Realme ಬುಕ್ ಸ್ಲಿಮ್ ಕಾರ್ಯಕ್ಷಮತೆ, ವಿನ್ಯಾಸ, ರಚನೆ ಹೇಗಿದೆ..? ಖರೀದಿಗೆ ಸೂಕ್ತವೇ..? ಇಲ್ಲಿದೆ ವಿವರ..

Realme Book Slim: ಮ್ಯಾಕ್‌ಬುಕ್ ಅನ್ನು ಹೋಲುವ ರಿಯಲ್‌ಮಿ ಬುಕ್ ಸ್ಲಿಮ್ ಉತ್ತರ ರಚನಾ ಗುಣಮಟ್ಟವನ್ನು ಹೊಂದಿದೆ. ಲಿಡ್ ಹಾಗೂ ಡೆಕ್ ವಿನ್ಯಾಸವನ್ನು ಅಲ್ಯುಮಿನಿಯಮ್ ಅಲಾಯ್‌ನಲ್ಲಿ ನಿರ್ಮಿಸಲಾಗಿದ್ದು ಡಿವೈಸ್ ಗಟ್ಟಿಮುಟ್ಟಾಗಿದೆ.

Realme Book Slim

Realme Book Slim

 • Share this:
  Realme Book Slim Laptop: ಕೆಲವೇ ವರ್ಷಗಳಲ್ಲಿ ರಿಯಲ್‌ಮಿ, ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಬೇರೆ ಬೇರೆ ಬೆಲೆಗಳಲ್ಲಿ ಹಾಗೂ ಅನೇಕ ಬಗೆಯ ಫೀಚರ್‌ಗಳನ್ನು ಒದಗಿಸುವ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯಲ್ಲಿ ಸೈ ಎನ್ನಿಸಿಕೊಂಡಿದೆ. ಇದೀಗ ಭಾರತದಲ್ಲಿನ ಲ್ಯಾಪ್‌ಟಾಪ್ ಕ್ಷೇತ್ರಕ್ಕೂ ಲಗ್ಗೆ ಇರಿಸಿರುವ ಹೊಸ ರಿಯಲ್‌ಮಿ ಬುಕ್ ಸ್ಲಿಮ್ ಲ್ಯಾಪ್‌ಟಾಪ್ ಅನ್ನು ನೀವು 40,999 ರೂ.ಗೆ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ. ಲ್ಯಾಪ್‌ಟಾಪ್ ಮೂಲ ಬೆಲೆ 46,999 ರೂ. ಆಗಿದೆ. ದೈನಂದಿನ ಬಳಕೆಗೆ ಈ ಲ್ಯಾಪ್‌ಟಾಪ್ ಹೇಗೆ ಪ್ರಯೋಜನಕಾರಿಯಾಗಿದೆ..? ಲ್ಯಾಪ್‌ಟಾಪ್‌ನಲ್ಲಿರುವ ಲೇಟೆಸ್ಟ್ ಫೀಚರ್‌ಗಳೇನು ಎಂಬುದನ್ನು ತಿಳಿದುಕೊಳ್ಳೋಣ.

  ರಿಯಲ್‌ಮಿ ಬುಕ್ ಸ್ಲಿಮ್: ವಿನ್ಯಾಸ, ಡಿಸ್‌ಪ್ಲೇ, ರಚನೆ

  ಮ್ಯಾಕ್‌ಬುಕ್ ಅನ್ನು ಹೋಲುವ ರಿಯಲ್‌ಮಿ ಬುಕ್ ಸ್ಲಿಮ್ ಉತ್ತರ ರಚನಾ ಗುಣಮಟ್ಟವನ್ನು ಹೊಂದಿದೆ. ಲಿಡ್ ಹಾಗೂ ಡೆಕ್ ವಿನ್ಯಾಸವನ್ನು ಅಲ್ಯುಮಿನಿಯಮ್ ಅಲಾಯ್‌ನಲ್ಲಿ ನಿರ್ಮಿಸಲಾಗಿದ್ದು ಡಿವೈಸ್ ಗಟ್ಟಿಮುಟ್ಟಾಗಿದೆ. ಇದೇ ಬೆಲೆಯ ಅಥವಾ ಇದಕ್ಕಿಂತ ಹೆಚ್ಚಿನ ಬೆಲೆಯ ಲ್ಯಾಪ್‌ಟಾಪ್‌ಗಳು ಪ್ಲಾಸ್ಟಿಕ್ ರಚನೆಯನ್ನು ಹೊಂದಿವೆ ಎಂಬುದು ರಿಯಲ್‌ಮಿ ಬುಕ್ ಸ್ಲಿಮ್ ಅನ್ನು ಬೇರೆ ಲ್ಯಾಪ್‌ಟಾಪ್‌ಗಳಿಗಿಂತ ಪ್ರತ್ಯೇಕವಾಗಿಸಿವೆ. ಮ್ಯಾಕ್‌ಬುಕ್ ಏರ್‌ಗಿಂತ ತೆಳುವಾಗಿರುವ ಬುಕ್ ಸ್ಲಿಮ್, ಹಗುರವಾಗಿದೆ. 180 ಡಿಗ್ರಿಗಳಷ್ಟು ಹಿಂದಕ್ಕೆ ಬಾಗುವ ಈ ಡಿವೈಸ್‌ನಿಂದ ನೀವು ಯಾವುದೇ ಭಂಗಿಯಲ್ಲಿಯೂ ಕೆಲಸ ಮಾಡಬಹುದಾಗಿದೆ.

  ರಿಯಲ್‌ಮಿ ಬುಕ್ ಸ್ಲಿಮ್ 100 % sRGB ಕಲರ್ ಗ್ಯಾಮುಟ್‌ ಹೊಂದಿರುವ 2K ಡಿಸ್‌ಪ್ಲೇಯೊಂದಿಗೆ ಬಂದಿದ್ದು, 3:2 ಆಕಾರ ಅನುಪಾತವನ್ನು ಹೊಂದಿದೆ. ಕಪ್ಪು ಪಟ್ಟಿಗಳನ್ನು ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ಕಾಣಬಹುದಾಗಿದೆ. ಇದು ಥಂಡರ್‌ಬೋಲ್ಟ್ 4, USB 3.2 ಜನರೇಶನ್ 2 ಟೈಪ್-ಸಿ ಪೋರ್ಟ್, USB-A 3.1 ಜನರೇಶನ್ 1 ಪೋರ್ಟ್, 3.5mm ಹೆಡ್‌ಫೋನ್ ಜಾಕ್ ಅನ್ನು ಹೊಂದಿಲ್ಲ. ಲ್ಯಾಪ್‌ಟಾಪ್ ಪ್ರಖರ ಬೆಳಕನ್ನು ಹೊಂದದೇ ಇರುವುದರಿಂದ ಮಂದ ಬೆಳಕಿನಲ್ಲಿ ಕೆಲಸ ಮಾಡುವುದು ಕಷ್ಟವಾಗಬಹುದು.

  ಕೀಬೋರ್ಡ್ ಹಾಗೂ ಟಚ್‌ಪ್ಯಾಡ್:

  ಏಸಸ್‌ ಲ್ಯಾಪ್‌ಟಾಪ್‌ಗಳಲ್ಲಿ ಕಂಡುಬರುವ ಎರ್ಗೋ ಲಿಫ್ಟ್ ಅನ್ನು ಹೊಂದಿಲ್ಲ. ಆದರೂ, ಲ್ಯಾಪ್‌ಟಾಪ್‌ನಲ್ಲಿ ಟೈಪಿಂಗ್ ಅನುಭವ ಉತ್ತಮವಾಗಿದೆ. ಕೀಬೋರ್ಡ್‌ನಲ್ಲಿರುವ ಕೀಲಿಗಳ ಅಂತರವನ್ನು ಸುಂದರವಾಗಿ ಸೆಟ್ ಮಾಡಲಾಗಿದೆ. ಲ್ಯಾಪ್‌ಟಾಪ್ ಅನ್‌ಲಾಕ್ ಮಾಡಲು ಪವರ್ ಬಟನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ರಿಯಲ್‌ಮಿ ಒದಗಿಸುವ ಫೋನ್‌ಗಳಿಗಿಂತ ಹೆಚ್ಚು ವೇಗವಾಗಿದೆ ಎಂದು ತೋರುತ್ತದೆ.

  ಪರ್ಫಾಮೆನ್ಸ್, ಬ್ಯಾಟರಿ ದೀರ್ಘತೆ, ಸಾಫ್ಟ್‌ವೇರ್:

  ರಿಯಲ್‌ಮಿ 11ನೇ ಜೆನ್ ಇಂಟೆಲ್ ಕೋರ್ i5-1135G7 CPU, ಇಂಟೆಲ್ ಐರಿಸ್ Xe ಗ್ರಾಫಿಕ್ಸ್‌ನೊಂದಿಗೆ 512GB ವರೆಗೆ PCIe SSD ಸ್ಟೋರೇಜ್ಹೊಂದಿದೆ. Core i3 ಆವೃತ್ತಿಯು 256GB SSD ಸ್ಟೋರೇಜ್ ಹೊಂದಿದೆ. ಲ್ಯಾಪ್‌ಟಾಪ್ ವಿಡಿಯೋ ಎಡಿಟಿಂಗ್‌ಗೆ ಅಷ್ಟೇನೂ ಉತ್ತಮವಾಗಿಲ್ಲ. ಆದರೆ ಫೋಟೋ ಎಡಿಟಿಂಗ್ ಮಾಡಬಹುದಾಗಿದೆ. ಚಾರ್ಜ್ ಮಾಡುವಾಗ ಹಾಗೂ ಹೆಚ್ಚು ಸಮಯ ಲ್ಯಾಪ್‌ಟಾಪ್ ಬಳಸುತ್ತಿರುವಾಗ ಕೂಡ ಲ್ಯಾಪ್‌ಟಾಪ್ ಬಿಸಿಯಾಗಲಿಲ್ಲ. ಚಾರ್ಜರ್ ಸೊನ್ನೆಯಿಂದ 100% ಬ್ಯಾಟರಿ ತುಂಬಲು ಒಂದು ಗಂಟೆ 25 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಚಾರ್ಜರ್ 30W ಡಾರ್ಟ್ ಚಾರ್ಜ್ ಟೆಕ್ ಬೆಂಬಲಿಸುತ್ತದೆ ಎಂಬುದನ್ನು ಗಮನಿಸುವುದು ಉತ್ತಮವಾಗಿದೆ. ಹಾಗಾಗಿ ಬಳಕೆದಾರರು ರಿಯಲ್‌ಮಿ ಡಿವೈಸ್ ಅಥವಾ ಇತರ ಹೊಂದಾಣಿಕೆಯ ಸಾಧನವನ್ನು ತ್ವರಿತವಾಗಿ ಚಾರ್ಜ್ ಮಾಡಬಹುದಾಗಿದೆ.

  ರಿಯಲ್‌ಮಿ ಬುಕ್ ಸ್ಲಿಮ್ ವಿಂಡೋಸ್ 10ನೊಂದಿಗೆ ಬಂದಿದೆ ಇನ್ನು ವಿಂಡೋಸ್ 11 ಆವೃತ್ತಿಯನ್ನು ಈ ವರ್ಷದ ನಂತರ ಪಡೆಯಲಿದೆ ಎಂದು ಕಂಪನಿ ದೃಢೀಕರಿಸಿದೆ. ಡಿವೈಸ್ ಪಿಸಿ ಕನೆಕ್ಟ್ ಅಪ್ಲಿಕೇಶನ್ ಒಳಗೊಂಡಿದ್ದು ನಿಮ್ಮ ಫೋನ್‌ಗೆ ಫೈಲ್‌ಗಳನ್ನು ವರ್ಗಾಯಿಸಲು ಬಳಸಬಹುದಾಗಿದೆ. ಸ್ಕ್ರೀನ್ ಮಿರರಿಂಗ್ ಹಾಗೂ ಫೋನ್ ನೋಟಿಫಿಕೇಶನ್ ಪರಿಶೀಲಿಸಲು ಬಳಸಬಹುದು. ಆದರೆ ಈ ಫೀಚರ್ ರಿಯಲ್‌ಮಿ GT ಸೀರೀಸ್‌ನಲ್ಲಿ ಮಾತ್ರ ಲಭ್ಯವಿದೆ.

  ಕ್ಯಾಮೆರಾ, ಸ್ಪೀಕರ್‌ಗಳು:

  ರಿಯಲ್‌ಮಿ ಬುಕ್ ಸ್ಲಿಮ್ 720p HD ವೆಬ್ ಕ್ಯಾಮ್ ಹೊಂದಿದ್ದು, ವಿಡಿಯೋ ಕರೆ ಅಥವಾ ಆಫೀಸ್ ಮೀಟಿಂಗ್‌ಗೆ ಇದು ಸಾಕಾಗುತ್ತದೆ. ಡಿಮ್ ಲೈಟ್ ಇದ್ದರೂ ವಿಡಿಯೋಗಳಿಗೆ ಉತ್ತಮ ಗುಣಮಟ್ಟ ಒದಗಿಸುತ್ತದೆ.

  ಹರ್ಮನ್ ಸ್ಪೀಕರ್‌ಗಳನ್ನು ಡಿವೈಸ್ ಹೊಂದಿದ್ದು ಇದು ಅತ್ಯುದ್ಭುತ ಧ್ವನಿ ಪರಿಣಾಮ ಒದಗಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಆಳವಾದ ಧ್ವನಿಯನ್ನು ಸ್ಪೀಕರ್‌ಗಳು ನೀಡುತ್ತವೆ. ಆದರೆ ಇದು ಅತ್ಯಂತ ಗುಣಮಟ್ಟದ್ದು ಎಂದು ಹೇಳುವಂತಿಲ್ಲ. ಇನ್ನೂ ಉತ್ತಮ ಧ್ವನಿ ನಿಮಗೆ ಬೇಕು ಎಂದಾದಲ್ಲಿ ಪ್ರತ್ಯೇಕ ಸ್ಪೀಕರ್ ಅಳವಡಿಸಬೇಕಾಗುತ್ತದೆ.

  ರಿಯಲ್‌ಮಿ ಬುಕ್ ಸ್ಲಿಮ್: ಇದನ್ನು ಖರೀದಿಸುವುದು ಸೂಕ್ತ ನಿರ್ಣಯವೇ?

  ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಿಲಿಯನ್ ಡೇಸ್ ನಡೆಯುತ್ತಿರುವುದರಿಂದ ಈ ಲ್ಯಾಪ್‌ಟಾಪ್ ನಿಮಗೆ 40,999 ರೂ.ಗಳಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ 46,999 ರೂ ಆಗಿದೆ. ಅಂದರೆ ಕಡಿಮೆ ಬೆಲೆಯಲ್ಲಿ ಈ ಲ್ಯಾಪ್‌ಟಾಪ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಬರವಣಿಗೆ, ವೆಬ್ ಬ್ರೌಸಿಂಗ್ ಹಾಗೂ ಮೂಲ ಕಚೇರಿ ಕೆಲಸಗಳಿಗೆ ಪ್ರೀಮಿಯಂ ವಿನ್ಯಾಸ ಹೊಂದಿರುವ ಈ ಲ್ಯಾಪ್‌ಟಾಪ್ ಅತ್ಯಂತ ಸೂಕ್ತವಾದುದು.

  ನೀವು 2K ಡಿಸ್‌ಪ್ಲೇ, ರಚನಾ ಗುಣಮಟ್ಟ ಹಾಗೂ ಸಾಕಷ್ಟು ಕಾರ್ಯಕ್ಷಮತೆ ಪಡೆದುಕೊಳ್ಳಬಹುದು. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೇನೆಂದರೆ 256GB SSD ಸ್ಟೋರೇಜ್‌ನೊಂದಿಗೆ ಮಾತ್ರವೇ ಕೋರ್ i3 ಆವೃತ್ತಿ ಬರುತ್ತದೆ ಎಂಬುದಾಗಿದೆ. ಕ್ಲೌಡ್ ಸ್ಟೋರೇಜ್‌ನಲ್ಲಿ ಡೇಟಾ ಸಂಗ್ರಹಿಸದವರಿಗೆ ಈ ಸ್ಟೋರೇಜ್ ಸಾಕಾಗುವುದಿಲ್ಲ ಎಂಬುದು ಇಲ್ಲಿ ಪ್ರಮುಖವಾದ ಅಂಶವಾಗಿದೆ.
  First published: