ಇದೇ ವಾರ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ ಬಜೆಟ್​ ಬೆಲೆಯ ರಿಯಲ್​ಮಿ ಹೊಸ ಫೋನ್​; ಬಲಿಷ್ಠ ಬ್ಯಾಟರಿ ಜೊತೆ ಏನೆಲ್ಲಾ ಇದೆ?

ರಿಯಲ್​ಮಿ 5ಐ ಸ್ಮಾರ್ಟ್​ಫೋನ್​ 6.5 ಇಂಚಿನ ವಾಟರ್​ಡ್ರಾಪ್​ ಡಿಸ್​ಪ್ಲೇ ಹೊಂದಿದ್ದು, ಜೊತೆಗೆ ಹೆಚ್​ಡಿ+ ರೆಸಲ್ಯೂಶನ್​ ಸ್ಕ್ರೀನ್​ ಪಾನೆಲ್​ ಅಳವಡಿಸಿಲಾಗಿದೆ ಎಂದು ಹೇಳಲಾಗಿದೆ, ಮಾಹಿತಿಗಳ ಪ್ರಕಾರ ನೂತನ ಸ್ಮಾರ್ಟ್​ಫೋನ್​​​​ ಕ್ವಾಲ್​ ಕ್ಯಾಂ ಸ್ನಾಪ್​ ಡ್ರ್ಯಾಗನ್​ ಪ್ರೊಸೆಸರ್​ನಿಂದ ಕಾರ್ಯನಿರ್ವಹಸಲಿದೆ, ಜತೆಗೆ ಆ್ಯಂಡ್ರಾಯ್ಡ್​ 9 ಬೆಂಬಲವನ್ನು ಪಡೆದಿದೆ.


Updated:January 6, 2020, 10:22 PM IST
ಇದೇ ವಾರ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ ಬಜೆಟ್​ ಬೆಲೆಯ ರಿಯಲ್​ಮಿ ಹೊಸ ಫೋನ್​; ಬಲಿಷ್ಠ ಬ್ಯಾಟರಿ ಜೊತೆ ಏನೆಲ್ಲಾ ಇದೆ?
.
  • Share this:
ಚೀನಾ ಮೂಲದ ರಿಯಲ್​ಮಿ ಕಂಪೆನಿ ನೂತನ ವರ್ಷಕ್ಕೆ ‘ರಿಯಲ್​ಮಿ 5ಐ‘ ಹೆಸರಿನ ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸುತ್ತಿದೆ.  ಜನವರಿ 9 ರಂದು 12:30ಕ್ಕೆ ಈ ಸ್ಮಾರ್ಟ್​ಫೋನ್ ಭಾರತೀಯ​ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದೆ.

ರಿಯಲ್​ಮಿ 5ಐ ಸ್ಮಾರ್ಟ್​ಫೋನ್​ 6.5 ಇಂಚಿನ ವಾಟರ್​ಡ್ರಾಪ್​ ಡಿಸ್​ಪ್ಲೇ ಹೊಂದಿದ್ದು, ಜೊತೆಗೆ ಹೆಚ್​ಡಿ+ ರೆಸಲ್ಯೂಶನ್​ ಸ್ಕ್ರೀನ್​ ಪಾನೆಲ್​ ಅಳವಡಿಸಿಲಾಗಿದೆ ಎಂದು ಹೇಳಲಾಗಿದೆ, ಮಾಹಿತಿಗಳ ಪ್ರಕಾರ ನೂತನ ಸ್ಮಾರ್ಟ್​ಫೋನ್​​​​ ಕ್ವಾಲ್​ ಕ್ಯಾಂ ಸ್ನಾಪ್​ ಡ್ರ್ಯಾಗನ್​ ಪ್ರೊಸೆಸರ್​ನಿಂದ ಕಾರ್ಯನಿರ್ವಹಸಲಿದೆ, ಜತೆಗೆ ಆ್ಯಂಡ್ರಾಯ್ಡ್​ 9 ಬೆಂಬಲವನ್ನು ಪಡೆದಿದೆ. 3/4ಜಿಬಿ ರ್ಯಾಮ್​ ಮತ್ತು 32/64ಜಿಬಿ ಸ್ಟೊರೇಜ್​ ಆಯ್ಕೆಯಲ್ಲಿರಲಿದೆ ಎನ್ನಲಾಗುತ್ತಿದೆ. 5000ಎಮ್​ಎಎಚ್​ ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ.ಭಾರತೀಯ ಮಾರುಕಟ್ಟೆಗೆ ಕಾಲಿರಿಸುತ್ತಿರುವ ರಿಯಲ್ 5ಐ ಸ್ಮಾರ್ಟ್​ಪೋನ್​ ಅನ್ನು ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ನಲ್ಲೂ ಮಾರಾಟ ನಡೆಸಲು ಮೂಂದಾಗಿದೆ.  ಇನ್ನು ಭಾರತದಲ್ಲಿ ಈ ಸ್ಮಾರ್ಟ್​ಫೋನ್​ ಬೆಲೆ 7,999 ರೂ ಎಂದು ಅಂದಾಜಿಸಲಾಗಿದೆ.
Published by: Harshith AS
First published: January 6, 2020, 10:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading