Technology Update: ಕೊರೊನಾ ಸಾಂಕ್ರಾಮಿಕದ ಬಳಿಕ ವರ್ಕ್ ಫ್ರಮ್ ಹೋಮ್ ಮಾಡುವವರ ಸಂಖ್ಯೆ ಹೆಚ್ಚಾದಂತೆ ಲ್ಯಾಪ್ಟಾಪ್, ಸ್ಮಾರ್ಟ್ಫೋನ್, ಇಂಟರ್ನೆಟ್, ಹೆಡ್ಫೋನ್ ಮುಂತಾದವುಗಳ ಖರೀದಿ, ಬಳಕೆಯೂ ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಂತೆ ಹೊಸ ಹೊಸ ಉತ್ಪನ್ನಗಳು ಬಿಡುಗಡೆಯಾಗುತ್ತಿದ್ದು ಅಕರ್ಷಕ ಬೆಲೆಯಲ್ಲಿ, ರಿಯಾಯಿತಿ ಬೆಲೆಯಲ್ಲಿ ದೊರೆಯುತ್ತದೆ. ಈ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಇತರೆ ಉತ್ಪನ್ನಗಳೊಂದಿಗೆ ಸ್ಪರ್ಧೆಗಿಳಿಯುತ್ತದೆ.
ಈಗ, ಪೋರ್ಟ್ರೋನಿಕ್ಸ್ ಹಾರ್ಮೋನಿಕ್ಸ್ 230 ವೈರ್ಲೆಸ್ ನೆಕ್ಬ್ಯಾಂಡ್ ಶೈಲಿಯ ಹೆಡ್ಫೋನ್ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಬಾಹ್ಯ ಶಬ್ದಗಳನ್ನು ಎದುರಿಸಲು ಅವು ಸಕ್ರಿಯ ಸಿವಿಸಿ 8.0 ಶಬ್ದ ಕಡಿತ ತಂತ್ರಜ್ಞಾನದೊಂದಿಗೆ ಬರುತ್ತವೆ. ಹಾರ್ಮೋನಿಕ್ಸ್ 230ಯನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಏಳು ಗಂಟೆಗಳವರೆಗೆ ಇರುತ್ತದೆ ಎಂದು ಪೋರ್ಟ್ರೋನಿಕ್ಸ್ ಕಂಪನಿ ಹೇಳಿಕೊಂಡಿದೆ. ಅಲ್ಲದೆ, ಸದ್ಯ ಇದರ ಬೆಲೆ ಕೇವಲ 999 ರೂ. ಹೆಡ್ಫೋನ್ಗಳು 10 ಎಂಎಂ ಡ್ರೈವರ್ಗಳನ್ನು ಹೊಂದಿದ್ದು, ಬ್ಲೂಟೂತ್ 5.0 ಸಪೋರ್ಟ್ ಅನ್ನು ಹೊಂದಿದೆ.
ಅಲ್ಲದೆ, ಪೋರ್ಟ್ರೋನಿಕ್ಸ್ ಹಾರ್ಮೋನಿಕ್ಸ್ 230 ಯಾವುದೇ ದಿಕ್ಕಿನಿಂದಲೂ ಸ್ಪ್ಲ್ಯಾಶ್ ಪ್ರತಿರೋಧ ತೋರಲು ಐಪಿಎಕ್ಸ್ 4 ಪ್ರಮಾಣೀಕರಿಸಲ್ಪಟ್ಟಿದೆ.
ಭಾರತದಲ್ಲಿ ಪೋರ್ಟ್ರೋನಿಕ್ಸ್ ಹಾರ್ಮೋನಿಕ್ಸ್ 230 ಬೆಲೆ, ಲಭ್ಯತೆ
ಪೋರ್ಟ್ರೋನಿಕ್ಸ್ ಹಾರ್ಮೋನಿಕ್ಸ್ 230 ಬೆಲೆ ರೂ. 1,999 ಆಗಿದ್ದು, ಆರಂಭಿಕ ಕೊಡುಗೆಯಾಗಿ ಕೇವಲ 999 ರೂ. ಗೆ ನೀಡುತ್ತಿದೆ. ಆದರೆ, ಈ ಬೆಲೆ ಎಷ್ಟು ದಿನಗಳ ಕಾಲ ಎಂಬುದು ತಿಳಿದುಬಂದಿಲ್ಲ. ಈ ನೆಕ್ಬ್ಯಾಂಡ್ ಶೈಲಿಯ ಹೆಡ್ಫೋನ್ಗಳು ಪ್ರಮುಖ ಆನ್ಲೈನ್ ಮತ್ತು ಆಫ್ಲೈನ್ ಮಳಿಗೆಗಳಲ್ಲಿ ಕಪ್ಪು ಮತ್ತು ನೀಲಿ ಬಣ್ಣದ ಮಾಡೆಲ್ಗಳಲ್ಲಿ ದೊರೆಯುತ್ತದೆ.
ಪೋರ್ಟ್ರೋನಿಕ್ಸ್ ಹಾರ್ಮೋನಿಕ್ಸ್ 230 ವಿಶೇಷಣಗಳು, ವೈಶಿಷ್ಟ್ಯಗಳು
1) 20 ನಿಮಿಷಗಳುಚಾರ್ಜ್ ಮಾಡಿದರೆ 4 ಗಂಟೆ ಪ್ಲೇ ಟೈಮ್: 20 ನಿಮಿಷಗಳ ಕಾಲ ಒಮ್ಮೆ ಚಾರ್ಜ್ ಮಾಡಿದರೆ 4 ಗಂಟೆಗಳ ಕಾಲ ಸಂಗೀತ ಕೇಳಬಹುದು. ಮತ್ತು ನೀವು ಅವಸರದಲ್ಲಿದ್ದಾಗ ಹಾರ್ಮೋನಿಕ್ಸ್ 230 ಬ್ಲೂಟೂತ್ ಹೆಡ್ಫೋನ್ಗಳನ್ನು 5 ನಿಮಿಷಗಳ ಕಾಲ ರೀಚಾರ್ಜ್ ಮಾಡಿ 2 ಗಂಟೆಗಳ ಕಾಲ ಪ್ಲೇ ಟೈಮ್ ಆನಂದಿಸಬಹುದು.
2) ಉನ್ನತ-ಗುಣಮಟ್ಟದ ಧ್ವನಿ: 10 ಎಂಎಂ ಡ್ರೈವರ್ಗಳು (ಸಾಮಾನ್ಯ ಇಯರ್ಫೋನ್ಗಳಿಗಿಂತ 20% ದೊಡ್ಡದಾಗಿದೆ) ಜೈವಿಕ ಸೆಲ್ಯುಲೋಸ್ ಡಯಾಫ್ರಾಮ್ ಅನ್ನು ಹೊಂದಿದ್ದು, ಹೆಚ್ಚಿನ ಸ್ಪಷ್ಟತೆ ಇರುತ್ತದೆ.
3) ಸಿವಿಸಿ 8.0 ಶಬ್ದ ಕಡಿತ ತಂತ್ರಜ್ಞಾನದೊಂದಿಗೆ ಫೋನ್ ಕಾಲ್ ಸ್ಪಷ್ಟವಾಗಿ ಕೇಳಿಸುತ್ತದೆ: ನೀವು ಗದ್ದಲದ ವಾತಾವರಣದಲ್ಲಿದ್ದರೂ ಸಹ ಅಸಾಧಾರಣ ಸ್ಪಷ್ಟತೆಯಲ್ಲಿ ನಿಮ್ಮ ಧ್ವನಿ ಇತರರಿಗೆ ಕೇಳಿಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಲು ಹಿನ್ನೆಲೆ ಶಬ್ದವನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವಾಗ ನಿಮ್ಮ ಧ್ವನಿಯನ್ನು ವರ್ಧಿಸಲಾಗುತ್ತದೆ.
4) ದಕ್ಷತಾಶಾಸ್ತ್ರದ 3D ಕಂಫರ್ಟ್: ಹಾರ್ಮೋನಿಕ್ಸ್ ಬ್ಲೂಟೂತ್ ಹೆಡ್ಫೋನ್ಗಳು ಹಗುರವಾದ ದ್ರವ ಸಿಲಿಕೋನ್ ನೆಕ್ಬ್ಯಾಂಡ್ ಅನ್ನು ಹೊಂದಿದ್ದು, ನಿಮ್ಮ ಭುಜಗಳ ಮೇಲೆ ಹಿತಕರವಾದ ಫಿಟ್ ಮತ್ತು ಉತ್ತಮ ಆಕಾರವನ್ನು ಉಳಿಸಿಕೊಳ್ಳುವುದನ್ನು ಖಚಿತಪಡಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ