ಮೊಬೈಲ್ ಮಾರುಕಟ್ಟೆಯಲ್ಲಿನ ಜನಪ್ರಿಯ ಕಂಪನಿಯಾಗಿರುವ ರಿಯಲ್‌ಮಿ ಕಂಪನಿ (Realme Company) ಇದೀಗ ತನ್ನ ಬ್ರಾಂಡ್ನ ಅಡಿಯಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್‌ನ ಸೇಲ್ ಆರಂಭವಾಗಿದೆ. ರಿಯಲ್‌ಮಿ 10 ಪ್ರೋ (Realme 10 Pro) ರಿಯಲ್‌ಮಿ ಕಂಪನಿಯ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ (Smartphone) ಆಗಿದ್ದು ಕಳೆದವಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗಿದೆ. ಇದೀಗ ಡಿಸೆಂಬರ್ 16 ರಂದು ಫ್ಲಿಪ್ಕಾರ್ಟ್ನಲ್ಲಿ ಫಸ್ಟ್ ಸೇಲ್ (Flipkart First Sale) ಆರಂಭಿಸಿದೆ. ಈ ಸ್ಮಾರ್ಟ್ಫೊನ್ ಬಹಳಷ್ಟು ಫೀಚರ್ಸ್ ಅನ್ನು ಹೊಂದಿದ್ದು ಫ್ಲಿಪ್ಕಾರ್ಟ್ನಲ್ಲಿ ಈ ಸ್ಮಾರ್ಟ್‌ಫೋನ್ ಹೈಪರ್‌ಸ್ಪೇಸ್ ಗೋಲ್ಡ್, ಡಾರ್ಕ್ ಮ್ಯಾಟರ್ ಮತ್ತು ನೆಬ್ಯುಲಾ ಬ್ಲೂ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಫಸ್ಟ್ ಸೇಲ್ನಲ್ಲಿ ರಿಯಲ್‌ಮಿ ಕಂಪನಿ ತನ್ನ ಗ್ರಾಹಕರಿಗೆ ವಿಶೇಷ ಆಫರ್ಸ್ ಅನ್ನು ಕೂಡ ನೀಡುತ್ತಿದೆ. ರಿಯಲ್‌ಮಿ 10 ಪ್ರೋ ಸ್ಮಾರ್ಟ್‌ಫೋನ್ ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಿದ್ದು ಮಾರುಕಟ್ಟೆಯಲ್ಲಿ ಒಂದೇ ದಿನದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಕೂ ಪಡೆಯುತ್ತಿದೆ.
ರಿಯಲ್‌ಮಿ 10 ಪ್ರೋ ಸ್ಮಾರ್ಟ್‌ಫೋನ್‌ನ ಫಸ್ಟ್ ಸೇಲ್ ಫ್ಲಿಪ್ಕಾರ್ಟ್ನಲ್ಲಿ ನಡೆಯುತ್ತಿದ್ದು, ಈ ಪ್ರಯುಕ್ತ ವಿಶೇಷ ಆಫರ್ ಕೂಡ ಈ ಸ್ಮಾರ್ಟ್‌ಫೋನ್ ಮೇಲೆ ನೀಡಿದ್ದಾರೆ. ಇನ್ನು ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 5G ಫೋನ್ ಆಗಿದೆ. ಹಾಗಾದ್ರೆ ರಿಯಲ್‌ಮಿ 10 ಪ್ರೊ ಸ್ಮಾರ್ಟ್‌ಫೋನ್ ಫಸ್ಟ್ ಸೇಲ್ ಪ್ರಯುಕ್ತ ಏನೆಲ್ಲಾ ಆಫರ್ಸ್ಗಳಿವೆ? ಈ ಸ್ಮಾರ್ಟ್‌ಫೋನ್‌ನ ಸ್ಪೆಷಲ್ ಫೀಚರ್ಸ್ ಏನು ಎಂಬುದನ್ನು ಇಲ್ಲಿ ತಿಳಿಯಿರಿ.
ಫಸ್ಟ್ ಸೇಲ್ನಲ್ಲಿರುವ ಆಫರ್ಸ್
ರಿಯಲ್‌ಮಿ 10ಪ್ರೊ ಸ್ಮಾರ್ಟ್‌ಫೋನ್‌ನ ಬೇಸ್ ಮಾಡೆಲ್ 6ಜಿಬಿ ರ್‍ಯಾಮ್ + 128ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್‌ಫೋನ್‌ನ ಬೆಲೆ 18,999 ರೂಪಾಯಿ ಆಗಿದೆ. ಹಾಗೆಯೇ 8ಜಿಬಿ ರ್‍ಯಾಮ್ ಮತ್ತು 128ಜಿಬಿ ಹೊಂದಿ ಸ್ಮಾರ್ಟ್‌ಫೋನ್‌ನ ಬೆಲೆ 19,999 ರೂಪಾಯಿ ಆಗಿದೆ.
ಇದನ್ನೂ ಓದಿ: ಫೈರ್ ಬೋಲ್ಟ್ ಕಂಪನಿಯಿಂದ ಮೂರು ಸ್ಮಾರ್ಟ್ವಾಚ್ಗಳ ಬಿಡುಗಡೆ; ಫೀಚರ್ಸ್, ಬೆಲೆ ಮಾಹಿತಿ ಇಲ್ಲಿದೆ
ಆದರೆ ಈ ಸ್ಮಾರ್ಟ್ಫೋನ್ಗಳನ್ನು ಫಸ್ಟ್ ಸೇಲ್ ಆಫರ್‌ನಲ್ಲಿ ಎಸ್ಬಿಐ ಮತ್ತು ಹೆಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 1,000 ರೂಪಾಯಿ ರಿಯಾಯಿತಿಯೊಂದಿಗೆ ಖರೀದಿ ಮಾಡಬಹುದು. ಅಲ್ಲದೆ ಇಎಮ್ಐ ವಹಿವಾಟು ಹಾಗೂ ಎಸ್ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರು 750 ರೂಪಾಯಿಗಳವರೆಗೆ ಈ ಮೊಬೈಲ್ನ ಮೇಲೆ ಡಿಸ್ಕೌಂಟ್ ಪಡೆದುಕೊಳ್ಳಬಹುದು.
ಡಿಸ್‌ಪ್ಲೇ ಫೀಚರ್ಸ್ ಹೇಗಿದೆ?
ರಿಯಲ್‌ಮಿ 10 ಪ್ರೋ 5ಜಿ ಸ್ಮಾರ್ಟ್‌ಫೋನ್ 6.72 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080x 2,400ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 93.76 ಪ್ರತಿಶತ ಸ್ಕ್ರೀನ್-ಟು-ಬಾಡಿ ಸೈಜ್ ಅನ್ನು ಒಳಗೊಂಡಿದೆ.
ಕ್ಯಾಮೆರಾ ಸೆಟಪ್ ಹೇಗಿದೆ?
ರಿಯಲ್‌ಮಿ 10 ಪ್ರೋ 5ಜಿ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಫೀಚರ್ಸ್ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಮಾಡಲಅಗಿದೆ. ಇನ್ನು ಇದರಲ್ಲಿರುವಂತಹ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸ್ಯಾಮ್ಸಂಗ್ ಹೆಚ್ಎಮ್6 ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಇದರ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್ಗಾಗಿ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಿದ್ದಾರೆ.
ಬ್ಯಾಟರಿ ಫೀಚರ್ಸ್
ರಿಯಲ್‌ಮಿ 10 ಪ್ರೋ 5ಜಿ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, 33W SuperVOOC ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಅನ್ನು ಕೇವಲ 20 ನಿಮಿಷಗಳಲ್ಲಿ 50% ಚಾರ್ಜ್ ಮಾಡಬಹುದಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್ 5ಜಿ ಬೆಂಬಲ, Wi-Fi ಮತ್ತು ಬ್ಲೂಟೂತ್ 5.1, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ