EPF Balance: ಈ ಆ್ಯಪ್​ ಮೂಲಕ ನಿಮ್ಮ ಪಿಎಫ್​ ಬ್ಯಾಲೆನ್ಸ್ ಸುಲಭವಾಗಿ​ ಪರೀಕ್ಷಿಸಬಹುದು

How To Check PF Balance: ಪಿಎಫ್​ ಖಾತೆಯನ್ನು ಪರೀಕ್ಷಿಸಲು ತಡಕಾಡುತ್ತಿದ್ದ ಗ್ರಾಹಕರಿಗೆ ಉಮಂಗ್​ ಆ್ಯಪ್​ ಸಹಕಾರಿಯಾಗಿದೆ. ಇದರ ಮೂಲಕ ಎಪಿಏಫ್​ ಬ್ಯಾಲೆನ್ಸ್​, ಕಂಪನಿ ಡೆಪಾಸಿಟ್​​ ಮಾಡುವ ಮೊತ್ತ. ಒಟ್ಟು ಉಳಿತಾಯದ ಮೊತ್ತ ಹೀಗೆ ಕೆಲವು ಮಾಹಿತಿಗಳನ್ನು ಪಡೆಯಬಹುದಾಗಿದೆ.

news18-kannada
Updated:May 20, 2020, 7:10 PM IST
EPF Balance: ಈ ಆ್ಯಪ್​ ಮೂಲಕ ನಿಮ್ಮ ಪಿಎಫ್​ ಬ್ಯಾಲೆನ್ಸ್ ಸುಲಭವಾಗಿ​ ಪರೀಕ್ಷಿಸಬಹುದು
ಪ್ರಾತಿನಿಧಿಕ ಚಿತ್ರ
  • Share this:
ಎಂಪ್ಲಾಯೀ​​​ ಪ್ರಾವಿಡೆಂಟ್ ಫಂಡ್(EPF). ಉದ್ಯೋಗಿಗಳಿಗೆ ನಿವೃತ್ತಿ ನಂತರ ತಮ್ಮ ಜೀವನಕ್ಕೆ ಸಿಗುವಂತಹ ಉತ್ತಮ ಯೋಜನೆ.  ಅನೇಕರಿಗೆ ತಮ್ಮ ಪಿಎಫ್ ಹಣ ಎಷ್ಟು ಹೂಡಿಕೆಯಾಗಿದೆ ಎಂಬ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ. ಇನ್ನು ಕೆಲವರು ಬೇರೆ ವಿಧಾನಗಳ ಮೂಲಕ ಪಿಎಫ್​ ಖಾತೆಯನ್ನು ಪರೀಕ್ಷಿಸುತ್ತಾರೆ. ಆದರೆ ಉಮಂಗ್​ ಆ್ಯಪ್​ ಮೂಲಕ ಎಂಪ್ಲಾಯಿ ಪ್ರಾವಿಡೆಂಡ್​​ ಖಾತೆಯನ್ನು ಸುಲಭವಾಗಿ ಪರೀಕ್ಷಿಸಬಹುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಪಿಎಫ್​ ಖಾತೆಯನ್ನು ಪರೀಕ್ಷಿಸಲು ತಡಕಾಡುತ್ತಿದ್ದ ಗ್ರಾಹಕರಿಗೆ ಉಮಂಗ್​ ಆ್ಯಪ್​ ಸಹಕಾರಿಯಾಗಿದೆ. ಇದರ ಮೂಲಕ ಎಪಿಏಫ್​ ಬ್ಯಾಲೆನ್ಸ್​, ಕಂಪನಿ ಡೆಪಾಸಿಟ್​​ ಮಾಡುವ ಮೊತ್ತ. ಒಟ್ಟು ಉಳಿತಾಯದ ಮೊತ್ತ ಹೀಗೆ ಕೆಲವು ಮಾಹಿತಿಗಳನ್ನು ಪಡೆಯಬಹುದಾಗಿದೆ.

ಇನ್ನು ಪಿಎಫ್​ ಖಾತೆಯನ್ನು ಪರಿಶೀಲಿಸಬೇಕಾದರೆ ಯುನಿವರ್ಸಲ್​​ ಅಕೌಂಟ್​​ (ಯುಎನ್​ಎ) ನಂಬರ್​ ಮತ್ತು ಪಿಎಫ್​​ ಖಾತೆಗೆ ನೋಂದಣಿಯಾಗಿರುವ ಮೊಬೈಲ್​ ನಂಬರ್​ ಇರಬೇಕು.

ಉಮಂಗ್​ ಆ್ಯಪ್


  • ಮೊದಲಿಗೆ ಪ್ಲೇಸ್ಟೋರ್​ನಲ್ಲಿರುವ ಅಧಿಕೃತ ಉಮಂಗ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು ಇನ್​ಸ್ಟಾಲ್​​ ಮಾಡಬೇಕು. ಬಳಿಕ ರಿಜಿಸ್ಟರ್​ ಮೊಬೈಲ್​ ಸಂಖ್ಯೆಯನ್ನ ನಮೂದಿಸಬೇಕು.

  • ನಂತರ ಉಮಂಗ್​ ಆ್ಯಪ್​ ತೆರೆದು ಇಪಿಎಫ್​ಒ ಎಂದು ಸರ್ಚ್​ ಮಾಡಬೇಕು
  • ಆನಂತರ ಲೀಸ್ಟ್​​ ಒಂದು ತೆರೆದುಕೊಳ್ಳುತ್ತದೆ ಅದರಲ್ಲಿ ಎಂಪ್ಲಾಯ್​​​ ಸೆಂಟ್ರಿಕ್​​ ಸರ್ವಿಸ್​​​ ಆಯ್ಕೆಯ ಮೇಲೆ ಕ್ಲಿಕ್​ ಮಾಡಿರಿ.

  • ಇದಾದ ಬಳಿಕ ಪಿಎಫ್​ ಆಯ್ಕೆಯ ಮೇಲೆ ಕ್ಲಿಕ್​ ಮಾಡಬೇಕು. ಅಲ್ಲಿ ಎಂಪ್ಲಾಯ್​​​ ಸೆಂಟ್ರಿಕ್​​ ಸರ್ವಿಸಸ್​​ನಲ್ಲಿ ಪಾಸ್​ಬುಕ್​ ವೀಕ್ಷಣೆಗೆ ಮಾಡಲು ಆಯ್ಕೆ ಸಿಗುತ್ತದೆ.

  • ನಂತರ ಯುಎನ್​ಎ ಮತ್ತು ರಿಜಿಸ್ಟರ್​ ಮಾಡಿಕೊಂಡಾಗ ಬಂದಿರುವ ಒಟಿಪಿ ಮೂಲಕ ಲಾಗಿನ್​ ಮಾಡಬೇಕು. ಆ ಬಳಿಕ ಪಿಎಫ್​ ಖಾತೆಯ ಬ್ಯಾಲೆನ್ಸ್​​ ವಿವರ ಸಿಗುತ್ತದೆ.


ಉಮಂಗ್​ ಆ್ಯಪ್ ಮೂಲಕ​​ ಪಾನ್​, ಆಧಾರ್​, ಗ್ಯಾಸ್​ ಬುಕ್ಕಿಂಗ್​ ಹೀಗೆ ಇನ್ನಿತರ ಸೇವೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

 

ರಿಷಬ್​​ ಶೆಟ್ಟಿ ಆ್ಯಕ್ಷನ್​ ಕಟ್​ ಹೇಳುತ್ತಿರುವ ‘ರುದ್ರ ಪ್ರಯಾಗ‘ ಸಿನಿಮಾದಲ್ಲಿ ಬಿಗ್​​ ಬಾಸ್​ ವಿನ್ನರ್​​ ಶೈನ್​ ಶೆಟ್ಟಿ!
First published: May 20, 2020, 7:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading