ಸ್ಮಾರ್ಟ್‌ಫೋನ್‌ಗಳು ಇಂದು ಬೇಡಿಕೆ ಗಳಿಸಿಕೊಳ್ಳುತ್ತಿರುವುದು ತಮ್ಮಲ್ಲಿರುವ ಗೇಮಿಂಗ್ ಫಂಕ್ಷನ್‌ಗಳಿಂದಾಗಿವೆ. ಸ್ಮಾರ್ಟ್‌ಫೋನ್ (Phone) ಕ್ಷೇತ್ರದಲ್ಲಿ ನಡೆಯುತ್ತಿರುವ ಹಲವಾರು ಅಪ್‌ಡೇಟ್‌ಗಳು ಕೂಡ ಗೇಮಿಂಗ್ (Game) ವಿಭಾಗದ ಕುರಿತಾಗಿರುತ್ತದೆ. ಹೊಸ ಹೊಸ ಗೇಮ್‌ಗಳು, ಅದಕ್ಕೆ ತಕ್ಕಂತಹ ಬ್ಯಾಟರಿ (Battery) ಬ್ಯಾಕಪ್, ಚಾರ್ಜಿಂಗ್ ಲಭ್ಯತೆ, ಕಾರ್ಯಕ್ಷಮತೆ ಹೀಗೆ ಫೋನ್‌ಗಳು ಕೂಡ ಗೇಮಿಂಗ್ ಸೌಕರ್ಯಕ್ಕೆ ಅನುಗುಣವಾಗಿಯೇ ಮಾರುಕಟ್ಟೆಗೆ ಕಾಲಿಡುತ್ತಿವೆ.
ಪೋಕೆಮಾನ್ ಸ್ಲೀಪ್ ಸಂಸ್ಥೆಯ ಹೊಸ ಗೇಮ್:
ಪೋಕೆಮಾನ್ ಸಂಸ್ಥೆ ಕೂಡ ತನ್ನ ಇತ್ತೀಚಿನ ಆವೃತ್ತಿಯಲ್ಲಿ ಹೊಸದಾದ ಗೇಮ್ ಅನ್ನು ಬಿಡುಗಡೆ ಮಾಡಿದ್ದು ಪೋಕೆಮಾನ್ ಸ್ಲೀಪ್ ಎಂಬ ಹೆಸರನ್ನು ಈ ಗೇಮ್ ಹೊಂದಿದೆ. ಸಂಸ್ಥೆಯ ಬಹುನಿರೀಕ್ಷತ ಉತ್ಪನ್ನದ ಬಗ್ಗೆ ಕೆಲವೊಂದು ವಿವರಗಳನ್ನು ಬಹಿರಂಗಪಡಿಸಿರುವ ಪೋಕೆಮಾನ್, 2019 ರಲ್ಲಿ ಈ ಅಪ್ಲಿಕೇಶನ್ ಕುರಿತಾದ ಘೋಷಣೆಯನ್ನು ಮಾಡಿತ್ತು. ಈ ಗೇಮ್ ಆಡಲು ಗೇಮರ್‌ಗಳು ಏಕಾಗ್ರತೆ ಹೊಂದಿರಬೇಕು ಹಾಗೂ ಸ್ಕೋರ್ ಮಾಡುತ್ತಲೇ ಇರಬೇಕು ಎಂದೇನಿಲ್ಲ. ನೀವು ಮಲಗುವ ಸಮಯದಲ್ಲಿ ನಿಮ್ಮ ದಿಂಬಿನ ಕೆಳಗೆ ಫೋನ್ ಇರಿಸಿದರೆ ಸಾಕು ನೀವು ಎಷ್ಟು ದೀರ್ಘ ಕಾಲ ನಿದ್ದೆಮಾಡುತ್ತೀರೋ ನಿಮ್ಮ ಸ್ಕೋರ್ ಕೂಡ ಅಷ್ಟೇ ಹೆಚ್ಚುತ್ತದೆ.
ನಿದ್ದೆಯನ್ನು ಟ್ರ್ಯಾಕ್ ಮಾಡುವ ಗೇಮ್:
ನಿದ್ರಿಸುವುದನ್ನು ಟ್ರ್ಯಾಕ್ ಮಾಡುವುದನ್ನು ಆಟವು ಒಳಗೊಂಡಿದ್ದು, ಆಟಗಾರರು ಅಪ್ಲಿಕೇಶನ್ ಮೂಲಕ ಪೋಕೆಮಾನ್‌ನೊಂದಿಗೆ ಸಂವಹನ ಸಾಧಿಸಬಹುದು. ಪೋಕೆಮಾನ್ ಸ್ಲೀಪ್ ಆಟಗಾರರು ತಮ್ಮ ದಿಂಬಿನ ಕೆಳಗೆ ಫೋನ್ ಇರಿಸಿಕೊಂಡು ಆರಾಮಾಗಿ ನಿದ್ದೆಮಾಡಿಕೊಂಡು ಈ ಆಟವನ್ನು ಆಡಬಹುದಾಗಿದೆ.
ಇದನ್ನೂ ಓದಿ: Jio 5G: 2023ರ ಅಂತ್ಯದ ವೇಳೆಗೆ ಭಾರತದಾದ್ಯಂತ ಜಿಯೋ 5ಜಿ ನೆಟ್ವರ್ಕ್ ಸೇವೆ ಲಭ್ಯ!
ನಿದ್ರಿಸಿಕೊಂಡೇ ಆಡಬಹುದಾದ ಗೇಮ್:
ಪೋಕೆಮಾನ್ ನಿದ್ರಾಶೈಲಿಗಳನ್ನು ಸಂಶೋಧಿಸಲು ಪ್ರೊಫೆಸರ್ ನೆರೋಲಿ ಮತ್ತು ಸ್ನೋರ್ಲಾಕ್ಸ್ ಅಭಿನಯಗಳೊಂದಿಗೆ ಕಾರ್ಯನಿರ್ವಹಿಸುವುದನ್ನು ಗೇಮ್‌ನಲ್ಲಿ ಕಾಣಬಹುದಾಗಿದೆ. ಮೂರು ವಿಧವಾದ ನಿದ್ರಾ ಶೈಲಿಗಳು ಡೋಸಿಂಗ್ (ತೂಕಡಿಸುವುದು), ಸ್ನೂಜಿಂಗ್ (ಸಣ್ಣ ನಿದ್ದೆ) ಅಥವಾ ಸ್ಲಂಬರಿಂಗ್ (ದೀರ್ಘ ನಿದ್ದೆ) ಹೀಗೆ ನಿಮ್ಮ ನಿದ್ದೆಯ ವಿಧ ಬೇರೆ ಬೇರೆ ಪ್ರಕಾರದ ಪೋಕೆಮಾನ್ ಅನ್ನು ಆಕರ್ಷಿಸುತ್ತದೆ. ಪ್ರತಿಯೊಂದು ಪೋಕೆಮಾನ್ ಕೂಡ ಬೇರೆ ಬೇರೆ ಶೈಲಿಯ ನಿದ್ರಾ ವಿಧಾನಗಳನ್ನು ಹೊಂದಿದ್ದು ನಿಮ್ಮ ಶೈಲಿ ಯಾವುದು ಎಂಬುದನ್ನು ಅನ್ವೇಷಿಸುತ್ತದೆ.
ಪೋಕೆಮಾನ್ ಗೊ ಪ್ಲಸ್:
ಗೇಮರ್ಸ್ ತಾವು ಕ್ಯಾಚ್ ಮಾಡುವ ಪೋಕೆಮಾನ್ ಪ್ರಕಾರದ ಮೂಲಕ ತಮ್ಮದೇ ಆದ ನಿದ್ರೆಯ ಶೈಲಿಯನ್ನು ಕಂಡುಕೊಳ್ಳಬಹುದು. ನಿದ್ರಿಸುವಾಗ ಫೋನ್ ತಮ್ಮ ಬಳಿ ಇರಿಸಿಕೊಳ್ಳಲು ಸಾಧ್ಯವಾಗದವರು ಪೋಕೆಮಾನ್ ಸ್ಲೀಪ್‌ಗೆ ಸಂಪರ್ಕ ಸಾಧಿಸುವ ಪೋಕೆಮಾನ್ ಗೊ ಪ್ಲಸ್+ಪರಿಕರವನ್ನು ಬಳಸಬಹುದಾಗಿದೆ.
ಹೆಚ್ಚು ನಿದ್ರಿಸಿದಂತೆ ಹೆಚ್ಚು ಸ್ಕೋರ್:
ಈ ಪರಿಕರ ಬ್ಲ್ಯೂಟೂತ್‌ನ ಕಡಿಮೆ ಶಕ್ತಿಯನ್ನು ಬಳಸಿಕೊಂಡು ಪೋಕೆಮಾನ್ ಸ್ಲೀಪ್‌ಗೆ ಸಂಪರ್ಕ ಸಾಧಿಸುತ್ತದೆ ಹಾಗೂ ಕೇಂದ್ರ ಬಟನ್ ಮೂಲಕ ಇದನ್ನ ಆಪರೇಟ್ ಮಾಡಬಹುದಾಗಿದೆ. ಪಿಕಾಚು ಧ್ವನಿಯಲ್ಲಿ ಲಾಲಿಹಾಡು ಹಾಗೂ ನಿದ್ರಾ ಮತ್ತು ಏಳುವ ಸಮಯದ ಸೂಚನೆಗಳನ್ನು ಆಟಗಾರರು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಸ್ಕೋರ್‌ಗಳು ಹೊಸ ಅಲರಾಮ್ ಶಬ್ಧಗಳನ್ನು ಅನ್‌ಲಾಕ್ ಮಾಡುತ್ತವೆ.
ಬಿಡುಗಡೆ ದಿನಾಂಕ ಇನ್ನೂ ದೃಢೀಕರಣಗೊಂಡಿಲ್ಲ:
ಮುಂಬರಲಿರುವ ಅಪ್‌ಡೇಟ್ ಕೆಲವೇ ದಿನಗಳಲ್ಲಿ ಪೋಕೆಮಾನ್ ಸ್ಲೀಪ್ ಡೇಟಾವನ್ನು ಪೋಕೆಮಾನ್ ಗೊನಲ್ಲಿ ಬಳಸುವ ವ್ಯವಸ್ಥೆಯನ್ನು ಹೊಂದಿರಲಿದೆ. ಆದರೆ ಇದು ಯಾವಾಗ ಬರಲಿದೆ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಪೋಕೆಮಾನ್ ಸ್ಲೀಪ್‌ಗಾಗಿ ಪ್ರಸ್ತುತ ಬಿಡುಗಡೆ ದಿನಾಂಕ ಕೂಡ ನಿಗದಿಯಾಗಿಲ್ಲ, ಆದರೆ ಪೋಕೆಮಾನ್ ಗೊ ಪ್ಲಸ್+ ಜುಲೈ 14 ರಂದು ಗೇಮರ್‌ಗಳ ಕೈ ಸೇರಲಿದೆ. ಬಹುಶಃ ಇದೇ ಸಮಯದಂದು ಪೋಕೆಮಾನ್ ಸ್ಲೀಪ್ ಆಟವನ್ನು ಬಿಡುಗಡೆ ಮಾಡಬಹುದು ಎಂಬ ರೂಮರ್ ಕೂಡ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ