Popular Google Doodle Games: ಹ್ಯಾಲೋವೀನ್​​ ಗೇಮ್​​ ಪ್ರಕಟಿಸಿದ ಗೂಗಲ್​!

Stay and Play at Home: 2016ರಲ್ಲಿ ಗೂಗಲ್​ ತನ್ನ ಡೂಡಲ್​ನಲ್ಲಿ ಹ್ಯಾಲೋವೀನ್​ ಗೇಮ್​​ ಅನ್ನು ಪರಿಚಯಿಸಿತ್ತು. ಇದೀಗ ಮತ್ತೊಮ್ಮೆ ಪ್ರಕಟಿಸುವುದರ ಮೂಲಕ ಹ್ಯಾಲೋವೀನ್ ಗೇಮ್​ ಅನ್ನು ನೆನಪಿಸಿದೆ.

ಹ್ಯಾಲೋವೀನ್

ಹ್ಯಾಲೋವೀನ್

  • Share this:
    ಲಾಕ್​ಡೌನ್​ ಅವಧಿಯಲ್ಲಿ ಗೂಗಲ್​​ ಡೂಡಲ್​​ ವಿಶೇಷ ಗೇಮ್​ಗಳನ್ನು ಪರಿಚಯಿಸುತ್ತಿದೆ. ನಿನ್ನೆ (ಮೇ.5) ಜನಪ್ರಿಯ ಮೆಕ್ಸಿಕನ್​​ ಬೋರ್ಡ್​ ಲೊಟೆರಿಯಾ ಗೇಮ್​ ಅನ್ನು ಡೂಡಲ್​ನಲ್ಲಿ ಬಿಡುಗಡೆ ಮಾಡಿತ್ತು. ಇಂದು ಹ್ಯಾಲೋವೀನ್​​​ ಗೇಮ್​ ಅನ್ನು ಪ್ರಕಟಿಸಿದೆ. 2016ರಲ್ಲಿ ಗೂಗಲ್​ ತನ್ನ ಡೂಡಲ್​ನಲ್ಲಿ ಹ್ಯಾಲೋವೀನ್​ ಗೇಮ್​​ ಅನ್ನು ಪರಿಚಯಿಸಿತ್ತು. ಇದೀಗ ಮತ್ತೊಮ್ಮೆ ಪ್ರಕಟಿಸುವುದರ ಮೂಲಕ ಹ್ಯಾಲೋವೀನ್ ಗೇಮ್​ ಅನ್ನು ನೆನಪಿಸಿದೆ.

    ಹ್ಯಾಲೋವೀನ್​ ಎನಿಮೇಷನ್ ಗೇಮ್​ ಆಗಿದೆ. ಬೆಕ್ಕು ಮತ್ತು ಭೂತವನ್ನು ಮುಖ್ಯ ವಸ್ತುವಾಗಿ ಇಟ್ಟುಕೊಂಡು ಈ ಗೇಮ್​ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಆಟಗಾರ ತನ್ನ ಜಾನ್ಮೆಯಿಂದ ಬೆಕ್ಕನ್ನು ಭೂತದಿಂದ ರಕ್ಷಿಸುವುದೇ ಈ ಗೇಮ್​ನ ವಿಶೇಷತೆ.



    ಗೂಗಲ್​​ ಲಾಕ್​ಡೌನ್​ ಅವಧಿಯಲ್ಲಿ ಮನೆಯಲ್ಲೇ ಸುರಕ್ಷಿತವಾಗಿರುವ ಮೂಲಕ ಬೇರೆಯವರ ಜೀವವನ್ನೂ ಉಳಿಸಿ ಎಂದು ವಿಶೇಷ ಡೂಡಲ್​ ವಿನ್ಯಾಸ ಮಾಡುವ ಮೂಲಕ ಮನವಿ ಮಾಡಿತ್ತು.  ಇದರ ಜೊತೆಗೆ ಲಾಕ್​ಡೌನ್ ಆದೇಶ​ ಪಾಲಿಸುತ್ತ ಮನೆಯಲ್ಲಿ ಕುಳಿತಿರುವ ಜನರಿಗಾಗಿ ಕ್ರಿಕೆಟ್​, ಕೋಡಿಂಗ್​​, ಫಿಶ್​ಚಿಂಗರ್​, ರಾಕ್​ ಮೋರ್​​​ ಮುಂತಾದ ಗೇಮ್​​​ಗಳನ್ನು ಪ್ರಕಟಿಸಿತ್ತು. ಇದೀಗ ಹ್ಯಾಲೋವೀನ್​ ಎಂಬ ಗೇಮ್​​​ ಪ್ರಕಟಿಸಿದೆ.

    ಸ್ಯಾಂಡಲ್​ವುಡ್​ನಲ್ಲಿ ನಂಬರ್ 1 ಪಟ್ಟಕ್ಕೇರಿದ ಯಶ್​​, 2ನೇ ಸ್ಥಾನದಲ್ಲಿ ಪುನೀತ್​; ಯಾವ ವಿಷಯದಲ್ಲಿ ಗೊತ್ತಾ?
    First published: