HOME » NEWS » Tech » REALME 8 SERIES MAY BE LAUNCHED ON MARCH 2 CEO HINTS AT 108 MEGAPIXEL QUAD CAMERA HG

ಮಾರ್ಚ್​ 8 ರಂದು ಬಿಡುಗಡೆಯಾಗಲಿದೆ 108MP ಕ್ಯಾಮೆರಾದ Realme 8 Series ಸ್ಮಾರ್ಟ್​ಫೋನ್​?; ಹೀಗೊಂದು ಸುಳಿವು ನೀಡಿದ CEO

Realme 8 Series: ಕಳೆದ ವರ್ಷ ಸೆಪ್ಟೆಂಬರ್​ ತಿಂಗಳಿನಲ್ಲಿ ರಿಯಲ್​ಮಿ 7 ಸಿರೀಸ್​ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಧಾವಿಸಿದೆ. ಈ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಹವಾ ಸೃಷ್ಟಿಸಿತ್ತು. ಇದೀಗ ಮುಂಬರುವ ದಿನಗಳಲ್ಲಿ ರಿಯಲ್​ಮಿ ಕಂಪೆನಿ ನೂತನ 8 ಸಿರೀಸ್​ ಸ್ಮಾರ್ಟ್​ಫೋನನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಅಂದಾಜಿಲಾಗಿದೆ.

news18-kannada
Updated:February 27, 2021, 2:04 PM IST
ಮಾರ್ಚ್​ 8 ರಂದು ಬಿಡುಗಡೆಯಾಗಲಿದೆ 108MP ಕ್ಯಾಮೆರಾದ Realme 8 Series ಸ್ಮಾರ್ಟ್​ಫೋನ್​?; ಹೀಗೊಂದು ಸುಳಿವು ನೀಡಿದ CEO
Realme 8 series teaser. (Image Credit: Twitter/ @MadhavSheth1)
  • Share this:
ರಿಯಲ್​ಮಿ ಸಂಸ್ಥೆ Realme 8 ಸಿರೀಸ್​​ ಹೆಸರಿನ ಸ್ಮಾರ್ಟ್​ಫೋನನ್ನು ಸಿದ್ಧಪಡಿಸುತ್ತಿದೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೂತನ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಬರುವ ಲಕ್ಷಣ ಕಾಣುತ್ತಿದೆ. ಅದಕ್ಕೆ ಅನುಗುಣವಾಗಿ ಕಂಪೆನಿಯ ಸಿಇಒ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಮುಂಬರುವ ಸ್ಮಾರ್ಟ್​ಫೋನ್​ 108 ಮೆಗಾಫಿಕ್ಸೆಲ್​ ಕ್ಯಾಮೆರಾ ಮೂಲಕ ಬರಲಿದೆ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಸ್ಮಾರ್ಟ್​ಫೋನ್​ ಪ್ರಿಯರಲ್ಲಿ ನೂತನ ಫೋನಿನ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಕಳೆದ ವರ್ಷ ಸೆಪ್ಟೆಂಬರ್​ ತಿಂಗಳಿನಲ್ಲಿ ರಿಯಲ್​ಮಿ 7 ಸಿರೀಸ್​ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಧಾವಿಸಿದೆ. ಈ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಹವಾ ಸೃಷ್ಟಿಸಿತ್ತು. ಇದೀಗ ಮುಂಬರುವ ದಿನಗಳಲ್ಲಿ ರಿಯಲ್​ಮಿ ಕಂಪೆನಿ ನೂತನ 8 ಸಿರೀಸ್​ ಸ್ಮಾರ್ಟ್​ಫೋನನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಅಂದಾಜಿಲಾಗಿದೆ.

ರಿಯಲ್​ಮಿ ಇಂಡಿಯಾ ಸಿಇಒ ಮಾಧವ್​ ಸೇಠ್​ ಟ್ವಿಟ್ಟರ್​ನಲ್ಲಿ ‘108 ಮೆಗಾಫಿಕ್ಸೆಲ್​ ಕ್ಯಾಮೆರಾದ ಬಗ್ಗೆ ಸುಳಿವು ನೀಡಿದ್ದು, ಅದು ಮುಂಬರುವ ಹೊಸ ಸ್ಮಾರ್ಟ್​ಫೋನ್​ನಲ್ಲಿ ಅಳವಡಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ. 108 ಅಂದರೆ ನಿಮಗೆ ತಿಳಿದಿದೆಯಾ? ಎಂದು ಟ್ವೀಟ್​ ಮಾಡಿದ್ದಾರೆ.

ನಂತರ ಮಾಡಿರುವ ಟ್ವೀಟ್​​ನಲ್ಲಿ ‘ಕ್ಯಾಮೆರಾದ ಮೂಲಕ ಅಧಿಕ ಫೋಟೋಗ್ರಾಫಿ ಮಾಡಲು ಸಿದ್ಧರಾಗಿ. ನಮ್ಮ ಕ್ಯಾಮೆರಾ ಈವೆಂಟ್​ನಲ್ಲಿ ಈ ಬಗ್ಗೆ ಹೆಚ್ಚಿಗೆ ಮಾಹಿತಿ ಹಂಚಿಕೊಳ್ಳಲಿದ್ದೇವೆ, 108 ಮೆಗಾಫಿಕ್ಸೆಲ್​​ ಕ್ಯಾಮೆರಾವನ್ನು ಖರೀದಿಸಿ ಎಂದು ಟ್ವೀಟ್​ನಲ್ಲಿ’ ಬರೆದಿದ್ದಾರೆ. ಜೊತೆಗೆ ಮಾರ್ಚ್​ 2ರಂದು ಸ್ಮಾರ್ಟ್​ಫೋನ್​ ಬಿಡುಗಡೆ ದಿನಾಂಕವನ್ನು ಉಲ್ಲೇಖಿಸಿದ್ದಾರೆ.

ಜೊತೆಗೆ ಫೆಬ್ರವರಿ 24ರ ಬುಧವಾರ ಕೆಲವು ಎಂದಿಗೂ ನಿಲ್ಲುವುದಿಲ್ಲ #realme. ನಾನು ಈಗಾಗಲೇ #InfiniteLeapWith8!ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ರಿಯಲ್​ಮಿ 8 ಸಿರೀಸ್​ ಬಗ್ಗೆ ಯಾವುದೇ ಮಾತುಗಳನ್ನು ಹೊರಬಿದ್ದಿಲ್ಲ. ಕಳೆದ ವರ್ಷದ ಕೊನೆಯಲ್ಲಿ ಗೀಕ್​ಬೆಂಚ್​​ ಮಾದರಿ RMX3092 ಸಂಖ್ಯೆಯನ್ನು ಗಮನಿಸಿದೆ ಇದು ರಿಯಲ್​ಮಿ 8 ಸರಣಿ ಎಂದು ಊಹಿಸಿತ್ತು.
Published by: Harshith AS
First published: February 27, 2021, 1:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories