ಎಟಿಎಂಗಳಲ್ಲಿ ವಿಂಡೋಸ್ ಎಕ್ಸ್​ಪಿಯನ್ನು ತೆಗೆದು ಹಾಕಲು ಆರ್​ಬಿಐ ಸೂಚನೆ


Updated:June 25, 2018, 4:07 PM IST
ಎಟಿಎಂಗಳಲ್ಲಿ ವಿಂಡೋಸ್ ಎಕ್ಸ್​ಪಿಯನ್ನು ತೆಗೆದು ಹಾಕಲು ಆರ್​ಬಿಐ ಸೂಚನೆ

Updated: June 25, 2018, 4:07 PM IST
ನವದೆಹಲಿ: ಮಹತ್ತರ ಬೆಳವಣಿಗೆಯೊಂದರಲ್ಲಿ ಒಂದು ವರ್ಷದೊಳಗೆ ದೇಶದ ಎಲ್ಲಾ ಬ್ಯಾಂಕ್​ಗಳು ತಮ್ಮ ಎಟಿಎಂ ಯಂತ್ರದಲ್ಲಿ ಅಳವಡಿಸಿರುವ ವಿಂಡೋಸ್​ ಎಕ್ಸ್​ಪಿ ಆಪರೇಟಿಂಗ್​ ಸಿಸ್ಟಂ​ ಅನ್ನು ತೆಗೆದು ಹೊಸ ಆಪರೇಟಿಂಗ್​ ಸಿಸ್ಟಂ ಅಳವಡಿಸುಕೊಳ್ಳಲು ಆರ್​ಬಿಐ ಆದೇಶಿಸಿದೆ.

ವಿಪರ್ಯಾಸವೆಂದರೆ 2014ರಲ್ಲೇ ಮೈಕ್ರೋಸಾಫ್ಟ್​ ಸಂಸ್ಥೆ ಎಕ್ಸ್​ಪಿ ಆಪರೇಟಿಂಗ್​ ಸಿಸ್ಟಂಗ್​ಗಳಿಗೆ ನೀಡುವ ಭದ್ರತಾ ಅಪ್​ಡೇಟ್​ನ್ನು ಸ್ಥಗಿತಗೊಳಿಸಿದೆ. ಇದಾಗಿ ನಾಲ್ಕು ವರ್ಷಗಳು ಕಳೆದರೂ ದೇಶದ ಹೆಚ್ಚಿನ ಬ್ಯಾಂಕ್​ಗಳು ವಿಂಡೋಸ್​ ಸಿಸ್ಟಂ ಬಳಸುತ್ತಿವೆ. ಇದರ ಬದಲಾವಣೆಗೆ ಮುಂದಾದ ಆರ್​ಬಿಐ ಕೂಡಲೇ ಈ ಎಲ್ಲಾ ಎಟಿಎಂಗಳು ತಮ್ಮ ಎಕ್ಸ್​ಪಿ ಆಪರೇಟಿಂಗ್​ ಸಿಸ್ಟಂನಿಂದ ಅಪ್​ಗ್ರೇಡ್​ ಮಾಡಲು ಹೇಳಿದೆ.

ಬ್ಯಾಂಕ್​ಗಳು ಮಂದಗತಿಯಲ್ಲಿ ಕಾರ್ಯ ನಿರ್ವಹಿಸಲು ಪ್ರಮುಖ ಕಾರಣಗಳಲ್ಲಿ ಅಲ್ಲಿ ಬಳಕೆಯಾಗುವ ಕಂಪ್ಯೂಟರ್​ಗಳೂ ಕೂಡಾ ಕಾರಣವಾಗುತ್ತವೆ. ಬ್ಯಾಂಕ್​ಗಳು ಬಳಕೆ ಮಾಡುತ್ತಿರುವ ಕಂಪ್ಯೂಟರ್​ಗಳಿಗೆ ಭದ್ರತಾ ಬೆಂಬಲವಿರುವುದಿಲ್ಲ. ಇದು ಗ್ರಾಹಕರು ಮತ್ತು ಬ್ಯಾಂಕ್​ಗಳಿಗೆ ತೊಂದರೆಯುಂಟು ಮಾಡಬಹುದು. ಹೀಗಾಗಿ ಮುಂದಿನ ಮಾರ್ಚ್​ 2019ರೊಳಗೆ ಸಂಪೂರ್ಣವಾಗಿ ಇದರ ಬಳಕೆ ನಿಲ್ಲಬೇಕು ಎಂದು ಸುತ್ತೋಲೆಯಲ್ಲಿ ಆರ್​ಬಿಐ ಉಲ್ಲೇಖಿಸಿದೆ.

ಜುಲೈ ಅಂತ್ಯದೊಳಗೆ ಎಲ್ಲಾ ಬ್ಯಾಂಕ್​ಗಳು ತಮ್ಮ ಎಕ್ಸ್​​ಪಿ ಬದಲೀ ಯೋಜನೆಯನ್ನು ನೀಡುವಂತೆ ನಿರ್ದೇಶಿಸಿರುವ ಆರ್​ಬಿಐ ಹಂತ ಹಂತವಾಗಿ ಮುಂದಿನ ವರ್ಷದೊಳಗೆ ಎಕ್ಸ್​ಪಿ ಆಪರೇಟಿಂಗ್​ನ್ನು ನಿಲ್ಲಿಸಲು ನಕಾಶೆಯೊಂದನ್ನೂ ಸಹ ರೂಪಿಸಿದೆ. ಇದರ ಪ್ರಕಾರ ಇದೇ ಸೆಪ್ಟೆಂಬರ್​ನೊಳಗೆ ಶೇ.25, ಮುಂದಿನ ಡಿಸೆಂಬರ್​ನೊಳಗೆ ಶೇ.50 ಮತ್ತು ಮಾರ್ಚ್​ 2019ರೊಳಗೆ ಶೇ.75ರಷ್ಟಾದರೂ ಎಕ್ಸ್​ಪಿ ಬಳಕೆಯನ್ನು ನಿಲ್ಲಿಸಲು ಸೂಚಿಸಿದೆ.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ