ದಿನ ಕಳೆದಂತೆ ಸ್ಮಾರ್ಟ್ಫೋನ್ಗಳ (Smartphones) ಬಳಕೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಕಂಪೆನಿಗಳು ಕೂಡ ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್ವಾಚ್ಗಳನ್ನು ಬಿಡುಗಡೆ ಮಾಡ್ತಾ ಇದೆ. ಇದೀಗ ದೇಶದೆಲ್ಲೆಡೆ 5ಜಿ ನೆಟ್ವರ್ಕ್, ಸ್ಮಾರ್ಟ್ಫೋನ್ಗಳು ಭಾರೀ ಸದ್ದಿನಲ್ಲಿರುವಾಗ, ರಿಯಲ್ಮಿ ಕಂಪೆನಿ (Realme Company) ಹೊಸ 4ಜಿ ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದೆ.ಇದೀಗ ರಿಯಲ್ಮಿ ಕಂಪೆನಿ ರಿಯಲ್ಮಿ 10 4ಜಿ (Realme 10 4G) ಎಂಬ ಸ್ಮಾರ್ಟ್ಫೋನ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಉತ್ತಮ ಪ್ರೊಸೆಸರ್, ಡಿಸ್ಪ್ಲೇಯನ್ನು ಹೊಂದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗುತ್ತದೆ ಎಂದು ಕಂಪೆನಿ ಹೇಳಿದೆ.
ಹೌದು, ರಿಯಲ್ಮಿ ಕಂಪೆನಿ ಇದೀಗ ರಿಯಲ್ಮಿ 10 4ಜಿ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದೀಗ ಹೊಸವರ್ಷದಲ್ಲಿ ಲಾಂಚ್ ಆಗುತ್ತಿರುವ ರಿಯಲ್ಮಿಯ ಹೊಸ 4ಜಿ ಸ್ಮಾರ್ಟ್ಫೋನ್ ಇದಾಗಿದೆ. ಇದರ ಫೀಚರ್ಸ್, ಬೆಲೆ ಹೇಗಿದೆ ಎಂಬುದರ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ.
ರಿಯಲ್ಮಿ 10 4ಜಿ ಸ್ಮಾರ್ಟ್ಫೋನ್ ಫೀಚರ್ಸ್
ರಿಯಲ್ಮಿ 10 4ಜಿ ಸ್ಮಾರ್ಟ್ಫೋನ್ನ ಡಿಸ್ಪ್ಲೇ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು 6.4 ಇಂಚಿನ ಫುಲ್ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇ ಫ್ಲಾಟ್ ಸ್ಕ್ರೀನ್ ವಿನ್ಯಾಸವನ್ನು ಒಳಗೊಂಡಿದೆ. ಇದು 90Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, ಅಮೋಲೆಡ್ ಡಿಸ್ಪ್ಲೇ ಇದಾಗಿದೆ. ಇದಲ್ಲದೆ ಈ ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಪಡೆದಿದೆ.
ಇದನ್ನೂ ಓದಿ: ನಾಯ್ಸ್ ಕಂಪೆನಿಯಿಂದ ಬಿಡುಗಡೆಯಾಗ್ತಿದೆ ಹೊಸ ಸ್ಮಾರ್ಟ್ವಾಚ್!
ಕ್ಯಾಮೆರಾ ಫೀಚರ್ಸ್
ರಿಯಲ್ಮಿ 10 4ಜಿ ಸ್ಮಾರ್ಟ್ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ನೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಈ ಫೋನ್ನ ಹಿಂಭಾಗದ ಕ್ಯಾಮೆರಾ ಮೂಲಕ 1080p ಕ್ವಾಲಿಟಿಯಲ್ಲಿ ವಿಡಿಯೋ ಶೂಟ್ ಅನ್ನು ಸಹ ಮಾಡಬಹುದು. ಇದಲ್ಲದೆ ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್ಗಾಗ್ಇ 16 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ.
ಬ್ಯಾಟರಿ ಫೀಚರ್ಸ್
ರಿಯಲ್ಮಿ 10 4ಜಿ ಸ್ಮಾರ್ಟ್ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದರ ಜೊತೆಗೆ 33W ಸೂಪರ್ವೂಕ್ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್ ಚಾರ್ಜ್ ಆಗಲು ಯುಎಸ್ಬಿ ಟೈಪ್ ಸಿ ಪೋರ್ಟ್ ಅನ್ನು ಅಳವಡಿಸಿದ್ದಾರೆ.
ಇತರೆ ಫೀಚರ್ಸ್
ಈ ಸ್ಮಾರ್ಟ್ಫೋನ್ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಆಡಿಯೋಗಾಗಿ 3.5mm ಹೆಡ್ಫೋನ್ ಜ್ಯಾಕ್ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ VoLTE, ವೈ-ಫೈ 5 ಮತ್ತು ಬ್ಲೂಟೂತ್ 5.3 ಬೆಂಬಲವನ್ನು ಹೊಂದಿದೆ.
ಬೆಲೆ ಮತ್ತು ಲಭ್ಯತೆ
ರಿಯಲ್ಮಿ 10 4ಜಿ ಸ್ಮಾರ್ಟ್ಫೋನ್ ಭಾರತದಲ್ಲಿ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ರೂಪಾಂತರದ ಆಯ್ಕೆಗೆ 13,999 ರೂಪಾಯಿ ಬೆಲೆಯನ್ನು ಹೊಂದಿದೆ. ಇನ್ನು 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ರೂಪಾಂತರದ ಆಯ್ಕೆಗೆ 16,999 ರೂಪಾಯಿ ಬೆಲೆಯಿಂದ ಪ್ರಾರಂಭವಾಗಲಿದೆ. ಆದರೆ ಲಾಂಚ್ ಆಫರ್ನಲ್ಲಿ ಬೇಸ್ ಮಾಡೆಲ್ ಖರೀದಿಸಿದರೆ 1,000 ರೂ. ವರೆಗಿನ ರಿಯಾಯಿತಿ ದೊರೆಯಲಿದೆ.
ಇನ್ನು ಈ ಸ್ಮಾರ್ಟ್ಫೋನ್ ರಶ್ ಬ್ಲಾಕ್ ಮತ್ತು ಕ್ಲಾಷ್ ವೈಟ್ ಕಲರ್ ಆಯ್ಕೆಗಳಲ್ಲಿ ಬರಲಿದೆ. ಇದು ಫ್ಲಿಪ್ಕಾರ್ಟ್, ರಿಯಲ್ಮಿ ಇಂಡಿಯಾ ಸ್ಟೋರ್ ಮತ್ತು ದೇಶದ ಇತರ ಅಧಿಕೃತ ಆಫ್ಲೈನ್ ಸ್ಟೋರ್ಗಳಲ್ಲಿ ಜನವರಿ 15 ರಂದು ಮಧ್ಯಾಹ್ನ 12 ಗಂಟೆಗೆ ತನ್ನ ಸೇಲ್ ಅನ್ನು ಆರಂಭಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ