• Home
  • »
  • News
  • »
  • tech
  • »
  • PUBG India: ಭಾರತದಲ್ಲಿ ಮತ್ತೆ ಆರಂಭವಾಗಲಿದ್ಯಂತೆ PUBG, ಇನ್ಮುಂದೆ ಏನಿದ್ರು ವಿನ್ನರ್‌ ವಿನ್ನರ್‌ ಚಿಕನ್‌ ಡಿನ್ನರ್!

PUBG India: ಭಾರತದಲ್ಲಿ ಮತ್ತೆ ಆರಂಭವಾಗಲಿದ್ಯಂತೆ PUBG, ಇನ್ಮುಂದೆ ಏನಿದ್ರು ವಿನ್ನರ್‌ ವಿನ್ನರ್‌ ಚಿಕನ್‌ ಡಿನ್ನರ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ BGMI ಆಟ ಬಹಳ ಪ್ರಸಿದ್ಧಿಯನ್ನು ಹೊಂದಿದ್ದರಿಂದ ಹಲವಾರು ಅಭಿಮಾನಿಗಳು ಈ ಆಟದ ಬರುವಿಕೆಗಾಗಿ ಕಾಯುತ್ತಿದ್ದರು. ಅಂದಹಾಗೆ, ಬಿಜಿಎಂಐ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ.

  • Share this:

    ಇದು PUBG ಪ್ರಿಯರಿಗೆ ಶುಭಸುದ್ದಿ. ಇತ್ತೀಚಿಗೆ ಬ್ಯಾನ್‌ (Ban) ಆಗಿದ್ದ BGMIಯನ್ನು ಬೇರೆ ಹೆಸರಿನಿಂದ ಮತ್ತೆ ಆರಂಭ (Launch) ಮಾಡಲಿದ್ದಾರೆ ಎಂದು ಕೆಲವು ತಂತ್ರಜ್ಞರು ತಿಳಿಸಿದ್ದಾರೆ. ಈ BGMI ಯಾವಾಗ ರಿಲೀಸ್‌ (Release) ಆಗುತ್ತದೆಂದು ಇನ್ನೂ ಖಚಿತವಾಗಿಲ್ಲ. ಆದರೆ ಲಾಂಚ್ ಆಗುತ್ತದೆ ಎಂಬುದನ್ನು ಮಾತ್ರ ವರದಿ ಮಾಡಿದ್ದಾರೆ. ಇದು ಒಂದು ಕಾಲದಲ್ಲಿ ಹಲವಾರು ಗೇಮಿಂಗ್‌‌ (Gaming) ಅಭಿಮಾನಿಗಳ ನೆಚ್ಚಿನ ಆಟವಾಗಿತ್ತು. ಆದ್ದರಿಂದ ಈಗ ಮತ್ತೆ ಆರಂಭವಾಗುವುದರಿಂದ ಎಲ್ಲಾ ಬ್ಯಾಟಲ್‌ ಗ್ರೌಂಡ್ಸ್‌ ಮೊಬೈಲ್‌ ಇಂಡಿಯಾ ಗೇಮ್‌ಗಾಗಿ (Battlegrounds Mobile India) ಕಾಯುತ್ತಿದ್ದಾರೆ.


    ಈ ಆಟ ಬಹಳ ಪ್ರಸಿದ್ಧಿಯನ್ನು ಹೊಂದಿದ್ದರಿಂದ ಹಲವಾರು ಅಭಿಮಾನಿಗಳು ಈ ಆಟದ ಬರುವಿಕೆಗಾಗಿ ಕಾಯುತ್ತಿದ್ದರು. ಅಂದಹಾಗೆ, ಬಿಜಿಎಂಐ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ. ಈ ಆಟವು ಶೀಘ್ರದಲ್ಲೇ ಭಾರತದಲ್ಲಿ ಮತ್ತೆ ಹೊಸದಾಗಿ ಲಾಂಚ್‌ ಆಗಲಿದೆ ಎಂದು ವರದಿಯಾಗಿದೆ. ಹಲವಾರು ಪ್ರಸಿದ್ಧ ವ್ಯಕ್ತಿಗಳು ಈ ಆಟವು ಮತ್ತೆ ಭಾರತದಲ್ಲಿ ಬರಲಿದೆ ಎಂದು ಹೇಳಿಕೊಂಡಿದ್ದಾರೆ ಮತ್ತು ಬಿಡುಗಡೆಯ ಅಂದಾಜು ಟೈಮ್‌ಲೈನ್‌ಗಳನ್ನು ಸಹ ಮಾಡಿದ್ದಾರೆ. ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿ ನೀಡಲಾಗಿದೆ.


    ತಂತ್ರಜ್ಞರಿಂದ ಬಂದ ಹೇಳಿಕೆಗಳು


    ಭಾರತದಲ್ಲಿ ತಾಂತ್ರಿಕ ಗುರೂಜಿ ಎಂದು ಪ್ರಸಿದ್ಧರಾಗಿರುವ ಗೌರವ್ ಚೌಧರಿ ಅವರು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ವೀಕ್ಲಿ ಟೆಕ್ ಫೋಕಸ್ ವೀಡಿಯೊ ಸೀರಿಸ್‌ ಮಾಡುತ್ತಾರೆ. ಇದರ 12 ನೇ ಸಂಚಿಕೆಯಲ್ಲಿ BGMI ಈ ವರ್ಷದ ಅಂತ್ಯದ ವೇಳೆಗೆ ಮರಳಬಹುದು ಎಂದು ಹೇಳಿಕೊಂಡಿದ್ದಾರೆ.


    Pubg to start again in India Whats next Winner Winner Chicken Dinner
    ಸಾಂದರ್ಭಿಕ ಚಿತ್ರ


    ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಬಿಗ್‌ ಆಫರ್, ಮನೆಮಂದಿಗೆ ಗಿಫ್ಟ್‌ ಖರೀದಿಸೋಕೆ ಇದೆ ಚಾನ್ಸ್!


    “ಈ ಸುದ್ದಿ ಇಂದಿನ ನನ್ನ ನೆಚ್ಚಿನ ಸುದ್ದಿಯಾಗಿದೆ. ನಾವೆಲ್ಲರೂ ಬಹಳ ಸಮಯದಿಂದ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾದ ಮರುರಿಲೀಸ್‌ಗಾಗಿ ಕಾಯುತ್ತಿದ್ದೇವೆ. ಇದಲ್ಲದೆ BGMI 2022 ರ ಅಂತ್ಯದ ವೇಳೆಗೆ ಹೊಸ ವರ್ಷನ್‌ನಲ್ಲಿ ಬರಬಹುದು " ಎಂದು ಅವರು ಹೇಳಿಕೆ ನೀಡಿದ್ದಾರೆ.


    ಹೊಸ ರೂಪದಲ್ಲಿ ಬರಲಿದೆ ಪಬ್​ಜಿ!


    ಭಾರತದ ಎಸ್‌ಪೋರ್ಟ್ಸ್ ಕಮ್ಯುನಿಟಿಯ ಮತ್ತೊಬ್ಬ ಜನಪ್ರಿಯ ಯೂಟ್ಯೂಬರ್, ಪಿಯೂಷ್ 'ಸ್ಪೆರೋ' ಬತ್ಲಾ, ಡಿಸೆಂಬರ್ 2022 ರ ಮೊದಲು ಆಟವು ಬರುವುದಿಲ್ಲ. ವರ್ಷಾಂತ್ಯದ ವೇಳೆಗೆ ಅದನ್ನು ಮತ್ತೆ ಆರಂಭಿಸಬಹುದು ಎಂದು ವೀಡಿಯೊದಲ್ಲಿ ಸಲಹೆ ನೀಡಿದ್ದಾರೆ.


    ಇನ್‌ಸ್ಟಾಗ್ರಾಮ್ ಲೈವ್ ವಿಡಿಯೋದಲ್ಲಿ ಇದರ ಮುಖ್ಯ ಮೂಲವು ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಸಲಹೆ ನೀಡಿದೆ. ಆದರೆ ಹೊಸ ಭಾರತೀಯ ಕಂಪನಿ ಆಟವನ್ನು ಹೊಸ ಹೆಸರಿನೊಂದಿಗೆ ಬರುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಇದರ ಲಾಂಚಿಂಗ್ ಟೈಮ್‌ಲೈನ್ ಬಗ್ಗೆ ಅವರು ‌ಇನ್ನು ಖಚಿತವಿಲ್ಲದಿದ್ದರೂ, 2023 ರ ಮಧ್ಯದ ವೇಳೆಗೆ BGMI ಆಗಮಿಸಬಹುದು ಎಂದು ಅವರು ನಿರೀಕ್ಷಿಸಿದ್ದಾರೆ.


    Pubg to start again in India Whats next Winner Winner Chicken Dinner
    ಸಾಂದರ್ಭಿಕ ಚಿತ್ರ


    ಕರೆಕ್ಟ್‌ ಆಗಿ ಈವರೆಗೆ ಲಾಂಚಿಂಗ್‌ ದಿನಾಂಕ ಇನ್ನೂ ತಿಳಿದಿಲ್ಲವಾದರರೂ, BGMI ಭಾರತದಲ್ಲಿ ಬರುವುದಂತು ಖಚಿತ ಎಂದು ಹೇಳಿಕೆ ಕೊಡುತ್ತಿದ್ದಾರೆ. ಅದಲ್ಲದೆ ಈ ಆಟದ ಬರುವಿಕೆಗಾಗಿ ಕಾಯುತ್ತಿರುವ ಜನರಿಗೆ ಸದ್ಯದ ಮಟ್ಟಿಗೆ ಇದೇ ಒನದು ಗುಡ್‌ನ್ಯೂಸ್‌ ಆಗಿದೆ. ಆದರೂ ಇದರ ರಿಲೀಸ್‌ ಡೇಟ್‌ ಇನ್ನೂ ಹೇಳಿರದೇ ಇರುವುದರಿಂದ ಇದರ ಮುಂದಿನ ಸೂಚನೆಗಾಗಿ ಜನ ಕಾಯ್ತಾ ಇದ್ದಾರೆ.


    ಇದನ್ನೂ ಓದಿ: ಇಂಟರ್ನೆಟ್​ ಇಲ್ಲದೇ UPI ಪೇಮೆಂಟ್​ ಮಾಡ್ಬಹುದು! ಹೇಗೆ ಅಂತೀರಾ? ಇಲ್ಲಿದೆ ನೋಡಿ


    ಇನ್ನೊಂದು ವಿಷಯ ಏನೆಂದರೆ ಈ ವರ್ಷದ ಜುಲೈನಲ್ಲಿ ಭಾರತದಲ್ಲಿ BGMI ಅನ್ನು ಬ್ಯಾನ್‌ ಮಾಡಿದ್ದಾರೆ. ಇದರ ಜೊತೆಗೆ ಈ ಅಪ್ಲಿಕೇಶನ್‌ ಅನ್ನು Google Play Store ಮತ್ತು Apple Store ನಿಂದ ಕೂಡ ತೆಗೆದು ಹಾಕಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯಿದೆ 2000 ರ ಸೆಕ್ಷನ್‌ 69A ಅಡಿಯಲ್ಲಿ ಇದನ್ನು ನಿರ್ಭಂಧಿಸಲಾಗಿದೆ. ಇದು ಎರಡು ವರ್ಷಗಳ ಹಿಂದೆ PUBG Mobile ಮತ್ತು TIktok ಅನ್ನು ನಿಷೇಧಿಸಿದ ಕಾಯ್ದೆಯಾಗಿದೆ.

    Published by:Harshith AS
    First published: