ಲ್ಯಾಪ್ಟಾಪ್ಗಳು (Laptop) ಇತ್ತೀಚಿನ ದಿನಗಳಲ್ಲಿ ಮಾನವನ ಜೀವನದ ಬಹುಮುಖ್ಯ ಅಂಗವಾಗಿದೆ. ಟೆಕ್ನಾಲಜಿ (Technology) ಮುಂದುವರೆದಂತೆ ಇತ್ತೀಚೆಗೆ ಲ್ಯಾಪ್ಟಾಪ್ಗಳನ್ನು ಬಳಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಪ್ರಪಂಚದಲ್ಲೇ ಅತೀ ದೊಡ್ಡ ಟೆಕ್ ಶೋ ಎಂದು ಎನಿಸಿಕೊಂಡಿರುವ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ 2023ರ (CES 2023) ಪ್ರಾರಂಭದ ಮೊದಲೇ ಡೆಲ್ ಕಂಪನಿ (Dell Company) ತನ್ನ ಬ್ರಾಂಡ್ನ ಅಡಿಯಲ್ಲಿ 6 ಲ್ಯಾಪ್ಟಾಪ್ಗಳನ್ನು ಬಿಡುಗಡೆ ಮಾಡಿದೆ. ಆದರೆ ಈ ಟೆಕ್ ಶೋನಲ್ಲಿ ಮಾತ್ರ ಹಲವಾರು ಜನಪ್ರಿಯ ಕಂಪನಿಗಳು ತನ್ನ ಬ್ರಾಂಡ್ಗಳನ್ನು ಬಿಡುಗಡೆ ಮಾಡಲಿದೆ. ಇದೀಗ ಡೆಲ್ ಕಂಪನಿ 6 ಹೊಸ ಗೇಮಿಂಗ್ ಲ್ಯಾಪ್ಟಾಪ್ಗಳನ್ನು ಬಿಡುಗಡೆ ಮಾಡಿದ್ದು, ಲ್ಯಾಪ್ಟಾಪ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಲು ಸಜ್ಜಾಗಿದೆ.
ಜನಪ್ರಿಯ ಕಂಪನಿಯಾಗಿರುವ ಡೆಲ್ ಇದೀಗ ಹೊಸ ವರ್ಷದ ಆರಂಭದಲ್ಲಿ 6 ಹೊಸ ಲ್ಯಾಪ್ಟಾಪ್ಗಳನ್ನು ಬಿಡುಗಡೆ ಮಾಡಿದೆ. ಒಂದೊಂದು ಲ್ಯಾಪ್ಟಾಪ್ಗಳು ಕೂಡ ವಿಶೇಷ ಶೈಲಿಯಲ್ಲಿ ಬಿಡುಗಡೆ ಮಾಡಿದೆ. ಇದರ ಫೀಚರ್ಸ್, ಬೆಲೆ ಹೇಗಿದೆ ಎಂಬುದನ್ನು ತಿಳಿಬೇಕಾದ್ರೆ ಇಲ್ಲಿದೆ ಮಾಹಿತಿ.
ಯಾವೆಲ್ಲಾ ಲ್ಯಾಪ್ಟಾಪ್ಗಳು?
ಇದೀಗ ಡೆಲ್ 6 ಲ್ಯಾಪ್ಗಳನ್ನು ಬಿಡುಗಡೆ ಮಾಡಿರುವ ಸುದ್ದಿ ಫುಲ್ ಸುದ್ದಿಯಾಗಿದೆ. ಇನ್ನು ಈ ಲ್ಯಾಪ್ಟಾಪ್ಗಳನ್ನು ಡೆಲ್ ಜಿ15, ಡೆಲ್ ಜಿ16, ಡೆಲ್ ಅಲೈನ್ವೇರ್ ಎಮ್18, ಅಲೈನ್ವೇರ್ ಎಮ್16, ಅಲೈನ್ವೇರ್ ಎಕ್ಸ್16 ಮತ್ತು ಅಲೈನ್ವೇರ್ ಎಕ್ಸ್14 ಎಂದು ಹೆಸರಿಸಲಾಗಿದೆ.
ಇದನ್ನೂ ಓದಿ: ಒನ್ಪ್ಲಸ್ ಕಂಪನಿಯ ಹೊಸ ಮೊಬೈಲ್ ಅನಾವರಣ! 100W ಚಾರ್ಜಿಂಗ್ ಸ್ಪೀಡ್
ಡೆಲ್ ಜಿ15 ಫೀಚರ್ಸ್
ಡೆಲ್ ಜಿ15 ಲ್ಯಾಪ್ಟಾಪ್ 15 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, ಫುಲ್ ಹೆಚ್ಡಿ ಬ್ಯಾಕ್ಲಿಟ್ ಮತ್ತು ಎಲ್ಇಡಿ ಡಿಸ್ಪ್ಲೇ ಹೊಂದಿರುವ ಎರಡು ಆಯ್ಕೆಗಳಲ್ಲಿ ಬರಲಿದೆ. ಇದರಲ್ಲಿ ಫುಲ್ ಹೆಚ್ಡಿ ಡಿಸ್ಪ್ಲೇ 250 ನಿಟ್ಸ್ ಪೀಕ್ ಬ್ರೈಟ್ನೆಸ್ ಮತ್ತು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಆದರೆ ಎಲ್ಇಡಿ ಡಿಸ್ಪ್ಲೇ 300 ನಿಟ್ಸ್ ಪೀಕ್ ಬ್ರೈಟ್ನೆಸ್ ಮತ್ತು 165Hz ಸ್ಕ್ರೀನ್ ರಿಫ್ರೆಶ್ ರೇಟ್ ಅನ್ನು ಹೊಂದಿರಲಿದೆ. ಈ ಲ್ಯಾಪ್ಟಾಪ್ 13 ಜನ್ ಇಂಟೆಲ್ ಕೋರ್ ಐ9 ಪ್ರೊಸೆಸರ್ ಹೊಂದಿದ್ದು, ವಿಂಡೋಸ್ 11 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 32ಜಿಬಿ ರ್ಯಾಮ್ ಮತ್ತು 2 ಟಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ 6 ಅನ್ನು ಬೆಂಬಲಿಸಲಿದೆ.
ಡೆಲ್ ಜಿ 16 ಲ್ಯಾಪ್ಟಾಪ್
ಈ ಲ್ಯಾಪ್ಟಾಪ್ 16 ಇಂಚಿನ ಡಿಸ್ಪ್ಲೇ ಹೊಂದಿದ್ದು, ಕ್ಯೂಹೆಚ್ಡಿ+ ಬ್ಯಾಕ್ಲಿಟ್ ಎಲ್ಇಡಿ ಡಿಸ್ಪ್ಲೇ ಸೇರಿದಂತೆ ಎರಡು ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು 13 ಜನ್ ಇಂಟೆಲ್ ಕೋರ್ ಐ9 ಪ್ರೊಸೆಸರ್ ಹೊಂದಿದ್ದು, ವಿಂಡೋಸ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 32ಜಿಬಿ ರ್ಯಾಮ್ ಮತ್ತು 2TB ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ 6 ಮತ್ತು RTX ಎತರ್ನೆಟ್ ಅನ್ನು ಬೆಂಬಲಿಸಲಿದೆ. ಈ ಲ್ಯಾಪ್ಟಾಪ್ 56Whr ಬ್ಯಾಟರಿ ಮತ್ತು 86Whr ಬ್ಯಾಟರಿ ಸಾಮರ್ಥ್ಯದ 2 ಆಯ್ಕೆಗಳಲ್ಲಿ ಬರಲಿದೆ.
ಅಲೈನ್ವೇರ್ ಎಮ್18 ಲ್ಯಾಪ್ಟಾಪ್
ಅಲೈನ್ವೇರ್ ಎಮ್18 ಲ್ಯಾಪ್ಟಾಪ್ ಕೂಡ ಕ್ಯೂಹೆಚ್ಡಿ+ ಮತ್ತು ಫುಲ್ಹೆಚ್ಡಿ+ ಡಿಸ್ಪ್ಲೇ ಹೊಂದಿದ ಎರಡು ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇದು 18 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಎರಡೂ ಡಿಸ್ಪ್ಲೇ ಮಾದರಿಗಳು ಡೈನಾಮಿಕ್ ಡಿಸ್ಪ್ಲೇ ಸ್ವಿಚಿಂಗ್ ಟೆಕ್ನಾಲಜಿಯನ್ನು ಹೊಂದಿವೆ. ಇದು NVIDIA GeForce RTX 4090 ಗ್ರಾಫಿಕ್ ಮತ್ತು 64ಜಿಬಿ ರ್ಯಾಮ್ ಮತ್ತು 4TB ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿಕೊಂಡಿದೆ. ಈ ಲ್ಯಾಪ್ಟಾಪ್ 13 ಜನ್ ಇಂಟೆಲ್ ಕೋರ್ ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ. ಇದು ಡಾಲ್ಬಿ ವಿಷನ್, ಡಾಲ್ಬಿ ಅಟ್ಮೋಸ್, ಫುಲ್ಹೆಚ್ಡಿ IR ಕ್ಯಾಮೆರಾವನ್ನು ಒಳಗೊಂಡಿದೆ.
ಅಲೈನ್ವೇರ್ ಎಮ್16 ಲ್ಯಾಪ್ಟಾಪ್
ಅಲೈನ್ವೇರ್ ಎಮ್16 ಲ್ಯಾಪ್ಟಾಪ್ 16 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ QHD+ ಡಿಸ್ಪ್ಲೇ ಮತ್ತು FHD+ ಎಂಬ ಎರಡು ವಿಧಗಳಲ್ಲಿ ಬಿಡುಗಡಯಾಗಲಿದೆ. ಇನ್ನು ಈ ಎರಡು ಡಿಸ್ಪ್ಲೇ ಮಾದರಿಗಳು ಕೂಡ ಡೈನಾಮಿಕ್ ಡಿಸ್ಪ್ಲೇ ಸ್ವಿಚಿಂಗ್ ತಂತ್ರಜ್ಞಾನವನ್ನು ಬೆಂಬಲಿಸಲಿವೆ. ಇದು 13 ಜನ್ ಇಂಟೆಲ್ ಕೋರ್ ಪ್ರೊಸೆಸರ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್ಟಾಪ್ 1 ಲೇನ್ ಬ್ಯಾಕ್ಲಿಟ್ ಕೀಬೋರ್ಡ್, ಪ್ರತಿ-ಕೀ ಅಲೈನ್ಎಫ್ಎಕ್ಸ್ ಬ್ಯಾಕ್ಲಿಟ್ ಕೀಬೋರ್ಡ್ ಮತ್ತು CherryMX ಅಲ್ಟ್ರಾ ಲೋ ಪ್ರೊಫೈಲ್ ಮೆಕ್ಯಾನಿಕಲ್ ಕೀಬೋರ್ಡ್ ಅನ್ನು ಪಡೆದಿದೆ.
ಅಲೈನ್ವೇರ್ ಎಕ್ಸ್16 ಲ್ಯಾಪ್ಟಾಪ್ ಫೀಚರ್ಸ್
ಅಲೈನ್ವೇರ್ ಎಕ್ಸ್16 ಲ್ಯಾಪ್ಟಾಪ್ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗುತ್ತದೆ. ಇವುಗಳು 14 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು i9, i7 i5 ಕಾನ್ಫಿಗರೇಶನ್ಗಳಲ್ಲಿ ಲಭ್ಯವಿರುವ 13 =ಜನ್ ಇಂಟೆಲ್ ಕೋರ್ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್ಟಾಪ್ ಫುಲ್ ಹೆಚ್ಡಿ ಐಆರ್ ಕ್ಯಾಮೆರಾ, ವೈಫೈ 6ಇ, ಬ್ಲೂಟೂತ್ 5.3 ಮತ್ತು ಗೇಮಿಂಗ್ಗಾಗಿ ಏಲಿಯನ್ವೇರ್ ಕಮಾಂಡ್ ಸೆಂಟರ್ 6.0 ಗೆ ಬೆಂಬಲವನ್ನು ಸಹ ಹೊಂದಿದೆ. ಇದು 90Whr ಬ್ಯಾಟರಿಯೊಂದಿಗೆ ಬರುತ್ತದೆ.
ಅಲೈನ್ವೇರ್ ಎಕ್ಸ್14 ಲ್ಯಾಪ್ಟಾಪ್
ಅಲೈನ್ವೇರ್ ಎಕ್ಸ್14 ಲ್ಯಾಪ್ಟಾಪ್ 14 ಇಂಚಿನ ಕ್ಯೂ ಹೆಚ್ಡಿ+ ಡಿಸ್ಪ್ಲೇಯನ್ನು ಹೊಂದಿದೆ. ಇದು 13 ಜನ್ ಇಂಟೆಲ್ ಕೋರ್ ಪ್ರೊಸೆಸರ್ನಿಂದ ಕಾರ್ಯನಿರ್ವಹಿಸಲಿದೆ. ಇದು ಫುಲ್ಹೆಚ್ಡಿ ಐಆರ್ ಕ್ಯಾಮೆರಾ, ವೈಫೈ 6ಇ, ಬ್ಲೂಟೂತ್ 5.3 ಮತ್ತು ಗೇಮಿಂಗ್ಗಾಗಿ ಏಲಿಯನ್ವೇರ್ ಕಮಾಂಡ್ ಸೆಂಟರ್ 6.0 ಗೆ ಬೆಂಬಲವನ್ನು ಸಹ ಹೊಂದಿದೆ. ಇದು 80.5Whr ಬ್ಯಾಟರಿಯೊಂದಿಗೆ ಬರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ