• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Poco X5 Pro: ಸ್ಮಾರ್ಟ್​​ಫೋನ್​ ಯುಗದಲ್ಲಿ ಸಂಚಲನ ಮೂಡಿಸಲು ರೆಡಿಯಾಗಿದೆ ಪೋಕೋ ಎಕ್ಸ್​ 5 ಪ್ರೋ ಸ್ಮಾರ್ಟ್​​ಫೋನ್!

Poco X5 Pro: ಸ್ಮಾರ್ಟ್​​ಫೋನ್​ ಯುಗದಲ್ಲಿ ಸಂಚಲನ ಮೂಡಿಸಲು ರೆಡಿಯಾಗಿದೆ ಪೋಕೋ ಎಕ್ಸ್​ 5 ಪ್ರೋ ಸ್ಮಾರ್ಟ್​​ಫೋನ್!

ಪೋಕೋ ಎಕ್ಸ್​ 5 ಪ್ರೋ ಸ್ಮಾರ್ಟ್​​ಫೋನ್

ಪೋಕೋ ಎಕ್ಸ್​ 5 ಪ್ರೋ ಸ್ಮಾರ್ಟ್​​ಫೋನ್

Smartphone Launch: ಪೋಕೋ ಎಕ್ಸ್​​5 ಪ್ರೋ 5ಜಿ ಸ್ಮಾರ್ಟ್​​​ಫೋನ್​ ತನ್ನ ವಿಶೇಷ ವಿನ್ಯಾಸದ ಮೂಲಕ ಭಾರೀ ಹೆಸರನ್ನು ಗಳಿಸಿತ್ತು. ಇದೀಗ ಈ ಸ್ಮಾರ್ಟ್​​ಫೋನ್​ ಭಾರತದ ಮಾರುಕಟ್ಟೆಗೆ ಅನಾವರಣವಾಗಿದೆ. ಹಾಗಿದ್ರೆ ಈ ಸ್ಮಾರ್ಟ್​​​ಫೋನ್​ನನ ಫೀಚರ್ಸ್​​, ಬೆಲೆ ಹೇಗಿದೆ ಎಂದು ಈ ಲೇಖನದಲ್ಲಿ ತಿಳಿಯಿರಿ.

ಮುಂದೆ ಓದಿ ...
  • Share this:

    ಸ್ಮಾರ್ಟ್​​​ಫೋನ್​ ಮಾರುಕಟ್ಟೆಯಲ್ಲಿ ಕೆಲದಿನಗಳ ಹಿಂದೆ ಪೋಕೋ ಕಂಪೆನಿಯ ಸ್ಮಾರ್ಟ್​​ಫೋನ್​ ಒಂದು ಗ್ರಾಹಕರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿತ್ತು. ಇದೀಗ ಈ ಸ್ಮಾರ್ಟ್​​​ಫೋನ್ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ. ಪೋಕೋ ಕಂಪೆನಿಯ ಪೋಕೋ ಎಕ್ಸ್​5 ಪ್ರೋ ಸ್ಮಾರ್ಟ್​​ಫೋನ್​ ಸದ್ಯ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದ್ದು, ಇದು 5ಜಿ ನೆಟ್​ವರ್ಕ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್​​ಫೋನ್​ ತನ್ನ ಫಸ್ಟ್​​ಲುಕ್​ನಲ್ಲಿ ಜನರನ್ನು ತನ್ನತ್ತ ಆಕರ್ಷಿಸಿತ್ತು. ಪೋಕೋ ಎಕ್ಸ್​5 ಪ್ರೋ 5ಜಿ ಸ್ಮಾರ್ಟ್​​ಫೋನ್​ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್​ ಸೆನ್ಸಾರ್​ ಸಾಮರ್ಥ್ಯವನ್ನು ಪಡೆದುಕೊಂಡಿದೆ.


    ಪೋಕೋ ಎಕ್ಸ್​​5 ಪ್ರೋ 5ಜಿ ಸ್ಮಾರ್ಟ್​​​ಫೋನ್​ ತನ್ನ ವಿಶೇಷ ವಿನ್ಯಾಸದ ಮೂಲಕ ಭಾರೀ ಹೆಸರನ್ನು ಗಳಿಸಿತ್ತು. ಇದೀಗ ಈ ಸ್ಮಾರ್ಟ್​​ಫೋನ್​ ಭಾರತದ ಮಾರುಕಟ್ಟೆಗೆ ಅನಾವರಣವಾಗಿದೆ. ಹಾಗಿದ್ರೆ ಈ ಸ್ಮಾರ್ಟ್​​​ಫೋನ್​ನನ ಫೀಚರ್ಸ್​​, ಬೆಲೆ ಹೇಗಿದೆ ಎಂದು ಈ ಲೇಖನದಲ್ಲಿ ತಿಳಿಯಿರಿ.


    ಪೋಕೋ ಎಕ್ಸ್​​5 ಪ್ರೋ 5ಜಿ ಸ್ಮಾರ್ಟ್​​​ಫೋನ್​ ಫೀಚರ್ಸ್​


    ಪೋಕೋ ಎಕ್ಸ್​​5 ಪ್ರೋ 5ಜಿ ಸ್ಮಾರ್ಟ್​​​ಫೋನ್ ವಿಶೇಷವಾಗಿ 6.67 ಇಂಚಿನ ಎಕ್ಸ್‌ಫಿನಿಟಿ ಅಮೋಲ್ಡ್​ ಡಿಸ್‌ಪ್ಲೇನೊಂದಿಗೆ ಬಿಡುಗಡೆಯಾಗಿದೆ. ಇನ್ನು ಈ ಡಿಸ್‌ಪ್ಲೇ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, 900 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಡಿಸ್‌ಪ್ಲೇ 240Hz ಟಚ್ ಸ್ಯಾಂಪ್ಲಿಂಗ್ ರೇಟ್‌, HDR10+ ಬೆಂಬಲ ಮತ್ತು ಈ ಸ್ಮಾರ್ಟ್​​​ಫೋನ್​ನ ಡಿಸ್​ಪ್ಲೇ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಅಳವಡಿಸಲಾಗಿದೆ.


    ಇದನ್ನೂ ಓದಿ: ಗೂಗಲ್​ ಫೋಟೋ ಆ್ಯಪ್​ ಬಳಕೆ ಮಾಡ್ತೀರಾ? ಈ ಫೀಚರ್ ಅನ್ನು ನೀವು ನೋಡ್ಲೇಬೇಕು


    ಕ್ಯಾಮೆರಾ ಫೀಚರ್ಸ್​


    ಪೋಕೋ ಎಕ್ಸ್​​5 ಪ್ರೋ 5ಜಿ ಸ್ಮಾರ್ಟ್​​​ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ISOCELL HM2 ಸೆನ್ಸಾರ್‌ ಅನ್ನು ಪಡೆದಿದೆ. ಇದರಲ್ಲಿ ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆ್ಯಂಗಲ್​ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇನ್ನು ಹಿಂಭಾಗದ ಕ್ಯಾಮೆರಾಗಳ ಮೂಲಕ 30fps ನಲ್ಲಿ 4ಕೆ ರೆಸಲ್ಯೂಶನ್​ನಲ್ಲಿ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದಾಗಿದೆ. ಇನ್ನು ಸೆಲ್ಫಿಗಾಗಿ ಇದರ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಿದ್ದಾರೆ.


    ಪ್ರೊಸೆಸರ್​ ಸಾಮರ್ಥ್ಯ


    ಪೋಕೋ ಎಕ್ಸ್​5 ಪ್ರೋ 5ಜಿ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 778ಜಿ ಎಸ್​​ಓಸಿ ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 ಆಧಾರಿತ MIUI 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ 2 ವರ್ಷಗಳ ಆಂಡ್ರಾಯ್ಡ್‌ ಓಎಸ್​ ಅಪ್ಡೇಟ್‌ ಮತ್ತು 3 ವರ್ಷಗಳ ಸೆಕ್ಯುರಿಟಿ ಪ್ಯಾಚ್‌ಗಳ ಭರವಸೆ ನೀಡಲಾಗಿದೆ. ಹಾಗೆಯೇ 8 ಜಿಬಿ ರ್‍ಯಾಮ್ ಮತ್ತು 256ಜಿಬಿ ಇಂಟರ್ನಲ್​ ಸ್ಟೋರೇಜ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್​​​ಫೋನ್​ನಲ್ಲಿ ಮೆಮೊರಿ ಕಾರ್ಡ್‌ ಮೂಲಕ ಸ್ಟೋರೇಜ್ ಆಯ್ಕೆಯನ್ನು ವಿಸ್ತರಿಸಲು ಯಾವುದೇ ಆಯ್ಕೆಯನ್ನು ನೀಡಿಲ್ಲ.


    ಪೋಕೋ ಎಕ್ಸ್​ 5 ಪ್ರೋ ಸ್ಮಾರ್ಟ್​​ಫೋನ್


    ಬ್ಯಾಟರಿ ಬ್ಯಾಕಪ್​​ ಹೇಗಿದೆ?


    ಪೋಕೋ ಎಕ್ಸ್​5 ಪ್ರೋ 5ಜಿ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿದೆ. ಈ ಬ್ಯಾಟರಿಯು 67W ವೇಗದ ಚಾರ್ಜಿಂಗ್ ಮತ್ತು 5W ವೈರ್ಡ್ ರಿವರ್ಸ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.


    ಇತರೆ ಫೀಚರ್ಸ್​


    ಇನ್ನು ಪೋಕೋ ಎಕ್ಸ್​5 ಪ್ರೋ ಸ್ಮಾರ್ಟ್​​ಫೋನ್​ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ ಅನ್ನು ಹೊಂದಿದೆ. ಇದಲ್ಲದೆ ಡ್ಯುಯಲ್-ಬ್ಯಾಂಡ್ ವೈಫೈ ಮತ್ತು ಬ್ಲೂಟೂತ್ 5.1 ವೈರ್‌ಲೆಸ್ ಸಂಪರ್ಕವನ್ನು ಬೆಂಬಲಿಸಲಿದೆ.




    ಬೆಲೆ ಮತ್ತು ಲಭ್ಯತೆ


    ಇನ್ನು ಪೋಕೋ ಎಕ್ಸ್​5 ಪ್ರೋ ಸ್ಮಾರ್ಟ್​​ಫೋನ್​ನ ಬೇಸ್‌ ಮಾಡೆಲ್‌ 6ಜಿಬಿ ರ್‍ಯಾಮ್ ಮತ್ತು 128ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್​ಫೋನ್​ಗೆ 22,999 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಇನ್ನು ಈ ಸ್ಮಾರ್ಟ್​​​ಫೋನ್​ನ 8ಜಿಬಿ ರ್‍ಯಾಮ್ ಮತ್ತು 256ಜಿಬಿ ಸ್ಟೋರೇಜ್ ಮಾದರಿಯ ಬೆಲೆ 24,999 ರೂಪಾಯಿ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್ ಮೂಲಕ ಆಸ್ಟ್ರಲ್ ಬ್ಲ್ಯಾಕ್​, ಹಾರಿಜಾನ್ ಬ್ಲೂ ಮತ್ತು ಹಳದಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು