Popular Google Doodle Games: ಗೂಗಲ್ ಡೂಡಲ್​ನಲ್ಲಿ ಪ್ಯಾಕ್ ಮ್ಯಾನ್ ವಿಡಿಯೋ ಗೇಮ್!

Stay and Play at Home: ಗೂಗಲ್​ ಡೂಡಲ್​ ಪ್ಯಾಕ್​​​ ಮ್ಯಾನ್​ ಗೇಮ್​ ಅನ್ನು ಮೊದಲು 30ನೇ ವಾರ್ಷಿಕೋತ್ಸವದ ಅಂಗವಾಗಿ 2010ರಲ್ಲಿ  ಪರಿಚಯಿಸಿತ್ತು. ಇದೀಗ ಲಾಕ್​ಡೌನ್​ನಿಂದಾಗಿ ‘ಮನೆಯಲ್ಲಿರಿ ಮತ್ತು ಗೇಮ್​ ಆಡಿರಿ(ಸ್ಟೇ ಹೋಮ್​​ ಆ್ಯಂಡ್​​​​ ಪ್ಲೇ ಗೇಮ್​​)‘ ಸಿರೀಸ್​ನಲ್ಲಿ ಪ್ಯಾಕ್​ ಮ್ಯಾನ್ ವಿಡಿಯೋ​ ಗೇಮ್ ​ಅನ್ನು ಮತ್ತೊಮ್ಮೆ ಪ್ರಕಟಿಸಿದೆ.

news18-kannada
Updated:May 8, 2020, 1:13 PM IST
Popular Google Doodle Games: ಗೂಗಲ್ ಡೂಡಲ್​ನಲ್ಲಿ ಪ್ಯಾಕ್ ಮ್ಯಾನ್ ವಿಡಿಯೋ ಗೇಮ್!
ಪ್ಯಾಕ್​​ ಮ್ಯಾನ್
  • Share this:
ಲಾಕ್​ಡೌನ್​ ಅವಧಿಯಲ್ಲಿ ಜನಪ್ರಿಯ ಗೂಗಲ್​​ ಡೂಡಲ್ ವಿಶೇಷ ಗೇಮ್​ಗಳನ್ನು ಪ್ರಕಟಿಸುತ್ತಿದೆ. ಇದೀಗ ಪ್ಯಾಕ್​​ ಮ್ಯಾನ್​​​​ ಎಂಬ ವಿಡಿಯೋ ಗೇಮ್​ ಅನ್ನು ಪ್ರಕಟಿಸಿದೆ. ಗೂಗಲ್​​ ಲೋಗೋವನ್ನು ಟ್ಯಾಪ್​ ಮಾಡುವ ಮೂಲಕ ಈ ಗೇಮ್​​ ಆಡಬಹುದಾಗಿದೆ. ಗೂಗಲ್​ ಡೂಡಲ್​ ಪ್ಯಾಕ್​​​ ಮ್ಯಾನ್​ ಗೇಮ್​ ಅನ್ನು 30ನೇ ವಾರ್ಷಿಕೋತ್ಸವದ ಅಂಗವಾಗಿ 2010ರಲ್ಲಿ  ಪರಿಚಯಿಸಿತ್ತು. ಇದೀಗ ಲಾಕ್​ಡೌನ್​ನಿಂದಾಗಿ ‘ಮನೆಯಲ್ಲಿರಿ ಮತ್ತು ಗೇಮ್​ ಆಡಿರಿ(ಸ್ಟೇ ಹೋಮ್​​ ಆ್ಯಂಡ್​​​​ ಪ್ಲೇ ಗೇಮ್​​)‘ ಸಿರೀಸ್​ನಲ್ಲಿ ಪ್ಯಾಕ್​ ಮ್ಯಾನ್ ವಿಡಿಯೋ​ ಗೇಮ್ ​ಅನ್ನು ಮತ್ತೊಮ್ಮೆ ಪ್ರಕಟಿಸಿದೆ.

1980ರಲ್ಲಿ ಪರಿಚಯವಾದ ಈ ಗೇಮ್​ ಅನ್ನು ಗೂಗಲ್​​​ ಡೂಡಲ್​​ ಲಾಜಿಕ್​, ಗ್ರಾಫಿಕ್ಸ್​​ ಮತ್ತು ಸೌಂಡ್​ ಬಳಸಿ ಮರು ಸೃಷ್ಟಿಸಿದೆ.

ಪ್ಯಾಕ್​​​ ಮ್ಯಾನ್


ಕೊರೋನಾ ಲಾಕ್​ಡೌನ್​ ಅವಧಿಯಲ್ಲಿ ತಂತ್ರಜ್ಞಾನ ದೈತ್ಯ ಗೂಗಲ್ ತನ್ನ ಜನಪ್ರಿಯ ಮತ್ತು ಹಳೆಯ ಡೂಡಲ್‌ಗಳ ಸರಣಿಯನ್ನು ಮತ್ತೆ ಪ್ರಸ್ತುತಪಡಿಸುತ್ತಿದೆ. ಇದರಲ್ಲಿ ವಿಶೇಷತೆ ಏನೆಂದರೇ ಗೇಮಿಂಗ್ ಸೇರಿದಂತೆ ಹಲವು ವೈಶಿಷ್ಟ್ಯತೆಗಳಿದ್ದು ದಿನಕ್ಕೊಂದು ಆಟವನ್ನು ಆಡುವ ಮೂಲಕ ಮನರಂಜನೆಯನ್ನು ಪಡೆಯಬಹುದು.

ಲಾಕ್‌ಡೌನ್ ಇರುವುದರಿಂದ, ಮನೆಯಲ್ಲೇ ಇರುವ ಸಂದರ್ಭದಲ್ಲಿ, ಹೊರಗಡೆ ಹೋಗಬೇಡಿ, ಒಳಾಂಗಣ ಆಟದಲ್ಲಿ ತೊಡಗಿಸಿಕೊಳ್ಳಿ ಎಂದು ಗೂಗಲ್ ಹೇಳಿದೆ. ಜತೆಗೆ ದಿನಕ್ಕೊಂದು ಆಕರ್ಷಕ, ಜನಪ್ರಿಯ ಹಳೆಯ ಡೂಡಲ್ ಸರಣಿಯನ್ನು ಕೂಡ ಪ್ರಕಟಿಸುತ್ತಿದೆ.

WhatsApp: ಮೇ ಅಂತ್ಯದಲ್ಲಿ ವಾಟ್ಸ್​​​ಆ್ಯಪ್​​ ಕೊಡಲಿದೆ ಸಿಹಿ ಸುದ್ದಿ! ಏನದು?
First published: May 8, 2020, 12:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading