PUBG: ಪಬ್​ಜಿ ಆಡಲು ಬರೋಬ್ಬರಿ 16 ಲಕ್ಷ ವ್ಯಯಿಸಿದ; ಪೋಷಕರ ಬ್ಯಾಂಕ್​ ಖಾತೆ ಖಾಲಿ

Pubg; ದೇಶದಲ್ಲಿ ಸಾಕಷ್ಟು ಜನರು ಆನ್​ಲೈನ್​ ಗೇಮ್​ ಪಬ್​ಜಿ ಮೊರೆ ಹೋಗುತ್ತಿದ್ದಾರೆ. ಲಾಕ್​ಡೌನ್​ ಅವಧಿಯಲ್ಲಿ  ಆನ್​ಲೈನ್​ ಗೇಮ್​ಗಳ ಬಳಕೆ ಮತ್ತು ಡೌನ್​ಲೋಡ್​ ಹೆಚ್ಚಾಗಿದೆ. ಅದರಲ್ಲಿ ಪಬ್​​ಜಿ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಿದೆ. ಅನೇಕರು ದಿನದ ಹೆಚ್ಚಿನ ಸಮಯವನ್ನು ಪಬ್​ಜಿಯಲ್ಲಿ ಕಳೆಯುತ್ತಿದ್ದಾರೆ. ಇಂತಹ ಸನ್ನಿವೇಶದ ನಡುವೆ ಪಂಜಾಬಿನ ಖರಾರ್​​ ಪ್ರದೇಶದ 17 ವರ್ಷದ ಯುವಕನೋರ್ವ ಪಬ್​ಜಿ ಗೇಮ್​ಗೆ 16 ಲಕ್ಷ ರೂಪಾಯಿಯನ್ನು ವ್ಯಯಿಸಿದ್ದಾನೆ ಎನ್ನಲಾಗಿದೆ.

news18-kannada
Updated:July 4, 2020, 3:02 PM IST
PUBG: ಪಬ್​ಜಿ ಆಡಲು ಬರೋಬ್ಬರಿ 16 ಲಕ್ಷ ವ್ಯಯಿಸಿದ; ಪೋಷಕರ ಬ್ಯಾಂಕ್​ ಖಾತೆ ಖಾಲಿ
PUBG
  • Share this:
ಕೇಂದ್ರ ಸರ್ಕಾರ ಚೀನಾ ಮೂಲದ 59 ಆ್ಯಪ್​ಗಳನ್ನು ಭಾರತದಲ್ಲಿ ಬ್ಯಾನ್​ ಮಾಡಿದೆ. ಮತ್ತೊಂದೆಡೆ ದಕ್ಷಿಣ ಕೊರಿಯಾದ ಜನಪ್ರಿಯ ಗೇಮ್​ ಪಬ್​ಜಿ (ಪ್ಲೇಯರ್ಸ್​​ ಅನೌನ್ಸ್​ ಬ್ಯಾಟಲ್​ಗ್ರೌಂಡ್​​) ಕೂಡ ಬ್ಯಾನ್​ ಮಾಡಬೇಕೆಂಬ ಕೂಗು ಭಾರತದಲ್ಲಿ ಕೇಳಿಬರುತ್ತಿದೆ. ಪಾಕಿಸ್ತಾನ ಈಗಾಗಲೇ ಪಬ್​ಜಿ ಗೇಮ್​ಗೆ ನಿರ್ಬಂಧ ಹೇರಿದೆ. ಹೀಗಿರುವಾಗ ಪಂಜಾಬಿನಲ್ಲಿ ಪಬ್​ಜಿ ಕುರಿತಾದ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.

ದೇಶದಲ್ಲಿ ಸಾಕಷ್ಟು ಜನರು ಆನ್​ಲೈನ್​ ಗೇಮ್​ ಪಬ್​ಜಿ ಮೊರೆ ಹೋಗುತ್ತಿದ್ದಾರೆ. ಲಾಕ್​ಡೌನ್​ ಅವಧಿಯಲ್ಲಿ  ಆನ್​ಲೈನ್​ ಗೇಮ್​ಗಳ ಬಳಕೆ ಮತ್ತು ಡೌನ್​ಲೋಡ್​ ಹೆಚ್ಚಾಗಿದೆ. ಅದರಲ್ಲಿ ಪಬ್​​ಜಿ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಿದೆ. ಅನೇಕರು ದಿನದ ಹೆಚ್ಚಿನ ಸಮಯವನ್ನು ಪಬ್​ಜಿಯಲ್ಲಿ ಕಳೆಯುತ್ತಿದ್ದಾರೆ. ಇಂತಹ ಸನ್ನಿವೇಶದ ನಡುವೆ ಪಂಜಾಬಿನ ಖರಾರ್​​ ಪ್ರದೇಶದ 17 ವರ್ಷದ ಯುವಕನೋರ್ವ ಪಬ್​ಜಿ ಗೇಮ್​ಗೆ 16 ಲಕ್ಷ ರೂಪಾಯಿಯನ್ನು ವ್ಯಯಿಸಿದ್ದಾನೆ ಎನ್ನಲಾಗಿದೆ.

ಪಬ್​ಜಿ (PUBG-Player Unknown Battleground) ಗೇಮ್​ ಆರ್ಥಿಕವಾಗಿಯೂ ಹಿಗ್ಗುತ್ತಿದೆ. ಬಳಕೆದಾರರು ಈ ಗೇಮ್​ನಲ್ಲಿ ವಿವಿಧ ಆಯುಧ ಮುಂತಾದವುಗಳನ್ನು ಖರೀದಿಸಲು ಹಣವನ್ನು ವ್ಯಯಿಸಬೇಕಾಗುತ್ತದೆ. ಅದರಂತೆ ಈ ಯುವಕ ಕೂಡ ಮೂರು ಬ್ಯಾಂಕ್​ ಖಾತೆಯನ್ನು ಬಳಸಿಕೊಂಡು 16 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ.

ಯುವಕ ದಿನದ ಹೆಚ್ಚಿನ ಸಮಯದವನ್ನು ಪಬ್​ಜಿಯಲ್ಲಿ ಕಳೆಯುತ್ತಿದ್ದ. ತಾಯಿಯ ಮೊಬೈಲ್ ಬಳಸಿಕೊಂಡು ಪಬ್​​ಜಿ ಆಡುತ್ತಿದ್ದ. ಹೀಗಿರುವಾಗ ಗೇಮ್​ ಆ್ಯಪ್​​ ಖರೀದಿಸಲು ಹಣ ನೀಡಿದ್ದಾನೆ. ಮೂರು ಬ್ಯಾಂಕ್​ ಖಾತೆಯ ಮೂಲಕ 16 ಲಕ್ಷ ರೂಪಾಯಿ ವ್ಯಯ ಮಾಡಿದ್ದಾನೆ. ಅಷ್ಟೇ ಅಲ್ಲದೆ ತಂದೆಯ ಪಿಎಫ್​ ಖಾತೆಯಿಂದ ಹಣ ಖರ್ಚು ಮಾಡಿದ್ದಾನೆ. ಬ್ಯಾಂಕ್​ ವಹಿವಾಟಿನ ವಿಚಾರ ಮನೆಯವರಿಗೆ ತಿಳಿಯಬಾರದೆಂಬ ಕಾರಣಕ್ಕೆ ಮೆಸೇಜ್​ ಅಳಿಸಿ ಹಾಕುತ್ತಿದ್ದ ಎಂದು ತಿಳಿದು ಬಂದಿದೆ.

ತಮಿಳು ನಟ ವಿಶಾಲ್​ಗೆ 45 ಲಕ್ಷ ರೂ ಟೋಪಿ; ತನ್ನದೇ ಸಂಸ್ಥೆಯ ಮಹಿಳಾ ಉದ್ಯೋಗಿಯಿಂದ ವಂಚನೆ

ಸ್ಯಾಮ್​ಸಂಗ್​​ ಈ ಸ್ಮಾರ್ಟ್​ಫೋನಿನ ಮೇಲೆ 7 ಸಾವಿರ ರೂ ಡಿಸ್ಕೌಂಟ್​​​​!
Published by: Harshith AS
First published: July 4, 2020, 2:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading