ಕಾಲೇಜು ವಿದ್ಯಾರ್ಥಿಗಳಿಗೆ ಸ್ಮಾರ್ಟ್​ಫೋನ್​ ವಿತರಿಸಲು ಮುಂದಾದ ಸರ್ಕಾರ!

2017-18ರ ಹಣಕಾಸು ವರ್ಷದ ಬಜೆಟ್​ನಲ್ಲಿ ರಾಜ್ಯದ ಯುವಕರಿಗೆ ಮೊಬೈಲ್​ ಫೋನ್​ ವಿತರಿಸುವ ಯೋಜನೆಯನ್ನು ಘೋಷಿಸಿತ್ತು

news18-kannada
Updated:September 20, 2019, 4:52 PM IST
ಕಾಲೇಜು ವಿದ್ಯಾರ್ಥಿಗಳಿಗೆ ಸ್ಮಾರ್ಟ್​ಫೋನ್​ ವಿತರಿಸಲು ಮುಂದಾದ ಸರ್ಕಾರ!
.
  • Share this:
ಪಂಜಾಬ್​: ರಾಜ್ಯದ ಯುವಕರಿಗೆ ಸ್ಮಾರ್ಟ್​ಫೋನ್​​ಗಳನ್ನು​ ವಿತರಿಸುವ ಯೋಜನೆಗೆ ಪಂಜಾಬ್​ ಸಚಿವ ಸಂಪುಟ ಅನು ಮೋದನೆ ನೀಡಿದೆ. ಈ ವರ್ಷದ ಡಿಸೆಂಬರ್​​ ತಿಂಗಳಿನಿಂದ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಚಿಂತಿಸಿದೆ.

ಪಂಜಾಬ್​ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​​ ಸಚಿವ ಸಂಪುಟ ಸಭೆಯಲ್ಲಿ ಈ ನೂತನ ಯೋಜನೆಯ ಬಗೆಗೆ ನಿರ್ಧಾರ ಕೈಗೊಂಡಿದ್ದಾರೆ.

2017-18ರ ಹಣಕಾಸು ವರ್ಷದ ಬಜೆಟ್​ನಲ್ಲಿ ರಾಜ್ಯದ ಯುವಕರಿಗೆ ಮೊಬೈಲ್​ ಫೋನ್​ ವಿತರಿಸುವ ಯೋಜನೆಯನ್ನು ಘೋಷಿಸಿತ್ತು. ಆದರೆ 2018-19ರ ಬಜೆಟ್​ನಲ್ಲಿ ಈ ಯೋಜನೆಗೆ ಹಣವನ್ನು ಹಂಚಿಕೆ ಮಾಡಲಾಗಿದೆ.

ಪಂಜಾಬ್​ ಸರ್ಕಾರ ಅನುಷ್ಠಾನಗೊಳಿಸಿದ ನೂತನ ಯೋಜನೆಯ ಪ್ರಕಾರ, ರಾಜ್ಯದಲ್ಲಿ 11 ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್​ಫೋನ್​ ವಿತರಿಸಲು ನಿರ್ಧರಿಸಿದೆ. ಡಿಸೆಂಬರ್​ ತಿಂಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ.

ಇದನ್ನೂ ಓದಿ: ಸಿದ್ದರಾಮಯ್ಯ, ಪರಮೇಶ್ವರ್ ಹಾವು ಮುಂಗುಸಿಯಲ್ಲ; ಒಂದೇ ನಾಣ್ಯದ ಎರಡು ಮುಖಗಳು: ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್

ಯುವಕರಿಗೆ ಡಿಜಿಟಲ್​ ಶಿಕ್ಷಣ, ಉದ್ಯೋಗಾವಕಾಶಗಳು, ಕೌಶಲ್ಯಾಭಿವೃದ್ಧಿ, ಸರ್ಕಾರಿ ಅರ್ಜಿಗಳ ಮೂಲಕ ನಾಗರಿಕ ಸೇವೆಗಳ ಪ್ರವೇಶ ಇತ್ಯಾದಿಗಳ ಮಾಹಿತಿ ನೀಡುವ ಉದ್ದೇಶ ಈ ಯೋಜನೆಯದ್ದಾಗಿದೆ. ಈ ಮೂಲಕ ಡಿಜಿಟಲ್​ ಸಬಲೀಕರಣವು ಸಾಧ್ಯವಾಗುತ್ತದೆ ಎಂದು ರಾಜ್ಯ ಸರ್ಕಾರದ ವಕ್ತಾರ ಮಾಹಿತಿ ನೀಡಿದ್ದಾರೆ.

First published:September 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading