ಹೊಸ ಅವತಾರದಲ್ಲಿ ಬಿಡುಗಡೆಗೆ ಸಜ್ಜಾಗಿದೆ ಗತಕಾಲದ 'ಅಂಬಾಸಿಡರ್' ಕಾರು

ಸಿಕೆ ಬಿರ್ಲಾ ಒಡೆತನದಲ್ಲಿದ್ದ ಹಿಂದೂಸ್ಥಾನ್​ ಮೋಟಾರ್ಸ್​ ಕಂಪೆನಿ ಉತ್ಪಾದಿಸುತ್ತಿದ್ದ ಅಂಬಾಸಿಡರ್​ ಕಾರು ಭಾರತದಲ್ಲಿ ರಾಜನಂತೆ ಮೆರೆದಾಡಿತ್ತು. ಕಾಲಕ್ರಮೇಣ ವಿವಿಧ ಕಂಪೆನಿಯ ಕಾರುಗಳು ಮಾರುಕಟ್ಟೆಯನ್ನು ಪ್ರವೇಶಿಸಿದಂತೆ ಅಂಬಾಸಿಡರ್​ ತನ್ನ ಬೇಡಿಕೆಯನ್ನುಕಳೆದುಕೊಂಡಿತು.

news18
Updated:April 1, 2019, 5:02 PM IST
ಹೊಸ ಅವತಾರದಲ್ಲಿ ಬಿಡುಗಡೆಗೆ ಸಜ್ಜಾಗಿದೆ ಗತಕಾಲದ 'ಅಂಬಾಸಿಡರ್' ಕಾರು
ಅಂಬಾಸಿಡರ್​ ಕಾರು
news18
Updated: April 1, 2019, 5:02 PM IST
ನವದೆಹಲಿ(ಏ.01): ಭಾರತದಲ್ಲಿ ಹಿಂದೊಮ್ಮೆ ರಾಜನಂತೆ ಮೆರೆದಿದ್ದ ಹಿಂದೂಸ್ಥಾನ್​ ಮೋಟಾರ್ಸ್​ ಕಂಪೆನಿಯ 'ಅಂಬಾಸಿಡರ್​' ಕಾರು ಪ್ರಿಯರಿಗಾಗಿ ಮತ್ತೊಮ್ಮೆ ಸಿಹಿ ಸುದ್ದಿಯನ್ನು ನೀಡುತ್ತಿದೆ. ಭಾರತದ ಕಾರು ಮಾರುಕಟ್ಟೆಯಲ್ಲಿ ತನ್ನದೇ ಆದ ಬೇಡಿಕೆ ನಿರ್ಮಿಸಿ ರಾಜಕಾರಣಿ, ಅಧಿಕಾರಿಗಳ ವಾಹನವಾಗಿದ್ದ ಅಂಬಾಸಿಡರ್​ ಮತ್ತೊಮ್ಮೆ ರಸ್ತೆಗಿಳಿಯಲು ಮುಂದಾಗಿದೆ.

ನೂತನವಾಗಿ ಹೊರಹೊಮ್ಮುತ್ತಿರುವ ಅಂಬಾಸಿಡರ್​ ಕಾರಿನಲ್ಲಿ ಕೊಂಚ ಬದಲಾವಣೆಯನ್ನು ಮಾಡಲಾಗಿದೆ. ನೂತನವಾಗಿ ಹೊರಹೊಮ್ಮುತ್ತಿರುವ  ಅಂಬಾಸಿಡರ್​ ಕಾರು ಎಲೆಕ್ಟ್ರಿಕ್​ ಕಾರಾಗಿ ರಸ್ತೆ ಮೇಲೆ ಸಂಚರಿಸಲಿದೆ.

ಸಿಕೆ ಬಿರ್ಲಾ ಒಡೆತನದಲ್ಲಿದ್ದ ಹಿಂದೂಸ್ಥಾನ್​ ಮೋಟಾರ್ಸ್​ ಕಂಪೆನಿ ಉತ್ಪಾದಿಸುತ್ತಿದ್ದ ಅಂಬಾಸಿಡರ್​ ಕಾರು ಭಾರತದಲ್ಲಿ ರಾಜನಂತೆ ಮೆರೆದಾಡಿತ್ತು. ಕಾಲಕ್ರಮೇಣ ವಿವಿಧ ಕಂಪೆನಿಯ ಕಾರುಗಳು ಮಾರುಕಟ್ಟೆಯನ್ನು ಪ್ರವೇಶಿಸಿದಂತೆ ಅಂಬಾಸಿಡರ್​ ತನ್ನ ಬೇಡಿಕೆಯನ್ನು ಕಳೆದುಕೊಂಡಿತು.

ಇದನ್ನೂ ಓದಿ: GoZero ಬೈಸಿಕಲ್ ಭಾರತದಲ್ಲಿ ಬಿಡುಗಡೆ: ಇದರ ವಿಶೇಷತೆಗಳೇನು, ಬೆಲೆಯೆಷ್ಟು ಗೊತ್ತಾ?

2017ರಲ್ಲಿ ಫ್ರಾನ್ಸ್​ನ ಫ್ಯುಗಾಟ್​ ಕಂಪೆನಿ ಅಂಬಾಸಿಡರ್​ ಬ್ರಾಂಡ್​ ನೇಮ್​ ಅನ್ನು 80 ಕೋಟಿಗೆ ಖರೀದಿಸಿದೆ. ಇದೀಗ ಅಂಬಾಸಿಎರ್​ ಬ್ರಾಂಡ್​ ಹೆಸರಿನಲ್ಲಿ ಫ್ಯುಗಾಟ್​ ನೂತನ ಕಾರನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಹೊಸ ಅವತಾರದಲ್ಲಿ ಬರುವ ಅಂಬಾಸಿಡರ್​ ಕಾರು ಭಾರತದಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಗಳಲ್ಲಿ ಅಧಿಕ ಬೇಡಿಕೆಯನ್ನು ಸೃಷ್ಠಿಸಲು ಯೋಜನೆಯನ್ನು ಹಾಕಿಕೊಂಡಿದೆ. 700 ಕೋಟಿ ರೂಪಾಯಿ ಬಂಡವಾಳ ಹೂಡಿ ನೂತನ ಅಂಬಾಸಿಡರ್​ ಕಾರ್​ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. 2023ರ ವೇಳೆಗೆ ಭಾರತದಲ್ಲಿ ಅಂಬಾಸಿಡರ್​ ಕಾರು ಬಿಡುಗಡೆಯಾಗಲಿದ್ದು, ತಮಿಳುನಾಡಿನಲ್ಲಿ ಅಂಬಾಸಿಡರ್​ ಕಾರಿ ಉತ್ಪಾದನೆಯಾಗಲಿದೆ ಎಂದು ಕಂಪೆನಿ ತಿಳಿಸಿದೆ.
Loading...

First published:April 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...