• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • OnePlus 11R 5G: ಒನ್​​ಪ್ಲಸ್​ ಕಂಪೆನಿಯ ಬಹುನಿರೀಕ್ಷಿತ ಸ್ಮಾರ್ಟ್​​ಫೋನ್​ನ ಪ್ರೀಬುಕಿಂಗ್ ಆರಂಭ! ಫೀಚರ್ಸ್ ನೋಡಿದ್ರೆ ಖರೀದಿಸೋದು ಗ್ಯಾರಂಟಿ

OnePlus 11R 5G: ಒನ್​​ಪ್ಲಸ್​ ಕಂಪೆನಿಯ ಬಹುನಿರೀಕ್ಷಿತ ಸ್ಮಾರ್ಟ್​​ಫೋನ್​ನ ಪ್ರೀಬುಕಿಂಗ್ ಆರಂಭ! ಫೀಚರ್ಸ್ ನೋಡಿದ್ರೆ ಖರೀದಿಸೋದು ಗ್ಯಾರಂಟಿ

ಒನ್​ಪ್ಲಸ್​ 11ಆರ್​​ ಸ್ಮಾರ್ಟ್​​ಫೋನ್

ಒನ್​ಪ್ಲಸ್​ 11ಆರ್​​ ಸ್ಮಾರ್ಟ್​​ಫೋನ್

ಒನ್​​ಪ್ಲಸ್​ ಕಂಪೆನಿಯ ಬಹುನಿರೀಕ್ಷಿತ ಒನ್​ಪ್ಲಸ್​ 11ಆರ್​ 5ಜಿ ಸ್ಮಾರ್ಟ್​ಫೋನ್​ ಅನ್ನು ಜನಪ್ರಿಯ ಇಕಾಮರ್ಸ್​ ವೆಬ್​​ಸೈಟ್​ ಆಗಿರುವ ಅಮೆಜಾನ್​ ಇಂಡಿಯಾದ ಮೂಲಕ ಪ್ರೀಬುಕಿಂಗ್ ಮಾಡುವ ಮೂಲಕ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ ಈ ಸೇಲ್​ನಲ್ಲಿ ಬೆಲೆ ಹೇಗಿದೆ ಅನ್ನೋದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಮುಂದೆ ಓದಿ ...
  • Share this:

    ಸ್ಮಾರ್ಟ್​​ಫೋನ್​ ಕಂಪೆನಿಗಳಲ್ಲಿ ಪ್ರೀಮಿಯಮ್​ ಸ್ಮಾರ್ಟ್​ಫೋನ್​ಗಳನ್ನು (Premium Smartphones) ಬಿಡುಗಡೆ ಮಾಡುವಲ್ಲಿ ಕೆಲವೇ ಕೆಲವು ಕಂಪೆನಿಗಳು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇನ್ನೂ ಕೆಲವು ಕಂಪೆನಿಗಳು ಬಜೆಟ್​ ಬೆಲೆಯಲ್ಲೂ ಮತ್ತು ದುಬಾರಿ ಬೆಲೆಯ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಮುಂಚೂಣಿಯಲ್ಲಿದೆ. ಪ್ರೀಮಿಯಂ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವಲ್ಲಿ ಒನ್​ಪ್ಲಸ್​ ಕಂಪೆನಿ (OnePlus Company) ಭಾರೀ ಮುಂಚೂಣಿಯಲ್ಲಿದೆ. ಇದೀಗ ಕಳೆದ ಫೆಬ್ರವರಿ 7, 2023 ರಂದು ನಡೆದ ಕ್ಲೌಡ್​ 11 ಈವೆಂಟ್‌ನಲ್ಲಿ ಬಹುನಿರೀಕ್ಷಿತ ಪ್ರೀಮಿಯಂ ಒನ್​ಪ್ಲಸ್​ 11 ಸ್ಮಾರ್ಟ್‌ಫೋನ್ ಜೊತೆಗೆ ಬಿಡುಗಡೆಯಾಗಿದ್ದ ಒನ್​ಪ್ಲಸ್ 11ಆರ್​ 5ಜಿ (OnePlus 11R 5G)  ಸ್ಮಾರ್ಟ್‌ಫೋನನ್ನು ಇಂದಿನಿಂದ ಅಮೆಜಾನ್ ಇಂಡಿಯಾ (Amazon India), ಒನ್​ಪ್ಲಸ್​ ಸ್ಟೋರ್ ಮತ್ತು ಕಂಪೆನಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರೀ-ಬುಕ್ ಮೂಲಕ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.


    ಒನ್​​ಪ್ಲಸ್​ ಕಂಪೆನಿಯ ಬಹುನಿರೀಕ್ಷಿತ ಒನ್​ಪ್ಲಸ್​ 11ಆರ್​ 5ಜಿ ಸ್ಮಾರ್ಟ್​ಫೋನ್​ ಅನ್ನು ಜನಪ್ರಿಯ ಇಕಾಮರ್ಸ್​ ವೆಬ್​​ಸೈಟ್​ ಆಗಿರುವ ಅಮೆಜಾನ್​ ಇಂಡಿಯಾದ ಮೂಲಕ ಪ್ರೀಬುಕಿಂಗ್ ಮಾಡುವ ಮೂಲಕ ಖರೀದಿ ಮಾಡಬಹುದಾಗಿದೆ.


    ಒನ್​​ಪ್ಲಸ್​ 11ಆರ್​ 5ಜಿ ಸ್ಮಾರ್ಟ್​​​ಫೋನ್​ನ ಸ್ಪೆಷಲ್ ಫೀಚರ್ಸ್


    ಒನ್​​ಪ್ಲಸ್​ 11ಆರ್​ 5ಜಿ ಸ್ಮಾರ್ಟ್‌ಫೋನ್ 6.74 ಇಂಚಿನ ಫುಲ್​ ಹೆಚ್​ಡಿ+ 2772x1240 ಪಿಕ್ಸೆಲ್​ ರೆಸಲ್ಯೂಶನ್ ಸಾಮರ್ಥ್ಯದ ಕರ್ವ್ಡ್ ಅಮೋಲ್ಡ್​ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 40Hz ರಿಂದ 120Hz ನ ಅಡಾಪ್ಟಿವ್ ಡೈನಾಮಿಕ್ ರಿಫ್ರೆಶ್ ರೇಟ್, 1000Hz ವರೆಗೆ ಟಚ್ ರೆಸ್ಪಾನ್ಸ್, 4450 ppi ಬ್ರೈಟ್‌ನೆಸ್, 450ppi ಪಿಕ್ಸೆಲ್ ಸಾಂದ್ರತೆ, 1,450 ನಿಟ್ಸ್ ಪೀಕ್ ಬ್ರೈಟ್‌ನೆಸ್ ಫೀಚರ್ಸ್​ಗಳನ್ನು ಒಳಗೊಂಡಿದೆ.


    ಇದನ್ನೂ ಓದಿ: ಏರ್​ಟೆಲ್​ನಿಂದ ಹೊಸ ರೀಚಾರ್ಜ್​ ಪ್ಲ್ಯಾನ್​ ಬಿಡುಗಡೆ; 15 ಜಿಬಿ ಡೇಟಾ ಉಚಿತ


    ಕ್ಯಾಮೆರಾ ಸೆಟಪ್​ ಹೇಗಿದೆ?


    ಇನ್ನು ಒನ್​​ಪ್ಲಸ್​ 11ಆರ್​​​ ಸ್ಮಾರ್ಟ್​​ಫೋನ್​ನ ಫೀಚರ್ಸ್​ ಬಗ್ಗೆ ಹೇಳುವುದಾದರೆ, ಈ ಹೊಸ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಸೋನಿ IMX890 ಪ್ರಾಥಮಿಕ ಲೆನ್ಸ್, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಮತ್ತು 120 ಡಿಗ್ರಿ ಅಲ್ಟ್ರಾ ವೈಡ್ ಲೆನ್ಸ್‌ನೊಂದಿಗೆ 4cm ಮ್ಯಾಕ್ರೋ ಕ್ಯಾಮೆರಾಗಳನ್ನು ಒಳಗೊಂಡಿದೆ. ಇನ್ನು ಇದರಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಹೋಲ್ ಪಂಚ್ ಕಟೌಟ್‌ನಲ್ಲಿ 16 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು ಈ ಕ್ಯಾಮೆರಾದ ಮೂಲಕ 4ಕೆ ಸಾಮರ್ಥ್ಯದಲ್ಲಿ ವಿಡಿಯೋ ರೆಕಾರ್ಡ್​ ಮಾಡಬಹುದು.


    ಒನ್​ಪ್ಲಸ್​ 11ಆರ್​​ ಸ್ಮಾರ್ಟ್​​ಫೋನ್


    ಪ್ರೊಸೆಸರ್ ಸಾಮರ್ಥ್ಯ


    ಒನ್​ಪ್ಲಸ್​ 11ಆರ್​​ ಸ್ಮಾರ್ಟ್​​ಫೋನ್​ ಸ್ನಾಪ್​​ಡ್ರಾಗನ್​ 8+ ಜೆನ್​ 1 ಪ್ರೊಸೆಸರ್ ಮತ್ತು Adreno 740 ಜಿಪಿಯುಪ್ರೊಸೆಸರ್​ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್​ 13 ColorOS 13.0 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಜಿಪಿಎ ಫ್ರೇಮ್ ಸ್ಟೆಬಿಲೈಸರ್ 4.0 ನಂತಹ ಹೈಪರ್‌ಬೂಸ್ಟ್ ಗೇಮಿಂಗ್ ಎಂಜಿನ್‌ನಲ್ಲಿ ಇತ್ತೀಚಿನ ಆವಿಷ್ಕಾರಗಳನ್ನು ಹೊಂದಿದೆ.


    ಬ್ಯಾಟರಿ ಫೀಚರ್ಸ್


    ಒನ್​ಪ್ಲಸ್​ 11ಆರ್ ಸ್ಮಾರ್ಟ್‌ಫೋನ್ ಸೂಪರ್ ಫಾಸ್ಟ್ 100W ಸೂಪರ್​​ವೂಕ್​ ವೇಗದ ಚಾರ್ಜಿಂಗ್ ಬೆಂಬಲಿಸುವ ಬೃಹತ್ 5000mAh ಬ್ಯಾಟರಿಯನ್ನು ಹೊಂದಿದೆ. ಇನ್ನು ಈ ಒನ್​ಪ್ಲಸ್​ 11ಆರ್ ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ, 4ಜಿ, ವೈಫೈ, ಬ್ಲೂಟೂತ್ 5.3, ಎನ್​​ಎಫ್​ಸಿ ಮತ್ತು ಜಿಪಿಎಸ್​ನಂತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.




    ಬೆಲೆ ಮತ್ತು ಲಭ್ಯತೆ


    ಒನ್​ಪ್ಲಸ್​ 11ಆರ್ 5ಜಿ ಸ್ಮಾರ್ಟ್‌ಫೋನನ್ನು ಇಂದಿನಿಂದ ಅಂದರೆ ಫೆಬ್ರವರಿ 21ರಿಂದ ಅಮೆಜಾನ್ ಇಂಡಿಯಾ, ಒನ್​ಪ್ಲಸ್​ ಸ್ಟೋರ್ ಮತ್ತು ಈ ಕಂಪೆನಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರೀ-ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಗ್ರಾಹಕರು  8ಜಿಬಿ ರ್‍ಯಾಮ್ ಮತ್ತು 128ಜಿಬಿ ಮೊಮೊರಿ ಸಾಮರ್ಥ್ಯದ ಸ್ಮಾರ್ಟ್​​ಫೋನ್​ 39,999 ರೂಪಾಯಿ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ಹೈ-ಎಂಡ್ 16ಜಿಬಿ ರ್‍ಯಾಮ್ ಮತ್ತು 256ಜಿಬಿ ಮೆಮೊರಿ ಸಾಮರ್ಥ್ಯದ ಸ್ಮಾರ್ಟ್​ಫೋನ್​ 44,999 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಒನ್​ಪ್ಲಸ್​ 11ಆರ್ 5ಜಿ ಸ್ಮಾರ್ಟ್‌ಫೋನನ್ನು ಸೋನಿಕ್​ ಬ್ಲ್ಯಾಕ್​ ಮತ್ತು ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಬುಕ್ ಮಾಡಬಹುದಾಗಿದೆ

    Published by:Prajwal B
    First published: