ರಾಖಿ ಹಬ್ಬದಂದು ನಿಮ್ಮ ಸಹೋದರಿಗೆ ಈ ಗಿಫ್ಟ್​ ನೀಡಿ

ನಿಮ್ಮ ಪ್ರೀತಿಯ ಸಹೋದರಿಗೆ ಗಿಫ್ಟ್​ ನೀಡಲು ಗ್ಯಾಜೆಟ್​ಗಳಿಗಿಂತ ಉತ್ತಮವಾದ ಗಿಫ್ಟ್​ ಮತ್ತೊಂದಿಲ್ಲ. ಆನ್​ಲೈನ್​ ಮಾರುಕಟ್ಟೆ ತಾಣವಾದ ಅಮೆಜಾನ್​, ಫ್ಲಿಪ್​ಕಾರ್ಟ್​ ಮಳಿಗೆಗಳು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ಟೆಷಲ್​ ಆಫರ್​ಗಳನ್ನು ನೀಡಿದೆ. ಅಂತೆಯೇ, ಕೆಲ ವಸ್ತುಗಳ ಮೇಲೆ ದರ ಕಡಿತ ಮಾರಾಟ ಮಾಡುತ್ತಿದೆ.

news18
Updated:August 15, 2019, 2:42 PM IST
ರಾಖಿ ಹಬ್ಬದಂದು ನಿಮ್ಮ ಸಹೋದರಿಗೆ ಈ ಗಿಫ್ಟ್​ ನೀಡಿ
ರೆಡ್​ಮಿ ನೋಟ್​ 7 ಪ್ರೊ
  • News18
  • Last Updated: August 15, 2019, 2:42 PM IST
  • Share this:
ದೇಶದೆಲ್ಲೆಡೆ 73ನೇ ಸ್ವಾತಂತ್ರ್ಯ ದಿನಾಚರಣೆ ಸರಗರದಿಂದ ಆಚರಿಸುತ್ತಿದ್ದಾರೆ. ಇನ್ನೊಂದೆಡೆ ಅಣ್ಣ-ತಂಗಿಯರ ಬಂಧನದ ಸಂಕೇತವಾಗಿ ರಾಖಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಸಹೋದರಿ ಪ್ರತಿ ವರ್ಷ ತನ್ನ ಸಹೋದರನಿಗೆ ಮಣಿಕಟ್ಟಿನ ರಾಖಿ ಎಂದು ಕರೆಯಲ್ಪಡುವ ಪವಿತ್ರ ದಾರವನ್ನು ಇಂದು ಕಟ್ಟುತ್ತಿದ್ದಾಳೆ. ಆಕೆ ಪ್ರೀತಿಯಿಂದ ಕಟ್ಟಿದ ರಾಖಿಗೆ ಅಣ್ಣ ಉಡುಗೊರೆಯನ್ನು ಕೊಡದಿದ್ದರೆ ಹೇಗೆ?

ನಿಮ್ಮ ಪ್ರೀತಿಯ ಸಹೋದರಿಗೆ ಗಿಫ್ಟ್​ ನೀಡಲು ಗ್ಯಾಜೆಟ್​ಗಳಿಗಿಂತ ಉತ್ತಮವಾದ ಗಿಫ್ಟ್​ ಮತ್ತೊಂದಿಲ್ಲ. ಆನ್​ಲೈನ್​ ಮಾರುಕಟ್ಟೆ ತಾಣವಾದ ಅಮೆಜಾನ್​, ಫ್ಲಿಪ್​ಕಾರ್ಟ್​ ಮಳಿಗೆಗಳು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ಟೆಷಲ್​ ಆಫರ್​ಗಳನ್ನು ನೀಡಿದೆ. ಅಂತೆಯೇ, ಕೆಲ ವಸ್ತುಗಳ ಮೇಲೆ ದರ ಕಡಿತ ಮಾರಾಟ ಮಾಡುತ್ತಿದೆ.

ಶಿಯೋಮಿ ಕಂಪೆನಿ ಕೂಡ ಗ್ರಾಹಕರಿಗಾಗಿ ‘ಮಿ ಸೂಪರ್​ ಸೇಲ್‘​ ಅನ್ನು ಆಯೋಜಿಸಿದೆ. ಇದರಲ್ಲಿ ಸ್ಮಾರ್ಟ್​ಫೋನ್​ಗಲಾದ ರೆಡ್ಮಿ ರೆಡ್ಮಿ ನೋಟ್ 7s, ರೆಡ್ಮಿ 7, ರೆಡ್ಮಿ Y3, ಮಿ A2 ಸ್ಮಾರ್ಟ್​ಫೋನ್​ ​ಗಳ ಮೇಲೆ ದರ ಕಡಿತ ಮಾರಾಟ ಮಾಡುತ್ತಿದೆ.

ರೆಡ್​​ಮಿ ನೋಟ್ 7S ಸ್ಮಾರ್ಟ್​ಫೋನ್​

ರೆಡ್​​ಮಿ ನೋಟ್ 7S ಸ್ಮಾರ್ಟ್​ಫೋನ್​ ಬೆಲೆ ಕಡಿತ ಮಾಡಿ ಮಾರಾಟ ಮಾಡುತ್ತಿದೆ. 3GB RAMಹಾಗೂ 32 GB ಸ್ಟೊರೇಜ್ ಹೊಂದಿರುವ ಸ್ಮಾರ್ಟ್​ಫೋನ್ ರೂ.9999 ಬೆಲೆಗೆ ದೊರಕುತ್ತಿದೆ. 4GB RAM ಹಾಗೂ 64 GB ಸ್ಟೊರೇಜ್ ಹೊಂದಿರುವ ಸ್ಮಾರ್ಟ್​ಫೋನ್ ರೂ. 11,999ಕ್ಕೆ ದೊರಕಲಿದೆ. ಮಿ ಸೂಪರ್ ಸೇಲ್​​ನಲ್ಲಿ ರೆಡ್ಮಿ ಸ್ಮಾರ್ಟ್​ಫೋನ್ ಮೇಲೆ 1,000 ರೂ. ದರ ಕಡಿತ ಮಾರಾಟ ಮಾಡುತ್ತಿದೆ. ಎಚ್​​ಡಿಎಫ್​​ಸಿ ಡೆಬಿಟ್ ಕಾರ್ಡ್ ಮೂಲಕ ಈ ಸ್ಮಾರ್ಟ್​ಫೋನ್ ಕೊಂಡರೆ ಶೇ.5ರಷ್ಟು ಕ್ಯಾಶ್​​ಬ್ಯಾಕ್​ ಆಫರ್ ನೀಡುತ್ತಿದೆ. ಜೊತೆಗೆ ಎಕ್ಸ್​​ಚೇಂಜ್​ ಆಫರ್ ಅನ್ನು ನೀಡಿದೆ.

ರೆಡ್​​ಮಿ ನೋಟ್ 7 ಪ್ರೋ ಸ್ಮಾರ್ಟ್​ಫೋನ್

​ ಮೇಲೂ ದರ ಕಡಿತ ಮಾರಾಟ ಮಾಡುತ್ತಿದೆ. 4GB RAM ಹಾಗೂ 64 GB ಸ್ಟೊರೇಜ್ ಹೊಂದಿರುವ ಸ್ಮಾರ್ಟ್​ಫೋನ್​ 13,999 ರೂ.ಗೆ ದೊರಕುತ್ತಿದೆ. ಅಂತೆಯೇ, 6GB RAM + 64GB ಸ್ಟೊರೇಜ್ ಹೊಂದಿರುವ ಸ್ಮಾರ್ಟ್​ಫೋನ್​ 14,999 ರೂ. ಗೆ ಮಾರಾಟ ಮಾಡುತ್ತಿದೆ. 6GB RAM +128GB ಸ್ಟೊರೇಜ್ ಹೊಂದಿರುವ ಸ್ಮಾರ್ಟ್​ಫೋನ್​ 16,999 ರೂ.ಗೆ ಸಿಗಲಿದೆ. ಅಂತೆಯೇ, 6GB RAM+64GB ಸ್ಮಾರ್ಟ್​ಫೋನ್​​ ಮೇಲೆ ರೂ. 1000 ಕಡಿತ ಮಾಡಿದೆ. ಜೊತೆಗೆ ಎಕ್ಸ್​​ಚೇಂಜ್​ ಆಫರ್ ಅನ್ನು ನೀಡಿದೆ.
Loading...

ರೆಡ್​​ಮಿ Y3 ಸ್ಮಾರ್ಟ್​ಫೋನ್

ರೆಡ್​​ಮಿ Y3 ಸ್ಮಾರ್ಟ್​ಫೋನ್​ 3GB RAM +32GBಸ್ಟೊರೇಜ್​​ನಲ್ಲಿ ಲಭ್ಯವಿದೆ. ಈ ಸ್ಮಾರ್ಟ್​ಫೋನ್​​ ಅನ್ನು ರೂ.8,999 ಗೆ ಮಾರಾಟ ಮಾಡುತ್ತಿದೆ. 4GB RAM+ 64GB ಸ್ಟೊರೇಜ್ ಹೊಂದಿರುವ ಸ್ಮಾರ್ಟ್​ಫೋನ್​ ರೂ. 11,999 ಗೆ ಸಿಗಲಿದೆ. ಜೊತೆಗೆ ಎಕ್ಸ್​ಚೇಂಜ್​ ಆಫರ್ ಅನ್ನು ನೀಡಿದೆ.

ರೆಡ್​​ಮಿ 7 ಸ್ಮಾರ್ಟ್​ಫೋನ್​

ಶಿಯೋಮಿ ಮಿ ಸೇಲ್​ನಲ್ಲಿ ರೆಡ್​​ಮಿ 7 ಸ್ಮಾರ್ಟ್​ಫೋನ್​ ಅನ್ನು ದರ ಕಡಿತ ಮಾರಾಟ ಮಾಡುತ್ತಿದೆ. 2GB RAM+32GB ಸ್ಟೊರೇಜ್ ಹೊಂದಿರುವ ಸ್ಮಾರ್ಟ್​ಫೋನ್​ ರೂ, 7,499 ಗೆ ಸಿಗಲಿದೆ. 3GB RAM +32GB ಸ್ಟೊರೇಜ್ ಹೊಂದಿರುವ ಸ್ಮಾರ್ಟ್​ಫೋನ್ ರೂ.8,499ಗೆ ಮಾರಾಟ ಮಾಡುತ್ತಿದೆ. ಅಂತೆಯೇ ಈ ಸ್ಮಾರ್ಟ್​ಫೋನ್ ನೀಲಿ, ಕಪ್ಪು, ಕೆಂಪು ಬಣ್ಣಗಳಲ್ಲಿ ದೊರಕುತ್ತಿದೆ. ಜೊತೆಗೆ ರೆಡ್ಮಿ 7 ಸ್ಮಾರ್ಟ್​ಫೋನ್ ಮೇಲೆ 500 ರೂ ಡಿಸ್ಕೌಂಟ್ ಹಾಗೂ ಎಚ್​​ಡಿಎಫ್​ಸಿ ಡೆಬಿಟ್ ಕಾರ್ಡ್ ಮೂಲಕ ಶೇ.5 ರಷ್ಟು ಕ್ಯಾಶ್​ಬ್ಯಾಕ್​​ ನೀಡುತ್ತಿದೆ

ರೆಡ್​​ಮಿ 7A ಸ್ಮಾರ್ಟ್​ಫೋನ್

ರೆಡ್​​ಮಿ 7A ಸ್ಮಾರ್ಟ್​ಫೋನ್​ ಕಡಿಮೆ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. 2GB RAM+16GB ಸ್ಟೊರೇಜ್ ಹೊಂದಿರುವ ಸ್ಮಾರ್ಟ್​ಫೋನ್​ ರೂ 5,999 ಗೆ ಮಾರಾಟ ಮಾಡುತ್ತಿದೆ. ಅಂತೆಯೇ, 2 GB RAM ಮತ್ತು 32GB ಸ್ಟೊರೇಜ್ ಹೊಂದಿರುವ ಸ್ಮಾರ್ಟ್​ಫೋನ್​ ರೂ. 6,199ಗೆ ಮಾರಾಟ ಮಾಡುತ್ತಿದೆ. ಜೊತೆಗೆ ಎಕ್ಸ್​​ಚೇಂಜ್​ ಆಫರ್ ಹಾಗೂ ಎಚ್​​ಡಿಎಫ್​ಸಿ ಡೆಬಿಟ್ ಕಾರ್ಡ್ ಮೂಲಕ ಶೇ.5 ರಷ್ಟು ಡಿಸ್ಕೌಂಟ್ ನೀಡುತ್ತಿದೆ.

 
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...