Tencent ಜೊತೆಗಿನ ಒಪ್ಪಂದ ರದ್ದು ಹಿನ್ನಲೆ; ಯಾರಾಗಲಿದ್ದಾರೆ ಭಾರತದಲ್ಲಿ ಪಬ್​ಜಿ ಪಾರ್ಟ್​ನರ್

ಭಾರತದಲ್ಲಿ ಪಬ್​ಜಿ ಮೇಲಿನ ಸಂಪೂರ್ಣ ಹಿಡಿತವನ್ನು ಪಬ್​ಜಿ ಕಾರ್ಪೋರೇಷನ್​ ತೆಗೆದುಕೊಂಡಿದೆ. ಈ ಮೂಲಕ ಭಾರತದಲ್ಲಿ Tencent ಜೊತೆಗಿನ ಒಪ್ಪಂದವನ್ನು ಕೈ ಬಿಡುವ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ, ಪಬ್​ಜಿಗೆ ಭಾರತದಲ್ಲಿ ಪಾರ್ಟ್​​ನರ್​ ಅಗತ್ಯವಿದ್ದು, ಇದಕ್ಕಾಗಿ ಹುಡುಕಾಟ ನಡೆಯುತ್ತಿದೆ.

news18-kannada
Updated:September 9, 2020, 9:30 AM IST
Tencent ಜೊತೆಗಿನ ಒಪ್ಪಂದ ರದ್ದು ಹಿನ್ನಲೆ; ಯಾರಾಗಲಿದ್ದಾರೆ ಭಾರತದಲ್ಲಿ ಪಬ್​ಜಿ ಪಾರ್ಟ್​ನರ್
ಪಬ್​ಜಿ
  • Share this:
ಗಡಿ ಭಾಗದಲ್ಲಿ ಭಾರತದ ಜೊತೆಗೆ ಚೀನಾ ತಕರಾರು ತೆಗೆದ ಬೆನ್ನಲ್ಲೇ ಚೀನಾ ಸಹಭಾಗಿತ್ವ ಇರುವ 118 ಆ್ಯಪ್​ಗಳನ್ನು ಕೇಂದ್ರ ಸರ್ಕಾರ ಬ್ಯಾನ್​ ಮಾಡಿದೆ. ದೇಶದ ಭದ್ರತೆಗೆ ದಕ್ಕೆ ತರುತ್ತಿರುವ ಆರೋಪದ ಈ ಆ್ಯಪ್​ಗಳ ಮೇಲಿದೆ. ಪಬ್​ಜಿ ಸೇರಿ 118 ಆ್ಯಪ್​ಗಳನ್ನು ಪ್ಲೇಸ್ಟೋರ್​ನಿಂದ ತೆಗೆಯಲಾಗಿದ್ದು, ಶೀಘ್ರವೇ ಈ ಆ್ಯಪ್​ಗಳು ಕಾರ್ಯ ಸ್ಥಗಿತಗೊಳಿಸಲಿವೆ.  ಈ ಮಧ್ಯೆ ಪಬ್​ಜಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿತ್ತು. ಭಾರತದಲ್ಲಿ ಪಬ್​ಜಿ ಮೇಲಿನ ಸಂಪೂರ್ಣ ಹಿಡಿತವನ್ನು ಪಬ್​ಜಿ ಕಾರ್ಪೋರೇಷನ್​ ತೆಗೆದುಕೊಂಡಿತ್ತು. ಈ ಮೂಲಕ ಚೀನಾ ಮೂಲದ ಟೆನ್ಸೆಂಟ್​ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿಕೊಂಡಿತ್ತು. ಈಗ ಭಾರತದಲ್ಲಿ ಈ ಗೇಮ್​ನ ಉಸ್ತುವಾರಿ ನೋಡಿಕೊಳ್ಳಲು ಪಬ್​ಜಿ ಪಾರ್ಟ್​​ನರ್​ ಹುಡುಕುತ್ತಿದೆ. 

Players Unknown Battleground ಪಬ್​ಜಿ ವಿಸ್ತ್ರತ ರೂಪ.ಪಬ್​ಜಿ ಉಗಮ ಅಗಿದ್ದು ದಕ್ಷಿಣ ಕೊರಿಯಾದಲ್ಲಿ. ಈ ಆಟ ಮೊದಲು ಪರಿಚಯಗೊಂಡಿದ್ದು 2017ರ ಡಿಸೆಂಬರ್​ 20ರಂದು. ಪಬ್​ಜಿ ಕಾರ್ಪೋರೇಷನ್​ ಈ ಆಟದ ಸೃಷ್ಟಿಕರ್ತ. ಆದರೆ, ಪಬ್​ ಜಿ ಈ ಮೊದಲು ಕೇವಲ ವಿಡಿಯೋ ಗೇಮ್​ ಆಗಿತ್ತು. ನಂತರ ಇದನ್ನು ಪಬ್​ಜಿ ಮೊಬೈಲ್​ ಆಗಿ ಬದಲಾಯಿಸಿದ್ದು ಚೀನಾ ಮೂಲದ Tencent Games ಕಂಪನಿ. ಪಬ್​ಜಿಗೆ ಚೀನಾ ಕಂಪೆನಿಯ ಸಹಭಾಗಿತ್ವ ಇರುವ ಕಾರಣ ಭಾರತದಲ್ಲಿ ಈ ಗೇಮ್​ ಬ್ಯಾನ್​ ಮಾಡಲಾಗಿದೆ. ಆದರೆ, ಈಗ ಸಂಸ್ಥೆ ಮಾಡಿದ ಮಹತ್ವದ ಬದಲಾವಣೆಯಿಂದ ಪಬ್​ಜಿ ಮೇಲಿರುವ ಬ್ಯಾನ್​ ತೆಗೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: PubG: ಪಬ್​ಜಿ ಬ್ಯಾನ್​ ವಿಚಾರ; ಫೇವರಿಟ್​ ಗೇಮ್​ ಇಲ್ಲದೆ ಯುವಜನತೆಗೆ ಕಾಡುತ್ತಿದೆ ಖಿನ್ನತೆ!

ಭಾರತದಲ್ಲಿ ಪಬ್​ಜಿ ಮೇಲಿನ ಸಂಪೂರ್ಣ ಹಿಡಿತವನ್ನು ಪಬ್​ಜಿ ಕಾರ್ಪೋರೇಷನ್​ ತೆಗೆದುಕೊಂಡಿದೆ. ಈ ಮೂಲಕ ಭಾರತದಲ್ಲಿ Tencent ಜೊತೆಗಿನ ಒಪ್ಪಂದವನ್ನು ಕೈ ಬಿಡುವ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ, ಪಬ್​ಜಿಗೆ ಭಾರತದಲ್ಲಿ ಪಾರ್ಟ್​​ನರ್​ ಅಗತ್ಯವಿದ್ದು, ಇದಕ್ಕಾಗಿ ಹುಡುಕಾಟ ನಡೆಯುತ್ತಿದೆ.

Tencent ಜೊತೆಗಿನ ಒಪ್ಪಂದ ರದ್ದು ಮಾಡಿರುವುದಾಗಿ ಹೇಳಿಕೆ ಬಿಡುಗೆ ಮಾಡಿರುವ ಪಬ್​ಜಿ ಸಂಸ್ಥೆ, ನಾವು ಭಾರತದಲ್ಲಿ ಟೆನ್ಸೆಂಟ್​ ಜೊತೆಗೆ ಯಾವುದೇ ಬಾಂಧವ್ಯ ಇಟ್ಟುಕೊಳ್ಳುವುದಿಲ್ಲ. ಈ ಮೂಲಕ ಭಾರತ ಸರ್ಕಾರದ ನೀತಿ ನಿಯಮಗಳನ್ನು ನಾವು ಗೌರವಿಸುತ್ತೇವೆ, ಎಂದು ತಿಳಿಸಿದೆ. ಈ ವಿಚಾರವಾಗಿ ಶೀಘ್ರವೇ ಸರ್ಕಾರದ ಜೊತೆಗೆ ಮಾತನಾಡಿ ಬ್ಯಾನ್​ ಹಿಂಪಡೆಯುವಂತೆ ಸಂಸ್ಥೆ ಸರ್ಕಾರದ ಬಳಿ ಕೋರಲಿದೆ.
Published by: Rajesh Duggumane
First published: September 9, 2020, 9:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading