ಮತ್ತೊಂದು ಬಜೆಟ್​ ಮೊಬೈಲ್​ ಬಿಡುಗಡೆಗೆ ಒಪ್ಪೊ ಸಿದ್ಧತೆ


Updated:August 21, 2018, 5:29 PM IST
ಮತ್ತೊಂದು ಬಜೆಟ್​ ಮೊಬೈಲ್​ ಬಿಡುಗಡೆಗೆ ಒಪ್ಪೊ ಸಿದ್ಧತೆ

Updated: August 21, 2018, 5:29 PM IST
ಒಪ್ಪೊ ಒಡೆತನದ ಮತ್ತೊಂದು ಮೊಬೈಲ್​ ಸಂಸ್ಥೆ ರಿಯಲ್​ ಮಿ ಕೆಲ ದಿನಗಳ ಹಿಂದೆ ರಿಯಲ್​ಮಿ 1 ಮೊಬೈಲ್​ನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ ತಿಂಗಳು ಕಳೆದಿಲ್ಲ. ಇದೀಗ ಮತ್ತೊಂದು ನೂತನ ಮೊಬೈಲ್​ನ್ನು ಮಾರುಕಟ್ಟೆಗೆ ಬಿಡಲು ಮೊಬೈಲ್​ ಸಂಸ್ಥೆ ತೀರ್ಮಾನಿಸಿದೆ.

ಈ ಕುರಿತು ಅಧಿಕೃತವಾಗಿ ತಮ್ಮ ಟ್ವಿಟರ್​ ಖಾತೆಯಲ್ಲಿ ಚಿತ್ರವೊಂದನ್ನು ಶೇರ್​ ಮಾಡಿಕೊಂಡಿರುವ ರಿಯಲ್​ ಮಿ ಸಂಸ್ಥೆ , ಸಂಪೂರ್ಣ ನೋಚ್​ ಡಿಸ್ಪ್​ಪ್ಲೇ ಹಾಗೂ ನೀಲಿ ಬಣ್ಣದ ಮೊಬೈಲ್​ನ್ನು ತರುವು ಮುನ್ಸೂಚನೆಯನ್ನು ನೀಡಿದೆ. ಆದರೆ ಈ ವರೆಗೆ ಲೀಕ್​ ಆಗಿರುವ ಮಾಹಿತಿಗಳ ಪ್ರಕಾರ ನಾಚ್​ ಡಿಸ್​ಪ್ಲೇ ಹಾಗೂ ಎರಡು ಕ್ಯಾಮೆರಾ ಹೊಂದಿರುವ ರಿಯಲ್​ಮಿನ 2 ಚಿತ್ರಗಳು ಸಾಮಜಿಕ ಜಾಳತಾಣದಲ್ಲಿ ಸಕ್ಕತ್​ ಶೇರ್​ ಆಗಿದೆ.

ರಿಯಲ್​ಮಿ 1ರಲ್ಲಿ ಫಿಂಗ್​ರ್​ ಸ್ಕ್ಯಾನಿಂಗ್​ ತಂತ್ರಜ್ಞಾನವನ್ನು ಅಳವಡಿಸಿರಲಿಲ್ಲ, ಇದೀಗ ಈ ಮೊಬೈಲ್​ನಲ್ಲಿ ಡ್ಯುಯಲ್​ ಕ್ಯಾಮೆರಾ ಮತ್ತು ಫಿಂಗರ್​ ಸ್ಕ್ಯಾನಿಂಗ್​ ಅವರಕಾಶ ಕಲ್ಪಿಸಲಾಗಿದೆ. ರಿಯಲ್​ ಮಿ 1ನಲ್ಲಿ ಫೇಸ್​ ಅನ್​ಲಾಕರ್​ ಆಯ್ಕೆಯನ್ನು ನೀಡಲಾಗಿತ್ತು. ಇದು ಬಿಟ್ಟರೆ ರಿಯಲ್​ ಮಿ2 ಕುರಿತು ಯಾವುದೇ ಮಾಹಿತಿಗಳು ಲೀಕ್​ ಆಗಿಲ್ಲ.

ಇನ್ನು ರಿಯಲ್​ ಮಿ1 ಕುರಿತು ಹೇಳುವುದಾದರೆ, ಡೈಮಂಡ್​ ಫಿನಿಶಿಂಗ್​ ಬ್ಯಾಕ್​ ಪ್ಯಾನೆಲ್​ ಹೊಂದಿರುವ ಈ ಮೊಬೈಲ್​ಗೆ 6 ಇಂಚುಗಳ ಫುಲ್​ ಹೆಚ್​ಡಿ ಪ್ಲಸ್​ ಐಪಿಎಸ್​ ಎಲ್​ಸಿಡಿ ಡಿಸ್​ಪ್ಲೇ ನೀಡಲಾಗಿದೆ. ಮಿಡಿಯಾಟೆಕ್​ MT6771 ಪ್ರೊಸೆಸರ್​ ಅಳವಡಿಸಲಾಗಿದೆ. ಮೊಬೈಲ್​ ಕಾರ್ಯ ನಿರ್ವಹಣೆಗೆ 6GB RAM ಮತ್ತು 128 ಜಿಬಿ ಆಂತರಿಕ ಮೆಮೊರಿ ವ್ಯವಸ್ಥೆ ಕೊಡಲಾಗಿದೆ.

 
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...