Video: ವಿಭಿನ್ನವಾಗಿದೆ E-ಸ್ಕೂಟರ್; ರಸ್ತೆಯಲ್ಲೂ ಓಡಿಸಬಹುದು..ಕೈಯಲ್ಲೂ ಹಿಡಿದುಕೊಂಡು ಹೋಗಬಹುದು!

ಎಲೆಕ್ಟ್ರಿಕ್​ ಸ್ಕೂಟರ್​

ಎಲೆಕ್ಟ್ರಿಕ್​ ಸ್ಕೂಟರ್​

ಈ ಸ್ಕೂಟರ್​ ಸೂಟ್​ಕೇಸ್​ ರೂಪದಲ್ಲಿದೆ, ಟಯರ್​ನಿಂದ ಕುಳಿತುಕೊಳ್ಳುವ ಸೀಟಿನವರೆಗೆ ಗಾಳಿ ತುಂಬಿಸಿ ನಂತರ ಚಲಾಯಿಸುವಂತೆ ಅಭಿವೃದ್ಧಿಪಡಿಸಿದ್ದಾರೆ. ಟೋಕಿಯೋ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ವಿನ್ಯಾಸ ಮಾಡಿದ್ದಾರೆ.

  • Share this:

    ಭಾರತ ಸೇರಿದಂತೆ ಪ್ರಪಂಚದಾದ್ಯಂತ ಅನೇಕ ದೇಶಗಳು ಎಲೆಕ್ಟ್ರಿಕ್​ ವಾಹನಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿವೆ. ಹೊಸ ಬಗೆಯ, ಆಕರ್ಷಕ ಲುಕ್​, ವಿನೂತನ ಫೀಚರ್ಸ್​ ಬಳಕೆಯ ಎಲೆಕ್ಟ್ರಿಕ್​ ವಾಹನಗಳನ್ನು ಕಂಡುಹಿಡಿಯುತ್ತಿವೆ. ಅದರಂತೆ ಇದೀಗ ಟೋಕಿಯೊ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಎಲೆಕ್ಟ್ರಿಕ್​ ಸ್ಕೂಟರ್​ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ನೂತನ ಸ್ಕೂಟರ್​ ಈವರೆಗೆ ಮಾರುಕಟ್ಟೆಗೆ ಬಂದ ಎಲೆಕ್ಟ್ರಿಕ್​ ಸ್ಕೂಟರ್​ಗಿಂತ ಭಿನ್ನವಾಗಿದೆ.


    ಹೌದು. ನೂತನ ಸ್ಕೂಟರ್​ ಗಾಳಿ ತುಂಬಿಸಿ ಓಡಾಡುವಂತೆ ಸೃಷ್ಠಿಸಲಾಗಿದೆ. ಬೇಡವೆಂದಾದರೆ ಗಾಳಿ ತೆಗೆದು ಕೈಯಲ್ಲಿ ಹಿಡಿದುಕೊಂಡು ಓಡಾಡಬಹುದಾಗಿದೆ.


    ಇನ್ನು ಈ ಸ್ಕೂಟರ್​ ಸೂಟ್​ಕೇಸ್​ ರೂಪದಲ್ಲಿದೆ, ಟಯರ್​ನಿಂದ ಕುಳಿತುಕೊಳ್ಳುವ ಸೀಟಿನವರೆಗೆ ಗಾಳಿ ತುಂಬಿಸಿ ನಂತರ ಚಲಾಯಿಸುವಂತೆ ಅಭಿವೃದ್ಧಿಪಡಿಸಿದ್ದಾರೆ. ಟೋಕಿಯೋ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ವಿನ್ಯಾಸ ಮಾಡಿದ್ದಾರೆ. ಜಪಾನ್​ ಮೂಲದ ಮರ್ಕಾರಿ ಆರ್​ 4ಡಿ ಈ ವಿಚಿತ್ರ ರೀತಿಯ ವಾಹನ ನಿರ್ಮಿಸಲು ವಿದ್ಯಾರ್ಥಿಗಳಿಗೆ ನೆರವಾಗಿದೆ. ನೂತನ ಸ್ಕೂಟರ್​ ಕುರಿತು ಯುರೋಬ್​ ಎಂಬ ಯ್ಯೂಟೂಬ್ ಚಾನೆಲ್​ನಲ್ಲಿ ಸ್ಕೂಟರ್​ ಬಗೆಗೆ ವಿಡಿಯೋ ಹಂಚಿಕೊಂಡಿದ್ದಾರೆ. ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.




    ಸದ್ಯ ಮಾರುಕಟ್ಟೆಗೆ ಬಗೆ ಬಗೆಯ ಎಲೆಕ್ಟ್ರಿಕ್​ ವಾಹನಗಳು ಬಿಡುಗಡೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಅದಕ್ಕಿಂತ ವಿಭಿನ್ನವಾದ ಸ್ಕೂಟರ್​ಗಳು ರಸ್ತೆಗೆ ಇಳಿದರೆ ಅಚ್ಚರಿ ಪಡೆಬೇಕಾದ ಅವಶ್ಯಕತೆಯಿಲ್ಲ.




    Maruti Suzuki: ಸರ್ವೀಸ್​ ಫೆಸ್ಟಿವಲ್​ ಪ್ರಾರಂಭ; ಕಡಿಮೆ ಬೆಲೆಗೆ ಕಾರಿನ ಬಿಡಿಭಾಗ ಮಾರಾಟ

    Published by:Harshith AS
    First published: