HOME » NEWS » Tech » PRE BOOK APPLES LATEST LAUNCHES AT RELIANCE DIGITAL AND GET AMAZING BENEFITS ZP

ಬೊಂಬಾಟ್ ಆಫರ್‌ಗಳೊಂದಿಗೆ ಆ್ಯಪಲ್ ಐಪ್ಯಾಡ್ ಮತ್ತು ವಾಚ್ ಪ್ರೀ ಬುಕಿಂಗ್‌ ಆರಂಭ

ಕೈಗೆಟುಕುವ ದರದ ಆ್ಯಪಲ್ ವಾಚ್ SE ವಾಚ್‌ OS 7 ನೊಂದಿಗೆ ಪೂರ್ವ ಲೋಡ್ ಆಗಿದ್ದು, ಸಿರೀಸ್ 6 ರಂತೆಯೇ ದೊಡ್ಡ ಗಾತ್ರದ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ.

news18-kannada
Updated:September 26, 2020, 10:06 PM IST
ಬೊಂಬಾಟ್ ಆಫರ್‌ಗಳೊಂದಿಗೆ ಆ್ಯಪಲ್ ಐಪ್ಯಾಡ್ ಮತ್ತು ವಾಚ್ ಪ್ರೀ ಬುಕಿಂಗ್‌ ಆರಂಭ
ಸಾಂದರ್ಭಿಕ ಚಿತ್ರ
  • Share this:
ರಿಲಯನ್ಸ್ ಡಿಜಿಟಲ್ ಹೊಸದಾಗಿ ಲಾಂಚ್ ಆಗಿರುವ ಆ್ಯಪಲ್ ವಾಚ್ ಸಿರೀಸ್ 6, ಆ್ಯಪಲ್ ವಾಚ್ SE ಮತ್ತು 8 ನೇ ಜನರೇಷನ್ ಐಪ್ಯಾಡ್ ಗಳ ಮೇಲೆ ಪ್ರೀ ಬುಕ್ಕಿಂಗ್ ಆಫರ್‌ಗಳ್ನು ನೀಡಿದ್ದು, ಖರೀದಿದಾರರು ಎಲ್ಲಾ ರಿಲಯನ್ಸ್ ಡಿಜಿಟಲ್ ಸ್ಟೋರ್​ಗಳು, ಮೈ ಜಿಯೋ ಸ್ಟೋರ್​ ಮತ್ತು www.reliancedigital.in ನಲ್ಲಿ ಪ್ರೀ ಬುಕಿಂಗ್ ಮೂಲಕ ಖರೀದಿಸಬಹುದಾಗಿದೆ.

ಆ್ಯಪಲ್ ವಾಚ್ ಸಿರೀಸ್ 6 ಮತ್ತು ವಾಚ್ SE ರೀಟೆಲ್ ಮಾರಾಟವು ಅಕ್ಟೋಬರ್ 1, 2020 ರಿಂದ ಪ್ರಾರಂಭವಾಗಲಿದೆ. ಗ್ರಾಹಕರು ಈಗ ತಮ್ಮ ಹತ್ತಿರದ ರಿಲಯನ್ಸ್ ಡಿಜಿಟಲ್ ಅಥವಾ ಮೈ ಜಿಯೋ ಸ್ಟೋರ್‌ಗಳಲ್ಲಿ ಮೊದಲೇ ಬುಕ್ ಮಾಡಬಹುದು. ಸೆಪ್ಟೆಂಬರ್ 30 ರವರೆಗೆ www.reliancedigital.in ನಲ್ಲಿ ಪ್ರಮುಖ ಬ್ಯಾಂಕುಗಳ ಕಾರ್ಡ್‌ಗಳ ಮೇಲೆ ವಿಶೇಷ ಅನಿಯಮಿತ 5% ಕ್ಯಾಶ್‌ಬ್ಯಾಕ್ ದೊರೆಯಲಿದೆ.

ಹೊಸ ಆ್ಯಪಲ್ ವಾಚ್ ಸಿರೀಸ್​ 6 ಹೊಸದಾಗಿ ಬ್ಲಡ್ ಆಕ್ಸಿಜನ್ ಪತ್ತೆ ವೈಶಿಷ್ಟ್ಯ, ಆಲ್ ಸ್ಲೀಪ್ ಅಪ್ಲಿಕೇಶನ್, ಯಾವಾಗಲೂ ಆನ್ ಇರುವ ರೆಟಿನಾ ಡಿಸ್ಪ್ಲೇ, ಫಾಲ್ ಡಿಟೆಕ್ಷನ್ ಮತ್ತು ತುರ್ತು SOS ಸೇವೆಗಳೊಂದಿಗೆ ಬಿಡುಗಡೆಯಾಗಿದೆ. ಆ್ಯಪಲ್ ವಾಚ್ ಸರಣಿ 6 ವಾಟರ್ ರೆಸಿಸ್ಟೆಂಟ್ ಮತ್ತು ಅಂತರ್ನಿರ್ಮಿತ ಆಲ್ಟಿಮೀಟರ್​ನೊಂದಿಗೆ ಲಭ್ಯವಿರಲಿದೆ. ಇದರಲ್ಲಿ ಎರಡು ಆವೃತ್ತಿಗಳಿದ್ದು, ಒಂದು ಜಿಪಿಎಸ್ ಮಾತ್ರ, ಮತ್ತೊಂದು ಜಿಪಿಎಸ್ ಮತ್ತು ಸೆಲ್ಯುಲಾರ್ ನೊಂದಿಗೆ ಲಭ್ಯವಿರುತ್ತದೆ. ಆ್ಯಪಲ್ ವಾಚ್ ಸಿರೀಸ್ 6 ಬೆಲೆಯು ರೂ. 40,900 / - ನಿಂದ ಪ್ರಾರಂಭವಾಗುತ್ತದೆ

ಕೈಗೆಟುಕುವ ದರದ ಆ್ಯಪಲ್ ವಾಚ್ SE ವಾಚ್‌ OS 7 ನೊಂದಿಗೆ ಪೂರ್ವ ಲೋಡ್ ಆಗಿದ್ದು, ಸಿರೀಸ್ 6 ರಂತೆಯೇ ದೊಡ್ಡ ಗಾತ್ರದ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. SE ಸಹ S5 ಡ್ಯುಯಲ್-ಕೋರ್ SiP ಯೊಂದಿಗೆ ಬರುತ್ತದೆ ಮತ್ತು ಇತ್ತೀಚಿನ ಚಲನೆಯ ಸಂವೇದಕಗಳು ಮತ್ತು ಮೈಕ್ರೊಫೋನ್, ಆರೋಗ್ಯ ಮತ್ತು ಸುರಕ್ಷತಾ ಸಾಮರ್ಥ್ಯಗಳನ್ನು ಹೊಂದಿದೆ. 50 ಮೀ ವರೆಗೆ ನೀರು ನಿರೋಧಕವಾಗಿದೆ. ಇದರ ಬೆಲೆಯು  ರೂ 29,900 / - ರಿಂದ ಪ್ರಾರಂಭವಾಗುತ್ತದೆ. ಜಿಪಿಎಸ್ ಮತ್ತು ಜಿಪಿಎಸ್ + ಸೆಲ್ಯುಲಾರ್ ಆಯ್ಕೆಗಳಲ್ಲಿ ಆ್ಯಪಲ್ ವಾಚ್ SE ವಾಚ್‌ ಖರೀದಿಸಬಹುದು.

ಹೊಸ ಐಪ್ಯಾಡ್ 8 ನೇ ಪೀಳಿಗೆ A 12 ಬಯೋನಿಕ್ ಚಿಪ್ ಮತ್ತು 64-ಬಿಟ್ ನ್ಯೂರಾಲ್ ಇಂಜಿನ್ ಹೊಂದಿರುವ 10.2 ಇಂಚಿನ ಮಲ್ಟಿ-ಟಚ್ ರೆಟಿನಾ ಡಿಸ್ಪ್ಲೇ ನೀಡಲಾಗಿದೆ. ಡೇಟಾ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಇದು ಇತ್ತೀಚಿನ iOS 14 ಪೂರ್ವ ಲೋಡ್ ಮತ್ತು ಸುರಕ್ಷಿತ ಟಚ್ ಐಡಿಯೊಂದಿಗೆ ಬರುತ್ತದೆ. 8 ನೇ ಪೀಳಿಗೆ ಐಪ್ಯಾಡ್ ಮೊದಲ ತಲೆಮಾರಿನ ಆ್ಯಪಲ್ ಪೆನ್ಸಿಲ್ ಅನ್ನು ತಡೆರಹಿತ ಟಿಪ್ಪಣಿ ತಯಾರಿಕೆ ಅಥವಾ ಸ್ಕೆಚಿಂಗ್ಗಾಗಿ ಬೆಂಬಲಿಸುತ್ತದೆ.
Youtube Video

ಇದು ಸಿಲ್ವರ್, ಸ್ಪೇಸ್ ಗ್ರೇ ಮತ್ತು ಗೋಲ್ಡ್ ಫೀನಿಷ್ ಬಣ್ಣಗಳಲ್ಲಿ ದೊರೆಯಲಿದ್ದು, ವೈ-ಫೈ ಮತ್ತು ವೈ-ಫೈ + ಸೆಲ್ಯುಲಾರ್ ಮಾದರಿಗಳಲ್ಲಿ ಬರುತ್ತದೆ. ಈ ಐಪ್ಯಾಡ್ 32 ಜಿಬಿ ಮತ್ತು 128 ಜಿಬಿ ಶೇಖರಣಾ ಆಯ್ಕೆಗಳಲ್ಲಿ ಲಭ್ಯವಿದ್ದು, ಇದರ ಬೆಲೆ ರೂ. 29,900 ರಿಂದ ಪ್ರಾರಂಭವಾಗುತ್ತದೆ.
Published by: zahir
First published: September 26, 2020, 10:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories