕ್​ ಕಾರ್ಡ್​ ಬಳಸಿ ಸ್ಮಾರ್ಟ್​ಫೋನ್​ ಖರೀದಿಸಿದರೆ ಶೇ.5ರಷ್ಟು ಡಿಸ್ಕೌಂಟ್​ ಸಿಗಲಿದೆ. ಇನ್ನು ರಿಯಲ್​ಮಿ.ಕಾಮ್​ ಮೂಲಕ ಖರೀದಿಸಿದರೆ 500 ರೂ. ಮೊಬಿಕ್ವಿಕ್​ ಕ್ಯಾಶ್​ ಬ್ಯಾಕ್​  ನೀಡುತ್ತಿದೆ.
Published by: Harshith AS
First published: September 16, 2020, 2:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories