news18-kannada Updated:March 31, 2021, 9:42 AM IST
Poco X3 Pro
Poco X3 Pro ಸ್ಮಾರ್ಟ್ಫೋನ್ ದೇಶಿಯ ಮಾರುಕಟ್ಟೆಗೂ ಕಾಲಿರಿಸಿದೆ. ನೂತನ ಸ್ಮಾರ್ಟ್ಫೋನ್ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಧಾವಿಸಿದ Poco X3ಗೆ ಅಪ್ಗ್ರೇಡ್ ಆಗಿ ಹೊರಹೊಮ್ಮಿದೆ. ಇದು ಕ್ವಾಲ್ಕ್ಯಾಮ್ ಸ್ನಾಪ್ಡ್ರಾಗನ್ 860 ಎಸ್ಒಸಿ ಪ್ರೊಸೆಸರ್ ಹೊಂದಿದ್ದು, ಆಕರ್ಷಕ ಫೀಚರ್ ಒಳಗೊಂಡಿದೆ. ಜೊತೆಗೆ ಕೈಗೆಟಕುವ ಬೆಲೆಯಲ್ಲಿ ಖರೀದಿಸುವ ಅವಕಾಶ ನೀಡಿದೆ.
Poco X3 Pro ಸ್ಮಾರ್ಟ್ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಹೊಂದಿದ್ದು, 48 ಮೆಗಾಫಿಕ್ಸೆಲ್ ಪ್ರೈಮರಿ ಕ್ಯಾಮರಾ, 8 ಮೆಗಾಫಿಕ್ಸೆಲ್ ಅಲ್ಟ್ರಾ ವೈಡ್ ಶೂಟರ್, 2 ಮೆಗಾಫಿಕ್ಸೆಲ್ ಮ್ಯಾಕ್ರೋ ಶೂಟರ್ ನೀಡಲಾಗಿದೆ. 6.67 ಇಂಚಿನ ಹೆಚ್ಡಿ ಡಿಸ್ಪ್ಲೇ ಅಳವಡಿಸಿಕೊಂಡಿದೆ. ಜೊತೆಗೆ 256ಜಿಬಿ ಸ್ಟೊರೇಜ್ ಆಯ್ಕೆಯಲ್ಲಿ ಮಾರಾಟ ಮಾಡುತ್ತದೆ. ನೂತನ ಫೋನ್ ಸದ್ಯ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿರುವ ಸ್ಯಾಮ್ಸಂಗ್ ಎಫ್ 62, ರಿಯಲ್ಮಿ ಎಕ್ಸ್ 7, ವಿವೋ ವಿ 20 ಸ್ಮಾಟ್ಫೋನಿಗೆ ಪೈಪೋಟಿ ನೀಡಲಿದೆ.
ಗ್ರಾಹಕರು Poco X3 Pro ಸ್ಮಾರ್ಟ್ಫೋನನ್ನು 6ಜಿಬಿ , 8ಜಿಬಿ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಕಂಚಿನ ಬಣ್ಣ, ಗ್ರ್ಯಾಫೈಟ್ ಕಪ್ಪು, ನೀಲಿ ಬಣ್ಣದ ಆಯ್ಕೆಯಲ್ಲಿ ಮಾರಾಟ ಮಾಡುತ್ತಿದೆ. ಅಂದಹಾಗೆಯೇ 6ಜಿಬಿ ರ್ಯಾಮ್+128ಜಿಬಿ ಸ್ಟೊರೇಜ್ ಸ್ಮಾರ್ಟ್ಫೋನ್ 18.999 ರೂ.ಗೆ ಮಾರಾಟ ಮಾಡುತ್ತಿದೆ. 8ಜಿಬಿ+ 128ಜಿಬಿ ಸ್ಟೊರೇಜ್ ಸ್ಮಾರ್ಟ್ಫೋನ್ 20,999 ರೂ.ಗೆ ಸೇಲ್ ಮಾಡುತ್ತಿದೆ. ಗ್ರಾಹಕರು ಏಪ್ರಿಲ್ 6ರ ಮಧ್ಯಾಹ್ನ 12 ಗಂಟೆಯಿಂದ ಆನ್ಲೈನ್ ಮೂಲಕ ಖರೀದಿಸಬಹುದಾಗಿದೆ.
ಧೀರ್ಘ ಕಾಲದ ಬ್ಯಾಟರಿಗಾಗಿ poco-x3-pro ಸ್ಮಾರ್ಟ್ಫೋನ್ 5,160 ಎಮ್ಎಹೆಚ್ ಬ್ಯಾಟರಿ ಅಳವಡಿಸಿದೆ.
ಆಫರ್ ಬೆಲೆಗೆ ಖರೀದಿಸುವ ಅವಕಾಶ!
ಫ್ಲಿಪ್ಕಾರ್ಟ್ ಮೂಲಕ ಖರೀದಿಸುವ ಗ್ರಾಹಕರಿಗೆ ಆಫರ್ ಸಿಗಲಿದೆ. ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಶೇ 10ರಷ್ಟು ಆಫರ್ ಸಿಗಲಿದೆ. ಜೊತೆಗೆ 1 ಸಾವಿರದವರೆಗೆ ಆಫರ್ ದೊರಕಲಿದೆ
First published:
March 31, 2021, 9:42 AM IST