ಹೀಗೊಂದು ಆಫರ್​! ಕೇವಲ 2,400 ರೂ.ಗೆ Realme 8 5G ಸ್ಮಾರ್ಟ್​ಫೋನ್​ ಖರೀದಿಸುವ ಅವಕಾಶ!

Flipkart: ಆನ್​ಲೈನ್​ ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ನಲ್ಲಿ ರಿಯಲ್​ಮಿ 8 5G ಸ್ಮಾರ್ಟ್​ಫೋನನ್ನು ಬಂಪರ್​ ಆಫರ್​ಗೆ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. 18,999 ರೂ ಬೆಲೆಯ ಈ ಸ್ಮಾರ್ಟ್​ಫೋನ್​ 8ಜಿಬಿ RAM​+ 128GB ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸಿದೆ. ಗ್ರಾಹಕರಿಗಾಗಿ ಇದರ ಮೇಲೆ 2 ಸಾವಿರ ಕಡಿತ ಮಾಡಿ ಮಾರಾಟ ಮಾಡುತ್ತಿದೆ. ಹಾಗಾಗಿ 16,999 ರೂ.ಗೆ ಸಿಗುತ್ತಿದೆ.

Realme 8 5g

Realme 8 5g

 • Share this:
  ರಿಯಲ್​ಮಿ ಕಂಪನಿ ನಾನಾ ವಿಶೇಷತೆಯುಳ್ಳ ಸ್ಮಾರ್ಟ್​ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಗ್ರಾಹಕರಿಗೂ ರಿಯಲ್​ಮಿ ಕಂಪನಿ ಪರಿಚಯಿಸಿರುವ ಸ್ಮಾರ್ಟ್​ಫೋನ್​ಗಳು ಅವರ ಮನಗೆದ್ದಿದೆ. ಮಧ್ಯಮ ಬೆಲೆಯಿಂದ ಅಧಿಕ ಬೆಲೆ ಸ್ಮಾರ್ಟ್​ಫೋನ್​ಗಳನ್ನು ರಿಯಲ್​ಮಿ ಪರಿಚಯಿಸುತ್ತಾ ಬಂದಿದೆ. ಅದರಂತೆ ಇತ್ತೀಚೆಗೆ ಕಂಪನಿ ರಿಯಲ್ಮಿ 8 ಹೆಸರಿನ ಸ್ಮಾರ್ಟ್​ಫೋನನ್ನು ಲಾಂಚ್​ ಮಾಡಿತ್ತು. 5ಜಿ ನೆಟ್​ವರ್ಕ್​ನಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್​ಫೋನ್​ ಇದಾಗಿದ್ದು ಕಡಿಮೆ ಬೆಲೆಯದ್ದಾಗಿದೆ, ಇದೀಗ ರಿಯಲ್​ಮಿ  8 5G ಮತ್ತಷ್ಟು ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ.

  ಆನ್​ಲೈನ್​ ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ನಲ್ಲಿ ರಿಯಲ್​ಮಿ 8 5G ಸ್ಮಾರ್ಟ್​ಫೋನನ್ನು ಬಂಪರ್​ ಆಫರ್​ಗೆ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. 18,999 ರೂ ಬೆಲೆಯ ಈ ಸ್ಮಾರ್ಟ್​ಫೋನ್​ 8ಜಿಬಿ RAM​+ 128GB ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸಿದೆ. ಗ್ರಾಹಕರಿಗಾಗಿ ಇದರ ಮೇಲೆ 2 ಸಾವಿರ ಕಡಿತ ಮಾಡಿ ಮಾರಾಟ ಮಾಡುತ್ತಿದೆ. ಹಾಗಾಗಿ 16,999 ರೂ.ಗೆ ಸಿಗುತ್ತಿದೆ.

  ಮತ್ತೊಂದೆಡೆ ರಿಯಲ್​ಮಿ  8 5G ಮೇಲೆ ಎಕ್ಸ್​ಚೇಂಜ್​ ಆಫರ್ ಕೂಡ​ ನೀಡಿದೆ. ಹಳೆಯ ಸ್ಮಾರ್ಟ್​ಫೋನ್​ಗಳಿದ್ದರೆ 14,600 ರೂ.ವರೆಗೆ ಈ ಆಫರ್​ ಪಡೆಯಬಹುದಾಗಿದೆ. ಅಂದಹಾಗೆಯೇ ಹಳೆಯ ಫೋನ್​ ಸೇಲ್​ ಮಾಡಿ ಹೊಸ ರಿಯಲ್​ಮಿ 8 5Gಯನ್ನು ಕೇವಲ 2,400 ರೂ.ಗೆ ಖರೀದಿಸಬಹುದಾಗಿದೆ.

  100 ಅಂತರಾಷ್ಟ್ರೀಯ ಟಿವಿ ಚಾನೆಲ್‌ಗಳನ್ನು ಮುಚ್ಚಲಿರುವ ಡಿಸ್ನಿ; ಕಾರಣವೇನು ಗೊತ್ತಾ?

  ರಿಯಲ್​ಮಿ 8 5G ವಿಶೇಷತೆ:

  ರಿಯಲ್​ಮಿ 8 5ಜಿ ಸ್ಮಾರ್ಟ್​ಫೋನ್​ 6.5 ಇಂಚಿನ ಫುಲ್​ ಹೆಚ್​ಡಿ ಡಿಸ್​ಪ್ಲೇ ಹೊಂದಿದ್ದು, ಆಕ್ವಾ ಕೋರ್​ ಮೀಡಿಯಾ ಟೆಕ್​ ಡೈಮೆನ್ಸಿಟಿ 700 ಎಸ್​ಒಸಿ ಪ್ರೊಸೆಸರ್​ ಹೊಂದಿದೆ, ಆ್ಯಂಡ್ರಾಯ್ಡ್​ 11ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಂತೆಯೇ ರಿಯಲ್​ಮಿ ಯುಐ 2.0 ಬೆಂಬಲ ಪಡೆದಿದೆ.

  ತ್ರಿವಳಿ ಕ್ಯಾಮೆರಾವನ್ನು ರಿಯಲ್​ಮಿ 8 5ಜಿ ಹೊಂದಿದೆ. 48 ಮೆಗಾಫಿಕ್ಸೆಲ್ ಸೆನ್ಸಾರ್​, 2 ಮೆಗಾಫಿಕ್ಸೆಲ್​ ಸೆನ್ಸಾರ್​ ಮತ್ತು 2 ಮೆಗಾಫಿಕ್ಸೆಲ್​ 2.4 ಮ್ಯಾಕ್ರೋ ಲೆನ್ಸ್​ ಒಳಗೊಂಡಿದೆ. ಇದರಲ್ಲಿ ಎಐ ಬ್ಯೂಟಿ ಫಿಲ್ಟರ್​ ಹೊರತಾಗಿ ಕಡಿಮೆ ಬೆಳಕಿಗೆ ಚೆನ್ನಾಗಿ ಫೋಟೋಗ್ರಾಫು ಮಾಡುವ ಆಯ್ಕೆಯನ್ನು ನೀಡಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​ ಅಳವಡಿಸಲಾಗಿದೆ. ಅಂದಹಾಗೆಯೇ ಧೀರ್ಘ ಕಾಲದ ಬಾಳಿಕೆಗಾಗಿ 5 ಸಾವಿರ ಎಮ್​ಎಹೆಚ್​ ಬ್ಯಾಟರಿ ನೀಡಿದೆ.
  Published by:Harshith AS
  First published: