• Home
 • »
 • News
 • »
 • tech
 • »
 • Realme 5G: ಕೇವಲ 15 ಸಾವಿರ ಬೆಲೆಗೆ ರಿಯಲ್‌ಮಿ 5ಜಿ ಮೊಬೈಲ್‌ ಬಿಡುಗಡೆ! ಫೀಚರ್ಸ್‌ ಬಗ್ಗೆ ಇಲ್ಲಿದೆ ಮಾಹಿತಿ

Realme 5G: ಕೇವಲ 15 ಸಾವಿರ ಬೆಲೆಗೆ ರಿಯಲ್‌ಮಿ 5ಜಿ ಮೊಬೈಲ್‌ ಬಿಡುಗಡೆ! ಫೀಚರ್ಸ್‌ ಬಗ್ಗೆ ಇಲ್ಲಿದೆ ಮಾಹಿತಿ

ರಿಯಲ್‌ಮಿ 5ಜಿ ಮೊಬೈಲ್

ರಿಯಲ್‌ಮಿ 5ಜಿ ಮೊಬೈಲ್

ರಿಯಲ್‌ಮಿ ಬಿಡುಗಡೆ ಮಾಡುತ್ತಿರುವ ರಿಯಲ್‌ಮಿ 5ಜಿ ಸ್ಮಾರ್ಟ್‌ಫೋನ್‌ ಇತ್ತೀಚಿಗೆ ಹೊಸದಾಗಿ ಬಿಡುಗಡೆಯಾದ ರಿಯಲ್‌ಮಿ 4ಜಿಯ ಅಪ್‌ಗ್ರೇಡ್‌ ವರ್ಷನ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ ಹಲವಾರು ಫೀಚರ್ಸ್‌ ಅನ್ನು ಹೊಂದಿದೆ.

 • Share this:

  ಪ್ರಸಿದ್ಧ ಮೊಬೈಲ್ ಕಂಪನಿಗಳಲ್ಲಿ ರಿಯಲ್‌ಮಿ (Realme) ಕೂಡ ಒಂದು. ಇತ್ತೀಚಿಗೆ ರಿಯಲ್‌ಮಿ ಕಂಪನಿ ತನ್ನ ಪ್ರೊಡಕ್ಟ್‌ ಅನ್ನು ಉತ್ಪಾದಿಸುವುದನ್ನು ಕಡಿಮೆ ಮಾಡಿದೆ. ಆದರೆ ಈಗ ರಿಯಲ್‌ಮಿ 4ಜಿಯ (Realme 4G) ಹೊಸ ವರ್ಷನ್‌ನಲ್ಲಿ ರಿಯಲ್‌ಮಿ 5ಜಿ ಫೋನ್‌ ಅನ್ನು ಬಿಡುಗಡೆ ಮಾಡುತ್ತಿದೆ. ಇದು ಈ ಬಾರಿ ರಿಯಲ್‌ಮಿ ಬಿಡುಗಡೆ ಮಾಡುತ್ತಿರುವ ಹೊಸ ಸ್ಮಾರ್ಟ್‌ಫೋನ್‌ ಆಗಿದೆ. ಈ ಫೋನ್ ಗುಣಮಟ್ಟದ ಪ್ರೊಸೆಸರ್‌ ಸಾಮರ್ಥ್ಯ, ಅತ್ಯುತ್ತಮ ಕ್ಯಾಮೆರಾ (Camera), ಬ್ಯಾಟರಿಯನ್ನು (Battery) ಒಳಗೊಂಡಿದೆ. ಸದ್ಯಕ್ಕೆ ಚೀನಾದಲ್ಲಿ ಬಿಡುಗಡೆ ಆಗಿರುವ ಈ ಫೋನ್ ಮುಂದಿನ ದಿನಗಳಲ್ಲಿ ಭಾರತಕ್ಕೂ ಕಾಲಿಡಲಿದೆ. ಈಗಾಗಲೇ ಇದರ ಬೆಲೆ ಮತ್ತು ಫೀಚರ್ಸ್‌ ಅನ್ನು ಕೂಡ ಗ್ರಾಹಕರಿಗೆ ತಿಳಿಸಿದೆ.


  ರಿಯಲ್‌ಮಿ ಬಿಡುಗಡೆ ಮಾಡುತ್ತಿರುವ ರಿಯಲ್‌ಮಿ 5ಜಿ ಸ್ಮಾರ್ಟ್‌ಫೋನ್‌ ಇತ್ತೀಚಿಗೆ ಹೊಸದಾಗಿ ಬಿಡುಗಡೆಯಾದ ರಿಯಲ್‌ಮಿ 4ಜಿಯ ಅಪ್‌ಗ್ರೇಡ್‌ ವರ್ಷನ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ ಹಲವಾರು ಫೀಚರ್ಸ್‌ ಅನ್ನು ಹೊಂದಿದೆ.


  ಈ ಸ್ಮಾರ್ಟ್‌ಫೋನ್​ನ ಫೀಚರ್ಸ್


  • ಇದು 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ.


  ಇದನ್ನೂ ಓದಿ: ಎಲ್‌ಜಿ ಕಂಪನಿಯಿಂದ ಹೊಸ ಫೋಲ್ಡೇಬಲ್‌ ಡಿಸ್‌ಪ್ಲೇ ಬಿಡುಗಡೆ! ನೋಡೋಕೆ ಸಖತ್​ ಡಿಫ್ರೆಂಟ್ ಗುರೂ!

  • 90Hz ರಿಫ್ರೆಶ್ ರೇಟ್‌, 360Hz ಟಚ್‌ಸ್ಕ್ರೀನ್‌ ಸಾಮ,ರ್ಥ್ಯವನ್ನು ಹೊಂದಿದೆ.

  • ಸ್ಮಾರ್ಟ್‌ಫೋನ್  ಮೀಡಿಯಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12‌ಒಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.‌


  Realme 5G mobile available for only 15 thousand! Here is the information about the features
  ರಿಯಲ್‌ಮಿ 5ಜಿ ಮೊಬೈಲ್


  ಕ್ಯಾಮೆರಾ ಫೀಚರ್ಸ್‌ ಹೇಗಿದೆ?


  • ರಿಯಲ್‌ಮಿ 10 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ.

  • ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ.

  • ಇದರ ಜೊತೆಗೆ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

  • ಈ ಕ್ಯಾಮೆರಾ ಫೀಚರ್​ಗಳಲ್ಲಿ ಸ್ಟ್ರೀಟ್ ಫೋಟೋಗ್ರಫಿ 2.0, ಡಿಐಎಸ್ ಸ್ನ್ಯಾಪ್‌ಶಾಟ್, ಇನ್‌ಸ್ಟಂಟ್ ಫೋಕಸ್ ಮತ್ತು ಕ್ವಿಕ್ ಜೂಮ್ ಆಯ್ಕೆ ನೀಡಲಾಗಿದೆ. 


  ರಿಯಲ್‌ಮಿ 5ಜಿ ಸ್ಮಾರ್ಟ್‌ಫೋನ್‌ನ ಸ್ಟೋರೇಜ್:‌


  ರಿಯಲ್‌ ಮಿ 10 5G ಫೋನ್ ಎರಡು ವಿಶಾಲವಾದ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ ಬೆಲೆ ಚೀನಾದಲ್ಲಿ CNY 1,299, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 15,000 ರೂಪಾಯಿ ಎನ್ನಬಹುದು. 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ ದರದವು CNY 1,599, ಭಾರತದಲ್ಲಿ ಅಂದಾಜು 18,000ರೂಪಾಯಿಯಾಗಿದೆ.


  ಬ್ಯಾಟರಿ ಸಾಮರ್ಥ್ಯ:


  • ಉತ್ತಮ ಗುಣಮಟ್ಟದಲ್ಲಿ ಹೆಚ್ಚು ಕಾಲ ಬಾಳಿಕೆ ಬರುವಂತಹ  5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

  • ಇದು 33W ವರೆಗೆ ವೇಗದ ಚಾರ್ಜಿಂಗ್ ಅನ್ನು ಸಿಸ್ಟಮ್‌ ಅನ್ನು ಹೊಂದಿದೆ.

  • ಕಂಪನಿಯ ವರದಿ ಪ್ರಕಾರ ಈ ಸ್ಮಾರ್ಟ್‌ಫೋನ್‌ 28 ನಿಮಿಷಗಳಲ್ಲಿ 0 ರಿಂದ 50%ವರೆಗೆ ಚಾರ್ಜ್ ಆಆಗುತ್ತದೆ.


  Realme 5G mobile available for only 15 thousand! Here is the information about the features
  ರಿಯಲ್‌ಮಿ 5ಜಿ ಮೊಬೈಲ್


  • ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ, ಹಾಟ್‌ಸ್ಪಾಟ್‌, ಬ್ಲೂಟೂತ್‌, ಯುಎಸ್‌ಬಿ ಸಿ ಪೋರ್ಟ್‌ ಸೇರಿದಂತೆ ಇತ್ತೀಚಿಗಿನ ಕನೆಕ್ಟಿಂಗ್‌ ಆಯ್ಕೆಯಲ್ಲಿರುವ ಎಲ್ಲಾ ಆಯ್ಕೆಗಳನ್ನು ಇದು ಹೊಂದಿದೆ.


  ಇದನ್ನೂ ಓದಿ: ಟ್ವಿಟರ್‌ಗೆ ಟಕ್ಕರ್‌ ನೀಡಲು ಸಜ್ಜಾಗಿದೆ ಮಾಸ್ಟೋಡಾನ್ ಅಪ್ಲಿಕೇಶನ್! ಏನಿದು ಹೊಸ ಆ್ಯಪ್‌ ಇಲ್ಲಿದೆ ಮಾಹಿತಿ


  ಇದು ರಿಯಲ್‌ಮಿ ಬಿಡುಗಡೆ ಮಾಡುತ್ತಿರುವ ಹೊಸ ಅಪಗ್ರೇಡ್‌ ವರ್ಷನ್‌ನ ಮೊಬೈಲ್‌ ಆಗಿದ್ದು ಇದರ ಫೀಚರ್ಸ್‌ ಬಗ್ಗೆ ಕಂಪ್ಲೀಟ್‌ ಮಾಹಿತಿಯನ್ನು ನೀಡಲಾಗಿದೆ. ಈಗ ಈ ಸ್ಮಾರ್ಟ್‌ಫೋನ್‌ ಕೇವಲ ಚೀನಾದ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತದ ಮಾರುಕಟ್ಟೆಗಳಲ್ಲೂ ಲಭ್ಯವಾಗಲಿದೆ ಎಂದು ವರದಿ ಮಾಡಿದ್ದಾರೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು