Mobile Download: ದೇಶದ ಮೊಬೈಲ್​ ಡೌನ್​ಲೋಡ್​ ವೇಗದಲ್ಲಿ ಪ್ರಗತಿ! ವರದಿಯಲ್ಲಿ ಭಾರತಕ್ಕೆ 79ನೇ ಸ್ಥಾನ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚೆಗೆ 5ಜಿ ಸೇವೆ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಈ ಮಧ್ಯೆ ಓಕ್ಲಾ ಸಂಸ್ಥೆಯು ಜಾಗತಿಕವಾಗಿ ಮೊಬೈಲ್​ ಡೌನ್​ಲೋಡ್​ ವೇಗದ ಕುರಿತು ಸಮೀಕ್ಷೆಯನ್ನು ಮಾಡಿದ್ದು, ಇದರಲ್ಲಿ ಭಾರತ ಉತ್ತಮ ಸ್ಥಾನವನ್ನು ಪಡೆದುಕೊಂಡಿದೆ.

  • Share this:

    ದೇಶದಲ್ಲಿ ಇತ್ತೀಚೆಗೆ ಟೆಕ್ನಾಲಜಿ (Technology) ಯುಗ ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ. ಅದರಲ್ಲೂ ಕೆಲವು ದಿನಗಳಿಂದ ದೇಶದ ಇಂಟರ್ನೆಟ್​ ವೇಗದಲ್ಲಿ ಸಾಕಷ್ಟು ಅಭಿವೃದ್ಧಿಗಳಾಗಿವೆ. ಇದಕ್ಕೆ ಪೂರಕವೆಂಬಂತೆ ಓಕ್ಲಾ (Ookla) ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತದಲ್ಲಿ ಮೀಡಿಯಾ ಮೊಬೈಲ್‌ ಸ್ಪೀಡ್‌ ಸಾಕಷ್ಟು ವೇಗವನ್ನು ಪಡೆದುಕೊಂಡಿದೆ ಎಂದು ವರದಿ ಮಾಡಿದೆ. ಈ ಮೂಲಕ ಜಾಗತಿಕವಾಗಿ ಭಾರತವು ವೇಗದ ಡೌನ್‌ಲೋಡ್‌ನಲ್ಲಿ 79 ನೇ ಸ್ಥಾನಕ್ಕೆ ಏರಿದೆ ಎಂದು ಹೇಳಿದೆ. ಭಾರತ ಪಡೆದಂತಹ ಈ ಸ್ಥಾನ ದೇಶದಲ್ಲಿ ನೆಟ್​​ವರ್ಕ್​ ಸ್ಪೀಡ್​ನಲ್ಲಿ (Network Speed) ಆದಂತಹ ಬೆಳವಣಿಗೆಯನ್ನು ಬಿಂಬಿಸುತ್ತದೆ. ಒಂದು ರೀತಿಯಲ್ಲಿ ದೇಶದಲ್ಲಿ ಆರಂಭವಾದ 5ಜಿ (5G) ಸೇವೆ ಕೂಡ ಇದಕ್ಕೆ ಕಾರಣ ಎಂದು ಹೇಳ್ಬಹುದು.


    ಇತ್ತೀಚೆಗೆ 5ಜಿ ಸೇವೆ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಈ ಮಧ್ಯೆ ಓಕ್ಲಾ ಸಂಸ್ಥೆಯು ಜಾಗತಿಕವಾಗಿ ಮೊಬೈಲ್​ ಡೌನ್​ಲೋಡ್​ ವೇಗದ ಕುರಿತು ಸಮೀಕ್ಷೆಯನ್ನು ಮಾಡಿದ್ದು, ಇದರಲ್ಲಿ ಭಾರತ ಉತ್ತಮ ಸ್ಥಾನವನ್ನು ಪಡೆದುಕೊಂಡಿದೆ.


    ಮೊಬೈಲ್​ ಡೌನ್​ಲೋಡ್​ ವೇಗದಲ್ಲಿ ಏರಿಕೆ


    ಭಾರತದಲ್ಲಿ ಓಕ್ಲಾ ಭಾರತದಲ್ಲಿ ಮೀಡಿಯಾ ಮೊಬೈಲ್‌ ಡೌನ್‌ಲೋಡ್‌ ವೇಗವು ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಹೇಳಿದೆ. ಅದರಂತೆ ಮೊಬೈಲ್‌ ಡೌನ್‌ಲೋಡ್‌ ವೇಗವು 18.26 ಎಮ್​ಬಿಪಿಎಸ್​ ನಿಂದ 25.29 ಎಮ್​ಬಿಪಿಎಸ್​ ಗೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಹೇಳಿದೆ. ಈ ಬೆಳವಣಿಗೆಗೆ ಭಾರತದಲ್ಲಿ 5ಜಿ ರೂಲ್​ಔಟ್​ ಆದದ್ದೇ ಮುಖ್ಯ ಕಾರಣ ಎಂದು ಹೇಳಿದ್ದಾರೆ. ಇದಲ್ಲದೆ 5ಜಿ ಸೇವೆಯು ದೇಶದೆಲ್ಲೆಡೆ ವಿಸ್ತರಿಸಿದಾಗ ಡೌನ್​ಲೋಡ್​ ವೇಗವು ಇನ್ನಷ್ಟು ಅಭಿವೃದ್ಧಿಯಾಗುತ್ತದೆ ಎಂದು ಹೇಳಿದೆ.




    ಅಪ್​ಲೋಡ್​ ವೇಗದಲ್ಲಿ ಹಿನ್ನಡೆ


    ಭಾರತದಲ್ಲಿ 5ಜಿ ನೆಟ್​ವರ್ಕ್​ ಡಿವೈಸ್‌ಗಳ ಬಳಕೆ ಹೆಚ್ಚಾಗುತ್ತಿರುವುದರಿಂದ ಮೀಡಿಯಾ ಮೊಬೈಲ್‌ ಡೌನ್‌ಲೋಡ್‌ ವೇಗದಲ್ಲಿ ಬದಲಾವಣೆ ಕಾಣಬಹುದಾಗಿದೆ. ಇದೇ ಕಾರಣಕ್ಕೆ ನವೆಂಬರ್‌ನಲ್ಲಿ 49.11 Mbps ಸರಾಸರಿ ಡೌನ್‌ಲೋಡ್ ವೇಗ ಹೊಂದಿದ್ದ ಭಾರತ ಡಿಸೆಂಬರ್‌ನಲ್ಲಿ 49.14 Mbps ಗೆ ಹೆಚ್ಚಳವನ್ನು ಕಂಡಿದೆ ಎಂದು ವರದಿಯಾಗಿದೆ. ಆದರೆ ಇದರ ನಡುವೆಯೂ ಅಪ್‌ಲೋಡ್ ವೇಗದಲ್ಲಿ ಭಾರತ ಬಹಳಷ್ಟು ಹಿನ್ನಡೆಯನ್ನು ಕಂಡಿದೆ ಎಂದು ವರದಿ ಹೇಳಿದೆ.


    TRAI ನ ವರದಿಯ ಪ್ರಕಾರ


    ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಟ್ರಾಯ್​ ಟೆಲಿಕಾಂ ಕಂಪೆನಿಗಳ ಮೊಬೈಲ್​ ಡೌನ್​ಲೋಡ್​ ವೇಗದ ಸಮೀಕ್ಷೆಯನ್ನು ಮಾಡಿತ್ತು, ಈ ಮಾಹಿತಿಯ ಪ್ರಕಾರ ಜಿಯೋನ ಸರಾಸರಿ 4ಜಿ ಡೌನ್‌ಲೋಡ್ ವೇಗದಲ್ಲಿ 1.2 ಎಂಬಿಪಿಎಸ್​ ವೇಗವನ್ನು ಕಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ 19.1 ಎಂಬಿಪಿಎಸ್ ಇದ್ದ ವೇಗ ಅಕ್ಟೋಬರ್ ತಿಂಗಳಲ್ಲಿ 20.3 ಎಂಬಿಪಿಎಸ್ ನಷ್ಟು ಏರಿಕೆಯಾಗಿದೆ.


    ಅಂಕಿ ಅಂಶಗಳ ಅನ್ವಯ ಸರಾಸರಿ ಡೌನ್‌ಲೋಡ್ ವೇಗದ ವಿಚಾರದಲ್ಲಿ ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಅಕ್ಟೋಬರ್‌ನಲ್ಲಿ ಏರ್‌ಟೆಲ್‌ನ ಸರಾಸರಿ 4ಜಿ ಡೌನ್‌ಲೋಡ್ ವೇಗ 15 ಎಂಬಿಪಿಎಸ್​ ಆಗಿದ್ದರೆ ವೊಡಫೋನ್​ ಐಡಿಯಾ 14.5 ಎಂಬಿಪಿಎಸ್​ ವೇಗ ಹೊಂದಿತ್ತು. ಕಳೆದ ತಿಂಗಳಿನಿಂದ ಎರಡೂ ಕಂಪನಿಗಳು ತಮ್ಮ ವೇಗದಲ್ಲಿ ಸುಧಾರಣೆ ಮಾಡಿಕೊಂಡಿವೆ. ಆದರೆ ಏರ್‌ಟೆಲ್ ಮತ್ತು ವೊಡಫೋನ್ ಐಡಿಯಾಗೆ ಹೋಲಿಸಿದರೆ ರಿಲಯನ್ಸ್​ ಜಿಯೋದ ಸರಾಸರಿ 4ಜಿ ಡೌನ್‌ಲೋಡ್ ವೇಗವು 5 ಎಂಬಿಪಿಎಸ್​ಗಿಂತಲೂ ಹಚ್ಚಿದೆ ಎಂದು ಹೇಳಬಹುದು.


    ಇದನ್ನೂ ಓದಿ: ಏರ್​ಟೆಲ್​ನಿಂದ ಹೊಸ ರೀಚಾರ್ಜ್ ಪ್ಲ್ಯಾನ್​ ಬಿಡುಗಡೆ! ಅನಿಯಮಿತ​ ಡೇಟಾ ಸೌಲಭ್ಯ


    ಮೊಬೈಲ್​ ಡೌನ್​ಲೋಡ್​ ವೇಗದಲ್ಲಿ ಅಗ್ರಸ್ಥಾನ ಯಾರಿಗೆ?


    ಇನ್ನು ಜಾಗತಿಕವಾಗಿ ಇತರೆ ದೇಶಗಳ ಮೊಬೈಲ್ ಡೌನ್​ಲೋಡ್ ವೇಗವನ್ನು ಹೋಲಿಸಿದರೆ ಭಾರತ ಬಹಳಷ್ಟು ಹಿಂದೆ ಇದೆ ಎಂದು ಹೇಳಬಹುದು. ಇದರಲ್ಲಿ ಮುಖ್ಯವಾಗಿ ಭಾರತ ಮೊಬೈಲ್ ಇಂಟರ್ನೆಟ್ ಮತ್ತು ಸ್ಥಿರ ಬ್ರಾಡ್‌ಬ್ಯಾಂಡ್ ವೇಗದ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿದೆ. ಸ್ಪೀಡ್‌ಟೆಸ್ಟ್ ಗ್ಲೋಬಲ್ ಇಂಡೆಕ್ಸ್‌ ನೀಡಿರುವ ಮಾಹಿತಿಯಂತೆ ಡಿಸೆಂಬರ್‌ ತಿಂಗಳಲ್ಲಿ ಮೊಬೈಲ್ ವೇಗದ ಡೌನ್‌ಲೋಡ್‌ ನೀಡುವಲ್ಲಿ ಕತಾರ್ ಅಗ್ರಸ್ಥಾನವನ್ನು ಪಡೆದು ಕೊಂಡಿದೆ ಎಂದು ವರದಿಯಾಗಿದೆ. ಸ್ಥಿರ ಬ್ರಾಡ್‌ಬ್ಯಾಂಡ್‌ ವಿಚಾರದಲ್ಲಿ ಸಿಂಗಾಪುರ ಪ್ರಥಮ ಸ್ಥಾನದಲ್ಲಿದೆ.

    Published by:Prajwal B
    First published: