Pubg mobile india series 2020: ಪಬ್​ಜಿ ಪ್ರಿಯರಿಗಾಗಿ ಮೊಬೈಲ್ ಇಂಡಿಯಾ ಸೀರಿಸ್​​; ವಿಜೇತರಿಗೆ 50 ಲಕ್ಷ ಬಹುಮಾನ!

Pubg: ಟೆನ್ಸೆಂಟ್ ಗೇಮ್ಸ್ ಮತ್ತು ಪಬ್​ಜಿ ಕಾರ್ಪ್ ಸಹಯೋಗದಲ್ಲಿ ನಡೆಯುವ  ಎರಡನೇ ಸರಣಿ ಇದಾಗಿದ್ದು, ಎಲ್ಲರಿಗೂ ಮುಕ್ತವಾಗಿರುವ ಟೂರ್ನಮೆಂಟ್ ಆಗಿದೆ. ಇಸ್ಪೋರ್ಟ್ಸ್ ಇಕೋಸಿಸ್ಟಮ್ ವಿಭಾಗದಲ್ಲಿ ತನ್ನದೇ ಛಾಪು ಮೂಡಿಸಿರುವ ಪಬ್​ಜಿ ಮೊಬೈಲ್ ಭಾರತದಲ್ಲಿ ಕುತೂಹಲಕಾರಿಯಾದ ಅವಕಾಶಗಳನ್ನು ಆಟಗಾರರಿಗೆ ನೀಡಲಿದೆ. ಇದು ಕೌಶಲ್ಯ ಆಧಾರಿತ ಗೇಮ್ ಆಗಿದ್ದು, ಈ ಟೂರ್ನಮೆಂಟ್ ಅನ್ನು ಕಳೆದ ವರ್ಷ ಡಿಜಿಟಲ್ ಚಾನೆಲ್ ಗಳಲ್ಲಿ 50 ದಶಲಕ್ಷಕ್ಕೂ ಅಧಿಕ ಮಂದಿ ಇಷ್ಟಪಟ್ಟಿದ್ದರು.

news18-kannada
Updated:May 8, 2020, 6:36 PM IST
Pubg mobile india series 2020: ಪಬ್​ಜಿ ಪ್ರಿಯರಿಗಾಗಿ ಮೊಬೈಲ್ ಇಂಡಿಯಾ ಸೀರಿಸ್​​; ವಿಜೇತರಿಗೆ 50 ಲಕ್ಷ ಬಹುಮಾನ!
ಪಬ್​ಜಿ ಮೊಬೈಲ್ ಇಂಡಿಯಾ ಸರಣಿ
  • Share this:
ಪಬ್​ಜಿ ಪ್ರಿಯರಿಗಾಗಿ ಮೊಬೈಲ್ ಇಂಡಿಯಾ ಸೀರಿಸ್ ಮತ್ತೆ ಬಂದಿದೆ. ಕಳೆದ ವರ್ಷ ಟೆನ್ಸೆಂಟ್ ಗೇಮ್ಸ್ ಮತ್ತು ಪಬ್ ಜಿ ಕಾರ್ಪ್ ಸಹಯೋಗದಲ್ಲಿ ಪಬ್​ಜಿ ಸೀರೀಸ್ ನಡೆಸಿ ಯಶಸ್ವಿಯಾಗಿತ್ತು. ಇದೀಗ ಈ ಎರಡು ಸಂಸ್ಥೆಗಳು 2020ರ ಪಬ್​ಜಿ ಮೊಬೈಲ್ ಇಂಡಿಯಾ ಸರಣಿಯನ್ನು ಮತ್ತೆ ತರುತ್ತಿದೆ.

ಟೆನ್ಸೆಂಟ್ ಗೇಮ್ಸ್ ಮತ್ತು ಪಬ್​ಜಿ ಕಾರ್ಪ್ ಸಹಯೋಗದಲ್ಲಿ ನಡೆಯುವ  ಎರಡನೇ ಸರಣಿ ಇದಾಗಿದ್ದು, ಎಲ್ಲರಿಗೂ ಮುಕ್ತವಾಗಿರುವ ಟೂರ್ನಮೆಂಟ್ ಆಗಿದೆ. ಇಸ್ಪೋರ್ಟ್ಸ್ ಇಕೋಸಿಸ್ಟಮ್ ವಿಭಾಗದಲ್ಲಿ ತನ್ನದೇ ಛಾಪು ಮೂಡಿಸಿರುವ ಪಬ್​ಜಿ ಮೊಬೈಲ್ ಭಾರತದಲ್ಲಿ ಕುತೂಹಲಕಾರಿಯಾದ ಅವಕಾಶಗಳನ್ನು ಆಟಗಾರರಿಗೆ ನೀಡಲಿದೆ. ಇದು ಕೌಶಲ್ಯ ಆಧಾರಿತ ಗೇಮ್ ಆಗಿದ್ದು, ಈ ಟೂರ್ನಮೆಂಟ್ ಅನ್ನು ಕಳೆದ ವರ್ಷ ಡಿಜಿಟಲ್ ಚಾನೆಲ್ ಗಳಲ್ಲಿ 50 ದಶಲಕ್ಷಕ್ಕೂ ಅಧಿಕ ಮಂದಿ ಇಷ್ಟಪಟ್ಟಿದ್ದರು.

ಪಬ್ ಜಿ ಮೊಬೈಲ್ ಇಂಡಿಯಾ ಸೀರೀಸ್ ದೇಶದ ಹಲವಾರು ವೃತ್ತಿಪರ ಇಸ್ಪೋರ್ಟ್ಸ್ ಆಟಗಾರರಿಗೆ ಒಂದು ನಿರ್ಣಾಯಕ ಅಡಿಪಾಯವಾಗಿದೆ. ಈ ಟೂರ್ನಮೆಂಟ್ ಹಲವಾರು ಭರವಸೆಯ ಆಟಗಾರರಿಗೆ ಉತ್ತಮ ವೇದಿಕೆಯಾಗಿದ್ದು, ಅವರು ಭಾರತದ ಮುಂದಿನ ಪಬ್​ಜಿ ಮೊಬೈಲ್ ಹೀರೋ ಆಗಲು ನೆರವಾಗಲಿದೆ.

ಮಾದರಿ ಮತ್ತು ಅರ್ಹರು

ಪಬ್​ಜಿ ಮೊಬೈಲ್ ಇಂಡಿಯಾ ಸರಣಿ ಎಲ್ಲರಿಗೂ ಮುಕ್ತವಾಗಿದೆ. ಇನ್-ಗೇಮ್ ಕ್ವಾಲಿಫೈಯರ್ ಗಳು ಆನ್ ಲೈನ್ ಕ್ವಾಲಿಫೈಯರ್ ಗಳಿಗಾಗಿ ಸ್ಪರ್ಧಿಸಲಿದ್ದಾರೆ. ಪ್ರತಿ ನೋಂದಾಯಿತ ಸ್ವಾಡ್ 15 ಪಂದ್ಯಗಳನ್ನು ಆಡಬೇಕು. ಇದರಲ್ಲಿ ಅತ್ಯುತ್ತಮ 10 ಪಂದ್ಯಗಳನ್ನು  ಅರ್ಹತೆಗೆ ಪರಿಗಣಿಸಲಾಗುತ್ತದೆ.

ಇನ್-ಗೇಮ್ ಅರ್ಹತೆ ಸುತ್ತಿನ 248 ತಂಡಗಳು ಮತ್ತು ಇತರೆ 8 ನೇರ ಆಹ್ವಾನಿತ  ತಂಡಗಳು ಸೇರಿ ಒಟ್ಟು 256 ತಂಡಗಳು ಆನ್ ಲೈನ್ ಕ್ವಾಲಿಫೈಯರ್ ನಲ್ಲಿ ಸ್ಪರ್ಧಿಸಲಿವೆ. ಪ್ರತಿ ತಂಡಗಳು ತಲಾ 2 ಪಂದ್ಯಗಳನ್ನು ಆಡಲಿದ್ದು, ಲೀಡರ್ ಬೋರ್ಡ್ ಪಡೆಯಲು ಸೆಣಸಲಿವೆ. ಈ ಮೂಲಕ ಟಾಪ್ 3 ಸ್ಲಾಟ್ ಗಳನ್ನು ಹೊಂದುವ ಗುಂಪುಗಳು ಕ್ವಾರ್ಟರ್ ಫೈನಲ್ ಗೆ ಅರ್ಹತೆ ಹೊಂದಲಿವೆ.

ಕ್ವಾರ್ಟರ್ ಫೈನಲ್ ಗಳಲ್ಲಿ ಒಟ್ಟು 64 ತಂಡಗಳಿದ್ದು, ಆನ್ ಲೈನ್ ಅರ್ಹತೆಯಲ್ಲಿ ಸ್ಪರ್ಧಿಸಲಿವೆ. ಈ ಪೈಕಿ ಟಾಪ್ 48 ತಂಡಗಳು ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶ ಪಡೆಯಲಿವೆ. ಈ ಕ್ವಾರ್ಟರ್ ಫೈನಲ್ ನಲ್ಲೂ ಸಹ 8 ಆಹ್ವಾನಿತ ತಂಡಗಳಿರುತ್ತವೆ. ಈ ತಂಡಗಳನ್ನು ಟಾಪ್ ಕಿಲ್ಸ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ತಂಡಗಳು ಸೆಮಿಫೈನಲ್ ತಲುಪಲು 4 ದಿನಗಳ ಕಾಲ ಲೀಡರ್ ಬೋರ್ಡ್ ನಲ್ಲಿನ ಟಾಪ್ 32 ಸ್ಲಾಟ್ ಗಳನ್ನು ಪಡೆಯಲು ಸೆಣಸಲಿವೆ. ಕ್ವಾರ್ಟರ್ ಫೈನಲ್ ನ ಟಾಪ್ 32 ತಂಡಗಳು ಕ್ವಾರ್ಟರ್ ಫೈನಲ್ಸ್ ನಲ್ಲಿ ಸ್ಪರ್ಧಿಸಲಿವೆ.50 ಲಕ್ಷ ಬಹುಮಾನ!

ಹಳೆಯ ತಂಡಗಳು ಮತ್ತು ಹೊಸ ಪ್ರತಿಭಾನ್ವಿತ ಯುವ ತಂಡಗಳ ಸಮ್ಮಿಳಿತದೊಂದಿಗೆ ಈ ಬಾರಿ ಆರೋಗ್ಯಕರವಾದ ಸ್ಪರ್ಧೆ ಏರ್ಪಡಲಿದೆ. ತಂಡಗಳು ಟಾಪ್ 16 ಸ್ಲಾಟ್ ಗಳಲ್ಲಿ ಸೆಣಸಾಟ ನಡೆಸಲಿದ್ದು, ಈ ಟಾಪ್ 16 ತಂಡಗಳು ಫೈನಲ್ಸ್ ನಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿವೆ. ಇದರಲ್ಲಿ ವಿಜಯಶಾಲಿಯಾಗಲಿರುವ ತಂಡಗಳಿಗೆ ಒಟ್ಟು ಬರೋಬ್ಬರಿ 50 ಲಕ್ಷ ರೂಪಾಯಿಗಳ ಬಹುಮಾನ ದೊರೆಯಲಿದೆ. 3 ದಿನಗಳ ಕಾಲ 18 ಪಂದ್ಯಗಳನ್ನು ಆಡಲಿರುವ ಈ ತಂಡಗಳ ಪೈಕಿ ವಿಜೇತರಾಗುವ ತಂಡಕ್ಕೆ ಚಾಂಪಿಯನ್ ಪಟ್ಟ ನೀಡಲಾಗುತ್ತದೆ.

ಟೆನ್ಸೆಂಟ್ ಗೇಮ್ಸ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕರಾದ ಅನೀಶ್ ಅರವಿಂದ ಅವರು ಈ ಬಗ್ಗೆ ಮಾತನಾಡಿದ್ದು, ‘ಪಬ್​ಜಿ ಮೊಬೈಲ್ ಸಿರೀಸ್​ಗೆ ಭಾರತದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸ ಮತ್ತು ಅತ್ಯುತ್ತಮ ಮಾರ್ಗದಲ್ಲಿ ನಮ್ಮ ಆಟಗಾರರಿಗೆ ಸವಾಲು ಮತ್ತು ಮನೋರಂಜನೆಯನ್ನು ನೀಡಲು ಪ್ರೇರಣೆಯಾಗಿದೆ. ನಾವು ಕಳೆದ ವರ್ಷ ಮೊದಲ ಬಾರಿಗೆ ಭಾರತದಲ್ಲಿ ಎಲ್ಲರಿಗೂ ಮುಕ್ತವಾದ ಇ-ಸ್ಪೋರ್ಟ್ಸ್ ಟೂರ್ನಮೆಂಟ್ ಗಳನ್ನು ಆರಂಭಿಸಿದ್ದೆವು. ಕಳೆದ ವರ್ಷದ  ಪಬ್​ಜಿ ಮೊಬೈಲ್ ಇಂಡಿಯಾ ಸೀರೀಸ್ ನಲ್ಲಿ 5,75,000 ಮಂದಿ ಸ್ಪರ್ಧೆ ನಡೆಸಿದ್ದರು. ಇದು ಹಲವಾರು ಪ್ರತಿಭಾನ್ವಿತ ಆಟಗಾರರಿಗೆ ಅಡಿಪಾಯವಾಗಿತ್ತು ಎಂದು ಹೇಳಿದರು.

ನಂತರ ಮಾತು ಮುಂದುವರಿಸಿದ ಅವರು ‘ಇ-ಸ್ಪೋರ್ಟ್ಸ್ ಇಕೋಸಿಸ್ಟಂ ಮತ್ತು ಪಬ್ ಜಿ ಮೊಬೈಲ್ ಆಟಗಾರರು ಕಳೆದ ಒಂದು ವರ್ಷದಲ್ಲಿ ಬಹುದೂರ ಸಾಗಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಅವರಿಗೆ ವೇಗ ತುಂಬಿ ಅವರ ಬೆಳವಣಿಗೆಯನ್ನು ಇನ್ನೂ ಹೆಚ್ಚು ಮಾಡಲು ಬಯಸಿದ್ದೇವೆ. ನಮ್ಮ ಪಿಎಂಐಎಸ್ 2020 ಆಟಗಾರರಿಗೆ ಮತ್ತು ತಂಡಗಳಿಗೆ ಪ್ರೇರಣೆಯನ್ನು ನೀಡಲಿದೆ‘ಎಂದು ತಿಳಿಸಿದರು.

ಪಬ್​ಜಿ ಪ್ರಿಯರು ಮೊಬೈಲ್ ಇಂಡಿಯಾ ಸೀರೀಸ್ ಭಾಗವಹಿಸಲು ನೋಂದಣಿ ಮಾಡಬೇಕು. ಈ ನೋಂದಣಿಗಳನ್ನು ಆನ್ ಲೈನ್-ಕಟ್ ಆಫ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುವ ತಂಡಕ್ಕೆ 20,00,000 ರೂಪಾಯಿ, ಎರಡನೇ ಬಹುಮಾನ ಪಡೆಯುವ ತಂಡಕ್ಕೆ 5,00,000 ರೂಪಾಯಿ ಹಾಗೂ ಮೂರನೇ ತಂಡಕ್ಕೆ 3,00,000 ರೂಪಾಯಿ ನಗದು ಬಹುಮಾನ ದೊರೆಯಲಿದೆ. ಇದಲ್ಲದೇ, ಮೊದಲ 16 ಸ್ಥಾನಗಳನ್ನು ಗಳಿಸುವ ಎಲ್ಲಾ ತಂಡಗಳಿಗೂ ನಗದು ಬಹುಮಾನ ಸಿಗಲಿದೆ. ಆಸಕ್ತರು www.pubgmobile.in ಸೈಟ್​ಗೆ ಭೇಟಿ ನೀಡಿ ನೊಂದಾಣಿ ಮಾಡಬಹುದಾಗಿದೆ.  ಮೇ.6 ರಿಂದ  17 ಮೇ ವರೆಗೆ ನೊಂದಾಣಿ ಮಾಡಲು ಅವಕಾಶ ನೀಡಿದೆ.

Read Along App: ಮಕ್ಕಳ ಓದುವ ಕೌಶಲ್ಯ ಅಭಿವೃದ್ಧಿ ಪಡಿಸಬೇಕೆ?; ರೀಡ್​ ಅಲಾಂಗ್​​ ಆ್ಯಪ್ ​ಬಳಸಿ!

 

 
First published: May 8, 2020, 6:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading