• Home
 • »
 • News
 • »
 • tech
 • »
 • Range Rover Velar: ಹೊಸ ರೇಂಜ್ ರೋವರ್ ವೆಲಾರ್ ಬಿಡುಗಡೆ; ಪ್ರಾರಂಭಿಕ ಬೆಲೆ ಎಷ್ಟು?

Range Rover Velar: ಹೊಸ ರೇಂಜ್ ರೋವರ್ ವೆಲಾರ್ ಬಿಡುಗಡೆ; ಪ್ರಾರಂಭಿಕ ಬೆಲೆ ಎಷ್ಟು?

Range Rover Velar

Range Rover Velar

Range Rover Velar: ಹೊಸ ರೇಂಜ್ ರೋವರ್, ವೆಲಾರ್ 3ಡಿ ಸರೌಂಡ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಏರ್ ಸಸ್ಪೆನ್ಷನ್, PM2.5 ಫಿಲ್ಟರ್​ರೊಂದಿಗೆ ಕ್ಯಾಬಿನ್ ಏರ್ ಅಯಾನೈಸೇಶನ್ ಮತ್ತು ಹೊಸ ಪಿವಿ ಪ್ರೊ ಇನ್ಫೋಟೈನ್‍ಮೆಂಟ್ ಸಿಸ್ಟಮ್‍ನಂತಹ ಅತ್ಯಾಕರ್ಷಕ ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಮುಂದೆ ಓದಿ ...
 • Share this:

  ಬೆಂಗಳೂರು, (ಜೂನ್16): ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ, ಭಾರತದಲ್ಲಿ ಹೊಸ ರೇಂಜ್ ರೋವರ್ ವೆಲಾರ್ ವಿತರಣೆಯನ್ನು ಪ್ರಾರಂಭಿಸಿದೆ. ಹೊಸ ವೆಲಾರ್ ಇಂಜಿನಿಯಮ್ 2.0 ಲೀ. ಪೆಟ್ರೋಲ್ ಮತ್ತು ಡೀಸೆಲ್ ಪವರ್‍ಟ್ರೇನ್‍ಗಳಲ್ಲಿ ಆರ್-ಡೈನಾಮಿಕ್ ಎಸ್ ಟ್ರಿಮ್‍ನಲ್ಲಿ ಲಭ್ಯವಿದೆ. 2.0 ಲೀ ಪೆಟ್ರೋಲ್ ಎಂಜಿನ್ 184 ಕಿ.ವ್ಯಾ ಮತ್ತು 365 ಎನ್‍ಎಂ ಟಾರ್ಕ್ ಶಕ್ತಿಯನ್ನು ನೀಡುತ್ತದೆ ಮತ್ತು 2.0 ಎಲ್ ಡೀಸೆಲ್ ಎಂಜಿನ್ 150 ಕಿ.ವ್ಯಾ ಮತ್ತು 430 ಎನ್‍ಎಂ ಟಾರ್ಕ್ ಶಕ್ತಿಯನ್ನು ನೀಡುತ್ತದೆ. ಭಾರತದಲ್ಲಿ ಹೊಸ ರೇಂಜ್ ರೋವರ್ ವೆಲಾರ್ ಎಕ್ಸ್ ಶೋ ರೂಂ ಬೆಲೆಯನ್ನು 79.87 ಲಕ್ಷಕ್ಕೆ ನಿಗದಿಪಡಿಸಲಾಗಿದೆ.


  ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಅವರು ಮಾತನಾಡಿದ್ದು, ರೇಂಜ್ ರೋವರ್ ವೆಲಾರ್ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ SUVಗಳಲ್ಲಿ ಒಂದಾಗಿದೆ, ಏಕೆಂದರೆ ಇದು ಅವಂತ್-ಗಾರ್ಡ್ ವಿನ್ಯಾಸ, ಐಷಾರಾಮಿ ಮತ್ತು ತಂತ್ರಜ್ಞಾನದ ಅಸಾಮಾನ್ಯ ಮಿಶ್ರಣವಾಗಿದೆ. ಅದರ ಇತ್ತೀಚಿನ ರೂಪದಲ್ಲಿ, ಹೊಸ ತಂತ್ರಜ್ಞಾನ ಮತ್ತು ಅನುಕೂಲಕರ ವೈಶಿಷ್ಟ್ಯಗಳ ಪರಿಚಯದೊಂದಿಗೆ, ರೇಂಜ್ ರೋವರ್ ವೆಲಾರ್ ಎಂದಿಗಿಂತಲೂ ಹೆಚ್ಚು ಅಪೇಕ್ಷಣೀಯವಾಗಿದೆ ಎಂದು ಹೇಳಿದರು.


  Range Rover Velar


  ಹೊಸ ರೇಂಜ್ ರೋವರ್, ವೆಲಾರ್ 3ಡಿ ಸರೌಂಡ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಏರ್ ಸಸ್ಪೆನ್ಷನ್, PM2.5 ಫಿಲ್ಟರ್​ರೊಂದಿಗೆ ಕ್ಯಾಬಿನ್ ಏರ್ ಅಯಾನೈಸೇಶನ್ ಮತ್ತು ಹೊಸ ಪಿವಿ ಪ್ರೊ ಇನ್ಫೋಟೈನ್‍ಮೆಂಟ್ ಸಿಸ್ಟಮ್‍ನಂತಹ ಅತ್ಯಾಕರ್ಷಕ ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಹಿಂದೆಂದಿಗಿಂತಲೂ ಸ್ವಚ್ಛ, ಸುರಕ್ಷಿತ ಮತ್ತು ಸ್ಮಾರ್ಟ್ ಆಗಿದ್ದು, ತಾಂತ್ರಿಕವಾಗಿ ಸುಧಾರಿತ ಐಷಾರಾಮಿ SUVಗಳಲ್ಲಿ ಇದೂ ಒಂದಾಗಿದೆ.


  ಹೊಸ ರೇಂಜ್ ರೋವರ್ ವೆಲಾರ್ ಕುರಿತ ಹೆಚ್ಚಿನ ಮಾಹಿತಿಗಾಗಿ, www.landrover.in ಗೆ ಭೇಟಿ ನೀಡಿ


  -ಭಾರತದಲ್ಲಿ ಲ್ಯಾಂಡ್ ರೋವರ್ ಉತ್ಪನ್ನಗಳ ಪೋರ್ಟ್‍ಫೋಲಿಯೊ


  ಭಾರತದ ಲ್ಯಾಂಡ್ ರೋವರ್ ಶ್ರೇಣಿಯು 20MYRange Rover Evoqueï (@ 59.04 ಲಕ್ಷದಿಂದ ಪ್ರಾರಂಭ), Discovery Sport (@ 65.30 ಲಕ್ಷದಿಂದ ಪ್ರಾರಂಭ), New Range Rover Velar (@ 79.87 ಲಕ್ಷದಿಂದ ಪ್ರಾರಂಭ), Defender 110 (@ 83.38 ರಿಂದ ಪ್ರಾರಂಭ) ಲಕ್ಷ), Range Rover Sport (@ 91.27 ಲಕ್ಷದಿಂದ ಪ್ರಾರಂಭ) ಮತ್ತು Range Rover (@ 210.82 ಲಕ್ಷದಿಂದ ಪ್ರಾರಂಭ) ಗಳನ್ನು ಒಳಗೊಂಡಿದೆ. ಪ್ರಸ್ತಾಪಿಸಲಾದ ಎಲ್ಲಾ ಬೆಲೆಗಳು ಭಾರತದಲ್ಲಿನ ಎಕ್ಸ್ ಶೋರೂಮ್ ಬೆಲೆಗಳಾಗಿವೆ.


  -ಭಾರತದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಚಿಲ್ಲರೆ ವ್ಯಾಪಾರಿ ಜಾಲ


  ಜಾಗ್ವಾರ್ ಲ್ಯಾಂಡ್ ರೋವರ್ ವಾಹನಗಳು ಭಾರತದಲ್ಲಿ, ಅಹಮದಾಬಾದ್, ಔರಂಗಾಬಾದ್, ಬೆಂಗಳೂರು (3), ಭುವನೇಶ್ವರ, ಚಂಡೀಗರ್, ಚೆನ್ನೈ(2), ಕೊಯಮತ್ತೂರು, ದೆಹಲಿ, ಗುರಗಾಂವ್, ಹೈದರಾಬಾದ್, ಇಂದೋರ್, ಜೈಪುರ, ಕೊಲ್ಕತ್ತಾ , ಕೊಚಿನ್, ಕರ್ನಲ್, ಲಕ್ನೋ, ಲುಧಿಯಾನ, ಮಂಗಳೂರು, ಮುಂಬೈ (2), ನೋಯ್ಡಾ, ಪುಣೆ, ರಾಯ್‍ಪುರ, ಸೂರತ್ ಮತ್ತು ವಿಜಯವಾಡ ಸೇರಿದಂತೆ 24 ನಗರಗಳಲ್ಲಿನ 28 ಅಧಿಕೃತ ಮಳಿಗೆಗಳ ಮೂಲಕ ಲಭ್ಯವಿದೆ.

  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು