Maruti Suzuki Price Hike: ಸೆಪ್ಟೆಂಬರ್ ತಿಂಗಳಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಳ, ಯಾವ ಕಾರ್ ರೇಟ್ ಎಷ್ಟು ಜಾಸ್ತಿ? ಫುಲ್ ಡೀಟೆಲ್ಸ್

Price Hike of Maruti Suzuki Cars: ಜುಲೈ ತಿಂಗಳಲ್ಲಷ್ಟೇ ಸ್ವಿಫ್ಟ್ ಮತ್ತು ಎಲ್ಲಾ ಸಿಎನ್​ಜಿ ಕಾರುಗಳ ಬೆಲೆಗಳನ್ನು ಮಾರುತಿ ಏರಿಸಿತ್ತು. ಇವೆಲ್ಲಾ ಪ್ರತೀ ಕಾರಿಗೆ 15 ಸಾವಿರ ರೂಪಾಯಿಗಳಷ್ಟು ಏರಿಕೆಯಾಗಿತ್ತು. ಆದರೆ ಈ ಸಲ ಮಾತ್ರ ಎಲ್ಲಾ ಕಾರುಗಳ ಬೆಲೆಯನ್ನೂ ಏರಿಸೋದಾಗಿ ಸಂಸ್ಥೆ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನೀವೇನಾದ್ರೂ ಕಾರ್ ತೆಗೆದುಕೊಳ್ಳೋ ಆಲೋಚನೆಯಲ್ಲಿದ್ರೆ ಸ್ವಲ್ಪ ಬೇಗ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ದೇಶದ ಅತೀ ದೊಡ್ಡ ಕಾರ್ ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ (Maruti Suzuki) ತನ್ನ ಎಲ್ಲಾ ಕಾರುಗಳ ಬೆಲೆಯನ್ನು ಇನ್ನು ಒಂದೇ ದಿನದಲ್ಲಿ ಏರಿಸಲಿದೆ. ಮಾರುತಿ ಕಾರನ್ನೇ ಕೊಳ್ಳುವ ಯೋಚನೆ ಇರುವವರಂತೂ ಈ ಬಗ್ಗೆ ಬೇಗ ನಿರ್ಧಾರ ತೆಗೆದುಕೊಳ್ಲಬೇಕಿದೆ. ಈಗಾಗಲೇ ಒಂದು ಬಾರಿ ಕೆಲವು ಮಾಡೆಲ್​ಗಳ ಕಾರುಗಳ ಬೆಲೆಯನ್ನು ಮಾತ್ರ ಏರಿಸಿದ್ದ ಮಾರುತಿ ಸುಜುಕಿ ಈ ಬಾರಿ ಮಾತ್ರ ತನ್ನ ಎಲ್ಲಾ ಕಾರುಗಳ ಬೆಲೆ ಹೆಚ್ಚಿಸೋ (Price Hike) ನಿರ್ಧಾರ ಮಾಡಿ ಪ್ರಕಟಣೆ ಕೂಡಾ ಹೊರಡಿಸಿದೆ. ಭಾರತದ ಅತೀ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಮುಂದಿನ ತಿಂಗಳು ಅಂದ್ರೆ ಸೆಪ್ಟೆಂಬರ್​ನಿಂದ ತನ್ನ ಎಲ್ಲಾ ಶ್ರೇಣಿಯ ಕಾರುಗಳ ಬೆಲೆಗಳನ್ನು ಹೆಚ್ಚಿಸಲಿದೆ. ಇಂದು ಮಾರುತಿ ಸುಜುಕಿ ಈ ವಿಚಾರವನ್ನು ಬಹಿರಂಗಪಡಿಸಿದೆ. ಕಾರ್ ತಯಾರಿಕಾ ವೆಚ್ಚ ಏರಿಕೆಯಾಗಿರುವುದರ ಹಿನ್ನೆಲೆಯಲ್ಲಿ ಈ ಬೆಲೆಯೇರಿಕೆ ಅನಿವಾರ್ಯ ಎಂದಿದೆ ಮಾರುತಿ ಸುಜುಕಿ ಆಡಳಿತ ಮಂಡಳಿ. ವಿವಿಧ ಆಂತರಿಕ ವೆಚ್ಚಗಳು ಕಳೆದ ಒಂದು ವರ್ಷದಲ್ಲಿ ಏರಿಕೆ ಕಂಡಿವೆ. ಇದರಿಂದ ಸಂಸ್ಥೆ ತಯಾರಿಸುವ ಎಲ್ಲಾ ವಾಹನಗಳ ಬೆಲೆಗಳ ಮೇಲೆಯೂ ಪರಿಣಾಮ ಬೀರಿದೆ.

    ಆದ್ದರಿಂದ ಇದರಲ್ಲಿ ಸ್ವಲ್ಪ ಮಟ್ಟಿಗಿನ ಭಾರವನ್ನು ಗ್ರಾಹಕರಿಗೆ ದಾಟಿಸಬೇಕಾದ ಅನಿವಾರ್ಯತೆ ಒದಗಿಬಂದಿದೆ. ಸೆಪ್ಟೆಂಬರ್ 2021ರಿಂದ ಎಲ್ಲಾ ಮಾಡೆಲ್​ಗಳ ಮೇಲೆ ಈ ಬೆಲೆಯೇರಿಕೆ ಪ್ರಭಾವಿಸಲಿದೆ ಎಂದು ಮಾರುತಿ ಸುಜುಕಿ ತಿಳಿಸಿದೆ.

    ಮಾರುತಿ ಸುಜುಕಿ ತಯಾರಿಸುವ ಕಾರುಗಳು ಮಧ್ಯಮ ವರ್ಗದವರ ಕನಸಿನ ಕಾರುಗಳಾಗಿವೆ. ಆರಂಭಿಕ ಮಾಡೆಲ್​ನ ಹ್ಯಾಚ್​ಬ್ಯಾಕ್ ಆಲ್ಟೊ ಇಂದ ಎಸ್​ ಕ್ರಾಸ್ ವರಗೆ ನಾನಾ ಮಾಡೆಲ್​ಗಳ ನಾನಾ ವಿಧದ ಕಾರುಗಳನ್ನು ಮಾರುತಿ ತಯಾರಿಸುತ್ತಿದೆ. ಇವುಗಳ ಬೆಲೆಗಳು 2.99 ಲಕ್ಷ ರೂಪಾಯಿಗಳಿಂದ 12.39 ಲಕ್ಷ ರೂಪಾಯಿಗಳವರಗೆ ಇದೆ. ಇದು ಡೆಹಲಿಯ ಎಕ್ಸ್​ ಶೋರೂಂ ದರಗಳಾಗಿವೆ.

    ಇದನ್ನೂ ಓದಿ: Maruti Suzuki: ಪೆಟ್ರೋಲ್-ಡೀಸೆಲ್ ಬೇಡ! ಚಾರ್ಜ್ ಮಾಡೋದು ಬೇಡಾ! ಮಾರುತಿ ಸುಜುಕಿ ತಯಾರಿಸುತ್ತಿದೆ ಹೈಬ್ರಿಡ್​ ಕಾರು

    ಜುಲೈ ತಿಂಗಳಲ್ಲಷ್ಟೇ ಸ್ವಿಫ್ಟ್ ಮತ್ತು ಎಲ್ಲಾ ಸಿಎನ್​ಜಿ ಕಾರುಗಳ ಬೆಲೆಗಳನ್ನು ಮಾರುತಿ ಏರಿಸಿತ್ತು. ಇವೆಲ್ಲಾ ಪ್ರತೀ ಕಾರಿಗೆ 15 ಸಾವಿರ ರೂಪಾಯಿಗಳಷ್ಟು ಏರಿಕೆಯಾಗಿತ್ತು. ಆದರೆ ಈ ಸಲ ಮಾತ್ರ ಎಲ್ಲಾ ಕಾರುಗಳ ಬೆಲೆಯನ್ನೂ ಏರಿಸೋದಾಗಿ ಸಂಸ್ಥೆ ತಿಳಿಸಿದೆ. ಇದು ಕಾರು ಕೊಳ್ಳುವ ಅನೇಕರಿಗೆ ಸ್ವಲ್ಪ ನಿರಾಸೆ ಉಂಟುಮಾಡಿರೋದಂತೂ ಸತ್ಯ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
    Published by:Soumya KN
    First published: