ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ, ಇದು ಪಬ್‌ಜಿ ಮೊಬೈಲ್ ಇಂಡಿಯಾ ಅವತರಣಿಕೆಯಾಗಿದ್ದು ಇದರ ನಿರ್ಮಾತನಾಗಿರುವ ಕ್ರಾಫ್ಟನ್‌ಗೆ ಇದೀಗ ಸಮಸ್ಯೆಯೊಂದು ತಲೆದೋರಿದೆ. ವರದಿಯ ಪ್ರಕಾರ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಚೈನಾದಲ್ಲಿರುವ ಸರ್ವರ್‌ಗಳಿಗೆ ಭಾರತೀಯ ಆಂಡ್ರಾಯ್ಡ್ ಆಟಗಾರರ ಮಾಹಿತಿಯನ್ನು ಕಳುಹಿಸುತ್ತಿದೆ ಎಂಬುದು ತಿಳಿದು ಬಂದಿದೆ. ಪಬ್‌ಜಿ ಮೊಬೈಲ್‌ನ ಪಬ್ಲಿಶರ್ ಆಗಿರುವ ಟೆನ್ಸೆಂಟ್ ಕೂಡ ಇದರಲ್ಲಿ ಒಳಗೊಂಡಿದೆ. ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಸಂವಹನ ನಡೆಸಲು ಬಳಸುವ ಸರ್ವರ್‌ಗಳಲ್ಲಿ ಚೀನಾ ಮೊಬೈಲ್ ಸಂವಹನಗಳು ಹೆಚ್ಚು ಬಳಕೆಯಾಗಿರುವುದರಲ್ಲಿ ಒಂದಾಗಿದೆ. ಹಾಂಗ್ ಕಾಂಗ್, ಮಾಸ್ಕೋ, ಯುಎಸ್ ಮತ್ತು ಮುಂಬೈನಲ್ಲಿರುವ ಸರ್ವರ್‌ಗಳ ನಡುವೆ ಡೇಟಾವನ್ನು ಪಬ್‌ಜಿ ಮೊಬೈಲ್ ಇಂಡಿಯಾ ಆವೃತಿ ಸೋರಿಕೆ ಮಾಡುತ್ತಿದೆ ಎಂಬುದು ವರದಿಯಾಗಿದೆ.
ಐಜಿಎನ್ ಇಂಡಿಯಾದ ವರದಿಯ ಪ್ರಕಾರ, ಕೆಲವು ಬ್ಯಾಟಲ್ಗ್ರೌಂಡ್ ಮೊಬೈಲ್ ಇಂಡಿಯಾ ಆಟಗಾರರನ್ನು ಉಲ್ಲೇಖಿಸಿ ಮತ್ತು ಸ್ವತಂತ್ರ ಪರಿಶೀಲನೆ ನಡೆಸಿದೆ ಎಂದು ಹೇಳಿಕೊಂಡ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಮತ್ತು ಕ್ರಾಫ್ಟನ್ ಕಳೆದ ವರ್ಷ ಪಬ್‌ಜಿ ಮೊಬೈಲ್ ಇಂಡಿಯಾದ ಅಸಂಗತತೆಯನ್ನು ಘೋಷಿಸಿತು ಮತ್ತು ಕಳೆದ ವಾರ ಆಂಡ್ರಾಯ್ಡ್ ಬಳಕೆದಾರರಿಗೆ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಿಡುಗಡೆಗೊಂಡಿತು. ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾದಲ್ಲಿ ಮ್ಯಾಚ್ ಅನ್ನು ಆಡುವ ಮುನ್ನ ಐಜಿಎನ್ ಇಂಡಿಯಾ ಡೇಟಾ ಪ್ಯಾಕೆಟ್ ಸ್ನಿಫರ್ ಅನ್ನು ಬಳಸಿದೆ, ಇದರಿಂದ ಗೇಮ್ ಡೇಟಾವನ್ನು ಸರ್ವರ್‌ಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದೆ ಎಂಬುದು ತಿಳಿದು ಬಂದಿದೆ. ರಾಜ್ಯದ ಅಧೀನಕ್ಕೆ ಒಳಪಡುವ ಟೆಲಿಕಾಂ ಕಂಪೆನಿ ಮಾತ್ರವಲ್ಲದೆ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಟೆನ್ಸೆಂಟ್ ಸರ್ವರ್‌ಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸಿದೆ.
ಟೆನ್ಸೆಂಟ್‌ನ ಅಧೀನದಲ್ಲಿರುವ ಕ್ಲೌಡ್ ಪ್ಲಾಟ್‌ಫಾರ್ಮ್ ಕ್ಯೂಕ್ಲೌಡ್‌ಗೆ ಲಿಂಕ್ ಆಗಿರುವ ಸರ್ವರ್ ಹೆಸರು ಪಿಂಗ್ ಸರ್ವರ್ ಎಂದಾಗಿದೆ. ಇದು ಟೆನ್ಸೆಂಟ್‌ನ ಆ್ಯಂಟಿ ಸರ್ವರ್ ಆಗಿದ್ದು ಇದನ್ನು ಪಬ್‌ಜಿ ಬಳಕೆದಾರರು ಗೇಮ್‌ನಲ್ಲಿರುವ ಚೀಟರ್‌ಗಳನ್ನು ಕ್ರ್ಯಾಕ್ ಡೌನ್ ಮಾಡಲು ಬಳಸುತ್ತಾರೆ. ಐಪಿ ವಿಳಾಸದಲ್ಲಿರುವ ನಿದರ್ಶನಗಳು ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಚೀನಾಕ್ಕೆ ಡೇಟಾವನ್ನು ಕಳುಹಿಸುತ್ತಿದೆ. ಆದರೆ ಇದು ಯಾವ ಉದ್ದೇಶಕ್ಕೆ ಮಾಹಿತಿಯನ್ನು ಕಲೆಹಾಕುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಚೀನಾ ಅಲ್ಲದೆ ಯುಎಸ್, ಮಾಸ್ಕೋ, ಟೆನ್ಸೆಂಟ್ ಚಾಲನೆಯಲ್ಲಿರುವ ಪ್ರೊಕ್ಸಿಮಾ ಬೀಟಾ ಇರುವ ಹಾಂಗ್‌ಕಾಂಗ್ ಸರ್ವರ್‌ಗಳಲ್ಲಿದೆ. ಆದರೆ ಇದೆಲ್ಲವೂ ಕ್ರಾಫ್ಟನ್ ಭರವಸೆ ನೀಡಿರುವುದರ ವಿರುದ್ಧವಾಗಿದೆ. ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಗೆ ಬೆದರಿಕೆ ಹಾಕಿದ್ದಕ್ಕಾಗಿ ಭಾರತವು ಪಬ್‌ಜಿ ಮತ್ತು ಇತರ 117 ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಈ ಅಪ್ಲಿಕೇಶನ್‌ಗಳು ಚೀನಾದೊಂದಿಗೆ ಅನುಸರಣೆ ಹೊಂದಿರುವುದು ಇದಕ್ಕೆ ಕಾರಣವಾಗಿದೆ. ಹೀಗಾಗಿ ಅಪ್ಲಿಕೇಶನ್‌ಗಳಿಗೆ ನಿರ್ಬಂಧ ಹೇರಿದ್ದರೂ ಇವುಗಳನ್ನು ರಚಿಸುವ ಕಂಪೆನಿಗಳಿಗೆ ನಿರ್ಬಂಧ ಹೇರಿಲ್ಲವಾದ್ದರಿಂದ ಟೆನ್ಸೆಂಟ್ ಮತ್ತು ಇತರ ಚೀನಾ ಕಂಪೆನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉದ್ಯೋಗಿಗಳ ಕಡಿತ ಮತ್ತು ನಷ್ಟವನ್ನುಂಟು ಮಾಡುವ ಕೆಲಸಗಳನ್ನು ಸ್ಥಗಿತಗೊಳಿಸಬೇಕಿತ್ತು. ಬ್ಯಾಟಲ್ ಗ್ರೌಂಡ್ಸ್ ಮಾಹಿತಿಗಳನ್ನು ರವಾನಿಸುತ್ತಿದೆ ಎಂಬುದು ನಿಜವಾದರೆ ಪಬ್‌ಜಿ ಕೂಡ ಭಾರತದಲ್ಲಿ ನಿಷೇಧವಾಗುವುದು ಖಂಡಿತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ