• Home
 • »
 • News
 • »
 • tech
 • »
 • Best Smartphones: ಸ್ಮಾರ್ಟ್​ಫೋನ್​ ಅಖಾಡದಲ್ಲಿ ಇದ್ರದ್ದೇ ಹವಾ, ಎಲ್ಲರ ಕೈಯಲ್ಲೂ ರಾರಾಜಿಸುತ್ತಿದೆ ರಿಯಲ್​ಮಿ 10 ಪ್ರೋ!

Best Smartphones: ಸ್ಮಾರ್ಟ್​ಫೋನ್​ ಅಖಾಡದಲ್ಲಿ ಇದ್ರದ್ದೇ ಹವಾ, ಎಲ್ಲರ ಕೈಯಲ್ಲೂ ರಾರಾಜಿಸುತ್ತಿದೆ ರಿಯಲ್​ಮಿ 10 ಪ್ರೋ!

ರಿಯಲ್​ಮಿ ಸ್ಮಾರ್ಟ್​​ಫೋನ್ಸ್​

ರಿಯಲ್​ಮಿ ಸ್ಮಾರ್ಟ್​​ಫೋನ್ಸ್​

ರಿಯಲ್​ಮಿ 10 ಪ್ರೋ ಸ್ಮಾರ್ಟ್​ಫೊನ್​ ಬಹಳಷ್ಟು ಫೀಚರ್ಸ್​ ಅನ್ನು ಹೊಂದಿದೆ. ಆದರೆ ಈ ಸ್ಮಾರ್ಟ್​​ಫೋನ್​ಗೆ ಟಕ್ಕರ್​ ನೀಡುವಂತಹ ಇನ್ನು ಅನೇಕ ಸ್ಮಾರ್ಟ್​​ಫೋನ್​ಗಳು ಮೊಬೈಲ್​ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ. ಹಾಗಿದ್ರೆ ಆ ಸ್ಮಾರ್ಟ್​ಫೋನ್​ಗಳು ಯಾವುದೆಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಸಂಪೂರ್ಣ ಓದಿ.

ಮುಂದೆ ಓದಿ ...
 • Share this:

  ಸಾಕಷ್ಟು ಸ್ಮಾರ್ಟ್​ಫೋನ್​ಗಳು (Smartphone) ಟೆಕ್​ ಮಾರುಕಟ್ಟೆಗೆ ಬರುತ್ತವೆ. ಆದರೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವಂತಹ ಕಂಪನಿಗಳು ಕೆಲವೇ ಕೆಲವು. ಈ ವರ್ಷ ಟೆಕ್ನಾಲಜಿ ಮಾರುಕಟ್ಟೆಗೆ (Technology Market)  ಹಲವಾರು ಸ್ಮಾರ್ಟ್​​ಫೋನ್​ಗಳು ಬಿಡುಗಡೆಯಾಗಿದೆ. ಒಂದೊಂದು ಸ್ಮಾರ್ಟ್​ಫೋನ್​ಗಳ ಫೀಚರ್ಸ್​ ನೋಡಿದರೆ ಮುಂದಿನ ದಿನಗಳಲ್ಲಿ ಟೆಕ್ನಾಲಜಿ ಯುಗದಲ್ಲಿ ಮಹತ್ತರ ಬದಲಾವಣೆಯಾಗುವುದಂತು ನಿಜ ಅನ್ಸುತ್ತೆ. ಇದೀಗ ಕೆಲದಿನಗಳ ಹಿಂದೆ ಮೊಬೈಲ್​ ಮಾರುಕಟ್ಟೆಗೆ  ರಿಯಲ್​ಮಿ ಕಂಪನಿಯ ರಿಯಲ್​ಮಿ 10 ಪ್ರೋ (Realme 10 Pro) ಎಂಬ ಸ್ಮಾರ್ಟ್​ಫೋನ್​ ಬಿಡುಗಡೆಯಾಗಿತ್ತು. ಇದು ತನ್ನ ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ ಬ್ಯಾಕಪ್​ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಆದರೆ ಇದಕ್ಕೆ ಟಕ್ಕರ್ ಕೊಡಲು ಇದೀಗ ಹಲವಾರು ಸ್ಮಾರ್ಟ್​​ಫೋನ್​ಗಳು ಬಿಡುಗಡೆಯಾಗಿದೆ. 


  ರಿಯಲ್​ಮಿ 10 ಪ್ರೋ ಸ್ಮಾರ್ಟ್​ಫೊನ್​ ಬಹಳಷ್ಟು ಫೀಚರ್ಸ್​ ಅನ್ನು ಹೊಂದಿದೆ. ಆದರೆ ಈ ಸ್ಮಾರ್ಟ್​​ಫೋನ್​ಗೆ ಟಕ್ಕರ್​ ನೀಡುವಂತಹ ಇನ್ನು ಅನೇಕ ಸ್ಮಾರ್ಟ್​​ಫೋನ್​ಗಳು ಮೊಬೈಲ್​ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ. ಹಾಗಿದ್ರೆ ಆ ಸ್ಮಾರ್ಟ್​ಫೋನ್​ಗಳು ಯಾವುದೆಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಸಂಪೂರ್ಣ ಓದಿ.


  ಮೊಟೊ ಜಿ82 5ಜಿ ಸ್ಮಾರ್ಟ್​ಫೋನ್​


  ಮೊಟೊರೊಲಾ ಕಂಪನಿಯ ಮೊಟೊ ಜಿ82 5ಜಿ ಸ್ಮಾರ್ಟ್‌ಫೋನ್‌ ಕೂಡ ಅತ್ಯುತ್ತಮ ಪರ್ಯಾಯ ಸ್ಮಾರ್ಟ್‌ಫೋನ್‌ ಆಗಿದೆ. ಇನ್ನು ಈ ಸ್ಮಾರ್ಟ್​​ಫೋನ್​ನ ಫೀಚರ್ಸ್​ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲ್ಡ್​ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್​ ಸೆನ್ಸಾರ್‌ ಹೊಂದಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್​ ಅನ್ನು ಸಹ ಇದರಲ್ಲಿ ಅಳವಡಿಸಲಾಗಿದೆ.


  ಇದನ್ನೂ ಓದಿ: ಯೂಟ್ಯೂಬ್​ನ ಈ ಫೀಚರ್ಸ್​ ನೋಡಿದ್ರೆ ಶಾಕ್ ಆಗ್ತೀರಾ! ಅಂತದ್ದೇನಿದೆ?


  ಒನ್​ಪ್ಲಸ್​ ನಾರ್ಡ್​​ ಸಿಇ 2 ಲೈಟ್​


  ರಿಯಲ್‌ಮಿ 10ಪ್ರೊ ಗೆ ಅತ್ಯುತ್ತಮವಾಗಿ ಟಕ್ಕರು ಕೊಡುವಂತಹ ಸ್ಮಾರ್ಟ್​ಫೊನ್​ ಎಂದರೆ ಅದು ಒನ್‌ಪ್ಲಸ್‌ ನಾರ್ಡ್‌ ಸಿಇ 2 ಲೈಟ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಯಲ್ಲಿ 18,999 ರೂಪಾಯಿಯ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ 6.59 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಬರಲಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 685SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಹೊಂದಿದ್ದು, 64 ಮೆಗಾಪಿಕ್ಸೆಲ್​ ಸೆನ್ಸಾರ್‌ ಸಾಮರ್ಥ್ಯದ ಮುಖ್ಯ ಕ್ಯಾಮೆರಾ ಹೊಂದಿದೆ.


  ರೆಡ್​​ಮಿ ನೋಟ್​ 11 ಪ್ರೋ+


  ರಿಯಲ್‌ಮಿ 10 ಪ್ರೋ ಸ್ಮಾರ್ಟ್‌ಫೋನ್‌ ಬದಲಿಗೆ ಬೇರೊಂದು ಸ್ಮಾರ್ಟ್​ಫೋನ್​ ಅನ್ನು ತೆಗೆದುಕೊಳ್ಳಬೇಕೆಂದು ಅಂದುಕೊಂಡರೆ ರೆಡ್ಮಿ ನೋಟ್‌ 11 ಪ್ರೊ+ ಸ್ಮಾರ್ಟ್‌ಫೋನ್‌ ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲ್ಡ್​ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಕೂಡ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಅಳವಡಿಸಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್​ ಸೆನ್ಸಾರ್‌ ಪಡೆದುಕೊಂಡಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.


  ಪೋಕೋ ಎಕ್ಸ್​4 ಪ್ರೋ 5ಜಿ


  ಪೋಕೋ ಎಕ್ಸ್​4 ಪ್ರೋ 5ಜಿ ಸ್ಮಾರ್ಟ್‌ಫೋನ್‌ 6.67-ಇಂಚಿನ ಫುಲ್‌ ಹೆಚ್‌ಡಿ+ ಅಮೋಲ್ಡ್​ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್​​ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ, ಜೊತೆಗೆ ಈ ಸ್ಮಾರ್ಟ್‌ಫೊನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 67W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

  Published by:Prajwal B
  First published: